ನಿಜ ಆಯ್ತು ನಿರೀಕ್ಷೆ: ಫೆ.14ಕ್ಕೆ ರೆಡ್‌ಮಿ ನೋಟ್ 5 ಬಿಡುಗಡೆ ಪಕ್ಕಾ..! ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ ಲಭ್ಯ..!

|

ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಹವಾ ಎಬ್ಬಿಸಿರುವ ಶಿಯೋಮಿ ಕಂಪನಿಯೂ ಭಾರತೀಯ ಮಾರುಕಟ್ಟೆಯಿಂದ ಸಾಕಷ್ಟು ಪಡೆದುಕೊಂಡಿದ್ದು, ಈ ಹಿನ್ನಲೆಯಲ್ಲಿ ಭಾರತೀಯರಿಗೆ ಪ್ರೇಮಿಗಳ ದಿನಾಚರಣೆಗೆ ಹೊಸದೊಂದು ಕೊಡುಗೆಯನ್ನು ನೀಡಲು ಮುಂದಾಗಿದೆ. ಇದೇ ಪ್ರಥಮವಾಗಿ ಭಾರತಕ್ಕಾಗಿ ಸ್ಮಾರ್ಟ್‌ಫೋನ್ ನಿರ್ಮಿಸಿದ್ದು, ಶಿಯೋಮಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್‌ ಅನ್ನು ಫೆಬ್ರವರಿ 14ರಂದು ಲಾಂಚ್ ಮಾಡಲಿದೆ. ಈ ಸ್ಮಾರ್ಟ್‌ಫೋನ್ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಹಾಕಿದ್ದು, ಫ್ಲಿಪ್‌ಕಾರ್ಟ್ ನಲ್ಲಿ ಮಾತ್ರವೇ ಎಕ್ಸ್‌ಕ್ಲೂಸಿವ್ ಅಗಿ ಸೇಲ್ ಆಗಲಿದೆ ಎನ್ನಲಾಗಿದೆ.

ನಿಜ ಆಯ್ತು ನಿರೀಕ್ಷೆ: ಫೆ.14ಕ್ಕೆ ರೆಡ್‌ಮಿ ನೋಟ್ 5 ಬಿಡುಗಡೆ ಪಕ್ಕಾ..!

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ಅನ್ನು ಮಣಿಸಿ ನಂಬರ್ 1 ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಕಂಪನಿ ಎನ್ನುವ ಪಟ್ಟವನ್ನು ಅಲಂಕರಿಸಿರುವ ಶಿಯೋಮಿ, ಕಳೆದ ವರ್ಷ ಅತೀ ಹೆಚ್ಚು ಮಾರಾಟವಾದ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನಿನ ಮುಂದಿನ ಆವೃತ್ತಿಯ ಫೋನ್ ರೆಡ್‌ಮಿ ನೋಟ್ 5 ಬಿಡುಗಡೆ ಭರ್ಜರಿ ತಯಾರಿ ನಡೆಸಿದ್ದು, ಈ ಸ್ಮಾರ್ಟ್‌ಪೋನ್ ಬಿಡುಗಡೆ ವಿಷಯ ಕೇಳಿ ಹಲವು ಸ್ಮಾರ್ಟ್‌ಫೋನ್ ಕಂಪನಿಗಳು ನಡುಗಿವೆ ಎನ್ನಲಾಗಿದೆ.

ಗುಟ್ಟು ಬಿಡದ ಕಂಪನಿ:

ಗುಟ್ಟು ಬಿಡದ ಕಂಪನಿ:

ಫೆಬ್ರವರಿ 14ರಂದು ಭಾರತದಲ್ಲಿ ಸ್ಮಾರ್ಟ್‌ಫೋನ್ ವೊಂದನ್ನು ಲಾಂಚ್ ಮಾಡುವುದಾಗಿ ಕಂಪನಿಯೂ ತಿಳಿಸಿದೆ ಆದರೆ ಇದು ರೆಡ್‌ಮಿ ನೋಟ್ 5 ಎನ್ನುವ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ. ಆದರೆ ವೆಬ್‌ ಸೈಟಿನಲ್ಲಿ ಈ ಸ್ಮಾರ್ಟ್‌ಫೋನ್ ಲಾಂಚಿಂಗ್ ಇವೆಂಟ್ ಪೇಜ್ ಕ್ರಿಯೇಟ್ ಮಾಡಿದ್ದು, ಅದರ ಬ್ಯಾಕ್ ಎಂಡ್‌ನಲ್ಲಿ ರೆಡ್‌ಮಿ ನೋಟ್ 5 ಲಾಂಚ್ ಇವೆಂಟ್ ಎಂದು ಬರೆದುಕೊಂಡಿದೆ ಎನ್ನಲಾಗಿದ್ದು, ಈ ಬಗ್ಗೆ ಆಂಗ್ಲ ಮಾದ್ಯಮಗಳು ವರದಿ ಮಾಡಿವೆ.

ಮಾಹಿತಿ ಲೀಕ್ ಆಗಿತ್ತು:

ಮಾಹಿತಿ ಲೀಕ್ ಆಗಿತ್ತು:

ಶಿಯೋಮಿ ಶೀಘ್ರವೇ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ ಎನ್ನವ ಮಾಹಿತಿಯೂ ಲೀಕ್ ಆಗಿತ್ತು. ಈ ಸ್ಮಾರ್ಟ್‌ಫೋನಿನ ಫೋಟೋಗಳು ಲೀಕ್ ಆಗಿದ್ದವು. ಈ ಹಿನ್ನಲೆಯಲ್ಲಿ ಈ ಸ್ಮಾರ್ಟ್‌ಫೋನ್ ಕುರಿತ ಮಾಹಿತಿಯೂ ಇಲ್ಲಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ರೆಡ್‌ಮಿ ನೋಟ್ 5 ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದೆ. ಫಿಂಗರ್ ಪ್ರಿಂಟ್ ಮೇಲ್ಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದ್ದು, 16 MP ಮತ್ತು 5 MPಯ ಡ್ಯುಯಲ್ ಲೆನ್ಸ್ ಅನ್ನು ಈ ಶಿಯೋಮಿ ರೆಡ್‌ಮಿ ನೋಟ್ 5 ನಲ್ಲಿ ಅಳವಡಿಸಲಾಗಿದ್ದು, ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಇದು ಸಹಾಯಕಾರಿಯಾಗಿದೆ ಎನ್ನಲಾಗಿದೆ.

ಫುಲ್ ಸ್ಕ್ರಿನ್ ಡಿಸ್‌ಪ್ಲೇ:

ಫುಲ್ ಸ್ಕ್ರಿನ್ ಡಿಸ್‌ಪ್ಲೇ:

ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ 18:9 ಅನುಪಾತದ 5.99 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ ಎನ್ನಲಾಗಿದೆ. ಸಂಪೂರ್ಣ ಮೆಟಲ್ ಬಾಡಿಯನ್ನು ಹೊಂದಿದ್ದು, ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಬಹುದಾಗಿದೆ. ಉತ್ತಮ ವಿನ್ಯಾಸ ಇದರದ್ದಾಗಿದೆ.

ಎರಡು ಆವೃತ್ತಿ:

ಎರಡು ಆವೃತ್ತಿ:

ಇದಲ್ಲದೇ ಶಿಯೋಮಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಎರಡು ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದೆ. ಒಂದು 3GB RAM ಮತ್ತು 32 GB ಇಂಟರ್ನಲ್ ಮೆಮೊರಿ ಮತ್ತು 4GB RAM ಮತ್ತು 64GB ಇಂಟರ್ನಲ್ ಮೆಮೊರಿಯೊಂದಿಗೆ ಲಭ್ಯವಿದೆ. ಅಲ್ಲದೇ ಸ್ನಾಪ್‌ಡ್ರಾಗನ್ 636 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ.

Xiaomi Mi A1 : ಶಿಯೋಮಿಯ ಮೊದಲ ಡ್ಯುಯಲ್ ಕ್ಯಾಮೆರಾ ಫೋನ್: ಮಿ A1 ಫಸ್‌ಲುಕ್
ವಿವಿಧ ಬಣ್ಣಗಳು:

ವಿವಿಧ ಬಣ್ಣಗಳು:

ಶಿಯೋಮಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಈ ಬಾರಿ ಗ್ರೇ. ಬ್ಲಾಕ್ ಮತ್ತು ಬ್ಲೂ ಬಣ್ಣದಲ್ಲಿ ದೊರೆಯಲಿದೆ ಎನ್ನಲಾಗಿದೆ. ಇದು ಗ್ರಾಹಕರಿಗೆ ಹೆಚ್ಚಿನ ಆಯ್ಕೆಯನ್ನು ನೀಡಲಿದೆ ಎನ್ನಲಾಗಿದೆ.

ಓದಿರಿ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಡಿಜಿ ಲಾಕರ್ ಆಪ್ ಬಳಸುವುದು ಹೇಗೆ..?

Best Mobiles in India

English summary
Redmi Note 5 India Launch Expected on February 1. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X