Subscribe to Gizbot

ಬೆಂಗಳೂರಿನ ಜನ ಎಟಿಎಂನಲ್ಲಿ ಹಣ ತೆಗೆಯಲು ಹೆದರುತ್ತಿರುವುದೇಕೆ?..ಏನಿದು ಸ್ಕಿಮ್ಮಿಂಗ್ ಭೂತ!!

Written By:

ಬ್ಯಾಂಕ್ ವ್ಯವಹಾರದಲ್ಲಿ ನಾವು ಯಾವಾಗಲೂ ಜಾಗರೂಕರಾಗಿರಬೇಕು, ಆದರೆ, ಆನ್‌ಲೈನ್‌ ಬ್ಯಾಂಕಿಂಗ್, ಡೆಬಿಟ್ ಅಥವಾ ಕ್ರೆಡಿಟ್‌ ಕಾರ್ಡ್‌ಗಳ ಬಗ್ಗೆ ನಾವೆಷ್ಟೇ ಜಾಗರೂಕತೆಯಿಂದ ಇದ್ದರೂ ಕೂಡ ಮೋಸಗಾರರು ನಮ್ಮನ್ನು ವಂಚಿಸುವಲ್ಲಿ ಸಫಲವಾಗುತ್ತಿದ್ದಾರೆ. ಅಂತಹ ವಂಚಕರಿಗೆ ನಮಗೇ ತಿಳಿಯದಂತೆ ಹಣ ಕದಿಯುವ ದಾರಿಗಳು ಕೂಡ ಲಭ್ಯವಿವೆ.! ಅವುಗಳಲ್ಲಿ ಒಂದು ಸ್ಕಿಮ್ಮಿಂಗ್.!!

ಹೌದು, ಸ್ಕಿಮ್ಮಿಂಗ್ ಭೂತ ಎಂದು ಹೆಸರಾಗಿರುವ ಎಟಿಎಂ ಹಣದೋಚುವ ಕುತಂತ್ರ ಬೆಂಗಳೂರು ಸೇರಿದಂತೆ ಹಲವೆಡೆ ಬೆಳಕಿಗೆ ಬಂದಿದೆ.! ಇಂತಹ ಕೆಲವರನ್ನು ಬೆಂಗಳೂರು ಪೊಲೀಸರು ಸೆರೆ ಹಿಡಿದಿದ್ದರೂ ಕೂಡ ಇವರ ತಂಡ ಬಹಳ ದೊಡ್ಡದಾಗಿದೆ ಎನ್ನಲಾಗಿದೆ.!! ಹಾಗಾದರೆ, ಏನಿದು ಸ್ಕಿಮ್ಮಿಂಗ್ ಭೂತ? ಇದರಿಂದ ಅವರು ಹಣ ಹೇಗೆ ಕದಿಯುತ್ತಾರೆ? ಇದರಿಂದ ಪಾರಾಗುವುದು ಹೇಗೆ? ಎಂಬೆಲ್ಲಾ ಅಂಶಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಕಿಮ್ಮಿಂಗ್ ಒಂದು ಉಪಕರಣ!!

ಸ್ಕಿಮ್ಮಿಂಗ್ ಒಂದು ಉಪಕರಣ!!

ಸ್ಕಿಮ್ಮಿಂಗ್ ಒಂದು ಕಾರ್ಡ್‌ ರೀಡರ್‌ ಉಪಕರಣವಾಗಿದ್ದು, ಆಧುನಿಕ ತಂತ್ರಜ್ಞಾನದ ಮೂಲಕ ಡೆಬಿಟ್ ಅಥವಾ ಕ್ರೆಡಿಟ್‌ ಕಾರ್ಡ್‌ ಬಳಕೆದಾರರ ಡೇಟಾಗೆ ಕನ್ನ ಹಾಕಲಾಗುತ್ತಿದೆ.!! ಸ್ಕಿಮ್ಮಿಂಗ್ ಉಪಕರಣದ ಸಹಾಯದಿಂದ ಕಾರ್ಡ್‌ ಮಾಹಿತಿ ಪಡೆದು ಅದೇ ರೀತಿಯ ಡ್ಯೂಪ್ಲಿಕೇಟ್ ಎಟಿಎಂ ಕಾರ್ಡ್ ತಯಾರಿಸಿ ಹಣ ಎಗರಿಸಲಾಗುತ್ತದೆ.!!

ಸ್ಕಿಮ್ಮಿಂಗ್ ಉಪಕರಣ ಹೇಗಿರುತ್ತದೆ?

ಸ್ಕಿಮ್ಮಿಂಗ್ ಉಪಕರಣ ಹೇಗಿರುತ್ತದೆ?

ನೀವು ಎಟಿಎಂಗೆ ಹೋಗಿ ಹಣ ಡ್ರಾ ಮಾಡಿದರೂ ಸಹ ನಿಮಗೆ ಅಲ್ಲಿ ಸ್ಕಿಮ್ಮಿಂಗ್ ಉಪಕರಣ ಇದೆ ಎಂಬುದೇ ಗೊತ್ತಾಗುವುದಿಲ್ಲ.! ಏಕೆಂದರೆ, ನೀವು ಎಟಿಎಂ ಮಷಿನ್‌ನಲ್ಲಿ ಕಾರ್ಡ್ ಹಾಕುವ ಜಾಗದಲ್ಲಿಯೇ ಈ ಉಪಕರಣವನ್ನು ಅಳವಡಿಸಿರುತ್ತಾರೆ.! ಮೇಲಿನ ಚಿತ್ರದಲ್ಲಿ ಹೇಗೆ ಎಂಬುದನ್ನು ಒಮ್ಮೆ ನೋಡಿ!!

ಮೋಷನ್ ಸೆನ್ಸರ್ ಇರಬಹುದು.!!

ಮೋಷನ್ ಸೆನ್ಸರ್ ಇರಬಹುದು.!!

ಎಟಿಎಂ ನಂಬರ್ ಒತ್ತುವ ನ್ಯೂಮರಿಕ್ ಪ್ಯಾಡ್‌ ಮೇಲೆ ಪಾಸ್‌ವರ್ಡ್‌ ಎಂಟ್ರಿ ಮಾಡುವುದನ್ನು ಗ್ರಹಿಸಲು ಅದರ ಮೇಲ್ಭಾಗದಲ್ಲೇ ಟೇಪ್‌ ಅಂಟಿಸಿರುವ ಕ್ಯಾಮರಾ ಸಹಿತ ಮತ್ತೊಂದು ಉಪಕರಣವನ್ನು ಅಳವಡಿಸಿರುವ ಬಗ್ಗೆಯೂ ಎಲ್ಲೆಡೇ ಮಾಹಿತಿ ಇದೆ.!!

ಸ್ಕಿಮ್ಮಿಂಗ್‌ನಿಂದ ಬಚಾವಾಗುವುದು ಹೇಗೆ?

ಸ್ಕಿಮ್ಮಿಂಗ್‌ನಿಂದ ಬಚಾವಾಗುವುದು ಹೇಗೆ?

ಮ್ಮಿಂಗ್ ಉಪಕರಣದ ಸಹಾಯದಿಂದ ಕಾರ್ಡ್‌ ಮಾಹಿತಿ ಪಡೆದರೂ ಕೂಡ ಪಾಸ್‌ವರ್ಡ್‌ ಇಲ್ಲದೇ ಖದೀಮರಿಗೆ ಹಣ ಡ್ರಾ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.! ಹಾಗಾಗಿ, ಅವರು ಕ್ಯಾಮೆರಾವನ್ನು ಎಲ್ಲಾದರೂ ಮುಚ್ಚಿಟ್ಟಿರಬಹುದು.!! ಹಾಗಾಗಿ, ಯಾವುದೇ ಕಾರಣಕ್ಕೂ ಪಾಸ್‌ವರ್ಡ್‌ ಎಂಟ್ರಿ ಮಾಡುವ ವೇಳೆ ಇನ್ನೊಂದು ಹಸ್ತವನ್ನು ಅಡ್ಡ ಹಿಡಿದು ಪಿನ್ ಒತ್ತಿರಿ!!

ಅನುಮಾನಾಸ್ಪದವಾಗಿದ್ದರೆ ಚೆಕ್‌ ಮಾಡಿ!!

ಅನುಮಾನಾಸ್ಪದವಾಗಿದ್ದರೆ ಚೆಕ್‌ ಮಾಡಿ!!

ಎಟಿಎಂ ಯಂತ್ರದ ಮೇಲೆ ಅಥವಾ ಸುತ್ತ ಮುತ್ತ ಏನಾದರೂ ಅನುಮಾನಾಸ್ಪದ ವಸ್ತುಗಳು ಕಂಡು ಬಂದಲ್ಲಿ ಕೂಡಲೇ ಆ ಬಗ್ಗೆ ಎಚ್ಚರಿಕೆ ವಹಿಸಿ.!! ಅಲ್ಲಿರುವ ಸೆಕ್ಯುರಿಟಿ ಗಾರ್ಡ್ ಅನ್ನು ಕರೆದು ಈ ಬಗ್ಗೆ ಮಾಹಿತಿ ತಿಳಿಸಿ ಮತ್ತು ಅಲ್ಲಿ ಹಣ ತೆಗೆಯುವ ಸಾಹಸಕ್ಕೆ ಮುಂದಾಗಬೇಡಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Skimming has been described as one of the most significant problems facing the credit card industry,to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot