ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಮತ್ತು ನಿಂದನಾತ್ಮಕ ಪೋಸ್ಟ್‌ಗಳನ್ನು ವರದಿ ಮಾಡುವುದು ಹೇಗೆ?

ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡುವವರು ಹಾಗೂ ಇತರರನ್ನು ಅವಹೇಳನ ಮಾಡುವವರ ಸಂಖ್ಯೆಯೇ ಹೆಚ್ಚಾಗಿದೆ. ಆದರೆ, ಅವುಗಳು ಸಾಮಾಜಿಕ ಮಾಧ್ಯಮಗಳಾಗಿರುವುದರಿಂದ ಯಾರೂ ಕೂಡ ಅದಕ್ಕೆ ತಲೆಕೆಡಿಸಿಕೊಳ್ಳದೆ ಸುಮ್ಮನಾಗಿಬಿಡುತ್ತೇವೆ.!!

|

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪದಗಳನ್ನು ಬಳಸುವವರು, ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡುವವರು ಹಾಗೂ ಇತರರನ್ನು ಅವಹೇಳನ ಮಾಡುವವರ ಸಂಖ್ಯೆಯೇ ಹೆಚ್ಚಾಗಿದೆ. ಆದರೆ, ಅವುಗಳು ಸಾಮಾಜಿಕ ಮಾಧ್ಯಮಗಳಾಗಿರುವುದರಿಂದ ಯಾರೂ ಕೂಡ ಅದಕ್ಕೆ ತಲೆಕೆಡಿಸಿಕೊಳ್ಳದೆ ಸುಮ್ಮನಾಗಿಬಿಡುತ್ತೇವೆ.!!

ಸಾಮಾಜಿಕ ಮಾಧ್ಯಗಳು ದುರುಪಯೋಗವಾಗುತ್ತಿದ್ದರು ಸಹ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಅದರೆ ಒಬ್ಬ ವ್ಯಕ್ತಿ ನಿಮ್ಮನ್ನು ನಿಂದಿಸಿ ಅಥವಾ ನಿಮ್ಮ ಘನತೆಗೆ ಧಕ್ಕೆ ತರುವಂತೆ ಪೋಸ್ಟ್‌ಗಳನ್ನು ಹಾಕಿದರೆ ಮಾತ್ರ ಕೈಕೈ ಹಿಸುಕಿಕೊಳ್ಳುತ್ತೀರಾ.! ಹಾಗಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ನಿಂದನಾತ್ಮಕ ನಡವಳಿಕೆ ಹೊಂದಿರುವ ಅಕೌಂಟ್‌ಗಳ ಬಗ್ಗೆ ಹೇಗೆ ವರದಿ ಮಾಡುವುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಫೇಸ್‌ಬುಕ್‌ನಲ್ಲಿ ರಿಪೋರ್ಟ್ ಮಾಡುವುದು!!

ಫೇಸ್‌ಬುಕ್‌ನಲ್ಲಿ ರಿಪೋರ್ಟ್ ಮಾಡುವುದು!!

ಫೇಸ್‌ಬುಕ್‌ನಲ್ಲಿ ವಯಕ್ತಿಕ ನಿಂದನೆ ಅಥವಾ ಅಶ್ಲೀಲ ಪೋಸ್ಟ್‌ಗಳನ್ನು ರಿಪೋರ್ಟ್ ಮಾಡುವುದು ಬಳಹ ಸರಳವಾಗಿಯೇ ಇದೆ. ನ್ಯೂಸ್‌ಫೀಡ್‌ನಲ್ಲಿ ಯಾವುದಾದರೂ ನಿಂದನಾತ್ಮಕ ಬರಹ ಅಥವಾ ಪೋಸ್ಟ್‌ಗಳ ಕಂಡುಬಂದರೆ ಆ ಪೋಸ್ಟ್ ಬಲಭಾಗದಲ್ಲಿರುವ ಮೂರು ಚುಕ್ಕೆಗಳುಳ್ಳ ಆಯ್ಕೆ ಒತ್ತಿ ರಿಪೋಟ್ ಮಾಡಬಹುದು. ಮತ್ತು ಆ ಕ್ಷಣದಲ್ಲಿಯೇ ನಿಮ್ಮ ಟೈಮ್‌ಲೈನ್‌ನಿಂದ ಆ ಪೋಸ್ಟ್ ಅನ್ನು ಹೈಡ್ ಮಾಡಿಬಿಡಬಹುದು.!!

ಟ್ವಿಟ್ಟರ್‌ನಲ್ಲಿ ರಿಪೋರ್ಟ್ ಮಾಡುವುದು!!

ಟ್ವಿಟ್ಟರ್‌ನಲ್ಲಿ ರಿಪೋರ್ಟ್ ಮಾಡುವುದು!!

ಟ್ವಿಟ್ಟರ್‌ನಲ್ಲಿ ಯಾವುದೇ ಟ್ವಿಟ್‌ಗಳನ್ನು ನೇರವಾಗಿ ವರದಿ ಮಾಡಬಹುದಾಗಿದ್ದು, ಟ್ವಿಟ್ ಕೆಳಗಿನ ಬಾಣದ ಮೇಲೆ ಕ್ಲಿಕ್ ಮಾಡಿ ನಿಂದನಾತ್ಮಕ ಪೋಸ್ಟ್ ಬಗ್ಗೆ ವರದಿ ಮಾಡಬಹುದು. ರದಿ ಮಾಡಲು ಹಲವಾರು ಕಾರಣಗಳು ಮತ್ತು ಪ್ರಶ್ನೆಗಳಿರುತ್ತವೆ ಅವುಗಳಿಗೆ ಉತ್ತರಿಸಿ ಟ್ವಿಟ್ ಬಗ್ಗೆ ವರದಿ ಮಾಡಿ.!!

ಇಸ್ಟಾಗ್ರಾಮ್‌ನಲ್ಲಿ  ರಿಪೋರ್ಟ್ ಮಾಡುವುದು!!

ಇಸ್ಟಾಗ್ರಾಮ್‌ನಲ್ಲಿ ರಿಪೋರ್ಟ್ ಮಾಡುವುದು!!

ಫೇಸ್‌ಬುಕ್‌ನಂತೆಯೇ ಇಸ್ಟಾಗ್ರಾಮ್‌ನಲ್ಲಿ ನಿಂದನಾತ್ಮಕ ಬರಹ ಅಥವಾ ಪೋಸ್ಟ್‌ಗಳನ್ನು ರಿಪೋರ್ಟ್ ಮಾಡುವುದು ಬಹಳ ಸುಲಭ. ಯಾವುದೇ ನಿಂದನಾತ್ಮಕ ಬರಹ ಅಥವಾ ಪೋಸ್ಟ್‌ಗಳ ಮೇಲಿನ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಮೊದಲ ಆಯ್ಕೆಯೇ ರಿಪೋರ್ಟ್ ಮಾಡುವ ಬಗ್ಗೆ ಆಗಿರುತ್ತದೆ.!!

ಸ್ನ್ಯಾಪ್‌ಚಾಟ್‌ನಲ್ಲಿ ರಿಪೋರ್ಟ್ ಮಾಡುವುದು!!

ಸ್ನ್ಯಾಪ್‌ಚಾಟ್‌ನಲ್ಲಿ ರಿಪೋರ್ಟ್ ಮಾಡುವುದು!!

ಫೇಸ್‌ಬುಕ್‌ನಲ್ಲಿರುವ ಹಾಗೆ ಸರಳವಾಗಿ ಮತ್ತು ನೇರವಾಗಿ ಸ್ನ್ಯಾಪ್‌ಚಾಟ್‌ನಲ್ಲಿ ನಿಂದನಾತ್ಮಕ ಬರಹ ಅಥವಾ ಪೋಸ್ಟ್‌ಗಳನ್ನು ವರದಿ ಮಾಡಲು ಸಾಧ್ಯವಿಲ್ಲ. ಆದರೆ, ಸ್ನ್ಯಾಪ್‌ಚಾಟ್ ಸೆಟ್ಟಿಂಗ್ಸ್ ತೆರೆದು ಪಾಲಿಸಿ ಮತ್ತು ಸೇಫ್ಟಿ ಸೆಕ್ಸೆನ್ ತೆರೆದು ಇದರಲ್ಲಿ ಎಲ್ಲಾ ವಿವರಗಳನ್ನು ನೀಡಿದರೆ ನಿಮ್ಮ ರಿಪೋರ್ಟ್‌ಗೆ ಸ್ಪಂದಿಸಲಾಗುತ್ತದೆ.!!

ದೇಶಿಯ ವಿಮಾನ ಪ್ರಯಾಣಿಕರಿಗೆ 4 ದಿನ ಭರ್ಜರಿ ಆಫರ್!!..ಈಗಲೇ ಟಿಕೆಟ್ ಬುಕ್ ಮಾಡಿ.!!ದೇಶಿಯ ವಿಮಾನ ಪ್ರಯಾಣಿಕರಿಗೆ 4 ದಿನ ಭರ್ಜರಿ ಆಫರ್!!..ಈಗಲೇ ಟಿಕೆಟ್ ಬುಕ್ ಮಾಡಿ.!!

Best Mobiles in India

English summary
Learn how to Report Offensive or Abusive Behavior on Social Media (Facebook, Instagram, Snapchat, Twitter) to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X