Subscribe to Gizbot

ವೋಚರ್ ಬಳಸಿ ಕಡಿಮೆ ಬೆಲೆಯಲ್ಲಿ ಜಿಯೋ ರಿಚಾರ್ಜ್ ಮಾಡಿಸುವುದು ಹೇಗೆ...?

Written By:

ಮಾರುಕಟ್ಟೆಯಲ್ಲಿ ಜಿಯೋ ತನ್ನ ಟ್ಯಾರಿಫ್ ಪ್ಲಾನ್‌ ಬೆಲೆಯಲ್ಲಿ ಭಾರೀ ಕಡಿತವನ್ನು ಮಾಡಿರುವುದು ನಿಮಗೆಲ್ಲ ತಿಳಿದೇ ಇದೆ. ಒಂದು ಕಡೆ ತನ್ನ ಟ್ಯಾರಿಫ್ ಬೆಲೆಯಲ್ಲಿ ಇಳಿಕೆಯನ್ನು ಮಾಡಿದ್ದು, ಮತ್ತೇ ಇನ್ನೊಂದು ಆಫರ್ ನಲ್ಲಿ ಹೆಚ್ಚುವರಿ 50% ಡೇಟಾವನ್ನು ನೀಡುತ್ತಿದೆ. ಆದರೆ ನಾವು ಹೊಸದೊಂದು ಟ್ರಿಕ್ ಹೇಳಿಕೊಡಲಿದ್ದೇವೆ ಇದರ ಮೂಲಕ ನೀವು ಜಿಯೋ ವೊಚರ್ ಬಳಕೆ ಮಾಡಿಕೊಂಡು ಇನ್ನು ರೂ.50 ಹೆಚ್ಚಿನ ಕಡಿತವನ್ನು ಪಡೆಯಬಹುದಾಗಿದೆ.

ವೋಚರ್ ಬಳಸಿ ಕಡಿಮೆ ಬೆಲೆಯಲ್ಲಿ ಜಿಯೋ ರಿಚಾರ್ಜ್ ಮಾಡಿಸುವುದು ಹೇಗೆ...?

ಓದಿರಿ: ಚೀನಾ ಫೋನ್‌‌ಗಳು ಸೈಡಿಗೆ: ಬಂದಿದೆ ಸ್ಯಾಮ್‌ ಸಂಗ್ ಗ್ಯಾಲೆಕ್ಸಿ J2 ಪ್ರೋ (2018)

ಜಿಯೋ ಯಾವುದೇ ರಿಚಾರ್ಜ್ ಮಾಡಿಸಿಕೊಂಡರು ನೀವು ರೂ.50 ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಆದರೆ ಇದನ್ನು ಜಿಯೋ ಸಹ ತಿಳಿಸಿಲ್ಲ ಎನ್ನಲಾಗಿದೆ. ಇದಕ್ಕಾಗಿ ನೀವು ಯಾವುದೇ ಕಷ್ಟವನ್ನು ಪಡೆಯಬೇಕಾಗಿಲ್ಲ. ಹಾಗಾಗಿ ನೀವು ಜಿಯೋ ವೊಚರ್ ಬಳಕೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಿಕೊಡಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ರಿಚಾರ್ಜ್:

ಜಿಯೋ ರಿಚಾರ್ಜ್:

ಜಿಯೋ ಈಗಾಗಲೇ ರೂ.149, 349, 399 ಮತ್ತು 449 ಪ್ಲಾನ್‌ಗಳನ್ನು ಘೋಷಣೆ ಮಾಡಿದ್ದು, ಇದರ ಬೆಲೆಯಲ್ಲಿ ಈಗಾಗಲೇ ರೂ.50 ಕಡಿತವನ್ನು ಮಾಡಿದೆ. ಇದೇ ಪ್ಲಾನ್‌ಗಳನ್ನು ನೀವು ಮತ್ತೇ ರೂ.50 ಕಡಿತದಲ್ಲಿ ಪಡೆಯಬಹುದಾಗಿದೆ. ಇದೇ ಪ್ಲಾನ್‌ ಗಳನ್ನು ನೀವು ರೂ.99, 299, 349, 399ಕ್ಕೆ ಪಡೆಯಬಹುದಾಗಿದೆ.

ಮೈಜಿಯೋ ಆಪ್;

ಮೈಜಿಯೋ ಆಪ್;

ಈ ಕಡಿತವನ್ನು ಪಡೆದುಕೊಳ್ಳಲು ನೀವು ಮೈ ಜಿಯೋ ಆಪ್ ನಲ್ಲಿ ರಿಚಾರ್ಜ್ ಮಾಡಿಕೊಳ್ಳಬೇಕಾಗಿದೆ. ಕಾರಣ ಈಗಾಗಲೇ ನಿಮ್ಮ ಆಕೌಂಟ್ ನಲ್ಲಿ ರೂ.50ರ ವೋಚರ್ ಗಳು ಇರಲಿದೆ. ಇದಕ್ಕಾಗಿ ನೀವು ಜಿಯೋ ಆಪ್ ನಲ್ಲಿ ರೀಚಾರ್ಜ್ ಮಾಡಿಸಿಕೊಳ್ಳಿ.

ಹೇಗೆ.?

ಹೇಗೆ.?

ಇದಕ್ಕಾಗಿ ಮೊದಲು ನೀವು ಮೈ ಜಿಯೋ ಆಪ್ ಓಪನ್ ಮಾಡಿ ಅಲ್ಲಿ ರಿಚಾರ್ಜ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿರಿ. ನಂತರದಲ್ಲಿ ಅಲ್ಲಿ ವಿವಿಧ ಮಾದರಿಯ ಆಫರ್ ಗಳು ಎಂದರೆ ನಿಮ್ಮ ಡೇಟಾ ಅಗತ್ಯಕ್ಕೆ ತಕ್ಕಂತೆ ಆಫರ್ ಗಳು ಇರಲಿದೆ. ಅದರಲ್ಲಿ ಬೇಕಾದನ್ನು ಆಯ್ಕೆಯನ್ನು ಮಾಡಿಕೊಳ್ಳಿ.

Reliance Jio ಸುನಾಮಿ ಆಫರ್: ಹೆಚ್ಚು ವ್ಯಾಲಿಡಿಟಿ - 50% ಹೆಚ್ಚು ಡೇಟಾ - ರೂ.50 ಕಡಿತ...!
ನಂತರ:

ನಂತರ:

ನಂತರ ಮುಂದಿನ ಪೇಜ್‌ನಲ್ಲಿ ಆಫರ್ ಗಳನ್ನು ತೋರಿಸಿಲಿದೆ. ಅಲ್ಲಿ ಆಫರ್ ಅನ್ನು ಸೆಲೆಕ್ಟ್ ಮಾಡಿಕೊಂಡರೆ ನಂತರದಲ್ಲಿ ರಿಚಾರ್ಜ್ ಹಣ ಎಷ್ಟು ಪಾವತಿ ಮಾಡಬೇಕು ಎನ್ನುವುದು ತೋರಿಸಲಿದೆ. ಅಲ್ಲಿ ನೀವು ಸೆಲೆಕ್ಟ್ ಮಾಡಿಕೊಂಡಿದ್ದ ಆಫರ್ ಬೆಲೆಯಲ್ಲಿ ರೂ.50 ಕಡಿತವಾಗಿರುವುದು ತಿಳಿಯಲಿದೆ. ಉದಾ: ರೂ.349 ಪ್ಲಾನ್ ಆಯ್ಕೆ ಮಾಡಿಕೊಂಡಿದ್ದಲ್ಲಿ ಇದು ನಿಮಗೆ ರೂ.299ಗೆ ದೊರೆಯಲಿದೆ. ಅಲ್ಲದೇ ವಿವಿಧ ಮಾದರಿಯಲ್ಲಿ ಹಣವನ್ನು ಪೇ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
how to recharge jio. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot