ಒಂದೇ ಸ್ಮಾರ್ಟ್ ಫೋನ್ ನಿಂದ ಮತ್ತೊಂದು ಸ್ಮಾರ್ಟ್ ಫೋನ್ ನಿಯಂತ್ರಿಸಬಹುದು ಹೇಗೆ..?

ನಿಮ್ಮ ಮೊಬೈಲ್ ಫೋನಿನಿಂದಲೇ ನಿಮ್ಮ ಕಂಪ್ಯೂಟರ್ ಅನ್ನು ನಿಯಂತ್ರಿಸುವ ಸಾಧ್ಯತೆಯು ಇದೆ. ಈ ಹಿನ್ನಲೆಯಲ್ಲಿ ಅವುಗಳನ್ನು ಮಾಡಿಕೊಳ್ಳುವುದು ಹೇಗೆ ಎಂದಬುನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

By Lekhaka
|

ಇಂದಿನ ದಿನದಲ್ಲಿ ತಂತ್ರಜ್ಞಾನ ಎನ್ನುವುದು ಬಹಳ ವೇಗವಾಗಿ ಬೆಳೆಯುತ್ತಿದ್ದು, ನಾವು ಊಹಿಸಲಾಗದ ತಂತ್ರಜ್ಞಾನಗಳು ಇಂದು ನಮ್ಮ ಮುಂದೆ ಇದೆ. ಇದೇ ಮಾದರಿಯಲ್ಲಿ ನಮ್ಮ ಸ್ಮಾರ್ಟ್ ಫೋನ್ ಅನ್ನು ಇನ್ನೊಂದು ಸ್ಮಾರ್ಟ್ ಫೋನ್ ವೊಂದರ ಕನ್ನಡಿಯಂತೆ ಬಳಕೆ ಮಾಡಿಕೊಳ್ಳಬಹುದಾಗಿದೆ.

ಒಂದೇ ಸ್ಮಾರ್ಟ್ ಫೋನ್ ನಿಂದ ಮತ್ತೊಂದು ಸ್ಮಾರ್ಟ್ ಫೋನ್ ನಿಯಂತ್ರಿಸಬಹುದು ಹೇಗೆ..?

ಅಲ್ಲದೇ ನಿಮ್ಮ ಮೊಬೈಲ್ ಫೋನಿನಿಂದಲೇ ನಿಮ್ಮ ಕಂಪ್ಯೂಟರ್ ಅನ್ನು ನಿಯಂತ್ರಿಸುವ ಸಾಧ್ಯತೆಯು ಇದೆ. ಈ ಹಿನ್ನಲೆಯಲ್ಲಿ ಅವುಗಳನ್ನು ಮಾಡಿಕೊಳ್ಳುವುದು ಹೇಗೆ ಎಂದಬುನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ. ಈ ರೀತಿ ಮಾಡುವುದರಿಂದ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಕಂಪ್ಯೂಟರ್, ಟ್ಯಾಬ್ಲಟ್, ಆಂಡ್ರಾಯ್ಡ್ ಫೋನ್ ಗಳನ್ನು ಕಂಟ್ರೋಲ್ ಮಾಡಬಹುದಾಗಿದೆ.

ಈ ರೀತಿಯಾಗಿ ಮಾಡಲು ಬ್ಲೂಟೂತ್, ಹಾಟ್ ಸ್ಪಾಟ್ ಮತ್ತು ವೈ-ಫೈ ಅಗತ್ಯತೆ ಇದೆ ಎನ್ನಾಗಿದೆ. ಈ ಕೆಳಗಿನ ಹಂತಗಳ ಸಹಾಯದಿಂದ ನೀವು ಸ್ಮಾರ್ಟ್ ಫೋನ್ ಅನ್ನು ಕಂಟ್ರೋಲ್ ಮಾಡಬಹುದಾಗಿದೆ.

ಹಂತ 1: ಮೊದಲು ಗೂಗಲ್ ಪ್ಲೇ ಸ್ಟೋರಿನಲ್ಲಿ ಸ್ಕ್ರಿನ್ ಶೇರ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ. ನಂತರ ಅದನ್ನು ಎರಡು ಆಂಡ್ರಾಯ್ಡ್ ಫೋನಿನಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳಿ.

ಹಂತ 2: ಇದಾದ ಮೇಲೆ ಸ್ಕ್ರಿನ್ ಶೇರ್ ಆಪ್ ಅನ್ನು ಲಾಂಚ್ ಮಾಡಿ, ಮೆನುವಿನಲ್ಲಿರುವ ಸ್ಕ್ರಿನ್ ಶೇರ್ ಸರ್ವಿಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ನಂತರ ವೈರ್ ಲೇಸ್ ನೆಟ್ ವರ್ಕ್ ಅನ್ನು ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಿಕೊಳ್ಳಿ.

ಹಂತ 3: ನಿಮ್ಮ ಎರಡು ಸ್ಮಾರ್ಟ್ ಫೋನ್ ಗಳನ್ನು ಬ್ಲೂಟೂತ್ ಮೂಲಕ ಪೇರ್ ಮಾಡಿರಿ. ನಿಮ್ಮ ಡಿವೈವ್ ಕನೆಕ್ಟ್ ಮಾಡಿದ ಮೇಲೆ ಕನೆಕ್ಟೆಡ್ ಮೇಸೆಜ್ ಬರಲಿದೆ.

ಹಂತ 4: ಕನೆಕ್ಷನ್ ಆದ ನಂತರದಲ್ಲಿ ನೀವು ಎರಡು ಸ್ಮಾರ್ಟ್ ಫೋನ್ ಗಳನ್ನು ಒಂದರಿಂದಲೇ ನಿಯಂತ್ರಿಸಬಹುದಾಗಿದೆ.

Best Mobiles in India

English summary
Is it possible to mirror a smartphone to another smartphone? With advancement in technology, anything is possible.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X