ಇಂಟರ್‌ನೆಟ್ ಇಲ್ಲದೆಯೂ ವೆಬ್‌ಸೈಟ್ ಪೇಜ್ ತೆರೆದು ಓದುವುದು ಹೇಗೆ?..ಸಿಂಪಲ್ ಟ್ರಿಕ್ಸ್!!

ಮೊಬೈಲ್‌ನಲ್ಲಿ ಯಾವುದಾದರೂ ಲೇಖನಗಳನ್ನು ಓದುತ್ತಾ ಬಸ್ಸಿನಲ್ಲಿಯೋ ಅಥವಾ ಟ್ರೈನಿನಲ್ಲಿಯೋ ಪ್ರಯಾಣಿಸುವಾಗ ಇಂಟರ್‌ನೆಟ್ ಸಿಗದಿದ್ದರೆ ಎಷ್ಟು ಕಿರಿಕಿಯುಂಟಾಗುತ್ತದೆ ಅಲ್ಲವೇ?.

|

ಮೊಬೈಲ್‌ನಲ್ಲಿ ಯಾವುದಾದರೂ ಲೇಖನಗಳನ್ನು ಓದುತ್ತಾ ಬಸ್ಸಿನಲ್ಲಿಯೋ ಅಥವಾ ಟ್ರೈನಿನಲ್ಲಿಯೋ ಪ್ರಯಾಣಿಸುವಾಗ ಇಂಟರ್‌ನೆಟ್ ಸಿಗದಿದ್ದರೆ ಎಷ್ಟು ಕಿರಿಕಿಯುಂಟಾಗುತ್ತದೆ ಅಲ್ಲವೇ?. ಆದರೆ, ಇನ್ಮುಂದೆ ಇದಕ್ಕೆನೀವು ಚಿಂತಿಸಬೇಡಿ.! ಏಕೆಂದರೆ ನಿಮಗೆ ಅತ್ಯುತ್ತಮ ಉಪಾಯವೊಂದನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ.!!

ಹೌದು, ಆನ್‌ಲೈನ್‌ನಲ್ಲಿದ್ದಾಗ ವೆಬ್‌ಸೈಟ್‌ನ ಪೇಜ್ ಒಂದನ್ನು ತೆರೆದು ಓದುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಆಫ್‌ಲೈನ್‌ನಲ್ಲಿಯೂ ವೆಬ್‌ಸೈಟ್‌ನ ಪೇಜ್ ತೆರೆದು ಓದಬಹುದು.!! ಇದಕ್ಕೆ ಒಂದು ಸಿಪಲ್ ಟ್ರಿಕ್ಸ್ ಇದ್ದು, ಕೆಳಗಿನ ಸ್ಲೈಡರ್‌ಗಳಲ್ಲಿ ಆಫ್‌ಲೈನ್‌ನಲ್ಲಿಯೂ ವೆಬ್‌ಸೈಟ್‌ನ ಪೇಜ್ ತೆರೆದು ಓದುವುದು ಹೇಗೆ ಎಂಬುದನ್ನು ತಿಳಿಯಿರಿ.!!

ವೆಬ್‌ಪೇಜ್ ಡೌನ್‌ಲೋಡ್ ಮಾಡಿ!!

ವೆಬ್‌ಪೇಜ್ ಡೌನ್‌ಲೋಡ್ ಮಾಡಿ!!

ಆಫ್‌ಲೈನ್‌ನಲ್ಲಿಯೂ ವೆಬ್‌ಸೈಟ್‌ ಪೇಜ್ ತೆರದೆದು ಓದಲು ವೆಬ್‌ಪೇಜ್ ಅನ್ನು ಮೊಬೈಲ್ ಬ್ರೌಸರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಆನ್‌ಲೈನ್‌ನಲ್ಲಿರುವಾಗಲೇ ವೆಬ್‌ಪೇಜ್‌ ಅನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಂಡರೆ, ಯಾವುದೇ ಅಡತಡೆ ಇಲ್ಲದೆ ಆಫ್‌ಲೈನ್‌ನಲ್ಲಿಯೂ ವೆಬ್‌ಸೈಟ್‌ನ ಪೇಜ್ ತೆರೆದು ಓದಬಹುದು.!!

ಪೇಜ್ ಡೌನ್‌ಲೋಡ್ ಮಾಡುವುದು ಹೇಗೆ?

ಪೇಜ್ ಡೌನ್‌ಲೋಡ್ ಮಾಡುವುದು ಹೇಗೆ?

ನಿಮ್ಮ ಫೋನ್‌ನಲ್ಲಿ ಕ್ರೋಮ್ ಬ್ರೌಸರ್ ತೆರೆದು ನೀವು ಓದಬಯಸುವ ವೆಬ್‌ಸೈಟ್‌ನ ಪೇಜ್‍ ಅನ್ನು ಕ್ಲಿಕ್ ಮಾಡಿ. ಆ ಪೇಜ್ ತೆರೆದ ನಂತರ ಈಗ ಬ್ರೌಸರ್‌ನ ಬಲಭಾಗದಲ್ಲಿ ಕಾಣುವ ಮೂರು ಚುಕ್ಕೆಗಳ ಮೆನು ಮೇಲೆ ಕ್ಲಿಕ್ಕಿಸಿ.!!

ಡೌನ್‌ಲೋಡ್ ಚಿಹ್ನೆ ಒತ್ತಿ!!

ಡೌನ್‌ಲೋಡ್ ಚಿಹ್ನೆ ಒತ್ತಿ!!

ಬ್ರೌಸರ್‌ನ ಬಲಭಾಗದಲ್ಲಿ ಕಾಣುವ ಮೂರು ಚುಕ್ಕೆಗಳ ಮೆನು ಮೇಲೆ ಕ್ಲಿಕ್ಕಿಸಿದ ನಂತರ ಡೌನ್‌ಲೋಡ್ ಚಿಹ್ನೆಯೊಂದು ನಿಮಗೆ ಕಾಣಿಸುತ್ತದೆ. ಅದರ ಮೇಲೆ ಒಮ್ಮೆ ಒತ್ತಿದರೆ ಆ ಪೇಜ್ ಡೌನ್‌ಲೋಡ್ ಆಗಿರುವ ಮಾಹಿತಿ ಕಾಣಿಸುತ್ತದೆ.!!

ಡೌನ್‌ಲೋಡ್ ಆಗಿರುವ ಪೇಜ್ ಓದಲು?

ಡೌನ್‌ಲೋಡ್ ಆಗಿರುವ ಪೇಜ್ ಓದಲು?

ಒಮ್ಮೆ ನೀವು ಪೇಜ್ ಡೌನ್‌ಲೋಡ್ ಮಾಡಿಕೊಂಡರೆ, ಡೌನ್‌ಲೋಡ್ ಆಗಿರುವ ವೆಬ್‌ಪೇಜ್ ಓದಲು ನಿಮ್ಮ ಬ್ರೌಸರ್ ತೆರೆಯಿರಿ. ಇಲ್ಲಿ ಸೇವ್ ಆಗಿರುವ ವೆಬ್‌ಪೇಜ್‌ಗಳು ಕಾಣಿಸಿಕೊಳ್ಳುತ್ತವೆ. ನೀವು ಎಷ್ಟು ವೆಬ್‌ಪೇಜ್‌ಗಳನ್ನು ಸೇವ್ ಮಾಡಿರುತ್ತೀರೋ ಆ ಪೇಜ್‌ಗಳೆಲ್ಲವೂ ಇಲ್ಲಿ ಕಾಣುತ್ತವೆ.!!

ಹಿಸ್ಟರಿ ಕ್ಲಿಯರ್ ಮಾಡಿ!!

ಹಿಸ್ಟರಿ ಕ್ಲಿಯರ್ ಮಾಡಿ!!

ಡೌನ್‌ಲೋಡ್ ಆಗಿರುವ ವೆಬ್‌ಪೇಜ್ ಓದಿದ ನಂತರ ನೀವು ಅದನ್ನು ಡಿಲೀಟ್ ಮಾಡುವುದು ಕೂಡ ಸರಳವೇ.!! ಆಫ್‌ಲೈನ್ ಆಗಿ ಸೇವ್ ಆಗಿರುವ ವೆಬ್‌ಪೇಜ್‌ನ ಅಡ್ರೆಸ್ ಬಾರ್‌ನ ಪಕ್ಕದಲ್ಲಿ Offline ಎಂದು ಕಾಣಿಸಿಕೊಳ್ಳುತ್ತದೆ. ಈ ಆಫ್‌ಲೈನ್ ಪೇಜ್ ನೀವು ಬ್ರೌಸರ್ ಹಿಸ್ಟರಿ ಕ್ಲಿಯರ್ ಮಾಡುವವರೆಗೂ ನಿಮ್ಮ ಬ್ರೌಸರ್‌ನಲ್ಲಿ ಸೇವ್ ಆಗಿರುತ್ತದೆ.

ಕೇವಲ ಕ್ಯಾಮೆರಾಗಾಗಿ ಮಾತ್ರ ಮೊಬೈಲ್ ಖರೀದಿಸುತ್ತಿರಾ?..ಕಂಪೆನಿಗಳ ಮೋಸ ತಿಳಿಯುತ್ತಿಲ್ಲವೇ?ಕೇವಲ ಕ್ಯಾಮೆರಾಗಾಗಿ ಮಾತ್ರ ಮೊಬೈಲ್ ಖರೀದಿಸುತ್ತಿರಾ?..ಕಂಪೆನಿಗಳ ಮೋಸ ತಿಳಿಯುತ್ತಿಲ್ಲವೇ?

Best Mobiles in India

English summary
How Do I Download an Entire Website for Offline Reading?.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X