ಏರ್‌ಟೆಲ್‌ ಬ್ರಾಡ್‌ಬ್ಯಾಂಡ್ ಅನ್ನು ವಿಫೈಬರ್‌ನೊಂದಿಗೆ 100Mbps ವರೆಗೆ ವೇಗಗೊಳಿಸುವುದು ಹೇಗೆ?

By Suneel
|

ಭಾರತಿ ಏರ್‌ಟೆಲ್ ತನ್ನ ಗ್ರಾಹಕರಿಗಾಗಿ ಇತ್ತೀಚೆಗಷ್ಟೆ ವಿ-ಫೈಬರ್ ಬ್ರಾಡ್‌ಬ್ಯಾಂಡ್‌ ಅನ್ನು ಪರಿಚಯಿಸಿದೆ. ಆದರೆ ಹೆಚ್ಚಿನ ವೇಗದ ಇಂಟರ್ನೆಟ್ ಆಕ್ಸೆಸ್‌ಗಾಗಿ ಯಾವುದೇ ರೀತಿಯಲ್ಲಿ ಇತರೆ ಹಣ ವ್ಯಯ ಮಾಡುವ ಅವಶ್ಯಕತೆ ಇಲ್ಲ.

ವಿಶೇಷ ಅಂದ್ರೆ ಏರ್‌ಟೆಲ್‌ ಪರಿಚಯಿಸಿರುವ ವಿ-ಫೈಬರ್ ಸೂಪರ್‌ಫಾಸ್ಟ್ ವೇಗದ ಇಂಟರ್ನೆಟ್, ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ 100 Mbps ವರೆಗೆ ಇಂಟರ್ನೆಟ್ ಆಕ್ಸೆಸ್ ನೀಡುತ್ತದೆ.

500, 1000 ನೋಟು ಬ್ಯಾನ್: ಟೆಲಿಕಾಂ'ಗಳ ಬಿಲ್‌ ಪಾವತಿ ಬಗ್ಗೆ ತಲೆಕೆಡಿಸಿಕೊಳ್ಳದಿರಿ!

ಅಂದಹಾಗೆ ಏರ್‌ಟೆಲ್‌ ಬ್ರಾಡ್‌ಬ್ಯಾಂಡ್ ಗ್ರಾಹಕರು ಈ ಹಿಂದಿನ ಪ್ಲಾನ್‌ಗಳೊಂದಿಗೆ ವಿ-ಫೈಬರ್ ಬೆನಿಫಿಟ್‌ ಅನ್ನು ಪಡೆಯಬಹುದಾಗಿದೆ. ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಕನೆಕ್ಷನ್‌ಗಾಗಿ ಯಾವುದೇ ರೀತಿಯಲ್ಲಿ ಹಣ ವ್ಯಯ ಮಾಡದೇ 3 ತಿಂಗಳವರೆಗೆ ಇದರ ಬೆನಿಫಿಟ್‌ ಅನ್ನು ಪಡೆಯಬಹುದಾಗಿದೆ. ಏರ್‌ಟೆಲ್‌ ಬ್ರಾಡ್‌ಬ್ಯಾಂಡ್‌ ಗ್ರಾಹಕರು ಕೇವಲ ಹೊಸ ಏರ್‌ಟೆಲ್‌ ಮಾಡೆಮ್‌ ಖರೀದಿಸಿ ವಿ-ಫೈಬರ್‌'ಗೆ ಉಚಿತವಾಗಿ ಅಪ್‌ಗ್ರೇಡ್‌ ಆಗಿರಿ. ವಿ-ಫೈಬರ್ ಕನೆಕ್ಷನ್ ಅನ್ನು Airtel.in. ಲಾಗಿನ್‌ ಆಗಿ ಪಡೆಯಬಹುದು. ಅದು ಹೇಗೆ ಎಂದು ಇಂದಿನ ಲೇಖನ ಓದಿ ತಿಳಿಯಿರಿ.

ಈಗಾಗಲೇ ಗ್ರಾಹಕರಾಗಿದ್ದಲ್ಲಿ ಏರ್‌ಟೆಲ್‌ ವೆಬ್‌ಸೈಟ್‌ಗೆ ಭೇಟಿ ನೀಡಿ

ಈಗಾಗಲೇ ಗ್ರಾಹಕರಾಗಿದ್ದಲ್ಲಿ ಏರ್‌ಟೆಲ್‌ ವೆಬ್‌ಸೈಟ್‌ಗೆ ಭೇಟಿ ನೀಡಿ

ಈಗಾಗಲೇ ಏರ್‌ಟೆಲ್‌ ಬ್ರಾಡ್‌ಬ್ಯಾಂಡ್‌ ಗ್ರಾಹಕರಾಗಿದ್ದಲ್ಲಿ, Airtel.in ಗೆ ಲಾಗಿನ್‌ ಆಗಿ. ನಿಮ್ಮ ಪೂರ್ಣ ಹೆಸರು, ಸಂಪರ್ಕ ಮಾಹಿತಿ ಎಂಟರ್ ಮಾಡಿ ಹೊಸ ಮಾಡೆಮ್‌ ಅನ್ನು ಖರೀದಿಸಿ.

ಹೊಸ ಗ್ರಾಹಕರು ಸಹ Aritel.in ಗೆ ಭೇಟಿ ನೀಡಿ

ಹೊಸ ಗ್ರಾಹಕರು ಸಹ Aritel.in ಗೆ ಭೇಟಿ ನೀಡಿ

ನೀವು ಈವರೆಗೆ ಏರ್‌ಟೆಲ್‌ ಬ್ರಾಡ್‌ಬ್ಯಾಂಡ್ ಗ್ರಾಹಕರಾಗಿರದಿದ್ದಲ್ಲಿಯೂ ಸಹ Airtel.in ವೆಬ್‌ಸೈಟ್‌ಗೆ ಲಾಗಿನ್‌ ಆಗಿ ಆಫರ್ ಪಡೆಯಬಹುದು. ವೆಬ್‌ಸೈಟ್‌ಗೆ ಭೇಟಿ ನೀಡಿ 'New Connection' ಆಪ್ಶನ್‌ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಸಿಟಿ ಹೆಸರು, ಮತ್ತು ಬ್ರಾಡ್‌ಬ್ಯಾಂಡ್ ಪ್ಲಾನ್ ಅನ್ನು ಸೆಲೆಕ್ಟ್ ಮಾಡಿ.

ಹೊಸ ಗ್ರಾಹಕರು ಸರಿಯಾದ ಮಾಹಿತಿ ನೀಡಿ

ಹೊಸ ಗ್ರಾಹಕರು ಸರಿಯಾದ ಮಾಹಿತಿ ನೀಡಿ

ಹೊಸ ಬ್ರಾಡ್‌ಬ್ಯಾಂಡ್‌ ಕನೆಕ್ಷನ್‌ಗಾಗಿ, ನಿಖರ ಬ್ರಾಡ್‌ಬ್ಯಾಂಡ್ ಪ್ಲಾನ್‌ ಹೆಸರು ಎಂಟರ್‌ ಮಾಡಿ. ನಂತರ ನಿಮ್ಮ ಸ್ಥಳೀಯ ಮಾಹಿತಿ ಮತ್ತು ಮೊಬೈಲ್ ನಂಬರ್ ಅನ್ನು ಕೇಳಲಾಗುತ್ತದೆ. ವಿವರಗಳನ್ನು ಎಂಟರ್ ಮಾಡಿ 'Confirm Option' ಮೇಲೆ ಕ್ಲಿಕ್ ಮಾಡಿ.

ಏರ್‌ಟೆಲ್‌ ಕಾರ್ಯನಿರ್ವಾಹಕರು ನಿಮಗೆ ಕರೆ ಮಾಡುತ್ತಾರೆ

ಏರ್‌ಟೆಲ್‌ ಕಾರ್ಯನಿರ್ವಾಹಕರು ನಿಮಗೆ ಕರೆ ಮಾಡುತ್ತಾರೆ

ನಿಮ್ಮ ಮಾಹಿತಿ ದೃಢೀಕರಿಸಿದ ನಂತರ, ಏರ್‌ಟೆಲ್‌ ಕಾರ್ಯನಿರ್ವಾಹಕರು ನಿಮ್ಮನ್ನು ಸಂಪರ್ಕ ಮಾಡುತ್ತಾರೆ. 7 ಕೆಲಸದ ದಿನಗಳ ಒಳಗಾಗಿ ಮನೆಗೆ ಬಂದು ಸಂಪರ್ಕ ನೀಡುತ್ತಾರೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
How to Speed Up Your Broadband Connection By Up to 100 Mbps With Airtel VFiber. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X