Subscribe to Gizbot

ಬ್ರಾಡ್‌ಬ್ಯಾಂಡ್‌ಗಿಂತಲೂ ಅತೀ ಕಡಿಮೆ ಬೆಲೆಗೆ, ಅತೀ ವೇಗದ ನೆಟ್‌‌ಅನ್ನು PCಗೆ ಪಡೆಯುವುದು ಹೇಗೆ..?

Written By:

ಇಂದಿನ ದಿನದಲ್ಲಿ ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರದ ಕಾವು ಹೆಚ್ಚಾಗಿದ್ದು, ಪ್ರತಿ ಟೆಲಿಕಾಂ ಕಂಪನಿಗಳು ದಿನಕ್ಕೊಂದು ಹೊಸ ಪ್ಲಾನ್‌ಗಳನ್ನು ಬಿಡುಗಡೆ ಮಾಡುತ್ತಿದೆ. 4G ವೇಗದ ಡೇಟಾ ಅತೀ ಕಡಿಮೆ ಬೆಲೆಗೆ ದೊರೆಯುತ್ತಿದೆ. ಬ್ರಾಡ್ ಬ್ಯಾಂಡ್ ಗೆ ಹೋಲಿಕೆ ಮಾಡಿಕೊಂಡರೆ ಮೊಬೈಲ್ ಡೇಟಾ ದರ ಕಡಿಮೆ ಇದೆ, ಅಲ್ಲದೇ ವೇಗವನ್ನು ಹೊಂದಿದೆ.

 ಅತೀ ಕಡಿಮೆ ಬೆಲೆಗೆ, ಅತೀ ವೇಗದ ನೆಟ್‌‌ಅನ್ನು PCಗೆ ಪಡೆಯುವುದು ಹೇಗೆ..?

ಓದಿರಿ: ನಡುಗಿದೆ ಸ್ಮಾರ್ಟ್‌ಫೋನ್‌ ಲೋಕ: ರೂ.5000ಕ್ಕೆ ನೋಕಿಯಾ 1 ಉತ್ತಮ ಬ್ಯಾಟರಿ, ಕ್ಯಾಮೆರಾದೊಂದಿಗೆ..!

ಈ ಹಿನ್ನಲೆಯಲ್ಲಿ ಮೊಬೈಲ್ ಅನ್ನು ಕಂಪ್ಯೂಟರ್ ನೊಂದಿಗೆ ಸಂಪರ್ಕಿಸಿಕೊಂಡು ಇಂಟರ್ನೆಟ್ ಸೇವೆಯನ್ನು ಪಡೆಯಬಹುದಾಗಿದೆ. ನಿಮಗೆ ಸ್ಮಾರ್ಟ್‌ಫೋನ್‌ನಿಂದ ಲಾಪ್‌ಟಾಪ್‌ಗೆ ಯಾವ ಮಾದರಿಯಲ್ಲಿ ಡೇಟಾವನ್ನು ಪಡೆಯಬಹುದು ಎಂಬುದು ತಿಳಿದಿದೆ ಆದರೆ ನಿಮ್ಮ ಪರ್ನಸಲ್ ಕಂಪ್ಯೂಟರ್‌ಗೆ ಹೇಗೆ ಪಡೆಯುವುದು ಎನ್ನುವುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
How to Sharing a Mobile Data Connection with Your PC (KANNADA)
ಹಂತ 01:

ಹಂತ 01:

ಮೊಬೈಲ್ ನಿಂದ ಕಂಪ್ಯೂಟರ್‌ ಅನ್ನು ಕನೆಕ್ಟ್ ಮಾಡಿಕೊಳ್ಳಲು ಒಂದು ಯುಎಸ್‌ಬಿ ಡೇಟಾ ಕೇಬಲ್ ಅಗತ್ಯತೆ ಇದೆ ಎನ್ನಲಾಗಿದೆ. ಈ ಕೇಬಲ್ ಮೂಲಕ ನಿಮ್ಮ ಫೋನ್‌ ಮತ್ತು ಕಂಪ್ಯೂಟರ್ ನಡುವೆ ಸಂಪರ್ಕ ಸಾಧಿಸಿ.

ಹಂತ ೦2:

ಹಂತ ೦2:

ಇದಾದ ನಂತರದಲ್ಲಿ ನಿಮ್ಮ ಮೊಬೈಲ್‌ನಲ್ಲಿ ಡೇಟಾವನ್ನು ಆನ್‌ ಮಾಡಿಕೊಳ್ಳಿ, ಇದಾದ ನಂತರದಲ್ಲಿ ಹಾಟ್‌ ಸ್ಪಾಟ್‌ ಅನ್ನು ಆನ್‌ ಮಾಡಿರಿ. ಇದಾದ ನಂತರದಲ್ಲಿ ನಿಮ್ಮ ಹಾಟ್‌ಸ್ಪಾಟ್‌ ನಲ್ಲಿ USB ಟೆಥರಿಂಗ್ ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಿ.

ಹಂತ 03:

ಹಂತ 03:

ಈ ರೀತಿಯಲ್ಲಿ ಕನೆಕ್ಟ್ ಮಾಡಿದ ನಂತರದಲ್ಲಿ ನಿಮ್ಮ ಕಂಪ್ಯೂಟರ್ ಸ್ಮಾರ್ಟ್‌ಫೋನ್‌ನೊಂದಿಗೆ ಕಾರ್ಯನಿರ್ವಹಿಸಲು ಮುಂದಾಗುತ್ತದೆ. ಇದಾದ ನಂತರದಲ್ಲಿ ನಿಮ್ಮ ಕಂಪ್ಯೂಟರ್ ಮೊಬೈಲ್ ಡೇಟಾದಿಂದ ಕಾರ್ಯನಿರ್ವಹಿಸಲು ಶುರು ಮಾಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
How to Sharing a Mobile Data Connection with Your PC. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot