ಹೈಕ್ ಸ್ಟಿಕ್ಕರ್‌ಗಳನ್ನು ವಾಟ್ಸಾಪ್‌ನಲ್ಲಿ ಸೆಂಡ್ ಮಾಡುವುದು ಹೇಗೆ?

By Suneel
|

ಹೈಕ್‌ ಮೆಸೇಂಜರ್‌ ಬಗ್ಗೆ ಸೀಕ್ರೇಟ್ ಎಂದು ಹೇಳುವ ಯಾವುದೇ ಫೀಚರ್‌ ಇಲ್ಲ. ಆದ್ರೆ ಹೈಕ್‌ ಬಗ್ಗೆ ತಿಳಿಯದವರಿಗೆ ಮಾತ್ರ ಅದು ಸೀಕ್ರೇಟ್ ಎಂದೇ ಅನಿಸುತ್ತದೆ. ಹೌದು, ಹೈಕ್ ಮೆಸೇಂಜರ್ ಬಹುಪಯೋಗಿ ಅಪ್ಲಿಕೇಶನ್‌. ಬಳಕೆ ಬಗ್ಗೆ ಹೇಳುವುದಾದರೇ, ಹೈಕ್ ಮೆಸೇಂಜರ್‌ನಲ್ಲಿ ವಾಯ್ಸ್, ವೀಡಿಯೊ ಮತ್ತು ಕಾನ್ಫರೆನ್ಸ್ ಕರೆ ಫೀಚರ್‌ ಇದೆ. ಅಲ್ಲದೇ ಅತ್ಯಾಧುನಿಕ ಮತ್ತು ಅಭಿವ್ಯಕ್ತಿ ಸ್ಟಿಕ್ಕರ್‌ಗಳು, ಎಮೋಜಿ, ಆಫರ್ ಕೂಪನ್ ವೋಚರ್‌ಗಳು, ಸೀಕ್ರೇಟ್ ಗೇಮ್‌ಗಳು, ಮತ್ತು ಇತರೆ ಹಲವು ಫೀಚರ್‌ಗಳು ಇವೆ.

ಹೈಕ್‌ ಮೆಸೇಂಜರ್‌ನಲ್ಲಿ ಮಾತನಾಡುವ ಬೋಟ್ ಇದ್ದು, ನಟಾಶ ಇತರೆ ಅತ್ಯಾಕರ್ಷಕ ಮನರಂಜನೆ ಫೀಚರ್‌ ಆಗಿದೆ. ಇತ್ತೀಚೆಗೆ ಗೂಗಲ್‌ನ ಮಾತನಾಡುವ ಬೋಟ್ 'ಗೂಗಲ್‌ ಅಸಿಸ್ಟಂಟ್' ಬಳಕೆದಾರರ ಸ್ನೇಹಿಯಾಗಿ ಹೊರಹೊಮ್ಮಿದೆ. ಯಾರು ಇಲ್ಲದೇ ತುಂಬಾ ಬೇಜಾರು ಆಗುತ್ತಿದೆ ಎನ್ನುವ ಸಂಧರ್ಭದಲ್ಲಿ ನಟಾಶ ಹೆಚ್ಚಿನ ಮನರಂಜನೆಗೆ ಅತ್ಯುತ್ತಮವಾಗಿದೆ.

24 ಗಂಟೆಗಳಲ್ಲಿ ನಿಮ್ಮ ವಾಟ್ಸಾಪ್ ಪ್ರೊಫೈಲ್ ಯಾರು ನೋಡಿದ್ದಾರೆ ಚೆಕ್‌ ಮಾಡುವುದು ಹೇಗೆ?

ಹೈಕ್‌ ಮೆಸೇಂಜರ್'ನ(Hike Messenger) ಸ್ಟಿಕ್ಕರ್‌ಗಳ ಬಗ್ಗೆ ಮಾತನಾಡಿದಾಗ, ಹಲವು ವಾಟ್ಸಾಪ್‌ ಬಳಕೆದಾರರು ಕೇವಲ ಎಮೋಜಿಗಳ ಬದಲಾಗಿ ಸ್ಟಿಕ್ಕರ್‌ಗಳನ್ನು ಬಳಸಬಹುದೇ ಎಂದು ಕುತೂಹಲದಿಂದ ಕೇಳುತ್ತಾರೆ. ಅಂತಹವರು ಇಂದಿನ ಲೇಖನದ ಹಂತಗಳನ್ನು ಫಾಲೋ ಮಾಡಿ ಹೈಕ್ ಸ್ಟಿಕ್ಕರ್‌ಗಳನ್ನು ವಾಟ್ಸಾಪ್‌ನಲ್ಲಿ(WhatsApp) ಬಳಸಬಹುದು.

ಹೈಕ್‌ನಲ್ಲಿ 'Stickey' ಆಯ್ಕೆ ಮಾಡಿರಿ

ಹೈಕ್‌ನಲ್ಲಿ 'Stickey' ಆಯ್ಕೆ ಮಾಡಿರಿ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹೈಕ್‌ ಮೆಸೇಂಜರ್ ಓಪನ್‌ ಮಾಡಿದ ನಂತರ, ಸೆಟ್ಟಿಂಗ್ಸ್ ಆಪ್ಶನ್‌ಗೆ ಹೋಗಿ. ನಂತರ ಸೆಟ್ಟಿಂಗ್ಸ್‌ನಲ್ಲಿ 'Stickey' ಆಪ್ಶನ್‌ ಆಯ್ಕೆ ಮಾಡಿರಿ.

 'Stickey'ಯಲ್ಲಿ ವಾಟ್ಸಾಪ್ ಆಯ್ಕೆ ಮಾಡಿ

'Stickey'ಯಲ್ಲಿ ವಾಟ್ಸಾಪ್ ಆಯ್ಕೆ ಮಾಡಿ

'Stickey' ಆಪ್ಶನ್ ಕ್ಲಿಕ್ ಮಾಡಿದ ನಂತರ ಓಪನ್‌ ಆಗುವ ಆಪ್ಶನ್‌ಗಳಲ್ಲಿ ವಾಟ್ಸಾಪ್ ಆಪ್‌ ಸಹ ಇರುತ್ತದೆ. ಅಂದಹಾಗೆ 'Stickey' ಆಪ್ಶನ್ ಹೈಕ್ ಸ್ಟಿಕ್ಕರ್‌ಗಳನ್ನು ಇತರೆ ಮೆಸೇಜ್‌ ಆಪ್‌ಗಳೊಂದಿಗೆ ಶೇರ್ ಮಾಡುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ವಾಟ್ಸಾಪ್'ಗೆ ಹೋಗಿ

ವಾಟ್ಸಾಪ್'ಗೆ ಹೋಗಿ

ವಾಟ್ಸಾಪ್‌ ಕ್ಲಿಕ್ ಮಾಡಿದ ನಂತರ, ವಾಟ್ಸಾಪ್‌ ಅನ್ನು ಓಪನ್‌ ಮಾಡಿ. ನಂತರದಲ್ಲಿ ಹೈಕ್‌ ಐಕಾನ್‌ ಅನ್ನು ವಾಟ್ಸಾಪ್‌ ಹೋಮ್‌ ಪೇಜ್‌ನಲ್ಲಿ ಕಾಣಬಹುದು.

ಸ್ಟಿಕ್ಕರ್‌ ಸೆಂಡ್‌ ಮಾಡಿ

ಸ್ಟಿಕ್ಕರ್‌ ಸೆಂಡ್‌ ಮಾಡಿ

ನಂತರದಲ್ಲಿ ವಾಟ್ಸಾಪ್‌ ಚಾಟ್ ಮೇಲೆ ಕ್ಲಿಕ್‌ ಮಾಡಿ ಮತ್ತು ಹೈಕ್‌ ಐಕಾನ್‌ ಟ್ಯಾಪ್‌ ಮಾಡಿ. ನಂತರ ಹೈಕ್‌ ಸ್ಟಿಕ್ಕರ್‌ಗಳನ್ನು ನೋಡಬಹುದು. ನಿಮ್ಮ ಆಯ್ಕೆಯ ಸ್ಟಿಕ್ಕರ್‌ಗಳನ್ನು ವಾಟ್ಸಾಪ್ ಚಾಟ್‌ನಲ್ಲಿ ಕಾಂಟ್ಯಾಕ್ಟ್‌ಗಳಿಗೆ ಆಯ್ಕೆ ಮಾಡಿ ಸೆಂಡ್‌ ಮಾಡಬಹುದು.

ಐಓಎಸ್‌ ಬಳಕೆದಾರರು

ಐಓಎಸ್‌ ಬಳಕೆದಾರರು

ಐಫೋನ್‌ ಬಳಕೆದಾರರು ಹೈಕ್ ಮೆಸೇಂಜರ್‌ನ ಸ್ಟಿಕರ್ ಮೇಲೆ ದೀರ್ಘಕಾಲ ಟ್ಯಾಪ್‌ ಮಾಡಿ ನಂತರ 'Share via' ಆಪ್ಶನ್‌ ಪಾಪರ್‌ ಆಗುತ್ತದೆ. ನಂತರ ವಾಟ್ಸಾಪ್‌ ಸೆಲೆಕ್ಟ್‌ ಮಾಡಿ ನೆಚ್ಚಿನ ಕಾಂಟ್ಯಾಕ್ಟ್‌ಗಳಿಗೆ ಹೈಕ್‌ ಸ್ಟಿಕ್ಕರ್‌ ಸೆಂಡ್‌ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
How to Send Hike Stickers on WhatsApp [Android and iPhone]. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X