ಫೇಸ್ ಬುಕ್ ಟೈಮ್ ಲೈನ್ ಹೊಸ ಫೀಚರ್ ಗೊತ್ತಾ?

Posted By: Varun
ಫೇಸ್ ಬುಕ್ ಟೈಮ್ ಲೈನ್ ಹೊಸ ಫೀಚರ್ ಗೊತ್ತಾ?
ಫೇಸ್ ಬುಕ್ ಟೈಮ್ ಲೈನ್ ಸೆಪ್ಟೆಂಬರ್ 8 ರಿಂದ ಕಡ್ಡಾಯವಾಗಿದ್ದು ನಿಮಗೆ ಗೊತ್ತೇ ಇದೆ. ನಿಮ್ಮ ಪ್ರೊಫೈಲ್ ನ ಹೈಲೈಟ್ ಗಳನ್ನೆಲ್ಲಾ ತೋರಿಸುವ ಅದು ಈಗ ಹೊಸದಾದ ಬದಲಾವಣೆಯನ್ನು ಮಾಡಿದೆ.

ಸುಮಾರು 95 ಕೋಟಿ ಖಾತೆದಾರರನ್ನು ಹೊಂದಿರುವ ಫೇಸ್ ಬುಕ್ ಹೊಸದಾದ "expecting a baby" ಫೀಚರ್ ಅನ್ನು ಸೇರ್ಪಡೆ ಗೊಳಿಸಿದೆ. ಈಗಾಗಲೇ single,married,in a relationship ನಂತರ ಇದನ್ನೂ ಸೇರಿಸಿದ್ದು, ಮದುವೆಯಾದ ಹೆಂಗಸರು ಹಾಗು ಗಂಡಸರು ಮಗುವಿನ ನಿರೀಕ್ಷೆಯಲ್ಲಿದ್ದರೆ ತಮ್ಮ status message ಅನ್ನು ಈ ರೀತಿ ಬದಲಿಸಿಕೊಳ್ಳಬಹುದು.

ಯಾವ ದಿನಾಂಕಕ್ಕೆ ಮಗು ಆಗಬಹುದು, ಮಗುವಿನ ಪೋಷಕರ ಹೆಸರು, ಹಾಗು ಮಾಹಿತಿಯನ್ನೂ ಕೊಡಬಹುದಾಗಿದ್ದು, ನೀವು ಸೆಟ್ ಮಾಡಿದ ದಿನದಿಂದ ಲೈವ್ ಆಗುತ್ತದೆ.

ಇದನ್ನು ಟೈಮ್ ಲೈನ್ ನಲ್ಲಿ ಅಪ್ಡೇಟ್ ಮಾಡಲು ಈ ಹಂತಗಳನ್ನು ಪಾಲಿಸಬಹುದು:

1) ಟೈಮ್ ಲೈನ್ ಗೆ ಹೋಗಿ

2) Status Update ಮೇಲೆ ಕ್ಲಿಕ್ ಮಾಡಿ

3) life event ಮೇಲೆ ಕ್ಲಿಕ್ ಮಾಡಿ

4) ನಂತರ Family & Relationships ಮೇಲೆ ಕ್ಲಿಕ್ ಮಾಡಿ

5) Expecting a Baby/New Child ಮೇಲೆ ಕ್ಲಿಕ್ ಮಾಡಿ ಅಪ್ಡೇಟ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot