ಆಪ್ ಕ್ಯಾಶೆ ಕ್ಲಿಯರ್‌ ಮತ್ತು ಡಾಟಾ ಕ್ಲಿಯರ್ ನಡುವಿನ ವ್ಯತ್ಯಾಸ, ಅಗತ್ಯ!

By Suneel
|

ಸ್ಮಾರ್ಟ್‌ಫೋನ್‌ನಲ್ಲಿ ಹಲವು ಆಪ್‌ಗಳನ್ನು ಹೊಂದುವುದರಿಂದ, ಡಿವೈಸ್ ಹೆಚ್ಚು ಪ್ರಾಡಕ್ಟಿವ್‌ ಆಗಿರುತ್ತದೆ,. ಆದರೆ ಅದೇ ಹೆಚ್ಚು ಆಪ್‌ಗಳನ್ನು ಹೊಂದುವುದರಿಂದ ಅಧಿಕ ಸಮಸ್ಯೆಗಳು ಉಂಟಾಗುತ್ತವೆ. ಅಲ್ಲದೇ ಫೋನ್‌ ವರ್ಕ್‌ ಆಗುವುದರಲ್ಲಿ ಬಹಳ ನಿಧಾನವಾಗುತ್ತದೆ.

ಸ್ಮಾರ್ಟ್‌ಫೋನ್‌ ಹೊಂದಿರುವವರು ಯಾರು ಹೆಚ್ಚಾಗಿ ಫೋಟೋ ಎಡಿಟಿಂಗ್ ಆಪ್‌ಗಳು, ಚಾಟ್‌ ಆಪ್‌ಗಳನ್ನು ಹೊಂದಿರುತ್ತಾರೋ ಅಂತಹವರು, ಕಡ್ಡಾಯವಾಗಿ 'ಆಪ್‌ ಕ್ಯಾಶೆ ಮತ್ತು ಆಪ್ ಡಾಟಾ'ವನ್ನು (Clear App Cache, Clear App Data) ಕ್ಲಿಯರ್‌ ಮಾಡಬೇಕು

ಸ್ಮಾರ್ಟ್‌ಫೋನ್‌ ವರ್ಕ್ ಸ್ಲೋ ಆದಲ್ಲಿ ಫೋನ್ ಕ್ಯಾಶೆ ಕ್ಲಿಯರ್‌ ಮಾಡುತ್ತಾರೆ. ಅದೇ ರೀತಿ ಒಂದು ಆಪ್‌ ಸ್ಲೋ ಆದರೂ ಸಹ ಹಾಗೆ ಮಾಡುತ್ತಾರೆ. ಸ್ಮಾರ್ಟ್‌ಫೋನ್ ಬಳಕೆದಾರರು ಮೇಲೆ ತಿಳಿಸಿದ ಎರಡು ಚಟುವಟಿಕೆಗಳನ್ನು ವಾಸ್ತವವಾಗಿ ಮಾಹಿತಿ ತಿಳಿಯದೇ ನಿರ್ವಹಿಸುತ್ತಾರೆ. ಇಂದಿನ ಲೇಖನದಲ್ಲಿ ಆಪ್‌ ಕ್ಯಾಶೆ ಕ್ಲಿಯರ್‌ ಮತ್ತು ಕ್ಲಿಯರ್‌ ಆಪ್‌ ಡಾಟಾಗಳ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ತಿಳಿದು, ಅಗತ್ಯದ ಬಗ್ಗೆ ಮಾಹಿತಿ ತಿಳಿಯಿರಿ.

24 ಗಂಟೆಗಳಲ್ಲಿ ನಿಮ್ಮ ವಾಟ್ಸಾಪ್ ಪ್ರೊಫೈಲ್ ಯಾರು ನೋಡಿದ್ದಾರೆ ಚೆಕ್‌ ಮಾಡುವುದು ಹೇಗೆ?

ಕ್ಯಾಶೆ ಮತ್ತು ಡಾಟಾ ಕ್ಲಿಯರ್ ಏಕೆ?

ಕ್ಯಾಶೆ ಮತ್ತು ಡಾಟಾ ಕ್ಲಿಯರ್ ಏಕೆ?

ಹಲವು ಸ್ಮಾರ್ಟ್‌ಫೋನ್‌ ಎಕ್ಸ್‌ಪರ್ಟ್‌ಗಳು ಡಿವೈಸ್‌ ಸ್ಲೋ ಆದಾಗ ಮತ್ತು ಯಾವುದಾದರೂ ಆಪ್‌ ವರ್ಕ್‌ ಆಗದೆ ಇದ್ದರೇ ಕ್ಯಾಶೇ ಕ್ಲಿಯರ್‌ ಮಾಡಿ ಮತ್ತು ಆಪ್‌ ಡಾಟಾ ಕ್ಲಿಯರ್‌ ಮಾಡಿ ಎಂದು ಸಲಹೆ ನೀಡುತ್ತಾರೆ. ಇದು ಅವಶ್ಯಕವು ಹೌದು. ಸ್ಮಾರ್ಟ್‌ಫೋನ್‌ ಬಳಕೆದಾರರು ಕ್ಯಾಶೇ ಕ್ಲಿಯರ್ ಮತ್ತು ಡಾಟಾ ಕ್ಲಿಯರ್ ಮಾಡುವುದು ಹೇಗೆ ಎಂದು ಮುಂದಿನ ಸ್ಲೈಡರ್‌ನಲ್ಲಿ ತಿಳಿಯಿರಿ.

ಆಪ್‌ ಡಾಟಾ ಕ್ಲಿಯರ್‌ ಮಾಡುವುದು

ಆಪ್‌ ಡಾಟಾ ಕ್ಲಿಯರ್‌ ಮಾಡುವುದು

ಆಪ್‌ ಡಾಟಾ ಕ್ಲಿಯರ್‌ ಎಂದರೆ, ಡಾಟಾ ಸಂಪೂರ್ಣವಾಗಿ ಡಿಲೀಟ್‌ ಅಗುವುದು ಅಥವಾ ಆಪ್‌ನ ಡಾಟಾವನ್ನು ಆಪ್‌ನಿಂದ ಅಥವಾ ಫೋನ್‌ನಿಂದ ರಿಮೂವ್ ಮಾಡುವುದು.

ಆಪ್‌ ಡಾಟಾ ಕ್ಲಿಯರ್‌ ಮಾಡಲು ಆಪ್‌ Default ನಲ್ಲಿ ಇರುಬೇಕು ಮತ್ತು ಆಪ್‌ ಹೊಸದಾಗಿ ಇನ್‌ಸ್ಟಾಲ್‌ ಆದ ರೀತಿಯಲ್ಲಿ ಇರಬೇಕು.

ಆಪ್‌ ಕ್ಯಾಶೆ ಕ್ಲಿಯರ್‌

ಆಪ್‌ ಕ್ಯಾಶೆ ಕ್ಲಿಯರ್‌

ಆಪ್‌ ಕ್ಯಾಶೆ ಕ್ಲಿಯರ್ ಮಾಡುವುದರಿಂದ ಮೊಬೈಲ್ ವೇಗಗೊಳ್ಳುತ್ತದೆ. ಡಿವೈಸ್ ವೇಗಗೊಳಿಸಲು, ಡಿವೈಸ್ ಬಳಸಿದ( ಸಂಗ್ರಹಿಸಿದ) ಡಾಟಾವನ್ನು ಕಡಿಮೆ ಮಾಡಬೇಕು.

ಡಿವೈಸ್‌ ಬಳಕೆದಾರ ಒಂದು ಆಪ್‌ನ ಕ್ಯಾಶೆ ಡಾಟಾ ಕ್ಲಿಯರ್‌ ಮಾಡಿದಾಗ, ಅವರು ಆಪ್‌ನಲ್ಲಿ ತಾತ್ಕಾಲಿಕವಾಗಿ ಸ್ಟೋರ್‌ ಆದ ಫೈಲ್‌ಗಳನ್ನು ಮತ್ತು ಆ ಸ್ಥಳವನ್ನು ರಿಮೂವ್‌ ಮಾಡುತ್ತಿದ್ದಾರೆ ಎಂದರ್ಥ.

ಯಾವಾಗ ಆಪ್‌ನ 'ಕ್ಯಾಶೆ ಅಥವಾ ಡಾಟಾ' ಕ್ಲಿಯರ್ ಮಾಡಬೇಕು?

ಯಾವಾಗ ಆಪ್‌ನ 'ಕ್ಯಾಶೆ ಅಥವಾ ಡಾಟಾ' ಕ್ಲಿಯರ್ ಮಾಡಬೇಕು?

ಅಂದಹಾಗೆ ಸ್ಮಾರ್ಟ್‌ಫೋನ್‌ ಬಳಕೆದಾರರು ಡಿವೈಸ್‌ ಸ್ಟೋರೇಜ್‌ ಸ್ಥಳವನ್ನು ಹೆಚ್ಚಿಸಲು ಮತ್ತು ಸೇವ್‌ ಮಾಡಲು ಆಪ್‌ ಕ್ಯಾಶೇ ಅಥವಾ ಡಾಟಾ' ಕ್ಲಿಯರ್‌ ಮಾಡಬೇಕು. ಆಪ್‌ ಸಮಸ್ಯೆಗೊಳಪಟ್ಟಾಗ, ದೋಷಯುಕ್ತವಾದಾಗ ಮತ್ತು ಇತರೆ ಚಟುವಟಿಕೆಗೆ ಅಡ್ಡಿಪಡಿಸುವ ಸಂದರ್ಭದಲ್ಲಿ ಆಪ್‌ನ ಕ್ಯಾಶೆ ಅಥವಾ ಡಾಟಾ ಕ್ಲಿಯರ್ ಮಾಡಬೇಕು.

ಆಪ್‌ ಕ್ಯಾಶೆ ಅಥವಾ ಡಾಟಾ ಕ್ಲಿಯರ್ ಮಾಡುವುದು ಹೇಗೆ?

ಆಪ್‌ ಕ್ಯಾಶೆ ಅಥವಾ ಡಾಟಾ ಕ್ಲಿಯರ್ ಮಾಡುವುದು ಹೇಗೆ?

ಈ ಪ್ರಕ್ರಿಯೆ ಒಂದು ಪೋನ್‌ನಿಂದ ಇನ್ನೊಂದು ಫೋನ್‌ಗೆ ವಿಭಿನ್ನವಾಗಿರುತ್ತದೆ. ಆಂಡ್ರಾಯ್ಡ್ ಬಳಕೆದಾರರು ಈ ಕೆಳಗಿನ ಹಂತಗಳನ್ನು ಪಾಲಿಸಿ.
ಹಂತ 1: Settings>>General Option
ಹಂತ 2: ಟ್ಯಾಪ್ Application Manager option
ಹಂತ 3: ಈ ಹಂತದಲ್ಲಿ ನಿಮ್ಮ ಡಿವೈಸ್‌ನಲ್ಲಿ ಸ್ಟೋರ್ ಆಗಿರುವ ಎಲ್ಲಾ ಆಪ್‌ಗಳು ಪ್ರದರ್ಶನವಾಗುತ್ತದೆ. ಇವುಗಳಲ್ಲಿ ನೀವು ಕ್ಯಾಶೆ ಮತ್ತು ಡಾಟಾ ಕ್ಲಿಯರ್ ಮಾಡಬೇಕು ಎಂದುಕೊಂಡಿರುವ ಆಪ್‌ ಮೇಲೆ ಟ್ಯಾಪ್‌ ಮಾಡಿ
ಹಂತ 4: ಪ್ರದರ್ಶನವಾಗುವ ಸ್ಕ್ರೀನ್‌ನಲ್ಲಿ 'Clear Data' ಮತ್ತು 'Clear Cache' ಎಂಬ ಆಪ್ಶನ್‌ ಗಳು ಇರುತ್ತವೆ.
ಹಂತ 5: ನಿಮ್ಮ ಅಗತ್ಯಕ್ಕೆ ತಕ್ಕಂತೆ ಆಪ್ಶನ್‌ ಅನ್ನು ಟ್ಯಾಪ್‌ ಮಾಡಿ.

Best Mobiles in India

English summary
Clear App Cache, Clear App Data: Major Differences Explained. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X