Subscribe to Gizbot

ಅಮೆಜಾನ್‌ನಲ್ಲಿ ಫೇಕ್ ರಿವ್ಯೂ ಕಂಡುಹಿಡಿಯುವುದು ಹೇಗೆ..? ಇಲ್ಲಿದೇ ಸಿಂಪಲ್ ಟಿಪ್ಸ್..!

Written By:

ಇಂದಿನ ದಿನದಲ್ಲಿ ಆನ್‌ಲೈನ್ ಶಾಪಿಂಗ್ ತಾಣಗಳ ಭರಾಟೆ ಹೆಚ್ಚಾಗಿದೆ. ಅತಿ ಕಡಿಮೆ ಬೆಲೆ, 50% ಕಡಿತ, ಕ್ಯಾಷ್ ಬ್ಯಾಕ್ ಸೇರಿದಂತೆ ಹಲವು ಆಮಿಷಗಳನ್ನು ಒಡ್ಡಿ ಗ್ರಾಹಕರನ್ನು ಸೆಳಯುವ ತಂತ್ರವನ್ನು ಆನ್‌ಲೈನ್ ಶಾಪಿಂಗ್ ತಾಣಗಳು ಅಳವಡಿಸಿಕೊಂಡಿವೆ. ಇದಲ್ಲದೇ ಈ ಆನ್‌ಲೈನ್ ಶಾಪಿಂಗ್ ತಾಣಗಳಲ್ಲಿ ಫೇಸ್‌ ವಸ್ತುಗಳು ಮತ್ತು ಕಡಿಮೆ ಗುಣಮಟ್ಟದ ವಸ್ತುಗಳನ್ನು ಹೆಚ್ಚು ಮಾರಾಟ ಮಾಡಲಾಗುತ್ತಿದೆ. ಇದಲ್ಲದೇ ಎಕ್ ಕ್ಲೂಸಿವ್ ವಸ್ತುಗಳನ್ನು ಸೇಲ್ ಮಾಡುವುದರಿಂದಾಗಿ ಅವುಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ಇರುವುದಿಲ್ಲ.

ಅಮೆಜಾನ್‌ನಲ್ಲಿ ಫೇಕ್ ರಿವ್ಯೂ ಕಂಡುಹಿಡಿಯುವುದು ಹೇಗೆ..? ಇಲ್ಲಿದೇ ಸಿಂಪಲ್ ಟಿಪ್ಸ್

ಇದರಿಂದಾಗಿ ಗ್ರಾಹಕರು ಆ ವಸ್ತುಗಳ ಬಗ್ಗೆ ಶಾಪಿಂಗ್ ತಾಣಗಳಲ್ಲಿ ದಾಖಲಿಸುವ ರಿವ್ಯೂವನ್ನು ನೋಡುತ್ತಾರೆ. ಆದರೆ ಇಂದಿನ ದಿನದಲ್ಲಿ ಅದು ಸಹ ಫೇಕ್ ಆಗುತ್ತಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಅಮೆಜಾನ್ ನಲ್ಲಿ ಫೇಕ್ ರಿವ್ಯೂಗಳನ್ನು ಚೆಕ್ ಮಾಡುವುದ ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊದಲ ರೀತಿ:

ಮೊದಲ ರೀತಿ:

ನೀವು ಯಾವ ವಸ್ತುವನ್ನು ಕೊಳ್ಳಬೇಕು ಎಂದು ನೋಡುತ್ತಿರಾ ಅದರ ರಿವ್ಯೂವನ್ನು ಓಪನ್ ಮಾಡಿರಿ. ಅದರಲ್ಲಿ ಯಾವುದಾರು ಟಾಪ್ ರೇಟಿಂಗ್‌ನಲ್ಲಿ ರಿವ್ಯೂಗಳನ್ನು ಕೆಲವೇ ಮಂದಿ ಬರೆದಿದ್ದರೂ ಎಂದರೆ ಅದು ಫೇಸ್ ಆಗಿರಲಿದೆ. ಹೆಚ್ಚಿನ ಮಂದಿ ಬಳಕೆದಾರರು ಒಂದೇ ಸ್ಟಾರ್‌ ವಿಭಾಗದಲ್ಲಿ ಹೆಚ್ಚಿನ ರಿವ್ಯೂ ಬರೆದಿದ್ದರೇ ಇದು ಅಸಲಿಯಾಗುವ ಸಾಧ್ಯತೆ ಇದೆ.

ಫೇಕ್ ರಿವ್ಯೂ:

ಫೇಕ್ ರಿವ್ಯೂ:

ಅಮೆಜಾನ್ ರಿವ್ಯೂ ಬರೆಯುವವರಿಗೆ ಉಚಿತವಾಗಿ ಅ ವಸ್ತುವನ್ನು ನೀಡಿರುತ್ತದೆ. ಈ ಹಿನ್ನಲೆಯಲ್ಲಿ ರಿವ್ಯೂ ಕೊನೆಯಲ್ಲಿ ಈ ಪ್ರಾಡೆಕ್ಟ್ ಅನ್ನು ರಿವ್ಯೂಗಾಗಿ ಪಡೆದಿದೆ ಎಂದು ಬರೆದಿರುತ್ತಾರೆ. ಇಂತಹ ರಿವ್ಯೂಗಳು ಹೆಚ್ಚಿನ ಸಂಖ್ಯೆಯಲ್ಲಿ ಫೇಕ್ ಆಗಿರುತ್ತದೆ.

ಡೊಡ್ಡದಾಗಿದ್ದರೆ ಫೇಕ್:

ಡೊಡ್ಡದಾಗಿದ್ದರೆ ಫೇಕ್:

ನೀವು ಓದುವ ರಿವ್ಯೂ ಅತೀ ದೊಡ್ಡದಾಗಿ ಹೆಚ್ಚಿನ ವಿವರಣೆಯನ್ನು ಹೊಂದಿದೆ ಎನ್ನುವವಾದರೆ ನಿಜವಾಗಿಯೂ ಅದು ಫೇಕ್ ರಿವ್ಯೂ ಆಗಿರಲಿದೆ. ಅದರಲ್ಲಿ ಹೆಚ್ಚಿನ ಸುಳ್ಳಿನ ಅಂಶವೇ ಸೇರಿರುತ್ತದೆ.

ವೆರಿವೈಡ್ ಸ್ಟ್ಯಾಂಪ್:

ವೆರಿವೈಡ್ ಸ್ಟ್ಯಾಂಪ್:

ಇದಲ್ಲದೇ ರಿವ್ಯೂನಲ್ಲಿ ವೆರಿವೈಡ್ ಪರ್ಚೆಸ್ ಸ್ಟ್ಯಾಂಪ್ ಇದ್ದರೆ ಇದು ಉತ್ತಮವಾದ ರಿವ್ಯೂ ಎನ್ನಬಹುದಾಗಿದೆ. ಇದರಲ್ಲಿ ಗ್ರಾಹಕರು ವಸ್ತುವನ್ನು ದುಡ್ಡು ಕೊಟ್ಟು ಖರೀದಿಸಿ ಅದರ ಬಗ್ಗೆ ರಿವ್ಯೂ ಬರೆದಿರುತ್ತಾರೆ. ಇದು ಅಸಲಿ ರಿವ್ಯೂ ಆಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Here's how the Face ID of the newly launched Oppo A83 works (KANNADA)

ಓದಿರಿ: ನಿಜ ಆಯ್ತು ನಿರೀಕ್ಷೆ: ಫೆ.14ಕ್ಕೆ ರೆಡ್‌ಮಿ ನೋಟ್ 5 ಬಿಡುಗಡೆ ಪಕ್ಕಾ..! ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ ಲಭ್ಯ..!

English summary
How to Identify Fake Reviews on Amazon. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot