ನಡುಗಿದೆ ಸ್ಮಾರ್ಟ್‌ಫೋನ್‌ ಲೋಕ: ರೂ.5000ಕ್ಕೆ ನೋಕಿಯಾ 1 ಉತ್ತಮ ಬ್ಯಾಟರಿ, ಕ್ಯಾಮೆರಾದೊಂದಿಗೆ..!

|

ನೋಕಿಯಾ ಸ್ಮಾರ್ಟ್‌ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು, ಆದರೆ ಚೀನಾದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮುಂದೆ ನೋಕಿಯಾ ಆಟ ನಡೆಯುತ್ತಿಲ್ಲ. ಈ ಹಿನ್ನಲೆಯಲ್ಲಿ ನೋಕಿಯಾ ಚೀನಾ ಸ್ಮಾರ್ಟ್‌ಫೋನ್‌ಗಳ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಲು ಸನಿಹದಲ್ಲಿದೆ.

 ರೂ.5000ಕ್ಕೆ ನೋಕಿಯಾ 1  ಉತ್ತಮ ಬ್ಯಾಟರಿ, ಕ್ಯಾಮೆರಾದೊಂದಿಗೆ..!

ಓದಿರಿ: ಫೇಸ್‌ಬುಕ್ ಖಾತೆ ತೆರೆಯಲು ಆಧಾರ್ ಕಡ್ಡಾಯ..! ಫೇಸ್‌ಬುಕ್‌-ಆಧಾರ್ ಲಿಂಕ್..?

ಮೂಲಗಳ ಪ್ರಕಾರ ನೋಕಿಯಾ 1 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು HMD ಗ್ಲೋಬಲ್ ಸಂಸ್ಥೆಯೂ ಮಂದಾಗಿದ್ದು, ಇದು ನೋಕಿಯಾ 2 ಗಿಂತಲೂ ಕಡಿಮೆ ಬೆಲೆಗೆ ದೊರೆಯಲಿದ್ದು, ಉತ್ತಮವಾದ ಗುಣವಿಶೇಷತೆಗಳನ್ನು ಒಳಗೊಂಡಿರುವುದಲ್ಲದೇ ಆಂಡ್ರಾಯ್ಡ್ ಓನ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ನೋಕಿಯಾದ ಮೊದಲ ಆಂಡ್ರಾಯ್ಡ್ ಒನ್ ಫೋನ್..!

ನೋಕಿಯಾದ ಮೊದಲ ಆಂಡ್ರಾಯ್ಡ್ ಒನ್ ಫೋನ್..!

ನೋಕಿಯಾ 2018 ರಲ್ಲಿ ಬಿಡುಗಡೆಯನ್ನು ಮಾಡಲು ಸಿದ್ದತೆ ನಡೆಸಿದರುವ ನೋಕಿಯಾ 1 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಓನ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದೇ ನೋಕಿಯಾದ ಮೊದಲ ಆಂಡ್ರಾಯ್ಡ್ ಒನ್ ಸ್ಮಾರ್ಟ್‌ಫೋನ್‌ ಆಗಲಿದೆ.

ಎಂಟ್ರಿ ಲೆವಲ್ ಸ್ಮಾರ್ಟ್‌ಫೋನ್:

ಎಂಟ್ರಿ ಲೆವಲ್ ಸ್ಮಾರ್ಟ್‌ಫೋನ್:

ನೋಕಿಯಾ ಬಿಡುಗಡೆ ಮಾಡಲಿರುವ ಅತೀ ಕಡಿಮೆ ಬೆಲೆಯ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಇದಾಗಿದ್ದು, ಬೆಲೆ ಕಡಿಮೆಯಾದರೂ ಸಹ ಉತ್ತಮ ಗುಣವಿಶೇಷತೆಗಳನ್ನು ಕಾಣಬಹುದಾಗಿದೆ. ಈ ಸ್ಮಾರ್ಟ್‌ಫೋನ್ ಚೀನಾ ಸ್ಮಾರ್ಟ್‌ಫೋನ್‌ಗಳಿಗೆ ಪ್ರಬಲ ಸ್ಪರ್ಧೆಯನ್ನು ನೀಡಲಿದೆ.

ನೋಕಿಯಾ 1 ವಿಶೇಷತೆ:

ನೋಕಿಯಾ 1 ವಿಶೇಷತೆ:

ನೋಕಿಯಾ 1 ಸ್ಮಾರ್ಟ್‌ಫೋನ್ ನಲ್ಲಿ 5 ಇಂಚಿನ HD ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದಲ್ಲದೇ 1GB RAM ಮತ್ತು 8GB ಇಂಟರ್ನಲ್ ಮೆಮೊರಿಯನ್ನು ಈ ಫೋನಿನಲ್ಲಿ ಅಳವಡಿಸಲಾಗಿದ್ದು, ಹಿಂಭಾಗದಲ್ಲಿ ಮುಂಭಾಗದಲ್ಲಿ ಉತ್ತಮ ಕ್ಯಾಮೆರಾವನ್ನು ನೀಡಲಾಗಿದೆ. ಬ್ಯಾಟರಿ ಸಹ ಉತ್ತಮವಾಗಿದೆ.

ಬೆಲೆ:

ಬೆಲೆ:

ಆಂಡ್ರಾಯ್ಡ್ ಒನ್‌ನಲ್ಲಿ ಕಾರ್ಯನಿರ್ವಹಿಸುವ ನೋಕಿಯಾ 1 ಸ್ಮಾರ್ಟ್‌ಫೋನ್ ಅತ್ಯಂತ ಕಡಿಮೆ ಬೆಲೆಗೆ ಎಂದರೆ ರೂ.5000ಕ್ಕೆ ದೊರೆಯಲಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಇದರ ಬೆಲೆ ಇನ್ನು ಕಡಿಮೆ ಇರುವ ಸಾಧ್ಯತೆ ಇದೆ.

Best Mobiles in India

English summary
Nokia 1 Could be HMD’s First Android Go Smartphone With 1GB of RAM, 720p Display, and 8GB of Internal Storage. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X