ಫೋನ್ ಸ್ಕ್ರೀನ್ ಗುಣಮಟ್ಟವನ್ನು ಪರಿಶೀಲಿಸುವುದು ಹೇಗೆ

ನಿಮ್ಮ ಫೋನ್‌ನ ಸ್ಕ್ರೀನ್ ಡೆನ್ಸಿಟಿ ಮೌಲ್ಯವನ್ನು ಕಂಡುಕೊಳ್ಳುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಿದ್ದು ಇದರಿಂದ ನಿಮ್ಮ ಸ್ಕ್ರೀನ್ ಮೌಲ್ಯವನ್ನು ನೀವು ಪರಿಶೀಲಿಸಿಕೊಳ್ಳಬಹುದಾಗಿದೆ.

By Shwetha Ps
|

ಮೊಬೈಲ್‌ ಫೋನ್‌ಗಳಲ್ಲಿ ಹೆಚ್ಚು ಪ್ರಮುಖವಾದುದು ಅದರ ಡಿಸ್‌ಪ್ಲೇಯಾಗಿದೆ. ಇಂದಿನ ತಾಂತ್ರಿಕ ಯುಗದಲ್ಲಿ ಅಸಂಖ್ಯ ಸಂಖ್ಯೆಯಲ್ಲಿ ಫೋನ್‌ಗಳು ಲಭ್ಯವಿದ್ದು ಅವುಗಳ ಡಿಸ್‌ಪ್ಲೇ ಬದಲಾಗುತ್ತಲೇ ಇರುತ್ತದೆ.

ಫೋನ್ ಸ್ಕ್ರೀನ್ ಗುಣಮಟ್ಟವನ್ನು ಪರಿಶೀಲಿಸುವುದು ಹೇಗೆ

ಅಂತೆಯೇ ಫೋನ್ ಗುಣಮಟ್ಟ, ಬೆಲೆಯನ್ನು ಈ ಡಿಸ್‌ಪ್ಲೇಗಳು ಆಧರಿಸಿವೆ. ಡಿಸ್‌ಪ್ಲೇ ವಿಷಯಕ್ಕೆ ಬಂದಾಗ ಇದಕ್ಕೆ ಸಂಬಂಧಿಸಿದ ಹಲವಾರು ಅಂಶಗಳತ್ತ ಕೂಡ ಗಮನ ಹರಿಸಬೇಕಾಗಿದೆ. ಪಿಕ್ಸೆಲ್, ರೆಸಲ್ಯೂಶನ್, ಪಿಪಿಐ ಹೀಗೆಯೇ ಇನ್ನಷ್ಟು ಅಂಶಗಳು ಪ್ರಾಧಾನ್ಯತೆಯನ್ನು ಪಡೆದುಕೊಳ್ಳುತ್ತವೆ.

ಇಂದಿನ ಲೇಖನದಲ್ಲಿ ನಿಮ್ಮ ಸ್ಕ್ರೀನ್ ಡೆನ್ಸಿಟಿ ವ್ಯಾಲ್ಯೂವನ್ನು ಕಂಡುಕೊಳ್ಳುವುದು ಹೇಗೆ ಎಂಬ ಅಂಶವನ್ನು ತಿಳಿಸಲಿದ್ದೇವೆ. ಹಂತ ಹಂತವಾಗಿ ವಿವರಗಳ ಮೂಲಕ ನಾವು ಈ ಮಾಹಿತಿಯನ್ನು ಹಂಚಿಕೊಂಡಿದ್ದು ಕೆಳಗೆ ಕಣ್ಣುಹಾಯಿಸಿ

ಪಿಪಿಐ ಎಂದರೇನು?

ಪಿಪಿಐ ಎಂದರೇನು?

ಇಂಟರ್ನೆಟ್‌ನಲ್ಲಿ ಹುಡುಕಾಡಿದಾಗ ದೊರಕಿದ ಮಾಹಿತಿಯಂತೆ ಪಿಪಿಐ ಎಂದರೆ ಪಿಕ್ಸೆಲ್ಸ್ ಪರ್ ಇಂಚ್ ಎಂದಾಗಿದೆ. ಇಲೆಕ್ಟ್ರಾನಿಕ್ ಇಮೇಜ್ ಸಾಧನದಲ್ಲಿರುವ ಪಿಕ್ಸೆಲ್ ಡೆನ್ಸಿಟಿಯ ಅಳತೆಯನ್ನು ಇದು ಒಳಗೊಂಡಿದೆ. ಕಂಪ್ಯೂಟರ್ ಮಾನಿಟರ್ ಅಥವಾ ಟಿವಿ ಡಿಸ್‌ಪ್ಲೇ, ಕ್ಯಾಮೆರಾ ಅಥವಾ ಇಮೇಜ್ ಸ್ಕ್ಯಾನರ್‌ನಲ್ಲಿ ಪಿಪಿಐ ಯನ್ನು ಕಂಡುಕೊಳ್ಳಬಹುದು. ಡಿಸ್‌ಪ್ಲೇ ಸ್ಕ್ರೀನ್‌ನಲ್ಲಿರುವ ಪಾಯಿಂಟ್‌ಗಳ ತೀಕ್ಷ್ಣತೆಯ ಅಳತೆಯನ್ನು ಪಿಪಿಐ ಎಂದು ಸರಳವಾಗಿ ಅರ್ಥೈಸಿಕೊಳ್ಳಬಹುದಾಗಿದೆ.

ಡಿಪಿಐ

ಡಿಪಿಐ

ಇನ್ನೊಂದು ಅಂಶವೆಂಬುದು ಡಿಪಿಐ ಎಂದರೆ ಡಾಟ್ಸ್ ಪರ್ ಇಂಚ್. ಇದು ಸ್ಕ್ರೀನ್ ಮತ್ತು ಇನ್ ಪ್ರಿಂಟ್‌ ಇವೆರಡರಲ್ಲೂ ಇರುವ ಇಮೇಜ್‌ನ ರೆಸಲ್ಯೂಶನ್ ಅನ್ನು ಅಳತೆ ಮಾಡುತ್ತದೆ. ನೀವು ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಾಗ ಹೆಚ್ಚಿನ ಎಪಿಕೆ ಫೈಲ್‌ಗಳನ್ನು ಇಂಟರ್ನೆಟ್‌ನಲ್ಲಿ ಕಂಡಿರುತ್ತೀರಿ.

ಆಂಡ್ರಾಯ್ಡ್ ಸ್ಮಾರ್ಟ್‌ಫೋನಿನಲ್ಲಿ ಆಡಬಹುದಾದ ಟಾಪ್ ಕಾರ್ ರೇಸಿಂಗ್ ಗೇಮ್‌ಆಂಡ್ರಾಯ್ಡ್ ಸ್ಮಾರ್ಟ್‌ಫೋನಿನಲ್ಲಿ ಆಡಬಹುದಾದ ಟಾಪ್ ಕಾರ್ ರೇಸಿಂಗ್ ಗೇಮ್‌

ಈ ಎಪಿಕೆ ಫೈಲ್‌ಗಳನ್ನು ಬೇರೆ ಬೇರೆ ಅಂಶಗಳ ಮೂಲಕ ವರ್ಗೀಕರಿಸಲಾಗುತ್ತದೆ ಅಂದರೆ ಪ್ರೊಸೆಸರ್ ಪ್ರಕಾರಗಳು ಮತ್ತು ಡಿಪಿಐ ಮೌಲ್ಯಗಳು ಎಂದಾಗಿದೆ. ಇದು ಡಿವೈಸ್‌ನ ಡಿಸ್‌ಪ್ಲೇ ಡೆನ್ಸಿಟಿಯನ್ನು ಪ್ರತಿನಿಧಿಸುತ್ತಿದ್ದು ಇದರಿಂದ ಬಳಕೆದಾರರು ಸ್ಕ್ರೀನ್ ಮೇಲೆ ಯಾವ ಬಗೆಯ ಅಂಶ ಸರಿಹೊಂದುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದಾಗಿದೆ.

Aadhaar card Number link to PAN card !! ಆಧಾರ್ ಅನ್ನು ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡಲು ಸೆಂಕೆಡ್ ಸಾಕು!!
ಹಂತ 1:

ಹಂತ 1:

ನಿಮ್ಮ ಫೋನ್‌ನ ಡಿಪಿಐ ಮೌಲ್ಯವನ್ನು ಕಂಡುಕೊಳ್ಳಲು, ನೀವು "ಡಿಸ್‌ಪ್ಲೇ ಇನ್‌ಫೋ" ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು.

ಹಂತ 2:
ಈಗ ಡೆನ್ಸಿಟಿ ಕ್ಷೇತ್ರದತ್ತ ಗಮನಹರಿಸಿ ಮತ್ತು ಎಪಿಕೆ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಸೈಟ್‌ಗೆ ಹೋಗಿ. ಈಗ ಹೆಸರಿನಲ್ಲಿರುವ ಡಿಪಿಐ ಮೌಲ್ಯವನ್ನು ಪರಿಶೀಲಿಸಿ

ಹಂತ 3:
ನಿಮಗೆ ನಿಖರವಾದ ಡಿಪಿಐ ಮೌಲ್ಯ ದೊರಕಿಲ್ಲ ಎಂದಾದಲ್ಲಿ ನಿಮ್ಮಲ್ಲಿರುವ ಹೆಚ್ಚಿನ ಅವೃತ್ತಿಗೆ ಹೋಗಿ.

Best Mobiles in India

English summary
One of the most important components in our mobile phone is indeed the display. Today, we have jotted down the steps on how to find your phone's screen density value.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X