Just In
Don't Miss
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Movies
Muddumanigalu:ಮಗಳ ಕಷ್ಟಕ್ಕೆ ಹೆಗಲಾಗಿ ಬಂದೇ ಬಿಟ್ಟಳು ಮುದ್ದುಲಕ್ಷ್ಮೀ.. ಮುಂದೇನು?
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನೀವು ಇದುವರೆಗೂ ಬಳಸದಿರುವ 6 ವಾಟ್ಸಾಪ್ ಫೀಚರ್‌ಗಳು
ವಾಟ್ಸಾಪ್‌ನಲ್ಲಿ ಬಂದ ಮೆಸೇಜ್‌ಗಳನ್ನು ಉಳಿಸಿಕೊಳ್ಳುವುದರ(Save) ಜೊತೆಗೆ ಇಂದು ವಾಟ್ಸಾಪ್‌ನಲ್ಲಿ ಭಾರತೀಯ ಭಾಷೆಗಳಲ್ಲೂ ಸಹ ಚಾಟಿಂಗ್, ಎಸ್‌ಎಂಎಸ್ ಮಾಡಬಹುದಾಗಿದೆ.
2016 ರ ಏಪ್ರಿಲ್ ವೇಳೆಗೆ ಜಾಗತಿಕವಾಗಿ ಒಂದು ಶತಕೋಟಿ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಹಲವು ಸಿಕ್ರೇಟ್ ಫೀಚರ್‌ಗಳನ್ನು ಸಹ ಹೊಂದಿದೆ. ಅವುಗಳನ್ನು ಈ ಹಿಂದೆ ಗಿಜ್‌ಬಾಟ್‌ನಲ್ಲಿ ತಿಳಿಸಿದ್ದೆವು.
ಇಂದಿನ ಲೇಖನದಲ್ಲಿ ವಾಟ್ಸಾಪ್ ಬಳಕೆದಾರರು ಇದುವರೆಗೂ ಸಹ ಬಳಸದೇ ಇರುವ 6 ಫೀಚರ್‌ಗಳನ್ನು ತಿಳಿಸುತ್ತಿದ್ದೇವೆ. ಅವುಗಳು ಯಾವುವು ಎಂದು ಲೇಖನದ ಸ್ಲೈಡರ್‌ನಲ್ಲಿ ಓದಿರಿ.
ವಾಟ್ಸಾಪ್‌ನ 15 ಸೀಕ್ರೇಟ್ ಫೀಚರ್‌ಗಳು; ಬಳಕೆದಾರರು ತಿಳಿಯಲೇಬೇಕು!!

1
ಸ್ಮಾರ್ಟ್‌ಫೋನ್‌ಗಳನ್ನು ಕಾಲಕ್ಕೆ ತಕ್ಕಂತೆ ಬದಲಿಸುವುದು ಎಲ್ಲರೂ ಮಾಡುವ ಚಟುವಟಿಕೆ. ಅಂದಹಾಗೆ ಮೊಬೈಲ್ ಚೇಂಜ್ ಮಾಡಿದಾಗ ಇನ್ನೊಂದು ಮೊಬೈಲ್‌ನಲ್ಲಿ ಹೊಸದಾಗಿ ವಾಟ್ಸಾಪ್ ಇನ್‌ಸ್ಟಾಲ್ ಮಾಡಲೇಬೇಕಾಗಿರುತ್ತದೆ. ಹೊಸ ಮೊಬೈಲ್‌ನಲ್ಲಿ ಹಳೆಯ ಮೆಸೇಜ್‌ಗಳೆಲ್ಲಾ ವರುವುದಿಲ್ಲ. ನೀವು ಅಗತ್ಯವಾಗಿ ಆ ಮೆಸೇಜ್‌ಗಳನ್ನು ಪಡೆಯಬೇಕಾದಲ್ಲಿ ಗೂಗಲ್ ಡ್ರೈವ್ ಮುಖಾಂತರ ಪಡೆಯಬಹುದು ಅಥವಾ 'ಸೆಟ್ಟಿಂಗ್ಸ್>>ಚಾಟ್ಸ್>> ಚಾಟ್ ಬ್ಯಾಕಪ್'ಗೆ ಹೋಗಿ ಸಹ ಪಡೆಯಬಹುದು.

2
ನಿಮ್ಮ ನೆಚ್ಚಿನ ಚಾಟ್ ಅಥವಾ ಮೆಸೇಜ್‌ಗಳನ್ನು ಗುರುತಿಸಲು 'Starring' ಎಂಬ ಫೀಚರ್ ಇದೆ. ಆಕ್ಸೆಸ್‌ಗಾಗಿ ನಿಮ್ಮ ಚಾಟ್ ಅಥವಾ ಮೆಸೇಜ್‌ಗಳನ್ನು ಹೋಲ್ಡ್ ಮಾಡಿ, ನಂತರ ಚಾಟ್ ವಿಂಡೋ ಮೇಲೆ ಸ್ಟಾರ್ (*) ಐಕಾನ್ ಕಾಣುತ್ತದೆ. ಅದನ್ನು ಟ್ಯಾಪ್ ಮಾಡಿರಿ. ಈ ಮೆಸೇಜ್‌ಗಳನ್ನು ನಿಮಗೆ ಬೇಕಾದಾಗ ಓಪನ್ ಮಾಡಲು Settings>>Srarred messages ಹೋಗಿ. ಇಲ್ಲಿ ನಿಮ್ಮ ನೆಚ್ಚಿನ ಎಲ್ಲಾ ಮೆಸೇಜ್‌ಗಳು ಸ್ಟೋರ್ ಆಗಿರುತ್ತವೆ.

3
ನಿಮ್ಮ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಮಾರ್ಶ್‌ಮಲ್ಲೋ ಓಎಸ್‌ನಿಂದ ರನ್ ಆಗುತ್ತಿದ್ದಲ್ಲಿ, ಆಂಡ್ರಾಯ್ಡ್ ನೇರ ಶೇರಿಂಗ್ ಫೀಚರ್ ಪಡೆಯಬಹುದು. ಈ ಫೀಚರ್‌ನಿಂದ ನೀವು ಹೆಚ್ಚು ಶೇರ್ ಮಾಡುವ ಗ್ರೂಪ್‌ಗಳಿಗೆ ಮತ್ತು ಸಂಪರ್ಕಗಳಿಗೆ ವೆಬ್ ಪೇಜ್ ಅನ್ನು ಶೇರ್ ಮಾಡಲು ವಿಂಡೋ ಓಪನ್ ಆಗುತ್ತದೆ. ಇದರಿಂದ ಎಲ್ಲಾ ಸಂಪರ್ಕಗಳನ್ನು ಹುಡುಕಿ ಹುಡುಕಿ ಶೇರ್ ಮಾಡಲು ಸರ್ಕಸ್ ಮಾಡಬೇಕಿಲ್ಲ.

4
ಭಾರತೀಯ ಭಾಷೆಗಳನ್ನು ಸಪೋರ್ಟ್ ಮಾಡುವ ಕೆಲವು ಆಪ್‌ಗಳಲ್ಲಿ ವಾಟ್ಸಾಪ್ ಸಹ ಒಂದಾಗಿದೆ. ವಾಟ್ಸಾಪ್‌ನಲ್ಲಿ 12 ಭಾರತೀಯ ಭಾಷೆಗಳಲ್ಲಿ ಮೆಸೇಜ್ ಮಾಡಬಹುದಾಗಿದ್ದು ಹಿಂದಿ, ಉರ್ದು, ಬೆಂಗಾಲಿ ಮಾತ್ರವಲ್ಲದೇ ಆಪ್ ಭಾಷೆ ಬದಲಿಸಲು ಸೆಟ್ಟಿಂಗ್ಸ್>>ಚಾಟ್ಸ್>>ಆಪ್ ಲಾಂಗ್ವೇಜ್'ಗೆ ಹೋಗಿ ಭಾಷೆ ಬದಲಿಸಿ. ಮೆಸೇಜ್ ಭಾಷೆ ಚೇಂಜ್ ಮಾಡಲು ಸೆಟ್ಟಿಂಗ್ಸ್>>ಲಾಂಗ್ವೇಜ್ ಅಂಡ್ ಇನ್‌ಪುಟ್>> ಕೀಬೋರ್ಡ್ ಮತ್ತು ಇನ್‌ಪುಟ್ ಮೆಥಾಡ್ಸ್>> ಗೂಗಲ್ ಇಂಡಿಕ್ ಕೀಬೋರ್ಡ್ ಸೆಲೆಕ್ಟ್ ಮಾಡಿರಿ.

5
ವಾಟ್ಸಾಪ್‌ನಲ್ಲಿ ಹಲವು ಗ್ರೂಪ್‌ಗಳಿರುತ್ತವೆ. ನೀವು ಹೆಚ್ಚು ಚಾಟ್ ಮಾಡುವ ಗ್ರೂಪ್ ಅನ್ನು ಯಾವಾಗಲು ಹುಡುಕಿ ತೆಗೆಯುವುದಕ್ಕಿಂತ ಶಾರ್ಟ್ ಕಟ್ ಮಾಡಿ ಗ್ರೂಪ್ ಅನ್ನು ಫೋನ್‌ನ ಹೋಮ್ ಸ್ಕ್ರೀನ್‌ನಲ್ಲಿ ಐಕಾನ್ ಆಗಿ ಅಥವಾ ಇತರೆ ಆಪ್ ಕಾಣುವ ರೀತಿಯಲ್ಲಿ ಇಡಬಹುದು. ವಾಟ್ಸಾಪ್ ಚಾಟ್‌ನಲ್ಲಿ ನಿಮ್ಮ ನೆಚ್ಚಿನ ಗ್ರೂಪ್ ಅನ್ನು ಹೋಲ್ಡ್ ಮಾಡಿ ನಂತರ 'Add chat shortcut' ಆಯ್ಕೆ ಮಾಡಿ. ನಂತರ ಹೋಮ್ ಸ್ಕ್ರೀನ್ ನಲ್ಲಿ ಗ್ರೂಪ್‌ನ ಐಕಾನ್ ಇರುತ್ತದೆ.

6
ಹಲವರಿಗೆ ಒಮ್ಮೆಯೇ ಇಮೇಲ್ ಕಳುಹಿಸುವಂತೆ ಈ ಫೀಚರ್ ವರ್ಕ್ ಆಗುತ್ತದೆ. ಸಾಮಾನ್ಯ ಮಸೇಜ್ ಅನ್ನು ಎಲ್ಲರಿಗೂ ಒಮ್ಮೆಯೇ ಕಳುಹಿಸಲು ಮೆನು ಬಟನ್‌ಗೆ ಹೋಗಿ 'new broadcast' ಸೆಲೆಕ್ಟ್ ಮಾಡಿ. ಇದು ಹೆಸರು, ನಂಬರ್‌ಗಳನ್ನು ಆಯ್ಕೆ ಮಾಡಲು ಕೇಳುತ್ತದೆ. ನಿಮ್ಮ ಸಂಪರ್ಕಗಳನ್ನು ಫೋನ್ ಬುಕ್‌ನಿಂದ ಆಯ್ಕೆ ಮಾಡಿ. ಈ ಫೀಚರ್‌ನಿಂದ ಇತರರಿಗೂ ಇದೇ ಮೆಸೇಜ್ ಕಳುಹಿಸಲಾಗಿದೆ ಎಂದು ತಿಳಿಯುವುದಿಲ್ಲ.

7
ವಾಟ್ಸಾಪ್‌ನಲ್ಲಿ ಸೆಂಡ್ ಮಾಡುವ ಟೆಕ್ಸ್ಟ್ ಅನ್ನು ವಿವಿಧ ಫಾರ್ಮ್ಯಾಟ್‌ಗಳಲ್ಲಿ ಸಿಂಬಲ್ ಅನ್ನು ಟೆಕ್ಸ್ಟ್ ಮೊದಲಿಗೆ ಮತ್ತು ನಂತರ ಟೈಪಿಸಿ ಕಳುಹಿಸಬಹುದಾಗಿದೆ. ಉದಾಹರಣೆಗೆ ಟೆಕ್ಸ್ಟ್ ಬೋಲ್ಡ್ ಆಗಬೇಕಾದಲ್ಲಿ *NATURE*, ಇಟಾಲಿಕ್‌ಗಾಗಿ -NATURE-, ಸ್ಟ್ರೈಕ್‌ಥ್ರೂಗಾಗಿ ~NATURE~ ಎಂದು ಟೈಪಿಸಬೇಕು.

8
ಕೆಲವು ವಾಟ್ಸಾಪ್ ಗ್ರೂಪ್‌ಗಳಲ್ಲಿ ಆಗಾಗ ಚಾಟಿಂಗ್ ನಿರಂತರವಾಗಿರುತ್ತೆ. ಅದು ಕಿರಿಕಿರಿಯು ಸಹ ನಿಮಗೆ. ಅಂತಹ ಸಂದರ್ಭದಲ್ಲಿ ಕೆಲವು ನಿರ್ಧಿಷ್ಟ ಸಮಯದ ವರೆಗೆ ಆ ಗ್ರೂಪ್ ಅನ್ನು ಮ್ಯೂಟ್ ಮಾಡಬಹುದು. ಚಾಟ್>>ಸೆಲೆಕ್ಟ್ ಗ್ರೂಪ್>>ಮ್ಯೂಟ್>>ಮ್ಯೂಟ್ ಅವಧಿ ಆಯ್ಕೆ ಮಾಡಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470