ಕಂಪೆನಿಗಳು ಬಳಕೆದಾರ ಮಾಹಿತಿಗಳನ್ನು ಟ್ರ್ಯಾಕ್ ಮಾಡುವುದು ಹೇಗೆ?

By Ashwath
|

ಸೋಶಿಯಲ್‌ ಮೀಡಿಯಾದಲ್ಲೇ ನಾವು ಎಷ್ಟೇ ಸುರಕ್ಷಿತ ಎಂದು ಭಾವಿಸಿದ್ದರೂ ನಮ್ಮನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು. ಫೇಸ್‌‌ಬುಕ್‌ ಅಕೌಂಟ್‌ನ್ನೇ ಹ್ಯಾಕ್‌ ಮಾಡುವ ಮೂಲಕ ಬಳಕೆದಾರರನ್ನು ಟ್ರ್ಯಾಕ್ ಮಾಡುವುದು ನಿಮಗೆ ಗೊತ್ತೆ ಇದೆ. ಆದರೆ ನಮ್ಮದೇ ತಪ್ಪಿನಿಂದ ನಮ್ಮ ಮಾಹಿತಿಗಳನ್ನು ಸ್ನೇಹಿತರ ಮಾಹಿತಿಗಳನ್ನು ಸುಲಭವಾಗಿ ಬೇರೆಯವರಿಗೆ ವೀಕ್ಷಿಸಲು ಅನುಮತಿ ನೀಡುತ್ತಿರುವುದು ತಿಳಿದಿದ್ದೀರಾ?

ನೀವು ಗಮನಿಸರಬಹುದು ಪ್ರೈವೆಸಿ ಸೆಟ್ಟಿಂಗ್ಸ್‌ ಎಷ್ಟೇ ಮಾಡಿದರೂ ನಮಗೆ ಗೊತ್ತಿಲ್ಲದೇ ಯಾವುದೋ ಕಂಪೆನಿಗಳ ಇಮೇಲ್‌ಗಳು, ಯಾವುದೋ ಪೋಸ್ಟ್‌ಗಳು ನಮ್ಮ ಮೇಲ್‌ಗೆ ಬರುತ್ತಿರುತ್ತವೆ.ಜೊತೆಗೆ ನಾವು ಯಾವುದೋ ಲಿಂಕ್‌ನ್ನು ಕ್ಲಿಕ್‌ ಮಾಡಿದರೆ ಆ ಮಾಹಿತಿ ನಮ್ಮ ಸ್ನೇಹಿತರ ಮೇಲ್‌ಗೆ ಸಹ ಹೋಗುತ್ತಿರುತ್ತದೆ.

ಕಂಪೆನಿಗಳು ಬಳಕೆದಾರರನ್ನು, ಬಳಕೆದಾರರ ಸ್ನೇಹಿತರ ಮಾಹಿತಿಗಳನ್ನು ಟ್ರ್ಯಾಕ್ ಮಾಡುತ್ತಿರುತ್ತದೆ. ಆದರೆ ಕಂಪೆನಿಗಳು ನಿಮ್ಮನ್ನು ಟ್ರ್ಯಾಕ್ ಮಾಡದಂತೆಯೂ ಮಾಡಬಹುದು.ಹೀಗಾಗಿ ಮುಂದಿನ ಪುಟದಲ್ಲಿ ಬೇರೆ ಕಂಪೆನಿಯವರು ನಿಮ್ಮನ್ನು ಟ್ರ್ಯಾಕ್ ಮಾಡದಂತೆ ಮಾಡಲು ನೀವು ಕೆಲವೊಂದು ಸೆಟ್ಟಿಂಗ್ಸ್‌ ಮಾಡಬೇಕಾಗುತ್ತದೆ. ಮುಂದಿನ ಪುಟದಲ್ಲಿ ಸೆಟ್ಟಿಂಗ್ಸ್‌ ವಿವರಿಸಲಾಗಿದ್ದು ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

1

1


ಮೊದಲು ಫೇಸ್‌ಬುಕ್‌ ಪೇಜ್‌‌ನಲ್ಲಿರುವ settings button ಕ್ಲಿಕ್‌ ಮಾಡಿ

2

2


ನಂತರ ಮೌಸ್‌ನಿಂದ "Settings" ಮೆನುವನ್ನು ಆರಿಸಿ

3

3


ಸೆಟ್ಟಿಗ್ಸ್‌ ಮೆನು ಒಳಗಿರುವ "ಆಪ್ಸ್‌" ಕ್ಲಿಕ್‌ ಮಾಡಿ

4

4

ಈಗ ಆಪ್‌ ಸೆಟ್ಟಿಗ್ಸ್‌ ಪೇಜ್‌ ಓಪನ್‌ ಆಗುತ್ತದೆ. ಇಲ್ಲಿ ನೀವು ಫೇಸ್‌ಬುಕ್‌ ಅಕೌಂಟ್‌ನಲ್ಲಿ ಯಾವುದೆಲ್ಲ ಆಪ್‌ ಇನ್‌ಸ್ಟಾಲ್‌ ಮಾಡಿದ್ದಿರೋ ಆ ಎಲ್ಲಾ ಆಪ್‌ಗಳು ಲಿಸ್ಟ್‌ ಆಗುತ್ತದೆ.

5

5


ಇಲ್ಲಿ ಆಪ್‌ನ ಬಲಗಡೆ "Edit" ಬಟನ್‌ ಇದ್ದು ಈ ಬಟನ್‌‌ ಕ್ಲಿಕ್‌ ಮಾಡಿದ್ದಲ್ಲಿ ಆ ಆಪ್‌ ನಿಮ್ಮ ಯಾವ ಡೇಟಾವನ್ನು ನೋಡುತ್ತದೆ ಎನ್ನುವ ಮಾಹಿತಿಯನ್ನು ನೋಡಬಹುದು. ಕೊನೆಗೆ ಈ ಆಪ್‌ ನಿಮಗೆ ಬೇಡವಾದಲ್ಲಿ "Remove app " ಕ್ಲಿಕ್‌ ಮಾಡಿ Remove ಮಾಡಬಹುದು.

6

6


ಒಂದು ವೇಳೆ ನಿಮಗೆ ಗೊತ್ತಿಲ್ಲದ ಆಪ್‌ಗಳು ಇನ್‌ಸ್ಟಾಲ್‌ ಆಗಿದ್ದಲ್ಲಿ ಅವುಗಳು ಸುಲಭವಾಗಿ Remove ಮಾಡಬಹುದು. ಆಪ್‌ ಸೆಟ್ಟಿಗ್ಸ್‌ ಪೇಜ್‌ ನಲ್ಲಿ ಆಪ್‌ ಲಿಸ್ಟ್‌ ಬಲಗಡೆ " *" ಬಟನ್‌ ಕ್ಲಿಕ್‌ ಮಾಡುವ ಮೂಲಕ Remove ಮಾಡಬಹುದು.

7

7

ಫೇಸ್‌ಬುಕ್‌ನ ಎಲ್ಲಾ ಲೈಕ್‌, ಫೋಟೋಗಳು ದಾಖಲಾಗುವುದು ಎಲ್ಲಿ ಗೊತ್ತೆ?ಫೇಸ್‌ಬುಕ್‌ನ ಎಲ್ಲಾ ಲೈಕ್‌, ಫೋಟೋಗಳು ದಾಖಲಾಗುವುದು ಎಲ್ಲಿ ಗೊತ್ತೆ?

ಫೇಸ್‌‌ಬುಕ್‌ ಪ್ರೊಫೈಲ್‌ಗೆ ಭೇಟಿ ನೀಡಿದವರನ್ನು ಪತ್ತೆ ಮಾಡಲು ಸಾಧ್ಯವೆ?ಫೇಸ್‌‌ಬುಕ್‌ ಪ್ರೊಫೈಲ್‌ಗೆ ಭೇಟಿ ನೀಡಿದವರನ್ನು ಪತ್ತೆ ಮಾಡಲು ಸಾಧ್ಯವೆ?

ಈ ಫೇಸ್‌ಬುಕ್‌ ಪೋಸ್ಟ್‌ಗಳಿಂದ ದೂರವಿರಿಈ ಫೇಸ್‌ಬುಕ್‌ ಪೋಸ್ಟ್‌ಗಳಿಂದ ದೂರವಿರಿ

ಫೇಸ್‌ಬುಕ್‌ನಲ್ಲಿ ಇವರಿಂದ ದೂರವಿರಿಫೇಸ್‌ಬುಕ್‌ನಲ್ಲಿ ಇವರಿಂದ ದೂರವಿರಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X