ಆಂಡ್ರಾಯ್ಡ್‌ನಲ್ಲಿ ಡಿಲೀಟ್‌ ಮೆಸೇಜ್‌ ರಿಕವರಿ ಹೇಗೆ?

By Suneel
|

ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಡಿವೈಸ್‌ನಲ್ಲಿ ಮುಖ್ಯವಾದ ಮೆಸೇಜ್‌ ಡಿಲೀಟ್ ಆದಾಗ ನೊಂದುಕೊಳ್ಳುವ ಸಮಸ್ಯೆಗಳು ಇದೇ ಹೊಸದೇನಲ್ಲ. ಮೆಸೇಜ್‌ ಒಮ್ಮೆ ಡಿವೈಸ್‌ನಲ್ಲಿ ಡಿಲೀಟ್‌ ಆದರೆ, ಅದನ್ನು ಮರಳಿ ಪಡೆಯಲು ಆಗುವುದಿಲ್ಲ ಎಂದು ಹಲವರು ತಿಳಿದಿದ್ದಾರೆ.

ಆದರೆ ಇಂದು ಮೊಬೈಲ್‌ಗಳಲ್ಲಿ ಡಿಲೀಟ್ ಆದ ಮೆಸೇಜ್‌ಗಳನ್ನು ಸಹ ರಿಕವರಿ ಮಾಡಿಕೊಳ್ಳಬಹುದು. ಅಂದಹಾಗೆ ಎಲ್ಲರೂ ಸಹ ಈ ಐಡಿಯಾವನ್ನು ತಿಳಿದಿಲ್ಲ. ಡಿಲೀಟ್‌ ಆದ ಮೆಸೇಜ್‌ಗಳನ್ನು ಡಿಕವರಿ ಮಾಡಲು ಮೆಸೇಜ್‌ ಆಪ್‌ ಅಪ್‌ಡೇಟ್‌ ಆಗಿರಬಾರದು. ಮೆಸೇಜ್‌ಗಳನ್ನು ರಿಕವರಿ ಮಾಡಲು ಬ್ಯಾಕಪ್‌ ಆಪ್‌ ಅಥವಾ ಪ್ರೋಗ್ರಾಮ್‌ ಅಗತ್ಯವಾಗಿದೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ ಮೆಸೇಜ್‌ಗಳನ್ನು ಶೀಘ್ರವಾಗಿ ರಿಕವರಿ ಮಾಡುವುದು ಹೇಗೆ ಎಂದು ತಿಳಿಯಿರಿ.

ಆಪ್ ಕ್ಯಾಶೆ ಕ್ಲಿಯರ್‌ ಮತ್ತು ಡಾಟಾ ಕ್ಲಿಯರ್ ನಡುವಿನ ವ್ಯತ್ಯಾಸ, ಅಗತ್ಯ!

ವಿಧಾನ 1: Mobikin Doctor ಆಂಡ್ರಾಯ್ಡ್ ಬಳಕೆದಾರರಿಗೆ ಸಹಾಯಕವಾಗಿದೆ

ವಿಧಾನ 1: Mobikin Doctor ಆಂಡ್ರಾಯ್ಡ್ ಬಳಕೆದಾರರಿಗೆ ಸಹಾಯಕವಾಗಿದೆ

Mobikin Doctor ಆಂಡ್ರಾಯ್ಡ್ ಡಿವೈಸ್‌ನಲ್ಲಿ 'ರಿಸೈಕಲ್‌ ಬಿನ್'‌ ರೀತಿಯಲ್ಲಿ ವರ್ಕ್‌ ಆಗುತ್ತದೆ. ಕೇವಲ ಡಿಲೀಟ್ ಆದ ಮೆಸೇಜ್‌ ಮಾತ್ರವಲ್ಲದೇ ಫೋಟೋ, ಸಿನಿಮಾಗಳು, ಮ್ಯೂಸಿಕ್‌ ಮತ್ತು ಇತರೆ ಡಾಕ್ಯುಮೆಂಟ್‌ಗಳನ್ನು ಡಿಲೀಟ್ ಆದಲ್ಲಿ ಸ್ಟೋರ್‌ ಮಾಡುತ್ತದೆ. ಈ ಕೆಳಗಿನ ಹಂತಗಳನ್ನು ಪಾಲಿಸಿ

ಹಂತ 1: ಮೊದಲಿಗೆ ನಿಮ್ಮ ಮೊಬೈಲ್‌ ಅನ್ನು ರೂಟಿಂಗ್‌ ಮಾಡುವ ಮುಖಾಂತರ USB ಡಿಬಗ್ಗಿಂಗ್‌ ಎನೇಬಲ್‌ ಮಾಡಿ. ಡಿಬಗ್‌ ಮಾಡಲು Settings>>About Phone>> ನಂಬರ್‌ ಬಿಲ್ಡ್‌ ಮಾಡಲು under developer mode' ಎಂದು ಸೂಚನೆ ಬರುವ ವರೆಗೆ ಪ್ರಕ್ರಿಯೆ ಮುಂದುವರೆಸಿ>>Back to Settings>> Developer Options>>Check USB debugging.

ಹಂತ 2: ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಅನ್ನು ಕಂಪ್ಯೂಟರ್‌ಗೆ ಕನೆಕ್ಟ್‌ ಮಾಡಿ ಪ್ರೋಗ್ರಾಮ್‌ ಲಾಂಚ್‌ ಮಾಡಿ.

ಹಂತ 3: ನಂತರ ಡಿವೈಸ್ ಆಟೋ ಡಿಟೆಕ್ಟ್ ಆಗುತ್ತದೆ ಮತ್ತು ಫೈಲ್‌ಗಳನ್ನು ಸ್ಕ್ಯಾನ್‌ ಮಾಡುತ್ತದೆ.

ಹಂತ 4 : ನಿಮ್ಮ ಡಿವೈಸ್‌ ಡಿಟೆಕ್ಟ್ ಆದ ನಂತರ, Message ಆಪ್ಶನ್‌ ಮೇಲೆ ಕ್ಲಿಕ್ ಮಾಡಿ. ಈಗ Recover ಮೇಲೆ ಕ್ಲಿಕ್ ಮಾಡಿ. ಕಂಪ್ಯೂಟರ್‌ HTML ಫಾರ್ಮ್ಯಾಟ್‌ನಲ್ಲಿ ಫೈಲ್‌ಗಳನ್ನು ರೀಸ್ಟೋರ್ ಮಾಡುತ್ತದೆ.

ವಿಧಾನ  2: FonePaw ಆಂಡ್ರಾಯ್ಡ್ ರಿಕವರಿ ಬಳಸಿ

ವಿಧಾನ 2: FonePaw ಆಂಡ್ರಾಯ್ಡ್ ರಿಕವರಿ ಬಳಸಿ

ಇದು ಇನ್ನೊಂದು ರಿಕವರಿ ಪ್ರೋಗ್ರಾಮ್‌ ಆಗಿದ್ದು, ಡಿಲೀಟ್‌ ಆದ ಕಾಂಟ್ಯಾಕ್ಟ್, ಇಮೇಲ್‌ಗಳು, ಮೆಸೇಜ್‌ಗಳು, ಮಾಹಿತಿ, ಸೆಂಡ್‌ ಮತ್ತು ರಿಸೀವ್ ದಿನಾಂಕ, ಕರೆ ಲಾಗ್‌, ಕರೆ ಸಮಯ, ವಾಟ್ಸಾಪ್‌ ಮೆಸೇಜ್‌ ಮತ್ತು ಅಟ್ಯಾಚ್‌ಗಳು, ಫೋಟೋ, ವೀಡಿಯೊ , ಆಡಿಯೋ ಮತ್ತು ಡಾಕ್ಯುಮೆಂಟ್‌ಗಳನ್ನು ರಿಕವರಿ ಮಾಡುತ್ತದೆ.
ಹಂತ 1: FonePaw ಲಾಂಚ್‌ ಮಾಡಿ ಮತ್ತು ನಿಮ್ಮ ಆಂಡ್ರಾಯ್ಡ್ ಡಿವೈಸ್‌ ಅನ್ನು ಕಂಪ್ಯೂಟರ್‌ಗೆ ಕನೆಕ್ಟ್‌ ಮಾಡಿ. ಆಟೊ ಡಿಟೆಕ್ಟ್ ಆಗುವವರೆಗೆ ಕಾಯಿರಿ

ಹಂತ 2: ಹಿಂದಿನ ವಿಧಾನದಲ್ಲಿ ತಿಳಿಸಿದಂತೆ ಆಂಡ್ರಾಯ್ಡ್ ಡಿವೈಸ್‌ ಅನ್ನು ಡಿಬಗ್ ಮಾಡಿ. ಡಿಬಗ್‌ ಮುಗಿದ ನಂತರ 'Android Data Recovery' ಮೇಲೆ ಕ್ಲಿಕ್ ಮಾಡಿ.

ಹಂತ 3: ಈಗ ಸ್ಕ್ಯಾನ್‌ ಆರಂಭಕ್ಕಾಗಿ Next ಮೇಲೆ ಕ್ಲಿಕ್ ಮಾಡಿ. ಫೋನ್‌ ಚಾರ್ಜ್‌ ಶೇ.20 ಕ್ಕಿಂತ ಹೆಚ್ಚಾಗಿ ಇರಲಿ.

ಹಂತ 4: ಈ ಹಂತದಲ್ಲಿ ನಿಮ್ಮ ಅಗತ್ಯದ ಫೈಲ್‌ ಮೇಲೆ ಕ್ಲಿಕ್ ಮಾಡಿ 'Recover' ಎಂಬಲ್ಲಿ ಕ್ಲಿಕ್ ಮಾಡಿ

 ವಿಧಾನ 3: SMS Backup & Restore ಆಪ್‌ ಬಳಸಿ

ವಿಧಾನ 3: SMS Backup & Restore ಆಪ್‌ ಬಳಸಿ

SMS Backup & Restore ಆಪ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿದೆ. ಡೌನ್‌ಲೋಡ್ ಮಾಡಿ ಕೆಳಗಿನ ಹಂತಗಳನ್ನು ಫಾಲೋ ಮಾಡಿ
ಹಂತ 1: ಆಪ್‌ ಅನ್ನು ನಿಮ್ಮ ಫೋನ್‌ನಲ್ಲಿ ಲಾಂಚ್ ಮಾಡಿ

ಹಂತ 2: Backup ಎಂಬಲ್ಲಿ ಟ್ಯಾಪ್‌ ಮಾಡಿ

ಹಂತ 3: SMS, Media files, emails ಆಪ್ಶನ್‌ಗಳಲ್ಲಿ ಯಾವುದನ್ನು ರಿಕವರಿ ಮಾಡಬೇಕೊ ಅದನ್ನು ಆಯ್ಕೆ ಮಾಡಿ

ಹಂತ 4: ರಿಕವರಿ ನಿಮ್ಮ ಡಿವೈಸ್‌ಗೆ ಬೇಕಾದಲ್ಲಿ 'Lccal Backup' ಸೆಲೆಕ್ಟ್ ಮಾಡಿ, ಅಥವಾ 'Upload' ಆಯ್ಕೆ ಮಾಡಿ ಇತರೆ ಫೈಲ್‌ಗಳಿಗೆ ಸೇವ್‌ ಮಾಡಿ.

ಹಂತ 5: ಹೋಮ್‌ ಸ್ಕ್ರೀನ್ ಆಪ್‌ಗೆ ರೀಸ್ಟೋರ್ ಮಾಡಲು 'Restore' ಮೇಲೆ ಕ್ಲಿಕ್ ಮಾಡಿ.

ಹಂತ 6: ರೀಸ್ಟೋರ್ ಬ್ಯಾಕಪ್‌ ಪೇಜ್‌ನಲ್ಲಿ, ಬ್ಯಾಕಪ್‌ ಹೆಸರು ಆಯ್ಕೆ ಮಾಡಿ.

Best Mobiles in India

English summary
How to Recover Deleted Text Messages in Android, 3 simple ways. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X