ಹುವಾಯಿ ಉದ್ಯೋಗಿಗಳು ಹೊಸ ವರ್ಷಕ್ಕೆ ಶುಭಾಶಯ ಕೋರಿದ್ದೇ ತಪ್ಪಾಯ್ತು!

By Gizbot Bureau
|

ಇತ್ತೀಚೆಗೆ ಐಫೋನ್ ಬಳಸಿ ಹುವಾಯಿ ಸಂಸ್ಥೆ ತನ್ನ ಬಳಕೆದಾರರಿಗೆ ಹೊಸ ವರ್ಷದ ಶುಭಾಶಯವನ್ನು ಟ್ವೀಟರ್ ನಲ್ಲಿ ಕೋರಿದೆ ಎಂಬ ಸುದ್ಧಿ ವರದಿಯಾಗಿತ್ತು. ಇದೀಗ ಹೊಸ ವರದಿಯೊಂದು ತಿಳಿಸುವಂತೆ ಯಾವ ಉದ್ಯೋಗಿಯು ಈ ತಪ್ಪನ್ನು ಎಸಗಿದ್ದಾರೋ ಅವರಿಗೆ ಕಂಪೆನಿ ಕಠಿಣ ಕ್ರಮವನ್ನು ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ. ರಾಯಿಟರ್ಸ್ ವರದಿಯು ತಿಳಿಸುವಂತೆ ಕಂಪೆನಿಯು ಈ ಉದ್ಯೋಗಿಗಳ ಹಿಂಬಡ್ತಿಯನ್ನು ಮಾಡಿದೆ ಮತ್ತು ಉಂಟಾಗಿರುವ ಪ್ರಮಾದಕ್ಕಾಗಿ ಸಂಬಳದಲ್ಲೂ ಕಡಿತ ಮಾಡಿದೆ ಎಂದು ತಿಳಿಸಲಾಗಿದೆ.

ಕಂಪೆನಿಯ ಟ್ವೀಟ್:

ಕಂಪೆನಿಯ ಟ್ವೀಟ್:

ಕಂಪೆನಿಯ ಟ್ವೀಟ್ ಹೀಗಿತ್ತು " ಹುವಾಯಿ ತಂಡದ ಕಡೆಯಿಂದ ಸರ್ವರಿಗೂ 2019 ರ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ನಮ್ಮ ಹೊಸ ನಿರ್ಣಯಗಳು ಮುಂದಿನ ದಿನಗಳಲ್ಲಿ ಒಬ್ಬರನ್ನೊಬ್ಬರ ಕಾಳಜಿ ಮತ್ತು ಸಂಪರ್ಕಕ್ಕೆ ಹೆಚ್ಚಿನ ನೆರವು ನೀಡುವುದಕ್ಕೆ ಕಾರಣವಾಗುತ್ತದೆ." ಎಂದು ಬರೆಯಲಾಗಿತ್ತು ಮತ್ತು ಇದರ ಕೆಳಗೆ ವಯಾ ಐಫೋನ್ ಎಂದು ನಮೂದಿಸಲಾಗಿತ್ತು.

ಈ ತಪ್ಪನ್ನು ಮೊದಲು ಗುರುತಿಸಿದ್ದು ಪ್ರಸಿದ್ಧ ಯುಟ್ಯೂಬರ್ MKBHD. ಆದರೆ ಈ ತಪ್ಪನ್ನು ತಿಳಿದ ಕೂಡಲೇ ಕಂಪೆನಿಯು ಟ್ವೀಟ್ ನ್ನು ತೆಗೆದುಹಾಕಿದೆ.

ಹುವಾಯಿ ಬ್ರ್ಯಾಂಡ್ ಗೆ ಅವಮಾನ:

ಹುವಾಯಿ ಬ್ರ್ಯಾಂಡ್ ಗೆ ಅವಮಾನ:

ರಾಯಿಟರ್ಸ್ ಕಂಪೆನಿ ಹೊರಡಿಸಿದ ಒಂದು ಮೆಮೊವನ್ನು ಕೂಡ ಹಿಡಿದಿಟ್ಟುಕೊಂಡಿದ್ದು ಕಂಪೆನಿಯ ಅಧ್ಯಕ್ಷ ಚೆನ್ ಲಿಫಾಂಗ್ ಅವರು ನೌಕರರ ಈ ವರ್ತನೆಯನ್ನು ಬೇಜವಾಬ್ದಾರಿಯುತ ವರ್ತನೆ ಎಂದು ಪರಿಗಣಿಸಿದ್ದಾರೆ ಮತ್ತು ನೌಕರರಿಗೆ ಶಿಕ್ಷಿಸುತ್ತಿದೆ ಎಂದು ತಿಳಿದುಬಂದಿದೆ. ನೌಕರರ ಈ ಘಟನೆಯು ಹುವಾಯಿ ಬ್ರ್ಯಾಂಡ್ ಗೆ ತೊಂದರೆಯುಂಟುಮಾಡಿದೆ ಎಂದು ತಿಳಿದುಬಂದಿದೆ.

ಮೆಮೊದಲ್ಲಿ ಏನಿದೆ?

ಮೆಮೊದಲ್ಲಿ ಏನಿದೆ?

ಹುವಾಯಿ ಮೆಮೊವಿನಲ್ಲಿ ಹೀಗೆ ಹೇಳಲಾಗಿದೆ. ಈ ತೊಂದರೆ ಆಗಿರುವುದಕ್ಕೆ ಕಾರಣ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡುವುದಕ್ಕೆ ನೀಡಲಾಗಿದ್ದ ಡೆಸ್ಕ್ ಟಾಪ್ ಕಂಪ್ಯೂಟರ್ ಗಳಲ್ಲಿದ್ದ ವಿಪಿಎನ್ ಸಮಸ್ಯೆಗಳ ಎನ್ನಲಾಗಿದ್ದು ಮಧ್ಯರಾತ್ರಿಯೇ ಮೆಸೇಜ್ ಕಳಿಸುವ ತರಾತುರಿಯಲ್ಲಿ ರೋಮಿಂಗ್ ಸಿಮ್ ಕಾರ್ಡ್ ನ್ನು ಬಳಕೆ ಮಾಡಿದ ಕಾರಣದಿಂದಾಗಿ ಈ ಸಮಸ್ಯೆ ಎದುರಾಯಿತು ಎಂದು ಸಮಜಾಯಿಷಿ ನೀಡಲಾಗಿದೆ.

ಉದ್ಯೋಗಿಗಳಿಗೆ ಹಿಂಬಡ್ತಿಯ ಶಿಕ್ಷೆ, ಸಂಬಳದಲ್ಲಿ ಕಡಿತ:

ಈ ಬ್ಲಂಡರ್ ಸಮಸ್ಯೆ ಶಿಕ್ಷೆ ಎನ್ನುವಂತೆ, ಯಾವ ಉದ್ಯೋಗಿಗಳು ಈ ಸಮಸ್ಯೆಗೆ ಕಾರಣರಾದರೋ ಅವರನ್ನು ಉದ್ಯೋಗದಲ್ಲಿ ಹಿಂಬಡ್ತಿ ಮಾಡಲಾಗಿದೆ ಮತ್ತು ಅವರ ತಿಂಗಳ ಸಂಬಳದಲ್ಲಿ $700 ಅಂದರೆ 5000 ಯಾನ್ ನಷ್ಟು ಸಂಬಳವನ್ನು ಕಡಿತಗೊಳಿಸಲಾಗಿದೆ. ಇನ್ನು ಡಿಜಿಟಲ್ ಮಾರ್ಕೆಟಿಂಗ್ ಡೈರೆಕ್ಟರ್ ಸಂಬಳವನ್ನು 12 ತಿಂಗಳ ಅವಧಿಗೆ ನಿಲ್ಲಿಸಲಾಗಿರುತ್ತದೆ.

ಹುವಾಯಿ ಸಿಎಫ್ಓ ಬಂಧನ:

ಆಪಲ್ ಮತ್ತು ಹುವಾಯಿ ಎರಡೂ ಸಂಸ್ಥೆಗಳು ಈಗಾಗಲೇ ಮಾರುಕಟ್ಟೆಯಲ್ಲಿ ಒಂದು ರೀತಿಯಲ್ಲಿ ಯುದ್ಧ ಮಾಡುತ್ತಿದೆ. ಇತ್ತೀಚೆಗೆ ಹುವಾಯಿ ಸಿಎಫ್ಓ ಮೆಂಗ್ ವಾನ್ಝಹೂ ಅವರು ಬಂಧನಕ್ಕೆ ಒಳಗಾಗಿದ್ದರು ಮತ್ತು ಕೆನಡಾದ ಜೈಲಿಗೆ ಅವರನ್ನು ಹಾಕಲಾಗಿತ್ತು. ಇರಾನ್ ನಲ್ಲಿ ಯುಎಸ್ ನಿರ್ಬಂಧಗಳ ಉಲ್ಲಂಘನೆಯ ವಿಚಾರಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿತ್ತು.

ಇದು ಹುವಾಯಿ ಮತ್ತು ಯುಎಸ್ ಮೂಲದ ಆಪಲ್ ನಡುವಿನ ಸಮಸ್ಯೆಗೆ ಕಾರಣವಾಗಿತ್ತು. ಹುವಾಯಿ ಪುನಃ ತೆರಳಿ ತನ್ನೆಲ್ಲ ಉದ್ಯೋಗಿಗಳಿಗೆ ಆಪಲ್ ನ್ನು ಬಹಿಷ್ಕರಿಸುವಂತೆ ಮತ್ತು ಐಫೋನ್ ಬಳಸುವುದನ್ನು ನಿಲ್ಲಿಸುವಂತೆ ಆದೇಶ ಹೊರಡಿಸಿತ್ತು.


Best Mobiles in India

Read more about:
English summary
How a Huawei employee had to pay and got punished because of an iPhone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X