500, 1000 ನೋಟು ಬ್ಯಾನ್: ಟೆಲಿಕಾಂ'ಗಳ ಬಿಲ್‌ ಪಾವತಿ ಬಗ್ಗೆ ತಲೆಕೆಡಿಸಿಕೊಳ್ಳದಿರಿ!

Written By:

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 500, 1000 ರೂ ನೋಟುಗಳನ್ನು ರದ್ದತಿ ಮಾಡಿದ ಐತಿಹಾಸಿಕ ಕ್ರಮವು ದೇಶದ ಜನತೆ ಮೆಚ್ಚುವಂತಹದು. ಆದರೆ ಸಾಮಾನ್ಯ ಜನ ಸಮೂಹಕ್ಕೆ ಸ್ವಲ್ಪ ಪ್ರಮಾಣದಲ್ಲಿ ಪರಿಣಾಮ ಬೀರಲಿದೆ.

ಅಂದಹಾಗೆ ಇತ್ತ ಹಣವೂ ಇಲ್ಲ, ಅತ್ತ ಎಟಿಎಂ ಸಹ ಇಲ್ಲ. ಆದರೆ ಟೆಲಿಕಾಂ ಬಿಲ್‌ ಪಾವತಿಸುವ ದಿನಾಂಕದ ಗಡುವು ಬಂದೇ ಬಿಟ್ಟಿದೆ. ಆದರೆ ನೀವು ಏರ್‌ಟೆಲ್‌ ಮತ್ತು ವೊಡಾಫೋನ್ ಗ್ರಾಹಕರಾಗಿದ್ದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.

500, 1000 ರೂ ನೋಟು ಬ್ಯಾನ್: ಫ್ಲಿಪ್‌ಕಾರ್ಟ್‌, ಅಮೆಜಾನ್‌ನಲ್ಲಿ 'ಕ್ಯಾಶ್‌ ಆನ್‌ ಡೆಲಿವರಿ' ಬ್ಯಾನ್

ವೊಡಾಫೋನ್‌(Vodafone) ಮತ್ತು ಏರ್‌ಟೆಲ್‌(Airtel) ಟೆಲಿಕಾಂಗಳು ತಮ್ಮ ಗ್ರಾಹಕರ ಲೈಪ್ ಸುಲಭವಾಗಿರಲಿ ಎಂದು ಬಿಲ್ ಪಾವತಿಸುವ ಗಡುವು(ಡೆಡ್‌ಲೈನ್‌) ಅನ್ನು 3 ದಿನಗಳ ಕಾಲ ವಿಸ್ತರಿಸಿವೆ. 500, 1000 ರೂ ನೋಟುಗಳನ್ನು ಹೊರತುಪಡಿಸಿ ಇತರೆ ನೋಟುಗಳು ಇಲ್ಲವಾದಲ್ಲಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಬಿಲ್ ಪಾವತಿ ಮಾಡಲು ನಿಮ್ಮದೇ ಆದ ಸ್ವಯಂ ಕಾಲಾವಕಾಶ ತೆಗೆದುಕೊಳ್ಳಿ. ಈ ಕೆಳಗಿನ ಮಾಹಿತಿಗಳನ್ನು ಗಮನದಲ್ಲಿಟ್ಟು ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಬಿಲ್‌ ಪಾವತಿಯ ದಿನಾಂಕ 3 ದಿನಗಳು ವಿಸ್ತರಣೆ

ಬಿಲ್‌ ಪಾವತಿಯ ದಿನಾಂಕ 3 ದಿನಗಳು ವಿಸ್ತರಣೆ

ದೇಶದಾದ್ಯಂತ ಹಲವು ಜನರು ಡಿಟಿಎಚ್, ಇಂಟರ್ನೆಟ್, ಇತರೆ ಬಿಲ್‌ಗಳನ್ನು ಪಾವತಿಸುವ ದಿನಾಂಕ ಗಡುವು ಮೀರಿದೆ ಎಂದು ಭಯ ಪಡುತ್ತಿದ್ದಾರೆ, ಇನ್ನೂ ಕೆಲವರು ನರೇಂದ್ರ ಮೋದಿ'ರವರ ಮೇಲೆ ಸಿಟ್ಟುಗೊಂಡಿದ್ದಾರೆ. ನೀವು ಏರ್‌ಟೆಲ್‌ ಮತ್ತು ವೊಡಾಫೋನ್ ಗ್ರಾಹಕರಾಗಿದ್ದಲ್ಲಿ 3 ದಿನಗಳ ಕಾಲಾವಕಾಶ ಪಡೆದು ಬಿಲ್ ಪಾವತಿಸಬಹುದು.

ನವೆಂಬರ್ 15 ವೊಡಾಫೋನ್‌ ಗ್ರಾಹಕರಿಗೆ ಕಡೆಯ ದಿನಾಂಕ

ನವೆಂಬರ್ 15 ವೊಡಾಫೋನ್‌ ಗ್ರಾಹಕರಿಗೆ ಕಡೆಯ ದಿನಾಂಕ

ನೀವು ವೊಡಾಫೋನ್ ವೈರ್‌ಲೆಸ್ ಸೇವೆಗೆ ಸಬ್‌ಸ್ಕ್ರೈಬ್‌ ಆಗಿದ್ದಲ್ಲಿ, ಬಿಲ್‌ ಪಾವತಿಸುವ ದಿನಾಂಕ ಗಡುವು ಮೀರಿದ್ದಲ್ಲಿ, ಭಯಪಡುವ ಅವಶ್ಯಕತೆ ಇಲ್ಲ. ವೊಡಾಫೋನ್‌ ಗ್ರಾಹಕರು ನವೆಂಬರ್ 15 ರವರೆಗೆ ಬಿಲ್‌ ಪಾವತಿಸಲು ಸಮಯವಿದೆ. ಅಲ್ಲದೇ ಟೆಲಿಕಾಂ ತನ್ನ ಗ್ರಾಹಕರಿಗೆ ಈ ಕುರಿತು ಮೆಸೇಜ್‌ ಅನ್ನು ಸಹ ಸೆಂಡ್ ಮಾಡಿದೆ.

ಏರ್‌ಟೆಲ್‌, ಪೋಸ್ಟ್‌ಪೇಡ್‌ ಮತ್ತು ಪ್ರೀಪೇಡ್ ಗ್ರಾಹಕರಿಗೆ ವಿಭಿನ್ನ ವಿಶೇಷವಾಗಿದೆ

ಏರ್‌ಟೆಲ್‌, ಪೋಸ್ಟ್‌ಪೇಡ್‌ ಮತ್ತು ಪ್ರೀಪೇಡ್ ಗ್ರಾಹಕರಿಗೆ ವಿಭಿನ್ನ ವಿಶೇಷವಾಗಿದೆ

ಮೊದಲೇ ಹೇಳಿದಂತೆ ಭಾರತಿ ಏರ್‌ಟೆಲ್ ಮೂರು ದಿನಗಳ ಕಾಲ ಬಿಲ್‌ ಪಾವತಿಸುವ ಗಡುವು ದಿನಾಂಕವನ್ನು ವಿಸ್ತರಣೆ ಮಾಡಿದೆ. ವಿಶೇಷ ಅಂದ್ರೆ ಏರ್‌ಟೆಲ್‌ ಪ್ರೀಪೇಡ್‌ ಗ್ರಾಹಕರು ಬ್ಯಾಲನ್ಸ್ ಹೊಂದಿಲ್ಲದಿದ್ದಲ್ಲಿ, ಗ್ರಾಹಕರು ಹೆಚ್ಚುವರಿ ಡಾಟಾ ಮತ್ತು ಟಾಕ್‌ಟೈಮ್‌ ಅನ್ನು ಲೋನ್‌ ಆಗಿ ತೆಗೆದುಕೊಳ್ಳಲು ಅವಕಾಶ ನೀಡಿದೆ.

ಬಿಲ್‌ ಪಾವತಿಸಲು ಮಾರ್ಗಗಳು

ಬಿಲ್‌ ಪಾವತಿಸಲು ಮಾರ್ಗಗಳು

ಗ್ರಾಹಕರು ಆನ್‌ಲೈನ್‌ ಮೂಲಕ, M-Pesa , ಚೆಕ್‌ ಅಥವಾ ಕಡಿಮೆ ಮುಖಬೆಲೆಯ ನೋಟುಗಳನ್ನು ಬಳಸಿ ಬಿಲ್ ಪಾವತಿಸಬಹುದು. ಆದರೆ 500, 1000 ರೂ ನೋಟುಗಳನ್ನು ಕಡ್ಡಾಯವಾಗಿ ಬ್ಯಾನ್‌ ಮಾಡಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Rs. 500, Rs. 1,000 Ban: Airtel and Vodafone Extend Deadline for Bills Payment. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot