ಆಧಾರ್ ಕಾರ್ಡ್ ಮೂಲಕ ಇ-ಪ್ಯಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ?

|

ಆಧಾರ್ ಕಾರ್ಡ್ ಭಾರತೀಯ ನಿವಾಸಿಗಳಿಗೆ ಗುರುತಿನ ಪುರಾವೆಗಾಗಿ ಅಗತ್ಯವಿರುವ ಪ್ರಮುಖ ದಾಖಲೆಯಾಗಿದೆ. ಸರ್ಕಾರದ ಯೋಜನೆಗಳಿಗೆ ಹಾಗೂ ಇತರೆ ಅಗತ್ಯ ದಾಖಲೆಗಳಿಗೆ ಆಧಾರ್ ಕಾರ್ಡ್‌ ಪ್ರಮುಖ ಆಗಿದೆ. ಹಾಗೆಯೇ ರಿಟರ್ನ್ಸ್ ಸಲ್ಲಿಸಲು, ಬ್ಯಾಂಕ್ ಖಾತೆಯನ್ನು ತೆರೆಯಲು, ಸರ್ಕಾರದ ಸಬ್ಸಿಡಿ ಸೇರಿದಂತೆ ಇತರೆ ಸಂದರ್ಭಗಳಲ್ಲಿ 12 ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಹೊಂದಿರುವ ಆಧಾರ್ ಕಾರ್ಡ್‌ ಅಗತ್ಯ.

ತಡೆಗಟ್ಟಲು

ತೆರಿಗೆ ವಂಚನೆಯನ್ನು ತಡೆಗಟ್ಟಲು ವ್ಯಕ್ತಿಯ ಎಲ್ಲಾ ತೆರಿಗೆ ಸಂಬಂಧಿತ ಮಾಹಿತಿಯ ದಾಖಲೆಯನ್ನು ಇರಿಸಿಕೊಳ್ಳಲು ಆದಾಯ ತೆರಿಗೆ ಇಲಾಖೆಯು 10 ಅಂಕಿಯ ವಿಶಿಷ್ಟ ಆಲ್ಫಾನ್ಯೂಮರಿಕ್ (unique alphanumeric) ಸಂಖ್ಯೆಯನ್ನು ಹೊಂದಿರುವ ಕಾರ್ಡ್ ಅನ್ನು ನೀಡಲಾಗುತ್ತದೆ. ಆದಾಯ ತೆರಿಗೆಯನ್ನು ಪಾವತಿಸುವುದರ ಜೊತೆಗೆ ತೆರಿಗೆ ಮರುಪಾವತಿಯನ್ನು ಸ್ವೀಕರಿಸುವಾಗ ಪ್ಯಾನ್‌ ಕಾರ್ಡ್‌ ಪ್ರಮುಖ ಎನಿಸುತ್ತದೆ.

ಶಾಶ್ವತ

ಇನ್ನು ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಆಧಾರ್ ಸಂಖ್ಯೆಯನ್ನು ಸಹ ಬಳಸಬಹುದು. ಆಧಾರ್ ಕಾರ್ಡ್ ಹೊಂದಿರುವುದು ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ವಿವರವಾದ ಅರ್ಜಿಯನ್ನು ಭರ್ತಿ ಮಾಡುವ ಅಗತ್ಯ ಇರದು. ಗ್ರಾಹಕರು ಆಧಾರ್ ಕಾರ್ಡ್ ಹೊಂದಿದ್ದರೆ ಮತ್ತು ಮೊದಲ ಬಾರಿಗೆ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೆ, ಅವರು ತ್ವರಿತ ಶಾಶ್ವತ ಖಾತೆ ಸಂಖ್ಯೆಯನ್ನು ಹೇಗೆ ಪಡೆಯಬಹುದಾಗಿದೆ. ಹಾಗಾದರೇ ಆಧಾರ್ ಕಾರ್ಡ್ ಮೂಲಕ ಇ-ಪ್ಯಾನ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಆಧಾರ್ ಕಾರ್ಡ್ ಮೂಲಕ ತ್ವರಿತ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಹೀಗೆ ಮಾಡಿರಿ:

ಆಧಾರ್ ಕಾರ್ಡ್ ಮೂಲಕ ತ್ವರಿತ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಹೀಗೆ ಮಾಡಿರಿ:

ಹಂತ 1. ಐಟಿ ಇಲಾಖೆಯ ಅಧಿಕೃತ ಇ-ಫಿಲ್ಲಿಂಗ್ ಮುಖಪುಟಕ್ಕೆ ಭೇಟಿ ನೀಡಿ.

ಹಂತ 2. ಪುಟ ತೆರೆದ ನಂತರ, ಮುಖಪುಟದ 'ಕ್ವಿಕ್ ಲಿಂಕ್‌ಗಳು' ವಿಭಾಗದ ಅಡಿಯಲ್ಲಿ 'ತತ್‌ಕ್ಷಣ ಇ-ಪ್ಯಾನ್' ಆಯ್ಕೆಯನ್ನು ಕ್ಲಿಕ್ ಮಾಡಿ. ಇದು ನಿಮ್ಮನ್ನು ತ್ವರಿತ ಪ್ಯಾನ್ ಹಂಚಿಕೆ ವೆಬ್‌ಪುಟಕ್ಕೆ ಮರುನಿರ್ದೇಶಿಸುತ್ತದೆ.

ಹಂತ 3. ನಂತರ 'ಹೊಸ ಪ್ಯಾನ್ ಪಡೆಯಿರಿ' ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ 4. ಮುಂದೆ ಪ್ಯಾನ್ ಹಂಚಿಕೆಗಾಗಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು 'ಮುಂದುವರಿಸಿ' ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ 'ನಾನು ಅದನ್ನು ಖಚಿತಪಡಿಸುತ್ತೇನೆ' ಚೆಕ್ ಬಾಕ್ಸ್ ಅನ್ನು ಆಯ್ಕೆ ಮಾಡಿ.

ನಂತರ

ಹಂತ 5. ನಂತರ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಆಧಾರ್ OTP ಅನ್ನು ಸ್ವೀಕರಿಸುತ್ತೀರಿ, ಅಗತ್ಯವಿರುವ ಜಾಗದಲ್ಲಿ ಅದನ್ನು ನಮೂದಿಸಿ ಮತ್ತು 'ಆಧಾರ್ OTP ಅನ್ನು ಮೌಲ್ಯೀಕರಿಸಿ ಮತ್ತು ಮುಂದುವರಿಸಿ' ಬಟನ್ ಅನ್ನು ಕ್ಲಿಕ್ ಮಾಡಿ.

ಹಂತ 6. ಆ ನಂತರ ನಿಮ್ಮನ್ನು OTP ಮೌಲ್ಯೀಕರಣ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ. ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ ಮತ್ತು ಮುಂದುವರಿಸು ಬಟನ್ ಕ್ಲಿಕ್ ಮಾಡಿ.

ಹಂತ 7. ಬಳಿಕ OTP ಅನ್ನು ನಮೂದಿಸಿ, ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು ಮತ್ತೆ ಮುಂದುವರಿಸಿ ಬಟನ್ ಒತ್ತಿರಿ.

ಐಡಿ

ಹಂತ 8. ನಿಮ್ಮ ಇಮೇಲ್ ಐಡಿ ಮೌಲ್ಯೀಕರಿಸದಿದ್ದಲ್ಲಿ, ನೀವು 'ಇ ಮೇಲ್ ಐಡಿ ಮೌಲ್ಯೀಕರಿಸಿ' ಮೇಲೆ ಕ್ಲಿಕ್ ಮಾಡಿ, ರುಜುವಾತುಗಳನ್ನು ನಮೂದಿಸಿ, ತದನಂತರ ಮುಂದುವರಿಸು ಬಟನ್ ಕ್ಲಿಕ್ ಮಾಡಿ.

ಹಂತ 9. ಒಮ್ಮೆ ನೀವು ಮೌಲ್ಯೀಕರಣಕ್ಕಾಗಿ ನಿಮ್ಮ ಆಧಾರ್ ವಿವರಗಳನ್ನು ಸಲ್ಲಿಸಿದ ನಂತರ ನೀವು ಸ್ವೀಕೃತಿ ಸಂಖ್ಯೆಯನ್ನು ಸ್ವೀಕರಿಸುತ್ತೀರಿ. ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ ನೀವು ಪ್ಯಾನ್ ಹಂಚಿಕೆ ಸ್ಥಿತಿಯನ್ನು ವೀಕ್ಷಿಸಬಹುದು.

ಇ - ಪ್ಯಾನ್ ಪಡೆಯುವುದು ಹೇಗೆ

ಇ - ಪ್ಯಾನ್ ಪಡೆಯುವುದು ಹೇಗೆ

ಆನ್‌ಲೈನ್ ಮೂಲಕ ಇ ಪ್ಯಾನ್ ಕಾರ್ಡ್‌ ಪಡೆಯುವಾಗ ಆಧಾರ್‌ ಕಾರ್ಡ್‌ನಲ್ಲಿ ನಮೂದಾಗಿರುವ ಮೊಬೈಲ್ ಸಂಖ್ಯೆ OTP ಲಭ್ಯವಾಗುತ್ತದೆ. OTP ನಮೂದಿಸಿದ ನಂತರ ಸುಮಾರು 10 ನಿಮಿಷಗಳಲ್ಲಿ ಇ-ಪ್ಯಾನ್‌ ದೊರೆಯುತ್ತದೆ. ಆಧಾರ್‌ ಕಾರ್ಡ್‌ನಲ್ಲಿ ನೋಂದಾಯಿಸಿರುವ ಇ-ಮೇಲ್‌ಗೂ ಸಹ ಇ-ಪ್ಯಾನ್‌ ಕಾರ್ಡ್‌ ರವಾನೆಯಾಗುತ್ತದೆ. ಇನ್ನು ಇ-ಪ್ಯಾನ್‌ ಕಾರ್ಡ್‌ ಅನ್ನು ಅರ್ಜಿದಾರರು ಡೌನ್‌ಲೋಡ್ ಸಹ ಮಾಡಿಕೊಳ್ಳಬಹುದಾಗಿದೆ. ಹಾಗಾದರೇ ಆನ್‌ಲೈನ್‌ನಲ್ಲಿ ಇ-ಪ್ಯಾನ್‌ ಪಡೆಯುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಈ ಕ್ರಮಗಳನ್ನು ಅನುಸರಿಸಿ:

ಈ ಕ್ರಮಗಳನ್ನು ಅನುಸರಿಸಿ:

* ಬಳಕೆದಾರರು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ತಾಣಕ್ಕೆ ಭೇಟಿ ನೀಡುವುದು.

* ಅಲ್ಲಿ ಆಧಾರ್ ಕಾರ್ಡ್‌ ನಂಬರ್ ನಮೂದಿಸುವುದು.

* ಆಧಾರ್‌ ಕಾರ್ಡ್‌ಗೆ ಜೋಡಣೆ ಮಾಡಿರುವ ರಿಜಿಸ್ಟರ್ ಮೊಬೈಲ್ ನಂಬರ್‌ಗೆ ಓಟಿಪಿ ಬರುತ್ತದೆ.

* ಆ ಓಟಿಪಿಯನ್ನು ನಮೂದಿಸುವುದು.

* ನಂತರ ಇ-ಪ್ಯಾನ್ ಕಾರ್ಡ್ ಕಾಣಿಸುತ್ತದೆ.

ನಮೂದಿಸುವುದು

* ಬಳಕೆದಾರರು ಇ - ಪ್ಯಾನ್ ಕಾರ್ಡ್‌ ಡೌನ್‌ಲೋಡ್ ಸಹ ಮಾಡಿಕೊಳ್ಳಬಹುದು.

* ಆ ಓಟಿಪಿಯನ್ನು ನಮೂದಿಸುವುದು.

* ನಂತರ ಇ - ಪ್ಯಾನ್ ಕಾರ್ಡ್ ಕಾಣಿಸುತ್ತದೆ.

* ಬಳಕೆದಾರರು ಇ - ಪ್ಯಾನ್ ಕಾರ್ಡ್‌ ಡೌನ್‌ಲೋಡ್ ಸಹ ಮಾಡಿಕೊಳ್ಳಬಹುದು.

ಇ - ಪ್ಯಾನ್ ಕಾರ್ಡ್‌ ಪ್ರಯೋಜನ

ಇ - ಪ್ಯಾನ್ ಕಾರ್ಡ್‌ ಪ್ರಯೋಜನ

ತೆರಿಗೆ ಪಾವತಿದಾರರು ಪ್ಯಾನ್ ಕಾರ್ಡ್‌ ಪಡೆಯಲು ಅಪ್ಲಿಕೇಶನ್ ಫಾರ್ಮ್ ತುಂಬುವ ರಗಳೆ ಇರುವುದಿಲ್ಲ. ಬಳಕೆದಾರರು ಅರ್ಜಿಯನ್ನು ತೆರೆಗೆ ಇಲಾಖೆಗೆ ಅಲ್ಲಿಸುವ ಅಗತ್ಯವು ಇರಲ್ಲ. ಹಾಗೆಯೆ ತೆರೆಗೆ ಇಲಾಖೆ ಪ್ಯಾನ್‌ ಕಾರ್ಡ್‌ ಅನ್ನು ತೆರಿಗೆ ಪಾವತಿದಾರರ ಮನೆ ವಿಳಾಸಕ್ಕೆ ತಲುಪಿಸುವ ಪ್ರಮೇಯವು ಇರಲ್ಲ. ಆನ್‌ಲೈನ್‌ ಮೂಲಕ ಉಚಿತವಾಗಿ ಮತ್ತು ತ್ವರಿತವಾಗಿ ಪ್ಯಾನ್‌ ಪಡೆಯಬಹುದು.

ಆಧಾರ್

ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಆಗಿರುವುದನ್ನು ಪರಿಶೀಲಿಸುವುದು ಹೇಗೆ?
ಹಂತ 1: ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಆಧಾರ್ ಸ್ಟೇಟಸ್‌ಗೆ ಹೋಗಿ ಅಥವಾ incometaxindiaefiling.gov.in/aadhaarstatus ಕ್ಲಿಕ್‌ ಮಾಡಿ
ಹಂತ 2: ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ
ಹಂತ 3: 'ವ್ಯೂ ಲಿಂಕ್ ಆಧಾರ್ ಸ್ಟೇಟಸ್‌' ಕ್ಲಿಕ್ ಮಾಡಿ
ಹಂತ 4: ಲಿಂಕ್ ಆಗಿದೆಯಾ ಇಲ್ಲವಾ ಅನ್ನುವ ಸ್ಟೇಟಸ್‌ ಡಿಸ್‌ಪ್ಲೇ ಆಗಲಿದೆ.

Most Read Articles
Best Mobiles in India

English summary
How to apply for e-PAN through Aadhaar Card: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X