ಡಾಟಾ ಉಳಿಸಲು ಆಟೋ ಪ್ಲೇ ವೀಡಿಯೋಗಳನ್ನು ಸ್ಟಾಪ್ ಮಾಡುವುದು ಹೇಗೆ?

|

ವೀಡಿಯೋಗಳು ಇದೀಗ ನಮ್ಮ ಬ್ರೌಸಿಂಗ್ ಪ್ರಮುಖ ಅಂಗವಾಗಿರುತ್ತದೆ. ಪ್ರತಿಯೊಂದು ವೆಬ್ ಸೈಟ್ ಗಳೂ ಕೂಡ ನೀವು ಯಾವುದೇ ವೀಡಿಯೋವನ್ನು ಮಿಸ್ ಮಾಡಬಾರದು ಎಂದು ಇಚ್ಛಿಸುತ್ತವೆ. ಸಾಮಾಜಿಕ ಸಾಲಜಾಲಗಳಲ್ಲಿ ಅದೇ ಕಾರಣಕ್ಕೆ ಒಂದಲ್ಲ ಒಂದು ವೀಡಿಯೋಗಳು ಸ್ವಯಂಚಾಲಿತವಾಗಿ ಪ್ಲೇ ಆಗುತ್ತಲೇ ಇರುತ್ತದೆ. ಆದರೆ ಕೆಲವೊಮ್ಮೆ ಈ ವೀಡಿಯೋಗಳು ನಮ್ಮ ಕಿರಿಕಿರಿಗೆ ಕಾರಣವಾಗುತ್ತದೆ.

ಡಾಟಾ ಉಳಿಸಲು ಆಟೋ ಪ್ಲೇ ವೀಡಿಯೋಗಳನ್ನು ಸ್ಟಾಪ್ ಮಾಡುವುದು ಹೇಗೆ?

ಅನಗತ್ಯವಾಗಿರುವ ವೀಡಿಯೋಗಳು ಪ್ಲೇ ಆಗುತ್ತಲೇ ಇರುತ್ತದೆ. ಹೀಗೆ ಯುಟ್ಯೂಬ್, ಫೇಸ್ ಬುಕ್, ಇನ್ಸ್ಟಾಗ್ರಾಂ ಸೇರಿದಂತೆ ಇತರೆ ವೆಬ್ ಬ್ರೌಸರ್ ಗಳಲ್ಲಿ ಸ್ವಯಂಚಾಲಿತವಾಗಿ ಪ್ಲೇ ಆಗುವ ವೀಡಿಯೋಗಳನ್ನು ಸ್ಟಾಪ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಆಟೋ ಪ್ಲೇ ವೀಡಿಯೋಗಳನ್ನು ಫೇಸ್ ಬುಕ್ ನಲ್ಲಿ ಸ್ಟಾಪ್ ಮಾಡುವುದು ಹೇಗೆ?

ಆಟೋ ಪ್ಲೇ ವೀಡಿಯೋಗಳನ್ನು ಫೇಸ್ ಬುಕ್ ನಲ್ಲಿ ಸ್ಟಾಪ್ ಮಾಡುವುದು ಹೇಗೆ?

ಫೇಸ್ ಬುಕ್ ನಿಮಗೆ ಆಟೋ ಪ್ಲೇ ವೀಡಿಯೋಗಳನ್ನು ಡಿಸೇಬಲ್ ಮಾಡುವುದಕ್ಕೆ ಅವಕಾಶ ನೀಡುತ್ತದೆ ಮತ್ತು ಅದು ನಿಜಕ್ಕೂ ಪ್ರಶಂಸನೀಯವಾದ ವಿಚಾರ. ಹಾಗಾದ್ರೆ ಹೇಗೆ ಆಂಡ್ರಾಯ್ಡ್ ಮತ್ತು ಐಓಎಸ್ ನಲ್ಲಿ ಈ ಆಟೋಪ್ಲೇ ವೀಡಿಯೋಗಳನ್ನು ಸ್ಟಾಪ್ ಮಾಡುವುದು ಈ ಕೆಳಗಿನ ಹಂತಗಳನ್ನು ಅನುಸರಿಸಿ

ಫೇಸ್ ಬುಕ್ ವೆಬ್ :

1. ಫೇಸ್ ಬುಕ್ ನ್ನು ತೆರೆಯಿರಿ ಮತ್ತು ನಿಮ್ಮ ಅಕೌಂಟ್ ಗೆ ಲಾಗಿನ್ ಆಗಿ ಸೆಟ್ಟಿಂಗ್ಸ್ ಗೆ ತೆರಳಿ 2.ಸೆಟ್ಟಿಂಗ್ಸ್ ನಲ್ಲಿ ವೀಡಿಯೋಸ್ ಟ್ಯಾಬ್ ಗೆ ತೆರಳಿ ಮತ್ತು ಆಟೋ ಪ್ಲೇ ವೀಡಿಯೋವನ್ನು ಆಫ್ ಮಾಡಿ

ಫೇಸ್ ಬುಕ್ ಆಂಡ್ರಾಯ್ಡ್ ಆಪ್

1. ಹ್ಯಾಮ್ ಬರ್ಗರ್ ಮೆನು ಐಕಾನ್ ನ್ನು ಟ್ಯಾಪ್ ಮಾಡಿ.ಸ್ಕ್ರೀನಿನ ಮೇಲ್ಬಾಗದ ಎಡ ಕಾರ್ನರ್ ನಲ್ಲಿ ಇರುತ್ತದೆ ಮತ್ತು ಸ್ಕ್ರೋಲ್ ಡೌನ್ ಮಾಡಿ ಸೆಟ್ಟಿಂಗ್ಸ್ ಮತ್ತು ಪ್ರೈವೆಸಿಗೆ ತೆರಳಿ. ಡ್ರಾಪ್ ಡೌನ್ ಮೆನುವಿನಲ್ಲಿರುವ ಸೆಟ್ಟಿಂಗ್ಸ್ ನ್ನು ಕ್ಲಿಕ್ಕಿಸಿ

2. ಸೆಟ್ಟಿಂಗ್ಸ್ ಸೆಕ್ಷನ್ ನಲ್ಲಿ ಸ್ಕ್ರೋಲ್ ಡೌನ್ ಮಾಡಿ ಮತ್ತು ಮೀಡಿಯಾ ಮತ್ತು ಕಾಂಟ್ಯಾಕ್ಟ್ಸ್ ಆಯ್ಕೆಯನ್ನು ಟ್ಯಾಪ್ ಮಾಡಿ.

3. ಮೀಡಿಯಾ ಮತ್ತು ಕಾಂಟ್ಯಾಕ್ಟ್ಸ್ ಸೆಕ್ಷನ್ ನಲ್ಲಿ ಆಟೋ ಪ್ಲೇ ವೀಡಿಯೋ ಪ್ರಿಫರೆನ್ಸ್ ನ್ನು ತೆರೆಯಿರಿ ಮತ್ತು ಆಟೋಪ್ಲೇಯನ್ನು ಟ್ಯಾಪ್ ಮಾಡಿ.

4. ಆಟೋಪ್ಲೇ ಸೆಟ್ಟಿಂಗ್ಸ್ ಪೇಜ್ ನಲ್ಲಿ ನೆವರ್ ಆಟೋಪ್ಲೇ ವೀಡಿಯೋ ನ್ನು ಸೆಲೆಕ್ಟ್ ಮಾಡಿ ಮತ್ತು ಆಟೋ ಪ್ಲೇ ವೀಡಿಯೋವನ್ನು ಡಿಸೇಬಲ್ ಮಾಡಿದರೆ ಫೇಸ್ ಬುಕ್ ನಲ್ಲಿ ವೀಡಿಯೋಗಳು ಆಟೋಪ್ಲೇ ಆಗುವುದಿಲ್ಲ.

ಫೇಸ್ ಬುಕ್ ಐಓಎಶ್ ಆಪ್ :

1. ಹ್ಯಾಮ್ ಬರ್ಗರ್ ಮೆನು ಐಕಾನ್ ನ್ನು ಟ್ಯಾಪ್ ಮಾಡಿ.ಸ್ಕ್ರೀನಿನ ಮೇಲ್ಬಾಗದ ಎಡ ಕಾರ್ನರ್ ನಲ್ಲಿ ಇರುತ್ತದೆ ಮತ್ತು ಸ್ಕ್ರೋಲ್ ಡೌನ್ ಮಾಡಿ ಸೆಟ್ಟಿಂಗ್ಸ್ ಮತ್ತು ಪ್ರೈವೆಸಿಗೆ ತೆರಳಿ. ಡ್ರಾಪ್ ಡೌನ್ ಮೆನುವಿನಲ್ಲಿರುವ ಸೆಟ್ಟಿಂಗ್ಸ್ ನ್ನು ಕ್ಲಿಕ್ಕಿಸಿ

2. ಸೆಟ್ಟಿಂಗ್ಸ್ ಸೆಕ್ಷನ್ ನ್ನು ಸ್ಕ್ರೋಲ್ ಡೌನ್ ಮಾಡಿ ಮತ್ತು ಮೀಡಿಯಾ ಮತ್ತು ಕಾಂಟ್ಯಾಕ್ಟ್ಸ್ ಹೆಡ್ಡರ್ ನ ಅಡಿಯಲ್ಲಿರುವ ವೀಡಿಯೋಸ್ ಮತ್ತು ಫೋಟೋಸ್ ಆಯ್ಕೆಯನ್ನು ಟ್ಯಾಪ್ ಮಾಡಿ

3. ವೀಡಿಯೋ ಮತ್ತು ಫೋಟೋಸ್ ಸೆಟ್ಟಿಂಗ್ಸ್ ಪೇಜ್ ನಲ್ಲಿ ಆಟೋ ಪ್ಲೇ ಆಯ್ಕೆಯನ್ನು ಟ್ಯಾಪ್ ಮಾಡಿ

4. ನೆವರ್ ಆಟೋ ಪ್ಲೇ ವೀಡಿಯೋ ನ್ನು ಆಟೋ ಪ್ಲೇ ಪ್ರಿಫರೆನ್ಸ್ ಪೇಜ್ ನಲ್ಲಿ ಕ್ಲಿಕ್ಕಿಸಿ ಮತ್ತು ಫೀಡ್ ನಲ್ಲಿ ಆಟೋ ಪ್ಲೇ ವೀಡಿಯೋಸ್ ನ್ನು ಡಿಸೇಬಲ್ ಮಾಡಿ.

ಇನ್ಸ್ಟಾಗ್ರಾಂನಲ್ಲಿ ಆಟೋ ಪ್ಲೇ ವೀಡಿಯೋವನ್ನು ಸ್ಟಾಪ್ ಮಾಡುವುದು ಹೇಗೆ?

ಇನ್ಸ್ಟಾಗ್ರಾಂನಲ್ಲಿ ಆಟೋ ಪ್ಲೇ ವೀಡಿಯೋವನ್ನು ಸ್ಟಾಪ್ ಮಾಡುವುದು ಹೇಗೆ?

ಆಟೋ ಪ್ಲೇ ವೀಡಿಯೋಗಳನ್ನು ಡಿಸೇಬಲ್ ಮಾಡುವುದಕ್ಕೆ ಇನ್ಸ್ಟಾಗ್ರಾಂನಲ್ಲಿ ಹಲವು ಟೂಲ್ ಗಳಿವೆ. ಆದರೆ ಮೊಬೈಲ್ ಡಾಟಾವನ್ನು ಸೇವ್ ಮಾಡುವುದಕ್ಕಾಗಿ ನೀವು Use Less Data' ಆಯ್ಕೆಯನ್ನು ಆಕ್ಟಿವೇಟ್ ಮಾಡುವ ಮೂಲಕ ಇಂತರ ವೀಡಿಯೋಗಳು ಪ್ಲೇ ಆಗುವುದನ್ನು ತಡೆಯಬಹುದು. ಆದರೆ ಒಂದು ನೆನಪಿರಲಿ ಇನ್ಸ್ಟಾಗ್ರಾಂನಲ್ಲಿ ಇದು ಸಂಪೂರ್ಣವಾಗಿ ವೀಡಿಯೋಗಳು ಆಟೋ ಪ್ಲೇ ಆಗುವುದನ್ನು ನಿಲ್ಲಿಸುವುದಿಲ್ಲ.

1. ಇನ್ಸ್ಟಾಗ್ರಾಂ ಆಪ್ ನ್ನು ತೆರೆಯಿರಿ. ಪ್ರೊಫೈಲ್ ಐಕಾನ್ ನ್ನು ಟ್ಯಾಪ್ ಮಾಡಿ. ಮೇಲ್ಬಾಗದ ಹ್ಯಾಮ್ ಬರ್ಗರ್ ಮೆನು ಬಟನ್ ನಲ್ಲಿರುತ್ತದೆ. ಇದೀಗ ಕಾಗ್ ವೀಲ್ ಐಕಾನ್ ನ್ನು ಟ್ಯಾಪ್ ಮಾಡಿ ಮತ್ತು ಸೆಟ್ಟಿಂಗ್ಸ್ ಮೆನುವನ್ನು ತೆರೆಯಿರಿ ಮತ್ತು ಇಲ್ಲಿ ‘Mobile Data Use.' ನ್ನು ಕ್ಲಿಕ್ಕಿಸಿ.

2. ಮೊಬೈಲ್ ಡಾಟಾ ಯ್ಯೂಸ್ ಪೇಜ್ ನಲ್ಲಿ "Use Less Data"ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಟ್ವೀಟರ್ ನಲ್ಲಿ ಆಟೋಪ್ಲೇ ವೀಡಿಯೋವನ್ನು ಸ್ಟಾಪ್ ಮಾಡುವುದು ಹೇಗೆ?

ಟ್ವೀಟರ್ ನಲ್ಲಿ ಆಟೋಪ್ಲೇ ವೀಡಿಯೋವನ್ನು ಸ್ಟಾಪ್ ಮಾಡುವುದು ಹೇಗೆ?

ಟ್ವೀಟರ್ ವೆಬ್

1. ಟ್ವೀಟರ್ ವೆಬ್ ನ್ನು ತೆರೆಯಿರಿ. ಸ್ಕ್ರೀನಿನ ಮೇಲ್ಬಾಗದ ಬಲ ಕಾರ್ನರ್ ನಲ್ಲಿರುವ ಪ್ರೊಫೈಲ್ ಫೋಟೋವನ್ನು ಕ್ಲಿಕ್ಕಿಸಿ ಮತ್ತು "Settings and privacy"ಯನ್ನು ಸೆಲೆಕ್ಟ್ ಮಾಡಿ.

2. "Settings and Privacy"ಯಲ್ಲಿ "Content" ಹೆಡ್ಡರ್ ನ ಕೆಳಗಡೆ ಇರುವ "Video autoplay" ಆಯ್ಕೆಯನ್ನು ಅನ್ ಚೆಕ್ ಮಾಡಿ.

• ಟ್ವೀಟರ್ ಆಂಡ್ರಾಯ್ಡ್ ಆಪ್

1. ಆಂಡ್ರಾಯ್ಡ್ ಆಪ್ ನಲ್ಲಿ ಟ್ವೀಟರ್ ಆಪ್ ನ್ನು ತೆರೆಯಿರಿ. ಸ್ಲೈಡ್ ಔಟ್ ಮೆನುವನ್ನು ತೆರೆಯಲು ಎಡಭಾಗಕ್ಕೆ ಸ್ವೈಪ್ ಮಾಡಿ ಮತ್ತು "Settings and privacy"ಯನ್ನು ಟ್ಯಾಪ್ ಮಾಡಿ.

2. ಜನರಲ್ ಹೆಡ್ಡರ್ ನ ಕೆಳಗಡೆ ಇರುವ "Data usage" ಆಯ್ಕೆಯನ್ನು ಸ್ಕ್ರೋಲ್ ಡೌನ್ ಮಾಡಿ ಟ್ಯಾಪ್ ಮಾಡಿ.

3. "Data usage" ಪೇಜ್ ನಲ್ಲಿ ವೀಡಿಯೋ ಹೆಡ್ಡರ್ ನ ಕೆಳಗೆ ಇರುವ "Video autoplay" .ಯನ್ನು ಸೆಲೆಕ್ಟ್ ಮಾಡಿ.

4. "Video autoplay"ಯನ್ನು ಟ್ಯಾಪ್ ಮಾಡಿದ ನಂತರ ಡ್ರಾಪ್ ಡೌನ್ ಮೆನುವಿನಲ್ಲಿ "Never"ನ್ನು ಸೆಲೆಕ್ಟ್ ಮಾಡಿ.

• ಟ್ವೀಟರ್ ಐಓಎಸ್ ಆಪ್

1. ಐಓಎಸ್ ನಲ್ಲಿ ಟ್ವೀಟರ್ ಆಪ್ ನ್ನು ತೆರೆಯಿರಿ, ಎಡಕ್ಕೆ ಸ್ವೈಪ್ ಔಟ್ ಮಾಡಿ ಮೆನುವನ್ನು ತೆರೆಯಿರಿ ಮತ್ತು "Settings and privacy"ಯನ್ನು ತೆರೆಯಿರಿ.

2. ಸ್ಕ್ರೋಲ್ ಡೌನ್ ಮಾಡಿ ಮತ್ತು ಜನರಲ್ ಹೆಡ್ಡರ್ ನ ಅಡಿಯಲ್ಲಿ "Data usage" ಆಯ್ಕೆಯನ್ನು ಸೆಲೆಕ್ಟ್ ಮಾಡಿ.

3. "Data usage" ಪೇಜ್ ನಲ್ಲಿ, ವೀಡಿಯೋ ಹೆಡ್ಡರ್ ನ ಅಡಿಯಲ್ಲಿ "Video autoplay" ಯನ್ನು ಸೆಲೆಕ್ಟ್ ಮಾಡಿ.

4. "Video autoplay" ಪೇಜ್ ನಲ್ಲಿ "Never"ನ್ನು ಆಯ್ಕೆ ಮಾಡಿ ಟ್ಯಾಪ್ ಮಾಡಿ ಮತ್ತು ಆಟೋ ಪ್ಲೇ ವೀಡಿಯೋಸ್ ಡಿಸೇಬಲ್ ಮಾಡಿ.

ಆಟೋ ಪ್ಲೇ ವೀಡಿಯೋವನ್ನು ಯುಟ್ಯೂಬ್ ನಲ್ಲಿ ಸ್ಟಾಪ್ ಮಾಡುವುದು ಹೇಗೆ?

ಆಟೋ ಪ್ಲೇ ವೀಡಿಯೋವನ್ನು ಯುಟ್ಯೂಬ್ ನಲ್ಲಿ ಸ್ಟಾಪ್ ಮಾಡುವುದು ಹೇಗೆ?

ಯುಟ್ಯೂಬ್ ನಲ್ಲಿ ಆಟೋಪ್ಲೇ ವೀಡಿಯೋಸ್ ಡಿಸೇಬಲ್ ಮಾಡುವುದು (ವೆಬ್,ಐಓಎಸ್, ಆಂಡ್ರಾಯ್ಡ್)

1. ನಿಮ್ಮ ಬ್ರೌಸರ್ ಅಥವಾ ಆಂಡ್ರಾಯ್ಡ್/ಐಓಎಸ್ ನಲ್ಲಿ ಯುಟ್ಯೂಬ್ ವೆಬ್ ಪೇಜ್ ನ್ನು ತೆರೆಯಿರಿ ಮತ್ತು ಯಾವುದೇ ಒಂದು ವೀಡಿಯೋವನ್ನು ರ್ಯಾಡಂ ಆಗಿ ಪ್ಲೇ ಮಾಡಿ.

2. ಮೇಲ್ಬಾಗದ ಬಲ ಕಾರ್ನರ್ ನಲ್ಲಿ ನೀವು ಆಟೋ ಪ್ಲೇ ಬಟನ್ ಆನ್ ಆಗಿರುವುದು ತಿಳಿಯುತ್ತದೆ. ಇದನ್ನು ಆಫ್ ಮಾಡಿ.

ಇತರೆ ವೆಬ್ ಸೈಟ್ ಮತ್ತು ಬ್ಲಾಗ್ ಗಳಲ್ಲಿ ಆಟೋ ಪ್ಲೇ ವೀಡಿಯೋಗಳನ್ನು ಸ್ಟಾಪ್ ಮಾಡುವುದು ಹೇಗೆ?

ವಿವಿಧ ರೀತಿಯ ಬ್ರೌಸರ್ ಸೆಟ್ಟಿಂಗ್ಸ್ ನ್ನು ಡಿಸೇಬಲ್ ಮಾಡುವ ಮೂಲಕ ಆಟೋ ಪ್ಲೇ ವೀಡಿಯೋಗಳನ್ನು ವೆಬ್ ಪೇಜ್ ಗಳಲ್ಲಿ ಸ್ಟಾಪ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಫ್ಲ್ಯಾಶ್ ಸೆಟ್ಟಿಂಗ್ಸ್ ಗಳನ್ನು ಡಿಸೇಬಲ್ ಮಾಡುವ ಮೂಲಕ ಇದನ್ನು ಸಾಧಿಸಬಹುದು. ಯಾಕೆಂದರೆ ಹೆಚ್ಚಿನ ವೀಡಿಯೋಗಳು ಶಾಕ್ವೇವ್ ಫ್ಲ್ಯಾಶ್ ಗಳಿಂದ ರನ್ ಆಗುತ್ತದೆ. ಫ್ಲ್ಯಾಶ್ ಸೆಟ್ಟಿಂಗ್ಸ್ ನ್ನು ಬದಲಾಯಿಸುವುದರಿಂದಾಗಿ ನಾವು ಇಚ್ಛೆ ಪಟ್ಟಾಗ ಮಾತ್ರವೇ ಈ ವೀಡಿಯೋಗಳು ಪ್ಲೇ ಆಗುವಂತೆ ನೋಡಿಕೊಳ್ಳಬಹುದು.

ಕ್ರೋಮ್ ವೆಬ್

1. ಡೆಸ್ಕ್ ಟಾಪ್ ನಲ್ಲಿ ಕ್ರೋಮ್ ಬ್ರೌಸರ್ ನ್ನು ತೆರೆಯಿರಿ ಮತ್ತು ಎಂಟರ್ ಬಟನ್ ನ್ನು ಪ್ರೆಸ್ ಮಾಡಿ. "chrome://flags/#autoplay-policy"ಯನ್ನು ನೇರವಾಗಿ ತೆರೆಯಿರಿ.

2. ಸ್ಕ್ರೋಲ್ ಡೌನ್ ಮಾಡಿ ಮತ್ತು ಹಳದಿ ಬಣ್ಣದಲ್ಲಿ ಹೈಲೆಟ್ ಮಾಡಿರುವ "Autoplay policy" ಯನ್ನು ಹುಡುಕಾಡಿ .ಡ್ರಾಪ್ ಬಾಕ್ಸ್ ನ್ನು ಕ್ಲಿಕ್ಕಿಸಿ. "Document user activation is required" ನ್ನು ಟ್ಯಾಪ್ ಮಾಡಿ ಮತ್ತು ಆಟೋ ಪ್ಲೇ ವೀಡಿಯೋ ಮತ್ತು ಆಡಿಯೋವನ್ನು ಡಿಸೇಬಲ್ ಮಾಡಿ. ಒಮ್ಮೆ ಇದನ್ನು ಮಾಡಿದ ನಂತರ ಕ್ರೋಮ್ ನ್ನು ರೀಲಾಂಚ್ ಮಾಡಲು ಕೇಳಲಾಗುತ್ತದೆ. ಆ ಮೂಲಕ ಹೊಸ ಸೆಟ್ಟಿಂಗ್ಸ್ ಆಕ್ಟಿವೇಟ್ ಆಗುತ್ತದೆ..

• ಆಂಡ್ರಾಯ್ಡ್ ಕ್ರೋಮ್ ನಲ್ಲಿ ಆಟೋಪ್ಲೇ ವೀಡಿಯೋ ಡಿಸೇಬಲ್ ಮಾಡುವುದು

ಆಂಡ್ರಾಯ್ಡ್ ಕ್ರೋಮ್ ನಲ್ಲಿ ಆಟೋ ಪ್ಲೇ ವೀಡಿಯೋವನ್ನು ನಿಲ್ಲಿಸುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ

1. ಕ್ರೊಮ್ ಸೆಟ್ಟಿಂಗ್ಸ್ ಗೆ ತೆರಳಿ ಮತ್ತು ಸೈಟ್ ಸೆಟ್ಟಿಂಗ್ಸ್ ನ್ನು ಟ್ಯಾಪ್ ಮಾಡಿ.

2. ಮೀಡಿಯಾವನ್ನು ಟ್ಯಾಪ್ ಮಾಡಿ ಮತ್ತು ಆಟೋಪ್ಲೇಯನ್ನು ಕ್ಲಿಕ್ಕಿಸಿ.

3. ಟಾಗಲ್ ಮಾಡಿ ಆಂಡ್ರಾಯ್ಡ್ ಕ್ರೋಮ್ ನಲ್ಲಿ ಆಟೋ ಪ್ಲೇಯಿಂಗ್ ವೀಡಿಯೋವನ್ನು ಡಿಸೇಬಲ್ ಮಾಡಿ.

• ಫೈಯರ್ ಫಾಕ್ಸ್

ಒಂದು ವೇಳೆ ನಿಮ್ಮ ಬ್ರೌಸರ್ ಮಾಝಿಲಾ ಫೈಯರ್ ಫಾಕ್ಸ್ ಆಗಿದ್ದಲ್ಲಿ ಖಂಡಿತ ಆಟೋ ಪ್ಲೇ ವೀಡಿಯೋಗಳಿಂದ ಬೇಸತ್ತಿರುತ್ತೀರಿ. ಈ ರೀತಿ ವೆಬ್ ಸೈಟ್ ಓಪನ್ ಮಾಡಿದಾಗ ಪ್ಲೇ ಆಗುವ ಆಟೋ ಪ್ಲೇ ವೀಡಿಯೋಗಳನ್ನು ಡಿಸೇಬಲ್ ಮಾಡುವುದಕ್ಕೆ ಫೈಯರ್ ಫಾಕ್ಸ್ ನಲ್ಲೂ ಆಯ್ಕೆಗಳಿವೆ. ಈ ಕೆಳಗಿನ ಹಂತಗಳನ್ನು ಅನುಸರಿಸಿ.

1. ಫೈಯರ್ ಫಾಕ್ಸ್ ಯುಆರ್ ಎಲ್ ಬಾರ್ ನಲ್ಲಿ ‘about:config.' ಎಂದು ಟೈಪ್ ಮಾಡಿ.

2. ‘media.autoplay.'ಯನ್ನು ಹುಡುಕಾಡಿ

3. ‘media.autoplay.enabled.user-gestures-needed' ನ್ನು ಡಬಲ್ ಕ್ಲಿಕ್ ಮಾಡಿ. ಫಾಲ್ಸ್ ಮತ್ತು ಟ್ರೂ ಬೂಲನ್ ವ್ಯಾಲ್ಯೂವನ್ನು ಬದಲಾಯಿಸಿ,

ಇಷ್ಟು ಮಾಡಿದರೆ ಫೈಯರ್ ಫಾಕ್ಸ್ ನಲ್ಲಿ ವೀಡಿಯೋಗಳು ಆಟೋ ಪ್ಲೇ ಆಗುವುದು ನಿಲ್ಲುತ್ತದೆ

ಮೈಕ್ರೋಸಾಫ್ಟ್ ಎಡ್ಜ್

ನಿಮ್ಮ ಬ್ರೌಸರ್ ಆಯ್ಕೆ ಮೈಕ್ರೋಸಾಫ್ಟ್ ಎಡ್ಜ್ ಆಗಿದ್ದಲ್ಲಿ ಆಟೋ ಪ್ಲೇ ವೀಡಿಯೋಗಳನ್ನು ಸ್ಟಾಪ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

1.ಮೇಲ್ಬಾಗದ ಬಲತುದಿಯಲ್ಲಿರುವ ಮೂರು ಚುಕ್ಕಿಗಳನ್ನು ಕ್ಲಿಕ್ಸಿ ಮತ್ತು ಸೆಟ್ಟಿಂಗ್ಸ್ ಗೆ ತೆರಳಿ

2.ಇಲ್ಲಿ ‘Advanced Settings.'ಗೆ ತೆರಳಿ.

3. ಇದರಲ್ಲಿ ‘Media Autoplay‘ಯನ್ನು ಸೆಲೆಕ್ಟ್ ಮಾಡಿ ‘Block.'ನ್ನು ಆಯ್ಕೆ ಮಾಡಿ

ಹೀಗೆ ಮಾಡಿದರೆ ಮೈಕ್ರೋಸಾಫ್ಟ್ ಎಡ್ಜ್ ನಲ್ಲಿ ವೀಡಿಯೋಗಳು ಆಟೋ ಪ್ಲೇ ಆಗುವುದು ನಿಲ್ಲುತ್ತದೆ.

ಈ ಮೇಲಿನ ಎಲ್ಲಾ ಮಾಹಿತಿಗಳು ನಿಮಗೆ ಅನುಕೂಲವಾಯಿತು ಎಂದು ಭಾವಿಸುತ್ತೇವೆ. ನೀವು ಕೂಡ ಆಟೋ ಪ್ಲೇ ವೀಡಿಯೋಗಳಿಂದ ಬೇಸತ್ತಿದ್ದರೆ ಖಂಡಿತ ಈ ಹಂತಗಳನ್ನು ಅನುಸರಿಸಬಹುದು. ಅಷ್ಟೇ ಅಲ್ಲ ಸುಮ್ಮನೆ ಖರ್ಚಾಗುವ ಡಾಟಾವನ್ನು ಕೂಡ ಉಳಿತಾಯ ಮಾಡಿಕೊಳ್ಳಬಹುದು. ನಿಮ್ಮ ಅಭಿಪ್ರಾಯ ಏನು ಎಂಬ ಬಗ್ಗೆ ಕಮೆಂಟ್ ಮಾಡಿ ತಿಳಿಸುವುದನ್ನು ಮರೆಯಬೇಡಿ.

Best Mobiles in India

English summary
How to stop autoplay videos on YouTube, Facebook, Instagram, Twitter and more

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X