ಆಂಡ್ರಾಯ್ಡ್ ಫೋನ್ ನಲ್ಲಿ ವಿಂಡೋಸ್ ಓಎಸ್ ಇನ್ಸ್ಟಾಲ್ ಮಾಡುವುದು ಹೇಗೆ?

By: Tejaswini P G

ಕೆಲವು ವರ್ಷಗಳ ಹಿಂದೆ ಮೈಕ್ರೋಸಾಫ್ಟ್ ಶಿಯೋಮಿಯೊಂದಿಗೆ ಕೈಜೋಡಿಸಿ ಶಿಯೋಮಿ Mi4 ಸ್ಮಾರ್ಟ್ಫೋನಿನ ವಿಂಡೋಸ್ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಆ ದಿನಗಳಲ್ಲಿ ಇದು ಚೀನಾಕ್ಕೆ ಮಾತ್ರ ಸೀಮಿತವಾಗಿತ್ತು, ಅದರಲ್ಲೂ ಶಿಯೋಮಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈ ಲೇಖನದಲ್ಲಿ ನಾವು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನಿನಲ್ಲಿ ವಿಂಡೋಸ್ ಓಎಸ್ ಇನ್ಸ್ಟಾಲ್ ಮಾಡುವ ಬಗೆಯನ್ನು ಬಹಳ ಜಾಗರೂಕತೆಯಿಂದ ನಿಮಗಾಗಿ ಸಂಪಾದಿಸಿದ್ದೇವೆ.

ಆಂಡ್ರಾಯ್ಡ್ ಫೋನ್ ನಲ್ಲಿ ವಿಂಡೋಸ್ ಓಎಸ್ ಇನ್ಸ್ಟಾಲ್ ಮಾಡುವುದು ಹೇಗೆ?

ಈ ಕೆಳಗೆ ನೀಡಿರುವ ಸೂಚನೆಗಳ ಮೂಲಕ ನೀವು ನಿಮ್ಮ ಆಂಡ್ರಾಯ್ಡ್ ಟ್ಯಾಬ್ಲೆಟ್ ಅಥವಾ ಸ್ಮಾರ್ಟ್ಫೋನಿನಲ್ಲಿ ವಿಂಡೋಸ್ XP/7/8/8.1/10 ಅನ್ನು ಇನ್ಸ್ಟಾಲ್ ಮಾಡಬಹುದಾಗಿದೆ. ನಿಮ್ಮ ಸ್ಮಾರ್ಟ್ಫೋನ್ ಆಂಡ್ರಾಯ್ಡ್ ಕಿಟ್ಕ್ಯಾಟ್, ಲಾಲಿಪಾಪ್ ಅಥವಾ ಮಾರ್ಶ್ಮೆಲ್ಲೋ ಹೊಂದಿದ್ದರೆ ನೀವು ಈ ಕೆಳಗೆ ಹೇಳಿದ ಹೆಜ್ಜೆಗಳನ್ನು ಅನುಸರಿಸಬಹುದಾಗಿದೆ.

ಬೇಕಾದ ವಸ್ತುಗಳು

• ಆಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್

• ಪಿಸಿ ಅಥವಾ ಲ್ಯಾಪ್ಟಾಪ್

• ಚೇಂಜ್ ಮೈ ಸಾಫ್ಟ್ವೇರ್ (http://ow.ly/xTBl309o8fd ನಿಂದ ಡೌನ್ಲೋಡ್ ಮಾಡಿ)

• Mcent ಫ್ರೀ ರೀಚಾರ್ಜಿಂಗ್ ಆಪ್ ಪಿಸಿಗಾಗಿ

• Xender ಫ್ರೀ ಫೈಲ್ ಟ್ರ್ಯಾನ್ಸ್ಫರ್ ಆಪ್ ಪಿಸಿಗಾಗಿ

ವಿಂಡೋಸ್ ಇನ್ಸ್ಟಾಲ್ ಮಾಡುವ ಹೆಜ್ಜೆಗಳು

ಹಂತ 1: ನಿಮ್ಮ ಆಂಡ್ರಾಯ್ಡ್ ಸಾಧನದಲ್ಲಿ ಸೆಟ್ಟಿಂಗ್ಸ್-> ಡೆವಲಪರ್ ಆಪ್ಶನ್ಸ್-> ಟರ್ನ್ ಆನ್ USB ಡಿಬಗ್ಗಿಂಗ್ ಗೆ ಹೋಗಿ. ನಿಮಗೆ ಈ ಆಯ್ಕೆ ಕಾಣಿಸದಿದ್ದಲ್ಲಿ 'ಅಬೌಟ್ ಫೋನ್' ಗೆ ಹೋಗಿ 'ಬಿಲ್ಡ್ ನಂಬರ್' ಮೇಲೆ ಸತತವಾಗಿ ಟ್ಯಾಪ್ ಮಾಡಿ. 'ಯೂ ಆರ್ ನೌ ಎ ಡೆವಲಪರ್' ಎಂಬ ಸೂಚನೆ ಬರುವವರೆಗೆ ಟ್ಯಾಪ್ ಮಾಡುತ್ತಲೇ ಇರಿ.

ಹಂತ 2:
ಈಗ ಮೇಲೆ ಹೇಳಿದ ಲಿಂಕ್ ನಿಂದ 'ಚೇಂಜ್ ಮೈ ಸಾಫ್ಟ್ವೇರ್' ಡೌನ್ಲೋಡ್ ಮಾಡಿ

ಹಂತ 3: ಡೌನ್ಲೋಡ್ ಆದ ಬಳಿಕ ನಿಮ್ಮ ಸಾಧನವನ್ನು ಪಿಸಿ ಗೆ ಕನೆಕ್ಟ್ ಮಾಡಿ 'ಚೇಂಜ್ ಮೈ ಸಾಫ್ಟ್ವೇರ್' ಅನ್ನು ಲಾಂಚ್ ಮಾಡಿ

ಹಂತ 4: ಈಗ ನಿಮ್ಮ ಸಾಧನದಲ್ಲಿ ವಿಂಡೋಸ್ ಇನ್ಸ್ಟಾಲ್ ಮಾಡಲು ಆಂಡ್ರಾಯ್ಡ್-> ವಿಂಡೋಸ್ (8/8.1/7/XP) ಅನ್ನು ಆಯ್ಕೆ ಮಾಡಿ

ಹಂತ 5: ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿ, ಭಾಷೆಯನ್ನು ಆಯ್ಕೆ ಮಾಡಲು ಸೂಚಿಸಿದರೆ ಸರಿಯಾದ ಭಾಷೆಯನ್ನು ಆಯ್ಕೆ ಮಾಡಿ

ಹಂತ 6:
ಲ್ಯಾಂಗ್ವೇಜ್/ಭಾಷೆ ಆಯ್ಕೆ ಮಾಡಿದ ನಂತರ ತನ್ನಿಂತಾನೆ ವಿಂಡೋಸ್ ಡ್ರೈವರ್ ನ ಡೌನ್ಲೋಡ್ ಪ್ರಾರಂಭವಾಗುತ್ತದೆ.

ಹಂತ 7: ಈಗ ನಿಮಗೆ 'ರಿಮೂವ್ ಆಂಡ್ರಾಯ್ಡ್' ಆಯ್ಕೆ ಬರುತ್ತದೆ. ನೀವು ಡ್ಯುಯಲ್ ಬೂಟ್ ಮಾಡಬಯಸಿದರೆ ಈ ಸೂಚನೆಯನ್ನು ನಿರ್ಲ್ಕಷಿಸಿ. ಇಲ್ಲದಿದ್ದರೆ ಆ ಅಯ್ಕೆಯ ಮೇಲೆ ಟ್ಯಾಪ್ ಮಾಡಿ.

ಹಂತ 8: ನಿಮ್ಮ ಸಾಧನದಲ್ಲಿ ಈ ಪ್ರಕ್ರಿಯೆ ಪೂರ್ತಿಯಾಗುವವರೆಗೆ ಕಾಯಬೇಕು. ವಿಂಡೋಸ್ ನ ಫೈಲ್ಗಳು ಸರಿಯಾಗಿ ಇನ್ಸ್ಟಾಲ್ ಆಗಿದ್ದಲ್ಲಿ ನಿಮ್ಮ ಸಾಧನ ರೀಬೂಟ್ ಆಗುತ್ತದೆ.

ಒಂದು ವೇಳೆ ನೀವು ಮತ್ತೆ ಆಂಡ್ರಾಯ್ಡ್ ಗೆ ಮರಳಲಿಚ್ಛಿಸಿದರೆ ಮತ್ತೆ 'ಚೇಂಜ್ ಮೈ ಸಾಫ್ಟ್ವೇರ್' ಬಳಸಿ ಅದನ್ನು ಸಾಧಿಸಬಹುದು. ನಿಮ್ಮ ಸಾಧನವನ್ನು ಪಿಸಿ ಗೆ ಕನೆಕ್ಟ್ ಮಾಡಿ ಮೂಲ ಮೆನುವಿನಿಂದ 'ರಿಸ್ಟೋರ್ ಟು ಒರಿಜಿನಲ್ ಕಂಡೀಶನ್' ಆಯ್ಕೆಯನ್ನು ಆಯ್ದುಕೊಳ್ಳಿ.

ಫಸ್ಟ್ ಸೇಲ್ ನಲ್ಲಿ ರೆಡ್ ಮಿ 5A ಸೋಲ್ಡ್ ಔಟ್: ಮುಂದಿನ ಸೇಲ್.?

Read more about:
English summary
A couple of years back, Microsoft collaborated with Xiaomi and launched the Windows version of the Xiaomi Mi 4 smartphone. Check out here on how to Install Windows OS on Android Phone
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot