ಫೇಸ್‌ಬುಕ್ ಮೂಲಕ ಇತರೆ ವೆಬ್‌ಸೈಟ್‌ಗಳಿಗೆ ಲಾಗಿನ್ ಆಗ್ತೀರಾ?..ಈ ಶಾಕಿಂಗ್ ಸ್ಟೋರಿ ನೋಡಿ!!

|

ಕೇಂಬ್ರಿಡ್ಜ್ ಅನಾಲಿಟಿಕಾ ಮಾದರಿಯದಲ್ಲಿಯೇ ಫೇಸ್‌ಬುಕ್ ಬಳಕೆದಾರರ ವಯಸ್ಸು, ಇ-ಮೇಲ್, ಹೆಸರು ಪ್ರೊಫೈಲ್ ಫೋಟೋ ಸೇರಿದಂತೆ ಹಲವು ವೈಯಕ್ತಿಕ ಡಾಟಾ ಕದಿಯುವುದಕ್ಕೆ ಥರ್ಡ್ ಪಾರ್ಟಿ ಆಪ್‌ಗಳಿಗೆ ಸಾಧ್ಯವಾಗುತ್ತಿದೆ ಎಂದು ಮತ್ತೊಂದು ಭದ್ರತಾ ಸಂಶೋಧನಾ ವರದಿ ಎಚ್ಚರಿಸಿದೆ. ಇದರಿಂದ ಫೇಸ್‌ಬುಕ್ ಬಳಕೆದಾರರಿಗೆ ಮತ್ತೆ ಆತಂಕ ಶುರುವಾಗಿದೆ.

ಹೌದು, ಥರ್ಡ್ ಪಾರ್ಟಿ ಜಾವಾ ಸ್ಕ್ರಿಪ್ಟ್ ಟ್ರ್ಯಾಕರ್‌ಗಳಿಗೆ ಫೇಸ್‌ಬುಕ್ ಡಾಟಾ ಅನುದ್ದೇಶಿತವಾಗಿ ಸಿಗುತ್ತವೆ. ಫಸ್ಟ್ ಪಾರ್ಟಿ ಹಾಗೂ ಥರ್ಡ್ ಪಾರ್ಟಿಯ ನಡುವಿನ ಭದ್ರತಾ ಕ್ರಮಗಳ ಲೋಪದಿಂದಾಗಿ ಥರ್ಡ್ ಪಾರ್ಟಿಗಳಿಂದ ಫೇಸ್‌ಬುಕ್ ಲಾಗಿನ್ ಆಯ್ಕೆ ದುರುಪಯೋಗವಾಗುತ್ತಿದೆ ಎಂಬ ಶಾಕಿಂಗ್ ವಿಷಯವನ್ನು ಅಧ್ಯಯನ ವರದಿಯೊಂದರಲ್ಲಿ ತಿಳಿಸಲಾಗಿದೆ.

ಫೇಸ್‌ಬುಕ್ ಮೂಲಕ ಇತರೆ ವೆಬ್‌ಸೈಟ್‌ಗಳಿಗೆ ಲಾಗಿನ್ ಆಗ್ತೀರಾ?

ಪ್ರಿನ್ಸ್ಟನ್ ಯೂನಿವರ್ಸಿಟಿ ಸೆಂಟರ್ ಫಾರ್ ಇನ್ಫರ್ಮೇಷನ್ ಟೆಕ್ನಾಲಜಿ ಪಾಲಿಸಿಯಲ್ಲಿ ಸಕ್ರಿಯರಾಗಿರುವ ಸ್ಟೀವನ್ ಎಂಗಲ್ಹಾರ್ಡ್ಟ್, ಗನ್ಸ್ ಆಕರ್ ಮತ್ತು ಅರವಿಂದ ನಾರಾಯಣನ್ ಅವರು ತಯಾರಿಸಿರುವ ವರದಿಯಲ್ಲಿ, ಥರ್ಡ್ ಪಾರ್ಟಿ ಟ್ರ್ಯಾಕರ್‌ಗಳಿಗೆ ಫೇಸ್‌ಬುಕ್ ಡಾಟಾ ಅನುದ್ದೇಶಿತವಾಗಿ ಸಿಗುತ್ತಿರುವುದು ಖಂಡಿತ ನಿಜ ಎಂದು ಫೇಸ್‌ಬುಕ್ ಬಳಕೆದಾರರನ್ನು ಎಚ್ಚರಿಸಿದ್ದಾರೆ.

How to view all photos, pages, comments and posts you liked on Facebook (KANNADA)

ಥರ್ಡ್ ಪಾರ್ಟಿ ಆಪ್‌ಗಳು ಡಾಟಾ ಸಂಗ್ರಹಣೆ ಮಾಡುವ ಗೌಪ್ಯ ವಿಧಾನದ ಬಗ್ಗೆ ಬೆಳಕು ಚೆಲ್ಲಿರುವ ಈ ಮೂವರು ತಯಾರಿಸಿರುವ ವರದಿಯಲ್ಲಿ, ಥರ್ಡ್ ಪಾರ್ಟಿ ಸಂಸ್ಥೆಗಳು ಬಳಕೆದಾರರ ಡಾಟಾ ಕದಿಯುವ ಕೆಲಸದಲ್ಲಿ ತೊಡಗಿವೆ. ಒಂದು ಸಂಸ್ಥೆ ತನ್ನದೇ ಆದ ಫೇಸ್‌ಬುಕ್ ಆಪ್ ಮೂಲಕ ವೆಬ್ ಬಳಕೆದಾರರನ್ನು ಟ್ರ್ಯಾಕ್ ಮಾಡುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

ಫೇಸ್‌ಬುಕ್ ಮೂಲಕ ಇತರೆ ವೆಬ್‌ಸೈಟ್‌ಗಳಿಗೆ ಲಾಗಿನ್ ಆಗ್ತೀರಾ?

ಈಗಾಗಲೇ ತನ್ನ ಭಧ್ರತಾ ಲೋಪವನ್ನು ಸರಿಪಡಿಸಿಕೊಂಡಿರುವುದಾಗಿ ಫೇಸ್‌ಬುಕ್ ತಿಳಿಸಿದ್ದರೂ ಸಹ, ಫಸ್ಟ್ ಪಾರ್ಟಿ ಹಾಗೂ ಥರ್ಡ್ ಪಾರ್ಟಿಯ ನಡುವಿನ ಭದ್ರತಾ ಕ್ರಮಗಳ ಲೋಪದಿಂದಾಗಿ ಥರ್ಡ್ ಪಾರ್ಟಿಗಳಿಂದ ಫೇಸ್‌ಬುಕ್ ಲಾಗಿನ್ ಆಯ್ಕೆ ದುರುಪಯೋಗವಾಗುತ್ತಿದೆ ಎಂಬ ಸುದ್ದಿಯ ಫೇಸ್‌ಬುಕ್ ಬಳಕೆದಾರರಲ್ಲಿ ಮತ್ತೆ ಆತಂಕ ಸೃಷ್ಟಿಸಿರುವುದು ಮಾತ್ರ ನಿಜ.

ಓದಿರಿ: 'ಒಪ್ಪೊ ಎಫ್ 7' ಕೃತಕ ಬುದ್ದಿಮತ್ತೆ ಕ್ಯಾಮೆರಾದಲ್ಲಿವೆ ನಿಮಗೆ ತಿಳಿಯದ ಹಲವು ಅದ್ಬುತ ಫೀಚರ್ಸ್!!

Best Mobiles in India

English summary
When a user grants a website access to their social media profile, they are not only trusting that website but also third parties embedded on it.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X