ಡಿಲೀಟ್ ಆದ ಫೋಟೋ ಮರುಪಡೆದುಕೊಳ್ಳುವುದು ಹೇಗೆ?

By Staff
|

ನಮ್ಮ ಫೋನ್‌ಗಳಲ್ಲಿ ನಾವು ಸೆರೆಹಿಡಿದಿರುವ ಫೋಟೋಗಳನ್ನು ದುರಾದೃಷ್ಟವಶಾತ್ ನಾವು ಕಳೆದುಕೊಂಡಲ್ಲಿ ನಿಜಕ್ಕೂ ಇದು ಹೆಚ್ಚು ನೋವನ್ನು ಉಂಟುಮಾಡುತ್ತದೆ. ಆದರೆ ಈ ಫೋಟೋಗಳನ್ನು ಪುನಃ ನಿಮ್ಮ ಫೋನ್‌ನಲ್ಲಿ ಮರಳಿ ಪಡೆದುಕೊಳ್ಳಬಹುದಾಗಿದೆ.!!

ಹಾಗಾಗಿ, ಬಹಳ ಸುಲಭವಾಗಿ ನಿಮ್ಮಆಂಡ್ರಾಯ್ಡ್ ಅಥವಾ ಐಫೋನ್‌ನಲ್ಲಿ ಕಳೆದು ಹೋದ ಫೋಟೋಗಳನ್ನು ಹೇಗೆ ಪಡೆದುಕೊಳ್ಳುವುದು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ.!! ಈ ಕುರಿತ ಸಲಹೆಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ.!!

#1

#1

Photos app ಮೇಲೆ ಟ್ಯಾಪ್‌ ಮಾಡಿ ಅದನ್ನು ಲಾಂಚ್‌ ಮಾಡಿ.

#2

#2

ಆಲ್ಬಂ ಸ್ಕ್ರೀನ್‌ ಮೇಲೆ ಕೆಳಗೆ ಸ್ಕ್ರಾಲಿಂಗ್‌ ಮಾಡಿ. ಅಲ್ಲಿ Recently Deleted ಎಂಬ ಆಯ್ಕೆ ಮೇಲೆ ಟ್ಯಾಪ್‌ ಮಾಡಿ.

#3

#3

ನಂತರದಲ್ಲಿ ನಿಮಗೆ ಫೋಟೋ ಅಲ್ಬಂನಲ್ಲಿ 30 ದಿನಗಳಲ್ಲಿ ಡಿಲೀಟ್‌ ಆದ ಎಲ್ಲಾ ಫೋಟೋಗಳು ಕಾಣುತ್ತವೆ. ಅಲ್ಲದೇ ಆ ಆಪ್‌ನಲ್ಲಿ ಸಂಪೂರ್ಣವಾಗಿ ಡಿಲೀಟ್‌ ಆಗುವ ಬಾಕಿ ದಿನಗಳು ಪ್ರತಿಯೊಂದು ಫೋಟೋಗೆ ಎಷ್ಟು ದಿನ ಇದೆ ಎಂಬ ಪಟ್ಟಿಯೂ ಸಹ ಇರುತ್ತದೆ.

#4

#4

ಮೇಲ್ಭಾಗದ ಬಲಭಾಗದಲ್ಲಿ Select ಎಂಬಲ್ಲಿ ಕ್ಲಿಕ್‌ ಮಾಡಿ.

#5

#5

ಈ ಹಂತದಲ್ಲಿ ಡಿಲೀಟ್‌ ಆದ ಫೋಟೋಗಳು ಕಾಣುತ್ತವೆ. ಅವುಗಳಲ್ಲಿ ನೀವು ಪುನಃ ಪಡೆಯಬೇಕಾದ ಫೋಟೋಗಳ ಮೇಲೆ ಟ್ಯಾಪ್‌ ಮಾಡಿ. ಎಲ್ಲಾ ಫೋಟೋಗಳ ಮೇಲೆ ಚೆಕ್‌ ಮಾರ್ಕ್‌ ಪ್ರದರ್ಶಿತವಾಗುತ್ತದೆ.

#6

#6

ಈ ಹಂತದಲ್ಲಿ ಕೆಳಭಾಗದ ಬಲಭಾಗದ ಮೂಲೆಯಲ್ಲಿ Recover ಎಂಬ ಆಯ್ಕೆ ಮೇಲೆ ಟ್ಯಾಪ್‌ ಮಾಡಿ. (ಅಂತೆಯೇ ಸಂಪೂರ್ಣವಾಗಿ ಡಿಲೀಟ್‌ ಮಾಡಬೇಕಾದರೆ ಕೆಳಭಾಗದ ಎಡಭಾಗ ಮೂಲೆಯಲ್ಲಿ Delete ಎಂಬಲ್ಲಿ ಟ್ಯಾಪ್‌ ಮಾಡಿ)

#7

#7

ಈ ಹಂತದಲ್ಲಿ ಮೆನು ಮೇಲ್ಭಾಗದಲ್ಲಿ Recover Photo ಎಂಬಲ್ಲಿ ಟ್ಯಾಪ್‌ ಮಾಡಿ.

#8

#8

ಡಿಲೀಟ್‌ ಆದ ಎಲ್ಲಾ ಫೋಟೋಗಳು ಸಹ Recently Deleted Photos ನಿಂದ ಹಿಂಪಡೆಯಲಾಗುತ್ತದೆ. ಹಾಗೂ ನಿಮ್ಮ ಕ್ಯಾಮೆರಾ ರೋಲ್‌ಗೆ ಸೇರಿಕೊಳ್ಳುತ್ತವೆ. ಹಾಗೆಯೇ ಇತರೆ ಆಲ್ಬಂ ಫೋಟೋಗಳು ಸಹ ಡಿಲೀಟ್‌ ಆಗಿದ್ದರೆ ಈ ವಿಧಾನವನ್ನೇ ಅನುಸರಿಸಿ.

#9

#9

ನಿಮ್ಮ ಮೈಕ್ರೋ ಎಸ್‌ಡಿ ಕಾರ್ಡ್ ಫೋಟೋಗಳನ್ನು ಒಳಗೊಂಡಿದ್ದು ಏನಾದರೂ ಹಾನಿಯನ್ನು ಹೊಂದಿದೆಯೇ ಎಂಬುದನ್ನು ನೋಡಿ. ಹಾನಿಯಾಗಿದ್ದಲ್ಲಿ ಕಾರ್ಡ್‌ನಲ್ಲಿ ಸೇವ್ ಆಗಿರುವ ಫೋಟೋಗಳನ್ನು ರೀಸ್ಟೋರ್ ಮಾಡಲಾಗುವುದಿಲ್ಲ

#10

#10

ಆಂಡ್ರಾಯ್ಡ್ ಡೇಟಾ ರಿಕವರಿಯ ಫ್ರಿ ಟ್ರಯಲ್ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ ಕಳೆದು ಹೋದ ಫೋಟೋಗಳನ್ನು ಮರಳಿ ಪಡೆದುಕೊಳ್ಳಲು ಇದು ಸಹಾಯಕವಾಗಲಿದೆ.

#11

#11

ನಿಮ್ಮ ಡಿವೈಸ್‌ನಲ್ಲಿ ಸಾಕಷ್ಟು ಬ್ಯಾಟರಿ ಇದೆ ಎಂಬದನ್ನು ಕಂಡುಕೊಳ್ಳಿ. ಈ ಪ್ರಕ್ರಿಯೆಯನ್ನು ನಿರ್ವಹಿಸಲು ನಿಮ್ಮ ಡಿವೈಸ್‌ನಲ್ಲಿ 20% ದಷ್ಟು ಬ್ಯಾಟರಿ ಇರಬೇಕು.

#12

#12

ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡ ನಂತರ, ನಿಮ್ಮ ಕಂಪ್ಯೂಟರ್‌ನಲ್ಲಿ ಇನ್‌ಸ್ಟಾಲ್ ಮಾಡಿ ಮತ್ತು ಚಾಲನೆ ಮಾಡಿ. ಕಂಪ್ಯೂಟರ್‌ಗೆ ಆಂಡ್ರಾಯ್ಡ್ ಡಿವೈಸ್ ಅನ್ನು ಸಂಪರ್ಕಪಡಿಸಿ

#13

#13

ಅಪ್ಲಿಕೇಶನ್ ಚಾಲನೆ ಮಾಡಲು ನಿಮ್ಮ ಕಂಪ್ಯೂಟರ್‌ನಲ್ಲಿ ಡ್ರೈವರ್ ಅನ್ನು ನೀವು ಇನ್‌ಸ್ಟಾಲ್ ಮಾಡಿಕೊಂಡಿರಬೇಕು. ಇಲ್ಲದಿದ್ದರೆ ಇದು ಫೋನ್ ಅನ್ನು ಪತ್ತೆಹಚ್ಚುವುದಿಲ್ಲ.

#14

#14

ನಿಮ್ಮ ಫೋನ್ ಸಾಫ್ಟ್‌ವೇರ್ ಅನ್ನು ಪತ್ತೆಹಚ್ಚಿದ ನಂತರ ನೀವು ಸ್ಕ್ಯಾನ್ ಮಾಡಬೇಕೆಂದಿರುವ ಫೈಲ್ ಅನ್ನು ಆರಿಸಿ. ಗ್ಯಾಲರಿ ಆಪ್ಶನ್‌ಗೆ ಕ್ಲಿಕ್ ಮಾಡಿ. ಸ್ಟ್ಯಾಂಡರ್ಡ್ ಅಥವಾ ಅಡ್ವಾನ್ಸ್‌ಡ್ ಮೋಡ್ ಅನ್ನು ಆಯ್ಕೆಮಾಡುವ ಮೂಲಕ ಫೋನ್ ಅನ್ನು ಸ್ಕ್ಯಾನ್ ಮಾಡಿ. ನಿಮ್ಮ ಫೋನ್‌ಗೆ ಸ್ಕ್ಯಾನ್ ಅನ್ನು ನೀವು ಆರಿಸಿಕೊಂಡ ನಂತರ, ನಿಮ್ಮ ಫೋನ್ ಕಳೆದು ಹೋದ ಡೇಟಾವನ್ನು ಸ್ಕ್ಯಾನ್ ಮಾಡಲು ಪ್ರೊಗ್ರಾಮ್‌ಗೆ ಅನುಮತಿಯನ್ನು ನೀಡಿ.

#15

#15

ಸ್ಕ್ಯಾನ್ ಮಾಡಿದ ಡೇಟಾವನ್ನು ವಿಂಡೊ ತೋರಿಸಿದ ನಂತರ, ರಿಕವರಿ ಆಪ್ಶನ್ ಅನ್ನು ಕ್ಲಿಕ್ ಮಾಡುವ ಮೂಲಕ ಪ್ರಿವ್ಯೂ ಮತ್ತು ಕಳೆದು ಹೋದ ಡೇಟಾವನ್ನು ರೀಸ್ಟೋರ್ ಮಾಡಬಹುದಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಒನ್‌ಪ್ಲಸ್ ಪ್ರಿಯರಿಗೆ ಹುಚ್ಚಿಡಿಸಿರುವ ಒನ್‌ಪ್ಲಸ್ 5ಟಿ 'ರೆಡ್ ಎಡಿಷನ್' ಮಾರಾಟ ಶುರು!!..ಬೆಲೆ ಎಷ್ಟು!?ಒನ್‌ಪ್ಲಸ್ ಪ್ರಿಯರಿಗೆ ಹುಚ್ಚಿಡಿಸಿರುವ ಒನ್‌ಪ್ಲಸ್ 5ಟಿ 'ರೆಡ್ ಎಡಿಷನ್' ಮಾರಾಟ ಶುರು!!..ಬೆಲೆ ಎಷ್ಟು!?

Best Mobiles in India

English summary
We give you tips to restore photos on your Apple iPhone running iOS 8, and Android smartphones. Follow these steps to get those photos back on Apple iPhone (running on iOS 8) user and android.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X