ಕ್ಲೌಡ್‌ ಸ್ಟೋರೇಜ್‌ ಮೂಲಕವೇ ಫೈಲ್‌ಗಳನ್ನು ಶೇರ್ ಮಾಡುವುದು ಹೇಗೆ?

ತಂತ್ರಜ್ಞಾನ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಈ ಕಾಲದಲ್ಲಿ ಜಾಣತನದಿಂದ ತಂತ್ರಜ್ಞಾನ ಬಳಸಿದರೆ ನಾವು ನಮ್ಮ ಕೆಲಸಗಳನ್ನು ಸುಲಭವಾಗಿಸಿಕೊಳ್ಳಲು ಸಾಧ್ಯವಿದೆ.

|

ತಂತ್ರಜ್ಞಾನ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಈ ಕಾಲದಲ್ಲಿ ಜಾಣತನದಿಂದ ತಂತ್ರಜ್ಞಾನ ಬಳಸಿದರೆ ನಾವು ನಮ್ಮ ಕೆಲಸಗಳನ್ನು ಸುಲಭವಾಗಿಸಿಕೊಳ್ಳಲು ಸಾಧ್ಯವಿದೆ. ಇದಕ್ಕಾಗಿ ನಮಗೆ ಹೆಚ್ಚೇನು ತರಬೇತಿಯೇನೂ ಬೇಕಾಗಿಲ್ಲ, ಆದರೆ, ತಂತ್ರಜ್ಞಾನದ ಅವಿಷ್ಕಾರಗಳ ಬಗ್ಗೆ ಸ್ವಲ್ಪ ಆಸಕ್ತಿಯನ್ನು ನೀವು ಹೊಂದಿದ್ದರೆ ಸಾಕು.

ಉದಾಹರಣೆಗೆ ನಮ್ಮ ಬಳಿಯಲ್ಲಿರುವ ಫೋಟೊ, ವಿಡಿಯೊ, ಆಡಿಯೊ, ಪಿಡಿಎಫ್, ಡಾಕ್ಯುಮೆಂಟ್ ಎಕ್ಸ್‌ಎಲ್‌ ಫೈಲ್‌ಗಳನ್ನು ನಾವು ಇಮೇಲ್‌ ಮೂಲಕ ಇತರರಿಗೆ ಕಳಿಸುವುದು ರೂಢಿ.ಕೆಲವು ಎಂ.ಬಿ.ಗಳಷ್ಟಿರುವ ಫೈಲ್‌ಗಳನ್ನು ನೇರವಾಗಿ ಮೇಲ್‌ಗೆ ಅಟ್ಯಾಚ್‌ ಮಾಡಿ ಕಳಿಸಬಹುದು. ಆದರೆ, ಹೆಚ್ಚಿನ ಗಾತ್ರದ ಫೈಲ್‌ಗಳನ್ನು ಮೇಲ್‌ ಮೂಲಕ ಕಳಿಸುವುದು ಕಿರಿಕಿರಿ ಅಲ್ಲವೇ.?

 ಕ್ಲೌಡ್‌ ಸ್ಟೋರೇಜ್‌ ಮೂಲಕವೇ ಫೈಲ್‌ಗಳನ್ನು ಶೇರ್ ಮಾಡುವುದು ಹೇಗೆ?

ಹಾಗಾಗಿ, ನೀವು ನಿಮ್ಮ ಡಿವೈಸ್‌ಗಳನ್ನು ಕ್ಲೌಡ್‌ ಸ್ಟೋರೇಜ್‌ಗೆ ಸಿಂಕ್‌ ಮಾಡಿದ್ದರೆ ನಿಮ್ಮ ಬಹುತೇಕ ಫೈಲ್‌ಗಳು ಅಲ್ಲಿ ಸೇವ್ ಆಗಿರುತ್ತವೆ. ಇವೇ ಫೈಲ್‌ಗಳನ್ನು ಮತ್ತೆ ನೀವು ಮೇಲ್‌ಗೆ ಅಟ್ಯಾಚ್ ಮಾಡಿ ಕಳಿಸುವ ಅಗತ್ಯವಿಲ್ಲ. ಕ್ಲೌಡ್‌ ಸ್ಟೋರೇಜ್‌ನಲ್ಲಿರುವ ಫೈಲ್‌ಗಳ ಲಿಂಕ್‌ ಅನ್ನು ನೀವು ಮೇಲ್‌ ಮೂಲಕ ಹಂಚಿಕೊಂಡರೆ ಸಾಕು ಆ ಡೇಟಾ ಅವರಿಗೆ ತಲುಪಿರುತ್ತದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಡ್ರೈವ್‌ನಲ್ಲಿರುವ ಫೈಲ್‌ನ ಲಿಂಕ್‌ ಶೇರ್‌ ಮಾಡುವ ವೇಳೆ ನೀವು ಕಳಿಸುವವರಿಗೆ ಅದನ್ನು ಅಕ್ಸೆಸ್‌ ಮಾಡುವ ಪರ್ಮಿಷನ್ ಕೇಳುತ್ತದೆ. ಇಲ್ಲಿ ನೀವು ಪರ್ಮಿಷನ್‌ಗೆ ಓಕೆ ಒತ್ತಿದರೆ ಆಯಿತು. ನೀವು ಕಳಿಸಿದ ಫೈಲ್‌ನ ಲಿಂಕ್‌ ಅನ್ನು ನಿಮ್ಮವರು ಅಕ್ಸೆಸ್‌ ಮಾಡಬಹುದು. ನಂತರ ಈ ಲಿಂಕ್ ಕ್ಷಣಮಾತ್ರದಲ್ಲಿ ಅವರಿಗೆ ಸೆಂಡ್ ಆಗುತ್ತದೆ.

 ಕ್ಲೌಡ್‌ ಸ್ಟೋರೇಜ್‌ ಮೂಲಕವೇ ಫೈಲ್‌ಗಳನ್ನು ಶೇರ್ ಮಾಡುವುದು ಹೇಗೆ?

ಗೂಗಲ್‌ ಡ್ರೈವ್‌, ಯಾಹೂ ಡ್ರೈವ್‌, ಮೈಕ್ರೊಸಾಫ್ಟ್‌ನ ಒನ್‌ಡ್ರೈವ್‌ನ ಕ್ಲೌಡ್‌ ಸ್ಟೋರೇಜ್‌ನಲ್ಲಿ ಸೇವ್‌ ಆಗಿರುವ ನಿಮ್ಮ ಫೈಲ್‌ಗಳನ್ನು ಮತ್ತೆ ನೀವು ಮೇಲ್‌ಗೆ ಅಟ್ಯಾಚ್‌ ಮಾಡಿ ಕಳಿಸುವ ಅಗತ್ಯವಿಲ್ಲ. ಹಾಗಾಗಿ, ಮೇಲ್‌ ಮೂಲಕ ಅಟ್ಯಾಚ್‌ ಮಾಡಿ ಫೈಲ್‌ ಕಳಿಸುವ ಬದಲಿಗೆ ನಿಮ್ಮ ಕ್ಲೌಡ್‌ ಸ್ಟೋರೇಜ್‌ನಲ್ಲಿರುವ ಫೈಲ್‌ಗಳ ಲಿಂಕ್‌ ಅನ್ನು ಶೇರ್‌ ಮಾಡಿ ಸಮಯ ಉಳಿಸಬಹುದು.

Best Mobiles in India

English summary
Many people who use cloud storage for sharing find it beneficial. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X