ಫೇಸ್‌ಬುಕ್‌ನಲ್ಲಿನ ಎಲ್ಲಾ ಹಳೇ ಪೋಸ್ಟ್‌ಗಳನ್ನು ಒಂದೇ ಕ್ಲಿಕ್‌ನಲ್ಲಿ ಡಿಲೀಟ್ ಮಾಡುವುದು ಹೇಗೆ?!

|

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಟ್ವೀಟರ್ ಖಾತೆಗಳನ್ನು ಆರಂಭಿಸಿದಾಗಿನಿಂದಲೂ ನೀವು ಪೋಸ್ಟ್ ಮಾಡಿರುವ ನಿಮ್ಮೆಲ್ಲಾ ಪೋಸ್ಟ್‌ಗಳು ಶೇಖರಣೆಯಾಗುತ್ತಾ ಇರುತ್ತವೆ. ನೀವು ಹಂಚಿಕೊಂಡ ಚಿತ್ರಗಳು, ವಿಡಿಯೊಗಳು ಮತ್ತು ಸಂಭಾಷಣೆಗಳೆಲ್ಲವನ್ನೂ ಈ ಜಾಲತಾಣಗಳು ನಿಮಗೆ ಮತ್ತೆ ಮತ್ತೆ ನೆನಪಿಸುತ್ತಿರುತ್ತವೆ ಅಲ್ಲವೇ.?

ಹೀಗೆಯೇ ಫೇಸ್‌ಬುಕ್ ಮತ್ತು ಟ್ವೀಟರ್‌ನಲ್ಲಿ ನಿಮ್ಮ ಮಾಹಿತಿ ಮತ್ತು ನೀವು ಹಂಚಿಕೊಂಡ ಮಾಹಿತಿಯನ್ನು ಇತರರೂ ಸುಲಭವಾಗಿ ನೋಡಬಹುದು. ಆಯಾ ಜಾಲತಾಣಗಳ ಉದ್ಯೋಗಿಗಳೂ ಈ ಮಾಹಿತಿಯನ್ನು ನೋಡಬಹುದು. ಹೀಗಿರುವಾಗ ನೀವೇಕೆ ಎಲ್ಲವನ್ನೂ ಟೈಮ್‌ಲೈನ್‌ನಲ್ಲಿ ಇಟ್ಟುಕೊಳ್ಳುತ್ತೀರಿ ಎಂದು ಕೇಳಿದರೆ ಬಳಕೆದಾರರು ಅಷ್ಟೇನು ತಲೆಕೆಡಿಸಿಕೊಳ್ಳುವುದಿಲ್ಲ.

ಫೇಸ್‌ಬುಕ್‌ನಲ್ಲಿನ ಎಲ್ಲಾ ಹಳೇ ಪೋಸ್ಟ್‌ಗಳನ್ನು ಒಂದೇ ಕ್ಲಿಕ್‌ನಲ್ಲಿ ಡಿಲೀಟ್ ಮಾಡಿ

ಏಕೆಂದರೆ, ಫೇಸ್‌ಬುಕ್ ಮತ್ತು ಟ್ವೀಟರ್‌ನಲ್ಲಿ ಶೇಖರಣೆಯಾಗಿರುವ ಟೈಮ್‌ಲೈನ್ ಪೋಸ್ಟ್‌ಗಳನ್ನು ಸುಲಭವಾಗಿ ಅಳಿಸಲಾಗದು ಎಂಬ ಕಾರಣಕ್ಕೆ ನಮ್ಮಲ್ಲಿ ಹಲವರು ಟೈಮ್‌ಲೈನ್‌ ಪೋಸ್ಟ್‌ಗಳನ್ನು ಹಾಗೆಯೇ ಇಟ್ಟುಕೊಳ್ಳುತ್ತಾರೆ. ಹೀಗಾಗಿ ಎಲ್ಲ ಮಾಹಿತಿಯನ್ನೂ ಒಂದೇ ಸಲಕ್ಕೆ ಡಿಲೀಟ್‌ ಮಾಡಲಾಗದು. ವರ್ಷಗಳಷ್ಟು ಹಿಂದಿನ ಮಾಹಿತಿಯೂ ಹಾಗೆಯೇ ಉಳಿದಿರುತ್ತದೆ.

ಹಾಗಿದ್ದರೆ, ಬೇಡವಾದ ಅಥವಾ ತೀರ ಮುಖ್ಯವಲ್ಲದ ಸಾಮಾಜಿಕ ಜಾಲತಾಣಗಳ ಮಾಹಿತಿಯನ್ನು ಆಗಿಂದಾಗ್ಗೆ ಅಳಿಸಿ ಹಾಕುವುದು ಹೇಗೆ ಎಂಬುದು ನಿಮ್ ಪ್ರಶ್ನೆಯಾಗಿದ್ದರೆ, ಫೇಸ್‌ಬುಕ್‌ ಖಾತೆ ನಿರ್ವಹಣೆಗೆ 'ಸೋಷಿಯಲ್ ಮೀಡಿಯಾ ಪೋಸ್ಟ್ ಮ್ಯಾನೇಜರ್' ಮತ್ತು ಟ್ವೀಟರ್ ಖಾತೆ ನಿರ್ವಹಣೆಗೆ 'ಟ್ವೀಟ್ ಡಿಲೀಟ್‌' ಎಂಬ ಎರಡು ಆಪ್‌ಗಳು ನಿಮಗೆ ಸಹಾಯ ಮಾಡಬಲ್ಲವು.

ಫೇಸ್‌ಬುಕ್‌ನಲ್ಲಿನ ಎಲ್ಲಾ ಹಳೇ ಪೋಸ್ಟ್‌ಗಳನ್ನು ಒಂದೇ ಕ್ಲಿಕ್‌ನಲ್ಲಿ ಡಿಲೀಟ್ ಮಾಡಿ

ಟ್ವೀಟ್ ಡಿಲೀಟ್‌ ಆಪ್‌ ಅನ್ನು ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಿ. ನಂತರ ನಿಮ್ಮ ಟ್ವೀಟರ್ ಖಾತೆ ನಿರ್ವಹಿಸಲು ಅದಕ್ಕೆ ಅನುಮತಿ ನೀಡಿ. ಒಂದು ವಾರಕ್ಕಿಂತ ಹಳೆಯದಾದ ಟ್ವೀಟ್‌ಗಳನ್ನು ಇದರ ಮೂಲಕ ಡಿಲೀಟ್ ಮಾಡಬಹುದು. ಒಂದು ಸಲಕ್ಕೆ ಈ ಆಪ್ ಗರಿಷ್ಠ 3,200 ಟ್ವೀಟ್‌ಗಳನ್ನು ಇದು ಡಿಲೀಟ್ ಮಾಡುತ್ತದೆ.

How to read deleted WhatsApp messages - GIZBOT KANNADA

ಇನ್ನು 'ಸೋಷಿಯಲ್ ಬುಕ್‌ ಪೋಸ್ಟ್ ಮ್ಯಾನೇಜರ್' ಆಪ್, ಹಳೆಯದಾದ ಟೈಮ್‌ಲೈನ್‌ ಪೋಸ್ಟ್‌ಗಳನ್ನು ನಮ್ಮ ಆಯ್ಕೆಯ ಅನುಸಾರ ಡಿಲೀಟ್ ಮಾಡುತ್ತದೆ.ಈ ಆಪ್‌ಗಳನ್ನು ಬಳಸಿ ಟೈಮ್‌ಲೈನ್‌ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಿದರೂ ನಿಮ್ಮ ಸ್ನೇಹಿತರು ನಿಮ್ಮ ಟೈಮ್‌ಲೈನ್‌ಗೆ ಮಾಡಿದ ಪೋಸ್ಟ್‌ಗಳು ಮಾತ್ರ ಹಾಗೆಯೇ ಇರುತ್ತವೆ.

ಓದಿರಿ: ಫೇಸ್‌ಬುಕ್ ಮೂಲಕ ಇತರೆ ವೆಬ್‌ಸೈಟ್‌ಗಳಿಗೆ ಲಾಗಿನ್ ಆಗ್ತೀರಾ?..ಈ ಶಾಕಿಂಗ್ ಸ್ಟೋರಿ ನೋಡಿ!!

Best Mobiles in India

English summary
Facebook is notoriously bad for reminding you of the things you've posted in the past.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X