ಆಂಡ್ರಾಯ್ಡ್ ಸ್ಟೇಟಸ್ ಬಾರ್ ನಲ್ಲಿ ನೆಟ್ವರ್ಕ್ ಆಕ್ಟಿವಿಟಿ ಪಡೆಯುವುದು ಹೇಗೆ?

By Tejaswini P G

  ಓಎಸ್ ನಲ್ಲಿ ನಮ್ಮ ಅಗತ್ಯಕ್ಕೆ ತಕ್ಕಂತೆ ಚಿಕ್ಕ ಪುಟ್ಟ ಬದಲಾವಣೆಗಳನ್ನು ಮಾಡಲು ನಮಗೆ ಆಂಡ್ರಾಯ್ಡ್ ಬಹಳಷ್ಟು ಸ್ವಾತಂತ್ರ್ಯ ನೀಡುತ್ತದೆ. ಹಲವಾರು ಫೋನ್ ತಯಾರಕರು ಆಂಡ್ರಾಯ್ಡ್ ಸ್ಕಿನ್ ನ ಮೇಲೆ ತಮ್ಮ ಸ್ವಂತ UI ಅನ್ನು ನೀಡುವ ಮೂಲಕ ಸ್ಮಾರ್ಟ್ಫೋನ್ ನಲ್ಲಿ ತಮ್ಮ ಸ್ವಂತಿಕೆಯನ್ನು ತರುವ ಪ್ರಯತ್ನ ಮಾಡುತ್ತಾರೆ.ಇನ್ನು ಕೆಲವರು ಸ್ಟಾಕ್ ಆಂಡ್ರಾಯ್ಡ್ ಅನ್ನು ಉಳಿಸಿಕೊಳ್ಳಲು ಬಯಸುತ್ತಾರೆ. ಕೆಲವು ಕಂಪೆನಿಗಳು ಆಂಡ್ರಾಯ್ಡ್ ನ ಸ್ಟೇಟಸ್ ಬಾರ್ ನಲ್ಲಿ ಇಂಟರ್ನೆಟ್ ರೀಡರ್ ನೀಡಿದರೆ ಇನ್ನು ಕೆಲವರು ಅದನ್ನು ನೀಡುವುದಿಲ್ಲ.

  ಆಂಡ್ರಾಯ್ಡ್ ಸ್ಟೇಟಸ್ ಬಾರ್ ನಲ್ಲಿ ನೆಟ್ವರ್ಕ್ ಆಕ್ಟಿವಿಟಿ ಪಡೆಯುವುದು ಹೇಗೆ?

  ಸ್ಟೇಟಸ್ ಬಾರ್ ನಲ್ಲಿ ಬರುವ ಇಂಟರ್ನೆಟ್ ರೀಡರ್ ಬಳಕೆದಾರರಿಗೆ ಆಪ್ಗಳನ್ನು ಉಪಯೋಗಿಸುವ ಸಂದರ್ಭದಲ್ಲಿ ಎಷ್ಟು ಡೇಟಾ ಬಳಕೆಯಗುತ್ತಿದೆ ಎನ್ನುವುದನ್ನು ಗಮನಿಸಲು ಸಹಾಯಕವಾಗುತ್ತದೆ. ಕೆಲವು ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ ಸ್ಟೇಟಸ್ ಬಾರ್ನಲ್ಲಿ ಈ ಇಂಟರ್ನೆಟ್ ರೀಡರ್ ಇರದಿರುವ ಕಾರಣ, ಎಲ್ಲಾ ಫೋನ್ಗಳಲ್ಲಿ ಇಂಟರ್ನೆಟ್ ರೀಡರ್ ಪಡೆಯಲು ಅನುಸರಿಸಬಹುದಾದ ವಿಧಾನವನ್ನು ಈ ಲೇಖನದಲ್ಲಿ ಸಂಪಾದಿಸಿದ್ದೇವೆ. ಈ ಪ್ರಕ್ರಿಯೆಯಲ್ಲಿ ನಿಮ್ಮ ಮೊಬೈಲ್ನಲ್ಲಿ ಒಂದು ಆಪ್ ಅನ್ನು ಇನ್ಸ್ಟಾಲ್ ಮಾಡಬೇಕಾಗುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಹಂತ 1:

  ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ 'ಇಂಟರ್ನೆಟ್ ಸ್ಪೀಡ್ ಮೀಟರ್' ಎಂಬ ಆಪ್ ಅನ್ನು ಇನ್ಸ್ಟಾಲ್ ಮಾಡಿ. ಈ ಆಪ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಉಚಿತವಾಗಿ ಲಭ್ಯವಿದೆ.

  ಹಂತ 2: ಈ ಆಪ್ ನಿಮ್ಮ ಸ್ಟೇಟಸ್ ಬಾರ್ ನ ಮಧ್ಯದಲ್ಲಿ ಡೇಟಾ ಬಳಕೆ ಮತ್ತು ಅಪ್ಲೋಡ್/ಡೌನ್ಲೋಡ್ ಮೀಟರ್ ಅನ್ನು ತೋರಿಸುತ್ತದೆ.

  ಹಂತ 3: ಈ ಆಪ್ ಅನ್ನು ನಮ್ಮ ಇಚ್ಛೆಗೆ ಅನುಸಾರವಾಗಿ ಕಸ್ಟಮೈಸ್ ಮಾಡಬಹುದಾಗಿದ್ದು, ಅದರ ಸ್ಥಳ ಬದಲಾಯಿಸಿ ನಿಮ್ಮ ಸಾಧನದಲ್ಲಿ ಎಲ್ಲಿ ಬೇಕಾದರೂ ಇರಿಸಬಹುದಾಗಿದೆ. ಅಲ್ಲದೆ ಡೇಟಾ ಮಿತಿ, ವೇಗ ಅಥವಾ ಟ್ರಾನ್ಸ್ಫರ್ ಯುನಿಟ್ ಅನ್ನು ಬದಲಾಯಿಸಬಹುದಾಗಿದೆ.

  ಹಂತ 4: ಈ ಆಪ್ ಅನ್ನು ಕಸ್ಟಮೈಸ್ ಮಾಡಲು ಸೆಟ್ಟಿಂಗ್ಸ್ ಗೆ ಹೋಗಿ, ಫ್ಲೋಟಿಂಗ್ ವಿಜೆಟ್ ಪೊಸಿಶನ್, ವಿನ್ಯಾಸ, ನೋಟಿಫಿಕೇಶನ್, ಹೈಡ್ ಆನ್ ಲಾಕ್ ಸ್ಕ್ರೀನ್ ಮೊದಲಾದ ಆಯ್ಕೆಗಳನ್ನು ನಿಮ್ಮ ಅಭಿರುಚಿಗೆ ತಕ್ಕಂತೆ ಸೆಟ್ ಮಾಡಬಹುದಾಗಿದೆ.

  ಇಂತಹ ಹಲವಾರು ಆಪ್ಗಳು ಪ್ಲೇ ಸ್ಟೋರ್ ನಲ್ಲಿ ಲಭ್ಯವಿದ್ದರೂ, ಸುರಕ್ಷಿತ ಮತ್ತು ಸರಳ UI ಹೊಂದಿರುವ ಕೆಲವೇ ಆಪ್ ಗಳ ಪೈಕಿ ಇದೂ ಒಂದಾಗಿದೆ.

  ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?
  nPerf

  nPerf

  ಪ್ಲೇಸ್ಟೋರ್ ನಲ್ಲಿ nPerf ಎನ್ನುವ ಆಪ್ ಒಂದು ಲಭ್ಯವಿದ್ದು, ಈ ಆಪ್ ಇಂಟರ್ನೆಟ್ ನ ವೇಗ ಮಾತ್ರವಲ್ಲದೆ ಮೊಬೈಲ್ ಕನೆಕ್ಷನ್ ನ ಗುಣಮಟ್ಟವನ್ನೂ ತಿಳಿಸುತ್ತದೆ. ಅಲ್ಲದೆ ಸ್ಟ್ರೀಮಿಂಗ್, ಬ್ರೌಸಿಂಗ್, ಡೌನ್ಲೋಡ್ ಮತ್ತು ಅಪ್ಲೋಡ್ ಸ್ಪೀಡ್ ಮೊದಲಾದ ಮಾಹಿತಿಯನ್ನೂ ಈ ಅಪ್ ನೀಡುತ್ತದೆ.

  ಹಂತ 1:

  ಮೊದಲಿಗೆ ಈ ಆಪ್ ಅನ್ನು ಗೂಗಲ್ ಪ್ಲೇಸ್ಟೋರ್ ನಿಂದ ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿ

  ಹಂತ 2: ಒಮ್ಮೆ ಇನ್ಸ್ಟಾಲ್ ಮಾಡಿದ ನಂತರ, ಈ ಆಪ್ ಸ್ಪೀಡ್ ಟೆಸ್ಟ್ ಗೆ ಅಗತ್ಯವಾದ ಕೆಲವು ಮಾಹಿತಿಯನ್ನು ಡೌನ್ಲೋಡ್ ಮಾಡಲು ಕೆಲ ಕ್ಷಣಗಳನ್ನು ತೆಗೆದುಕೊಳ್ಳುತ್ತದೆ.

  ಹಂತ 3: ಹೋಮ್ ಪೇಜ್ ನಿಮ್ಮ ಮೊಬೈಲ್ ನ ಪರದೆಯ ಮೇಲೆ ಮೂಡಿ ಬಂದಾಗ 'ಸ್ಟಾರ್ಟ್ ಟೆಸ್ಟ್' ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಇಂಟರ್ನೆಟ್ ನ ವೇಗವನ್ನು ಪರೀಕ್ಷಿಸಿ.

  ಹಂತ 4: ಈ ಪರೀಕ್ಷೆ ಮುಗಿದ ತಕ್ಷಣ ಈ ಆಪ್ ನಿಮ್ಮ ಇಂಟರ್ನೆಟ್ ಕನೆಕ್ಷನ್ ನ ಡೌನ್ಲೋಡ್/ಅಪ್ಲೋಡ್ ಸ್ಪೀಡ್ ನ ಜೊತೆಗೆ ಲ್ಯಾಟೆನ್ಸಿ ಕುರಿತಾದ ಮಾಹಿತಿಯನ್ನೂ ನಿಮಗೆ ನೀಡುತ್ತದೆ.

  ಹಂತ 5: ಸೆಟ್ಟಿಂಗ್ಸ್ ಗೆ ಹೋಗುವ ಮೂಲಕ ಈ ಆಪ್ ಅನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಕಸ್ಟಮೈಸ್ ಮಾಡಬಹುದಾಗಿದೆ.

  ಭಾರತದಲ್ಲಿ ನೀವು ಈಗಲೇ ಖರೀದಿಸಬಹುದಾದ ವಿಚಿತ್ರ ವಿನ್ಯಾಸದ ಉಪಯುಕ್ತ ಗ್ಯಾಜೆಟ್ಗಳು ಇವು!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Android gives a lot of independence when it comes to tweaking their OS.Since some phones don't come with internet reader on their Android status bar, we have compiled a list of steps to make it possible on any Android phones.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more