ಈ ಟ್ರಿಕ್‌ ಬಳಸಿದ್ರೆ ತೇಜ್‌ನಲ್ಲಿ ಇನ್ಮುಂದೆ Better luck Next Time ಬರಲ್ಲ..!

|

ಡಿಜಿಟಲ್‌ ಪೇಮೆಂಟ್‌ ಉಪಯೋಗಿಸುತ್ತಿರುವ ನಾವೇಲ್ಲರೂ ತೇಜ್‌ ಆಪ್‌ನ್ನು ಖಂಡಿತ ಬಳಸುತ್ತಿರುತ್ತೇವೆ. ಕನಿಷ್ಟ ಹಣವನ್ನು ವರ್ಗಾವಣೆ ಮಾಡಿದರೆ ಸ್ಕ್ರಾಚ್‌ ಕಾರ್ಡ್‌ಗಳು ಬರುವುದು ಎಲ್ಲರಿಗೂ ಗೊತ್ತೆ ಇದೆ. ಗೂಗಲ್‌ ಹೇಳುವಂತೆ ಆ ಸ್ಕ್ರಾಚ್‌ ಕಾರ್ಡ್‌ನಲ್ಲಿ 1 ಲಕ್ಷದವರೆಗೂ ಹಣ ಇರುತ್ತಂತೆ. ಆದರೆ, ಇದುವರೆಗೂ ಯಾರಿಗೆ ಒಂದು ಲಕ್ಷ ಬಂದಿದೆಯೋ ಗೊತ್ತಿಲ್ಲ. ಎಲ್ಲರಿಗೂ Better luck Next Time ಎನ್ನುವ ವಾಕ್ಯ ಮಾತ್ರ ಪರಿಚಿತವಾಗಿದೆ.

ಈ ಟ್ರಿಕ್‌ ಬಳಸಿದ್ರೆ ತೇಜ್‌ನಲ್ಲಿ ಇನ್ಮುಂದೆ Better luck Next Time ಬರಲ್ಲ..!

ಹೌದು, ಯಾವಾಗಲೂ ಸ್ಕ್ರಾಚ್‌ ಕಾರ್ಡ್‌ ಸ್ಕ್ರಾಚ್‌ ಮಾಡಿದಾಗ Better luck Next Time ಎಂದೇ ಬರುತ್ತಲಾ ಎಂದು ಬೇಸರವಾಗಿದ್ದರೆ, ಖಂಡಿತ ಇಲ್ಲಿ ನಾವೇಳುವ ಟ್ರಿಕ್‌ಗಳು ನಿಮಗೆ ಉಪಯೋಗವಾಗಬಹುದು. ಈ ಟ್ರಿಕ್‌ಗಳನ್ನು ಬಳಸಿದರೆ ನಿಮ್ಮ ತೇಜ್‌ ಆಪ್‌ನಲ್ಲಿ Better luck Next Time ಬರುವ ಚಾನ್ಸೇ ಇಲ್ಲ ಎಂದು ಒಂದಿಷ್ಟು ಪರಿಣಿತರು ಹೇಳುತ್ತಿದ್ದಾರೆ. ಆ ಟ್ರಿಕ್‌ಗಳು ಯಾವುದು ಅಂತಿರಾ ಮುಂದೆ ನೋಡಿ..

ಹೇ ಬೆಕ್ಕೆ ಬಾ ಇಲ್ಲಿ..! ಟೆಕ್ನಾಲಜಿ ಜತೆ ಕ್ಯಾಟ್‌ ವಾಕ್‌..!ಹೇ ಬೆಕ್ಕೆ ಬಾ ಇಲ್ಲಿ..! ಟೆಕ್ನಾಲಜಿ ಜತೆ ಕ್ಯಾಟ್‌ ವಾಕ್‌..!

ಸ್ಕ್ರಾಚ್‌ ಕಾರ್ಡ್‌

ಸ್ಕ್ರಾಚ್‌ ಕಾರ್ಡ್‌

ತೇಜ್‌ ಆಪ್‌ನಲ್ಲಿ ಕನಿಷ್ಟ ಮೌಲ್ಯದ ಹಣ ವರ್ಗಾಯಿಸಿದರೆ ಅಥವಾ ಹಣ ಪಡೆದರೆ ನಿಮಗೆ ಸ್ಕ್ರಾಚ್‌ ಕಾರ್ಡ್‌ ಲಭ್ಯವಾಗುತ್ತದೆ. ನೀವು ಯಾರನ್ನಾದರೂ ತೇಜ್‌ ಆಪ್‌ ಬಳಸಲು ರೆಫರ್‌ ಮಾಡಿದರೆ ನಿಮಗೆ ರೂ.51 ಮೌಲ್ಯದ ರಿವಾರ್ಡ್‌ ಸ್ಕ್ರಾಚ್‌ ಕಾರ್ಡ್‌ ದೊರೆಯುತ್ತದೆ. ಅದನ್ನು ಸ್ಕ್ರಾಚ್‌ ಮಾಡಿ ನೀವು ಹಣವನ್ನು ಪಡೆಯಬಹುದು. ಆದರೆ, ರೆಫರ್‌ ಸ್ಕ್ರಾಚ್‌ ಕಾರ್ಡ್‌ ಬಿಟ್ಟು, ಉಳಿದೆಲ್ಲ ಸ್ಕ್ರಾಚ್‌ ಕಾರ್ಡ್‌ಗಳಲ್ಲಿ ಹೆಚ್ಚಿನವೂ Better luck Next Time ಎನ್ನುವ ವಾಕ್ಯವನ್ನೇ ತೋರಿಸುತ್ತವೆ.

ಭಾರತದಲ್ಲಿ ಗೂಗಲ್‌ ತೇಜ್‌

ಭಾರತದಲ್ಲಿ ಗೂಗಲ್‌ ತೇಜ್‌

ಮೊದಲು ಗೂಗಲ್‌ ತೇಜ್‌ ಎಂದು ಇದ್ದ ಆಪ್‌ನ್ನು ಗೂಗಲ್‌ ತನ್ನ ಬ್ರಾಂಡ್‌ ಹೆಚ್ಚಿಸಿಕೊಳ್ಳಳು ಗೂಗಲ್‌ ಪೇ ಎಂದು ಮರುನಾಮಕರಣ ಮಾಡಿತು. ಆದರೆ, ಜನರು ಇದನ್ನು ಕರೆಯುವುದು ತೇಜ್‌ ಎಂತಲೇ ಅಷ್ಟೋಂದು ಜನಪ್ರಿಯತೆಯನ್ನು ತೇಜ್‌ ಆಪ್‌ ಪಡೆದುಕೊಂಡಿತ್ತು. ಭಾರತದಲ್ಲಿ ಕಳೆದ ವರ್ಷ 22 ಮಿಲಿಯನ್ ಬಳಕೆದಾರರು ಗೂಗಲ್ ತೇಜ್‌ ಆಪ್‌ನ್ನು ಬಳಸಿದ್ದು, ಸುಮಾರು ರೂ. 750 ಮಿಲಿಯನ್‌ ಹಣವನ್ನು ವರ್ಗಾವಣೆ ಮಾಡಿದ್ದಾರೆ. ವಿಶ್ವದಲ್ಲಿ 30 ಬಿಲಿಯನ್‌ ಡಾಲರ್‌ಗಳಿಗಿಂತಲೂ ಹೆಚ್ಚು ಹಣವನ್ನು ಗೂಗಲ್‌ ಪೇ ಮೂಲಕ ವರ್ಗಾವಣೆ ಮಾಡಲಾಗಿದೆ.

ರೂ. 1 ಲಕ್ಷದವರೆಗಿನ ಸ್ಕ್ರಾಚ್‌ ಕಾರ್ಡ್‌ ಪಡೆಯುವುದು ಹೇಗೆ..?

ರೂ. 1 ಲಕ್ಷದವರೆಗಿನ ಸ್ಕ್ರಾಚ್‌ ಕಾರ್ಡ್‌ ಪಡೆಯುವುದು ಹೇಗೆ..?

ಗೂಗಲ್‌ ತೇಜ್‌ನಲ್ಲಿ ಮಾಡುವ ಎಲ್ಲಾ ವಹಿವಾಟುಗಳಿಗೂ ಸ್ಕ್ರಾಚ್‌ ಕಾರ್ಡ್‌ ಸಿಗಲ್ಲ. ರೂ.151ಕ್ಕಿಂತ ಹೆಚ್ಚಿನ ಹಣದ ವಹಿವಾಟು ನಡೆಸುವ ಮೂಲಕ ಸ್ಕ್ರಾಚ್‌ ಕಾರ್ಡ್‌ ಪಡೆಯಬಹುದು. ಈ ಸ್ಕ್ರಾಚ್‌ ಕಾರ್ಡ್‌ನಲ್ಲಿ ರೂ.1000ದವರೆಗೂ ಹಣ ಪಡೆಯುವ ಅವಕಾಶವಿರುತ್ತದೆ. ರೂ.500ಕ್ಕಿಂತ ಹೆಚ್ಚಿನ ವಹಿವಾಟು ನಡೆಸಿದರೆ ರೂ.1 ಲಕ್ಷದವರೆಗಿನ ಸ್ಕ್ರಾಚ್‌ ಕಾರ್ಡ್‌ ನಿಮಗೆ ಸಿಗುತ್ತದೆ. ಆದರೆ, ಈ ಕಾರ್ಡ್‌ನ್ನು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಮಾತ್ರ ಸ್ಕ್ರಾಚ್‌ ಮಾಡಬಹುದಾಗಿರುತ್ತದೆ.

ಸೈನ್‌ಅಪ್‌ ಬೋನಸ್‌ ಪಡೆಯಿರಿ

ಸೈನ್‌ಅಪ್‌ ಬೋನಸ್‌ ಪಡೆಯಿರಿ

ನೀವು ಇದನ್ನು ಪಡೆಯಬೇಕೆಂದರೆ ಬೇರೊಂದು ಬ್ಯಾಂಕ್‌ ಅಕೌಂಟ್‌ ಬೇಕಾಗಿರುತ್ತದೆ. ಆದ್ದರಿಂದ ನೀವು ಏರ್‌ಟೆಲ್‌ ಪೇಮೆಂಟ್‌ ಬ್ಯಾಂಕ್‌ ಅಕೌಂಟ್‌ ಹೊಂದಿಲ್ಲ ಎಂದರೆ, ಹತ್ತಿರದ ರೀಚಾರ್ಜ್‌ ಶಾಪ್‌ಗೆ ಹೋಗಿ ನಿಮ್ಮ ಏರ್‌ಟೆಲ್‌ ನಂಬರ್‌ನೊಂದಿಗೆ ಜಿರೋ ಬ್ಯಾಲೆನ್ಸ್‌ ಅಕೌಂಟ್‌ ಒಪನ್‌ ಮಾಡಿ. ಈ ನಂಬರ್‌ ತೇಜ್‌ ಆಪ್‌ನಲ್ಲಿ ನೊಂದಣಿಯಾಗಿರಬಾರದು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ.

ಈಗ ಇನ್ನೊಂದು ಫೋನ್‌ನಲ್ಲಿ ಹಳೆಯ ರೆಫರಲ್‌ ಲಿಂಕ್‌ ತೆಗೆದುಕೊಂಡು ತೇಜ್‌ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ, ನಿಮ್ಮ ಏರ್‌ಟೆಲ್‌ ಪೇಮೆಂಟ್‌ ಬ್ಯಾಂಕ್‌ಗೆ ಲಿಂಕ್‌ ಆದ ಏರ್‌ಟೆಲ್‌ ನಂಬರ್‌ನೊಂದಿಗೆ ಅಕೌಂಟ್‌ ಸೃಷ್ಟಿ ಮಾಡಿ. ನಂತರ ನಿಮ್ಮ ಏರ್‌ಟೆಲ್‌ ಅಕೌಂಟ್‌ನಿಂದ ರೂ.1 ನ್ನು ಹಳೇ ಅಕೌಂಟ್‌ಗೆ ವರ್ಗಾವಣೆ ಮಾಡಿ. ನಂತರ ನಿಮ್ಮ ಎರಡು ಖಾತೆಗಳನ್ನು ಗಮನಿಸಿ ಎರಡರಲ್ಲೂ ರೂ.51 ಜಮಾ ಆಗಿರುತ್ತದೆ.

Better luck Next time ಬರದಂತೆ ತಡೆಯುವುದು ಹೇಗೆ..?

Better luck Next time ಬರದಂತೆ ತಡೆಯುವುದು ಹೇಗೆ..?

ಎಲ್ಲಾ ಸ್ಕ್ರಾಚ್‌ ಕಾರ್ಡ್‌ಗಳಲ್ಲಿ ಹಣ ಬರಲ್ಲ ಎನ್ನುವುದು ನಿಮಗೆ ಗೊತ್ತೆ ಇದೆ. ಆದರೆ, ಎಲ್ಲಾ ಸ್ಕ್ರಾಚ್‌ ಕಾರ್ಡ್‌ಗಳಲ್ಲೂ Better luck Next time ಅಂತ ಬಂದರೆ ಏನ್‌ ಮಾಡೋದು ಅಲ್ವಾ. ನೀವಂದುಕೊಂಡಂತೆ ಎಲ್ಲಾ ವಹಿವಾಟುಗಳಿಗೂ ಸ್ಕ್ರಾಚ್‌ ಕಾರ್ಡ್‌ ಬರಲ್ಲ. ವಾರಕ್ಕೆ ಕೇವಲ 5 ಸ್ಕ್ರಾಚ್‌ ಕಾರ್ಡ್‌ಗಳು ಬರುತ್ತವೆ. ಅದನ್ನು ನೆನಪಲ್ಲಿಟ್ಟುಕೊಂಡು ಮುಂದಿನ ಹಂತಗಳನ್ನು ಅನುಸರಿಸಿ.

ಏನ್‌ ಮಾಡ್ಬೇಕು..?

ಏನ್‌ ಮಾಡ್ಬೇಕು..?

Better luck Next time ನಿಮ್ಮ ಸ್ಕ್ರಾಚ್‌ ಕಾರ್ಡ್‌ನಲ್ಲಿ ಬರಬಾರದು ಎಂದರೆ ಹೀಗೆ ಮಾಡಿ:

  • ನಿಮ್ಮಲ್ಲಿ ಲಭ್ಯವಿರುವ ಯಾವುದೇ ಸ್ಕ್ರಾಚ್‌ ಕಾರ್ಡ್‌ನ್ನು ಸ್ಕ್ರಾಚ್‌ ಮಾಡದೇ ಬಿಡಿ.
  • ಎಲ್ಲಾ ಸ್ಕ್ರಾಚ್‌ ಕಾರ್ಡ್‌ಗಳನ್ನು ಮಂಗಳವಾರ ಮಧ್ಯರಾತ್ರಿ 12:00 AM to 12:05 AMವರೆಗೂ ಆಪ್‌ ಸ್ಕ್ರಾಚ್‌ ಮಾಡಿ.
  • ನೀವು ಒಂದಾದ ನಂತರ ಒಂದರಂತೆ ಕಾರ್ಡ್‌ಗಳನ್ನು ಸ್ಕ್ರಾಚ್‌ ಮಾಡುತ್ತಾ ಸಾಗಿದಂತೆ ಯಾವ ಕಾರ್ಡ್‌ನಲ್ಲೂ ನಿಮಗೆ Better luck Next time ಬರುವುದಿಲ್ಲ. ಎಲ್ಲಾ ಕಾರ್ಡ್‌ಗಳಲ್ಲೂ ನಿಮಗೆ ಕನಿಷ್ಟ ಹಣ ದೊರೆಯುತ್ತದೆ.
  • ಮಧ್ಯರಾತ್ರಿ ಯಾಕಂತಿರಾ..?

    ಮಧ್ಯರಾತ್ರಿ ಯಾಕಂತಿರಾ..?

    ಸಾಮಾನ್ಯವಾಗಿ ಗೂಗಲ್‌ ಗೂಗಲ್‌ ಪೇಗೆ ಹಣವನ್ನು ಮಂಗಳವಾರ ಮಧ್ಯರಾತ್ರಿಯ ನಂತರ ವರ್ಗಾವಣೆ ಮಾಡುತ್ತಂತೆ. ಆ ಸಮಯದಲ್ಲಿ ಸರ್ವರ್‌ ಕೂಡ ಸ್ಲೋ ಆಗಿರಬಹುದು. ಆಗ ನೀವು ಪ್ರತಿ ಕಾರ್ಡ್‌ನಲ್ಲೂ ಹಣ ಗೆಲ್ಲುವ ಅವಕಾಶ ಹೊಂದಿರುತ್ತಿರಿ.

Best Mobiles in India

English summary
How To Remove Better Luck Next Time in Tez App. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X