ಗೂಗಲ್‌ 'ತೇಜ್' ಮೂಲಕ ಹಣ ಸೆಂಡ್ ಮಾಡುವುದು ಹೇಗೆ?..ಆಪ್ ಹೇಗೆ ವರ್ಕ್‌ ಆಗುತ್ತೆ?!

ಗೂಗಲ್‌ನ ತೇಜ್ 'TeZ' ಆಪ್ ಮೂಲಕ ಸಮೀಪದ ಮೊಬೈಲ್‌ ಫೋನ್‌ ಜತೆಗೆ ಸಂಪರ್ಕ ಸಾಧಿಸಿ ಸುಲಭವಾಗಿ ಹಣ ವರ್ಗಾವಣೆ ಮಾಡಬಹುದಾಗಿದೆ.!!

|

ಆಪ್‌ ಪೇಮೆಂಟ್ ವ್ಯವಸ್ಥೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ಗೂಗಲ್‌ನ ತೇಜ್ 'TeZ' ಆಪ್ ಮೂಲಕ ಸಮೀಪದ ಮೊಬೈಲ್‌ ಫೋನ್‌ ಜತೆಗೆ ಸಂಪರ್ಕ ಸಾಧಿಸಿ ಸುಲಭವಾಗಿ ಹಣ ವರ್ಗಾವಣೆ ಮಾಡಬಹುದಾಗಿದೆ.!! ಮೈಕ್ರೋಫೋನ್ ಮತ್ತು ಸ್ಪೀಕರ್‌ ಮುಖಾಂತರ ಅಲ್ಟ್ರಾಸೌಂಡ್ ಕಿರಣಗಳನ್ನು ಬಳಸಿ ಹತ್ತಿರದ ಫೋನ್‌ ಜತೆಯೂ ಈ ಆಪ್ ಸಂಪರ್ಕ ಸಾಧಿಸುತ್ತದೆ.!!

ಗೂಗಲ್‌ ಪ್ಲೇ ಅಲ್ಲಿ Tez ಆಪ್‌ ಉಚಿತ ಡೌನ್‌ಲೋಡ್‌ಗೆ ಲಭ್ಯವಿದ್ದು, ತೇಜ್ 'TeZ' ಆಪ್ ಮೂಲಕ ನೀವು ಹಣ ಕಳುಹಿಸಲು ನಿಮ್ಮ ಪಕ್ಕದಲ್ಲಿರುವವರು ಕೂಡ ಈ ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಆಪ್ ಬಳಕೆಗೆ ಅವಕಾಶವಿದೆ.!! ಹಾಗಾದರೆ, Tez ಪೇಮೆಂಟ್ ಆಪ್ ಬಳಕೆ ಹೇಗೆ ಎಂಬುದನ್ನು ಕೆಳಗಿಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

Tez ಆಪ್‌ ಬಳಕೆ ಹೇಗೆ?..ಹಂತ 1

Tez ಆಪ್‌ ಬಳಕೆ ಹೇಗೆ?..ಹಂತ 1

Tez ಆಪ್‌ ಡೌನ್‌ಲೋಡ್ ಮಾಡಿದ ನಂತರ ಕನ್ನಡ, ಇಂಗ್ಲಿಷ್‌, ಹಿಂದಿ, ಬೆಂಗಾಲಿ, ಗುಜರಾತಿ, ಮರಾಠಿ, ತೆಲುಗು ಹಾಗೂ ತಮಿಳು ಸೇರಿ ಎಂಟು ಭಾಷೆಗಳಲ್ಲಿ ಒಂದನ್ನು ಆಯ್ಕೆ ಮಾಡಿ ಮುಂದುವರಿಯಬೇಕು. ನಂತರ ಬಳಕೆಯಲ್ಲಿರುವ ನಿಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿ. ಆ ಸಂಖ್ಯೆಯು ಬ್ಯಾಂಕ್‌ ಖಾತೆಯೊಂದಿಗೆ ಸಂಪರ್ಕಿಸಿರಬೇಕು.

Tez ಆಪ್‌ ಬಳಕೆ ಹೇಗೆ?..ಹಂತ 2

Tez ಆಪ್‌ ಬಳಕೆ ಹೇಗೆ?..ಹಂತ 2

ನಿಮ್ಮ ಮೊಬೈಲ್‌ ಸಂಪರ್ಕ ಸಂಖ್ಯೆ, ಸಂದೇಶ ಹಾಗೂ ಸ್ಥಳದ ಮಾಹಿತಿ ಗಮನಿಸಲು Tez ಆಪ್‌ ಅವಕಾಶ ಕೇಳುತ್ತದೆ. ಅದಕ್ಕೆ ಸಮ್ಮತಿಸಿ. ನಂತರ ಜಿಮೇಲ್‌ನ ಐಡಿ ಹಾಗೂ ಹೆಸರು ಕಾಣುವ ಜತೆಗೆ ಸೇವೆ ಮತ್ತು ಖಾಸಗಿ ನಿಯಮಗಳಿಗೆ ಒಪ್ಪಿಗೆ ಕೇಳುತ್ತದೆ. ಒಪ್ಪಿಗೆ ನೀಡಿ.!

Tez ಆಪ್‌ ಬಳಕೆ ಹೇಗೆ?..ಹಂತ 3

Tez ಆಪ್‌ ಬಳಕೆ ಹೇಗೆ?..ಹಂತ 3

ಸೇವೆ ಮತ್ತು ಖಾಸಗಿ ನಿಯಮಗಳಿಗೆ ಒಪ್ಪಿಗೆ ನೀಡಿದ ನಂತರ ನಿಮ್ಮ ಮೊಬೈಲ್‌ಗೆ ಒಟಿಪಿ ರವಾನೆಯಾಗುತ್ತದೆ. ಆ ಒಟಿಪಿ ಸಂಖ್ಯೆಯನ್ನು ಹಾಕಿ ಹಣ ಸೆಂಡ್ ಮಾಡುವ ಆಯ್ಕೆಯನ್ನು ಪಡೆಯಬಹುದು. ಈ ವೇಳೆಯಲ್ಲಿ ಹಣ ವರ್ಗಾವಣೆಯಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಪ್ಯಾಟ್ರನ್ ಲಾಕ್‌ ಅಥವಾ ಗೂಗಲ್ ಪಿನ್ ಕೇಳುತ್ತದೆ.!!

Tez ಆಪ್‌ ಬಳಕೆ ಹೇಗೆ?..ಹಂತ 4

Tez ಆಪ್‌ ಬಳಕೆ ಹೇಗೆ?..ಹಂತ 4

ಒಟಿಪಿ ಸಂಖ್ಯೆಯನ್ನು ಹಾಕಿ ಹಣ ಸೆಂಡ್ ಮಾಡುವ ಆಯ್ಕೆಯನ್ನು ಪಡೆದ ನಂತರ ಹಲವು ರೀತಿಯಲ್ಲಿ ಹಣ ವರ್ಗಾವಣೆ ಸಾಧ್ಯವಿದೆ.! ಮೊಬೈಲ್‌ ಅಥವಾ ಬ್ಯಾಂಕ್‌ ಖಾತೆ ಸಂಖ್ಯೆ ಬಳಸಿ ಹಣ ವರ್ಗಾವಣೆ ಮಾಡಬಹುದು. ಹಲವು ಬ್ಯಾಂಕ್‌ ಖಾತೆಗಳ ಸಂಖ್ಯೆ ನಮೂದಿಸಿ ವಹಿವಾಟು ನಡೆಸಲು ಅವಕಾಶ ಲಭ್ಯವಿದೆ.!!

ಆಫ್‌ಲೈನ್ ಹಣ ಸಂದಾಯ!!

ಆಫ್‌ಲೈನ್ ಹಣ ಸಂದಾಯ!!

ಮೈಕ್ರೋಫೋನ್ ಮತ್ತು ಸ್ಪೀಕರ್‌ ಮುಖಾಂತರ ಅಲ್ಟ್ರಾಸೌಂಡ್ ಕಿರಣಗಳನ್ನು ಬಳಸಿ ಹತ್ತಿರದ ಫೋನ್‌ ಜತೆ ಸಂಪರ್ಕ ಸಾಧಿಸಿ ಹಣ ಸೆಂಡ್ ಮಾಡಬಹುದು.!! ಶೇರ್‌ಇಟ್ ಆಪ್ ಬಳಕೆಯಂತೆ ಈ Tez ಆಪ್‌ ಮೂಲಕ ಹಣ ಸೆಂಡ್ ಮಾಬಹುದಾಗಿದ್ದು ಈ ಕಾರ್ಯ ಬಹಳ ಸುಲಭದ್ದಾಗಿದೆ.!!

Tez ಆಪ್‌ ಬಳಸಿ ಬಹುಮಾನ ಗೆಲ್ಲಿ!!

Tez ಆಪ್‌ ಬಳಸಿ ಬಹುಮಾನ ಗೆಲ್ಲಿ!!

ಗೂಗಲ್ ತನ್ನ ಆಪ್‌ ಅನ್ನು ಜನಪ್ರಿಯಗೊಳಿಸಲು ಬಹುಮಾನ ಗೆಲ್ಲುವ ಆಯ್ಕೆ ನೀಡಿದ್ದು, ತೇಜ್ ಸ್ಕ್ರಾಚ್ ಕಾರ್ಡ್‌ನಿಂದ ಪ್ರತಿ ವಹಿವಾಟಿನ ಮೇಲೆ 1000 ಬಹುಮಾನ ಗೆಲ್ಲಬಹುದಾಗಿದೆ.!! ಜೊತೆಗೆ ಪ್ರತಿ ಭಾನುವಾರ ನಡೆಯುವ ವಿಶೇಷ ಸ್ಪರ್ಧೆಯಲ್ಲಿ 1 ಲಕ್ಷದವರೆಗೂ ಬಹುಮಾನ ಗೆಲ್ಲುವ ಅವಕಾಶವಿದೆ.!!

</a></strong><a class=999 ರೂ.ಗೆ ಅತ್ಯುತ್ತಮ ಝೆಬ್ರೋನಿಕ್ಸ್ ಬ್ಲೂಟೂತ್ ಇಯರ್‌ಫೋನ್!!" title="999 ರೂ.ಗೆ ಅತ್ಯುತ್ತಮ ಝೆಬ್ರೋನಿಕ್ಸ್ ಬ್ಲೂಟೂತ್ ಇಯರ್‌ಫೋನ್!!" loading="lazy" width="100" height="56" />999 ರೂ.ಗೆ ಅತ್ಯುತ್ತಮ ಝೆಬ್ರೋನಿಕ್ಸ್ ಬ್ಲೂಟೂತ್ ಇಯರ್‌ಫೋನ್!!

Best Mobiles in India

Read more about:
English summary
Google payment app Tez sees a slow start; people call it “buggy”.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X