ಫೋನ್‌ಪೇನಲ್ಲಿ ನಿಮ್ಮ ಬ್ಯಾಂಕ್ ಖಾತೆ ಜೋಡಣೆ ಮಾಡುವುದು ಹೇಗೆ ಗೊತ್ತಾ?

|

ಸದ್ಯ ಡಿಜಿಟಲ್ ವ್ಯವಹಾರ ಹೆಚ್ಚು ಮುಂಚೂಣಿಯಲ್ಲಿ ಇದೆ. ಜನರು ಬಹುತೇಕ ಕೆಲಸಗಳನ್ನು ಆನ್‌ಲೈನ್ ಮೂಲಕವೇ ನಡೆಸುತ್ತಾರೆ. ಬಿಲ್ ಪಾವತಿ, ಮೊಬೈಲ್ ರೀಚಾರ್ಜ್, ಡಿಟಿಹೆಚ್‌ ಪಾವತಿ ಸೇರಿದಂತೆ ಇತರೆ ಸೇವೆಗಳಿಗೆ ಯುಪಿಐ ಆಪ್ಸ್ ಅವಲಂಭಿಸಿದ್ದಾರೆ. ಆ ಪೈಕಿ ಫೋನ್‌ಪೇ (PhonePe) ಆಪ್ ಹೆಚ್ಚು ಬಳಕೆಯಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಈ ಆಪ್ ಮೂಲಕ ಯಾವುದೇ ಬ್ಯಾಂಕ್‌ ಸುಲಭವಾಗಿ ಹಣ ವರ್ಗಾಯಿಸಬಹುದಾಗಿದೆ.

ವರ್ಗಾವಣೆ

ಹೌದು, ಫೋನ್‌ಪೇ ಆಪ್‌ನಲ್ಲಿ ಹಣ ವರ್ಗಾವಣೆ ಸಹ ಸರಳವಾಗಿದೆ. ಅದಕ್ಕೂ ಮೊದಲು ಗ್ರಾಹಕರು ಫೋನ್‌ಪೇನಲ್ಲಿ ತಮ್ಮ ಬ್ಯಾಂಕ್ ಖಾತೆಯನ್ನು ಜೋಡಣೆ ಮಾಡಬೇಕು. ಆ ಬಳಿಕ ಫೋನ್‌ಪೇ ಮೂಲಕ ಯಾವುದೇ ಪಾವತಿ ಅಥವಾ ಹಣ ವರ್ಗಾವಣೆ ಸೇವೆ ನಡೆಸಬಹುದಾಗಿದೆ. ಹಾಗಾದರೇ ಫೋನ್‌ಪೇ ಆಪ್‌ನಲ್ಲಿ ಬ್ಯಾಂಕ್ ಖಾತೆಯನ್ನು ಜೋಡಣೆ (link) ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಫೋನ್‌ಪೇ ಆಪ್‌ನಲ್ಲಿ ಬ್ಯಾಂಕ್ ಖಾತೆ ಲಿಂಕ್ ಮಾಡಲು ಈ ಕ್ರಮ ಅನುಸರಿಸಿ:

ಫೋನ್‌ಪೇ ಆಪ್‌ನಲ್ಲಿ ಬ್ಯಾಂಕ್ ಖಾತೆ ಲಿಂಕ್ ಮಾಡಲು ಈ ಕ್ರಮ ಅನುಸರಿಸಿ:


ಹಂತ 1: ಗೂಗಲ್ ಸ್ಟೋರ್ ಗೆ ಹೋಗಿ ಮತ್ತು ಫೋನ್‌ಪೇ ಆಪ್ ಅನ್ನು ಡೌನ್‌ಲೋಡ್ ಮಾಡಿ

ಹಂತ 2: ಫೋನ್‌ಪೇ ಅಪ್ಲಿಕೇಶನ್ ನವೀಕರಿಸಿದ ಆವೃತ್ತಿಯಾಗಿರಬೇಕು

ಹಂತ 3: ಇನ್‌ಸ್ಟಾಲ್ ಆದ ನಂತರ ಫೋನ್‌ಪೇ ಆಪ್ ತೆರೆಯಿರಿ

ಹಂತ 4: ಬಳಿಕ My Money Page ಹೋಗಿ

ಹಂತ 5: ಪಾವತಿ ವಿಧಾನಗಳ ಅಡಿಯಲ್ಲಿ ಬ್ಯಾಂಕ್ ಖಾತೆಗಳನ್ನು ಆಯ್ಕೆಮಾಡಿ

ಖಾತೆಯನ್ನು

ಹಂತ 6: 'ಹೊಸ ಬ್ಯಾಂಕ್ ಖಾತೆಯನ್ನು ಸೇರಿಸಿ' ಬಟನ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಬ್ಯಾಂಕ್ ಅನ್ನು ಆಯ್ಕೆಮಾಡಿ

ಹಂತ 7: ಅಪ್ಲಿಕೇಶನ್ ನಿಮ್ಮ ಖಾತೆಯ ವಿವರಗಳನ್ನು ತರುತ್ತದೆ

ಹಂತ 8: ಈಗ, 'ಸೆಟ್ UPI ಪಿನ್' ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ UPI ಪಿನ್ ಅನ್ನು ಹೊಂದಿಸಿ

ಹಂತ 9: ನಿಮ್ಮ ಡೆಬಿಟ್ ಅಥವಾ ATM ಕಾರ್ಡ್ ಸಂಖ್ಯೆ ಮತ್ತು ಮುಕ್ತಾಯ ದಿನಾಂಕದ ಕೊನೆಯ ಆರು ಅಂಕೆಗಳನ್ನು ನಮೂದಿಸಿ

ಹಂತ 10: ಈಗ ನಿಮ್ಮ UPI ಪಿನ್ ಹೊಂದಿಸಲು ಸ್ವೀಕರಿಸಿದ OTP ಬಳಸಿ

ಹಂತ 11: ನಿಮ್ಮ ಬ್ಯಾಂಕ್ ಖಾತೆಯನ್ನು ಯಶಸ್ವಿಯಾಗಿ ಸೇರಿಸಲಾಗಿದೆ.

ಫೋನ್‌ಪೇ ಮೂಲಕ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಲು ಈ ಕ್ರಮ ಫಾಲೋ ಮಾಡಿ:

ಫೋನ್‌ಪೇ ಮೂಲಕ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಲು ಈ ಕ್ರಮ ಫಾಲೋ ಮಾಡಿ:

ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನ ಅಪ್ಲಿಕೇಶನ್ ಡ್ರಾಯರ್‌ಗೆ ಹೋಗಿ ಮತ್ತು ಫೋನ್‌ಪೇ ಅಪ್ಲಿಕೇಶನ್ ತೆರೆಯಿರಿ.
ಹಂತ 2: ಮುಖಪುಟದಲ್ಲಿ ನೀವು multiple money ವರ್ಗಾವಣೆ ಮತ್ತು ಇತರ ಆಯ್ಕೆಯನ್ನು ನೋಡಬಹುದಾಗಿದ್ದು, ' ಟು ಅಕೌಂಟ್‌' ಆಯ್ಕೆಯನ್ನು ಆರಿಸಿ.
ಹಂತ 3: ಮುಂದಿನ ಹಂತದಲ್ಲಿ ನೀವು ಹಣವನ್ನು ವರ್ಗಾಯಿಸಬೇಕಾದ ಖಾತೆಯನ್ನು ಲಿಂಕ್ ಮಾಡಲು ನೀವು ಸೇರಿಸಬೇಕಾಗಿದೆ. ಇದಕ್ಕಾಗಿ, 'Add Beneficiary' ಆಯ್ಕೆಯನ್ನು ಆರಿಸಿ. ಹಂತ 4: ನಂತರ ಬ್ಯಾಂಕ್ ಹೆಸರನ್ನು ಆಯ್ಕೆ ಮಾಡಿ ಮತ್ತು ಖಾತೆಯ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.
ಹಂತ 5: ಬ್ಯಾಂಕ್ ಮಾಹಿತಿಯನ್ನು ಯಶಸ್ವಿಯಾಗಿ ಲಾಗ್ ಮಾಡಿದ ನಂತರ, ಖಾತೆಯನ್ನು ಆರಿಸಿ ಮತ್ತು ನೀವು ವರ್ಗಾಯಿಸಲು ಬಯಸುವ ಮೊತ್ತವನ್ನು ನಮೂದಿಸಿ.
ಹಂತ 6: ಉಳಿದ ಪಾವತಿ ವಿಧಾನವು ಇತರ ಪಾವತಿಗಳಂತೆ ಮಾಡಬಹುದಾಗಿದೆ.

ಫೋನ್ ಪೇ ಯುಪಿಐ ಪಿನ್ ಅನ್ನು ಬದಲಾಯಿಸುವುದು ಹೇಗೆ?

ಫೋನ್ ಪೇ ಯುಪಿಐ ಪಿನ್ ಅನ್ನು ಬದಲಾಯಿಸುವುದು ಹೇಗೆ?

ಹಂತ 1: ಸ್ಕ್ರೀನಿನ ಬಲ ಮೂಲೆಯಲ್ಲಿರುವ ಮೆನುವನ್ನು ಮೊದಲು ತೆರೆಯಿರಿ.
ಹಂತ 2: ನೀವು ಬ್ಯಾಂಕ್ ಅಕೌಂಟ್ ಸೆಗ್ಮೆಂಟ್ ನ್ನು ಕ್ಲಿಕ್ ಮಾಡಬೇಕು. ನಂತರ ವ್ಯಾಲೆಟ್ ಗೆ ಲಿಂಕ್ ಆಗಿರುವ ಎಲ್ಲಾ ಬ್ಯಾಂಕ್ ಖಾತೆಗಳ ವಿವರವನ್ನು ನೀವಲ್ಲಿ ಗಮನಿಸಬಹುದು.
ಹಂತ 3: ಆದಾದ ನಂತರ ಯಾವ ಬ್ಯಾಂಕ್ ಖಾತೆಯ ಪಿನ್ ನಂಬರ್ ನ್ನು ನೀವು ಬದಲಾಯಿಸುವುದಕ್ಕೆ ಬಯಸುತ್ತೀರಿ ಎಂಬುದನ್ನು ಸೆಲೆಕ್ಟ್ ಮಾಡಿ.

ನಿಮಗೆ

ಹಂತ 4: ನಂತರ ಆಪ್ ನಿಮಗೆ ಪಾಸ್ ವರ್ಡ್ ಬದಲಾಯಿಸುವುದಕ್ಕೆ ಅವಕಾಶ ನೀಡುತ್ತದೆ ಮತ್ತು ರೀಸೆಟ್ ಬಟನ್ ನ್ನು ನೀವು ಗಮನಿಸಬಹುದು.
ಹಂತ 5:ನಂತರ ಬಟನ್ ನ್ನು ಕ್ಲಿಕ್ಕಿಸಿ ಮತ್ತು ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ನ ಕೊನೆಯ ಡಿಜಿಟ್ ಗಳನ್ನು ಎಂಟರ್ ಮಾಡಬೇಕು ಜೊತೆಗೆ ಕಾರ್ಡ್ ನಲ್ಲಿ ಬರೆಯಲಾಗಿರುವ ಎಕ್ಸ್ ಪೈರಿ ಡೇಟ್ ನ್ನು ನಮೂದಿಸಬೇಕು.
ಹಂತ 6: ಇದೀಗ ಬ್ಯಾಂಕ್ ನಿಂದ ನಿಮ್ಮ ಫೋನ್‌ ನಂಬರ್‌ಗೆ ಓಟಿಪಿ ಬರಲಿದೆ, ನಂತರ ಆ ಓಟಿಪಿಯನ್ನು ಇಲ್ಲಿ ನಮೂದಿಸಿದರೆ ಹೊಸ ಪಿನ್ ನಂಬರ್ ಸೆಟ್ ಮಾಡಿ ಪಡೆಯಬಹುದಾಗಿದೆ.

ಫೋನ್‌ಪೇ ಆಪ್‌ನಲ್ಲಿ ಬ್ಯಾಲೆನ್ಸ್ ಪರಿಶೀಲಿಸಲು ಹೀಗೆ ಮಾಡಿ:

ಫೋನ್‌ಪೇ ಆಪ್‌ನಲ್ಲಿ ಬ್ಯಾಲೆನ್ಸ್ ಪರಿಶೀಲಿಸಲು ಹೀಗೆ ಮಾಡಿ:

* ಫೋನ್‌ಪೇ ಅಪ್ಲಿಕೇಶನ್ ತೆರೆಯಿರಿ
* ಹಣ ವರ್ಗಾವಣೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
* ಬ್ಯಾಂಕ್ ಆಯ್ಕೆಮಾಡಿ
* UPI ಪಿನ್ ನಮೂದಿಸಿ
* ನಂತರ ನಿಮ್ಮ ಖಾತೆಯ ಬ್ಯಾಲೆನ್ಸ್ ಕಾಣಿಸುತ್ತದೆ.

Best Mobiles in India

English summary
How To Add Your Bank Account To PhonePe: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X