ಗೂಗಲ್ ಸರ್ಚ್ ಹಿಸ್ಟರಿ ಮತ್ತು ಲೊಕೇಶನ್ ಹಿಸ್ಟರಿ ಆಟೋ ಡಿಲೀಟ್ ಮಾಡುವುದು ಹೇಗೆ?

|

ಸ್ಮಾರ್ಟ್‌ಫೋನಿನಲ್ಲಿ ಬಳಕೆದಾರರು ಬಳಸುವ ಲೊಕೇಶನ್ ಹಾಗೂ ವೆಬ್‌ ಸರ್ಚ್ ಮಾಹಿತಿಗಳು ಹಿಸ್ಟರಿಯಲ್ಲಿ ದಾಖಲಾಗಿ ಉಳಿದಿರುತ್ತವೆ. ಕೆಲವರು ಮೇಲಿಂದ ಮೇಲೆ ಹಿಸ್ಟರಿ ಕ್ಲಿಯರ್ ಮಾಡುತ್ತಿರುತ್ತಾರೆ. ಆದರೆ ಇನ್ನು ಕೆಲವರು ಹಿಸ್ಟರಿ ಕ್ಲಿಯರ್ ಮಾಡುವ ಗೋಜಿಗೆ ಹೋಗುವುದಿಲ್ಲ. ಈ ನಿಟ್ಟಿನಲ್ಲಿ ಬಳಕೆದಾರರಿಗೆ ಅನುಕೂಲವಾಗಲೆಂದು ಸ್ವಯಂ ಚಾಲಿತವಾಗಿ ಹಿಸ್ಟರಿ ಅಳಿಸುವ ಸೌಲಭ್ಯದ ಘೋಷಣೆ ಮಾಡಿತ್ತು. ಸೆಟ್ಟಿಂಗ್ ಮೂಲಕ ಆಟೋ ಡಿಲೀಟ್ ವ್ಯವಸ್ಥೆ ಸಕ್ರಿಯ ಮಾಡಬಹುದಾಗಿದೆ.

 ಗೂಗಲ್ ವೆಬ್‌ ಸರ್ಚ್‌

ಹೌದು, ಬಳಕೆದಾರರು ಗೂಗಲ್ ವೆಬ್‌ ಸರ್ಚ್‌ನಲ್ಲಿ ಜಾಲಾಡಿರುವ ಮಾಹಿತಿ ಹಿಸ್ಟರಿಯಲ್ಲಿ ಸ್ಟೋರ್ ಆಗಿರುತ್ತದೆ. ಅದೇ ರೀತಿ ಭೇಟಿ ನೀಡಿದ ಸ್ಥಳದ ಲೊಕೇಶನ್ ಹಾಗೂ ಲೊಕೇಶನ್ ಸರ್ಚ್ ಮಾಹಿತಿಯು ಸಹ ಹಿಸ್ಟರಿಯಲ್ಲಿ ದಾಖಲಾಗಿರುತ್ತವೆ. ಆದ್ರೆ ಬಳಕೆದಾರರು ಈ ಮಾಹಿತಿಗಳನ್ನು ಮ್ಯಾನುವಲ್ ಆಗಿ ವಾಶ್‌ಔಟ್ ಮಾಡಬಹುದಾಗಿದೆ. ಇಲ್ಲವೇ ಗೂಗಲ್‌ನಲ್ಲಿರುವ ಆಟೋ ಡಿಲೀಟ್ ಮೂಲಕವಾದರು ಕ್ಲಿಯರ್ ಮಾಡಬಹುದಾಗಿದೆ. ಆಟೋ ಡಿಲೀಟ್ ಮಾಡಲು ಸೆಟ್ಟಿಂಗ್‌ನಲ್ಲಿ ಬದಲಾವಣೆ ಮಾಡಬೇಕಿರುತ್ತದೆ. ಆಟೋ ಡಿಲೀಟ್ ಸೆಟ್ಟಿಂಗ್ ಮಾಡುವ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಆಟೋ ಡಿಲೀಟ್

ಆಟೋ ಡಿಲೀಟ್

ವೆಬ್‌ ಸರ್ಚ್ ಹಾಗೂ ಲೊಕೇಶನ್ ಮಾಹಿತಿಗಳ ಡೇಟಾವನ್ನು Google ಸ್ವಯಂಚಾಲಿತವಾಗಿ ಅಳಿಸಲು, ನೀವು Google ಖಾತೆಯಲ್ಲಿ ಸೆಟ್ಟಿಂಗ್‌ಗಳನ್ನು ಸಕ್ರಿಯಗೊಳಿಸಬೇಕಾಗುತ್ತದೆ. ಈ ಆಟೋ ಡಿಲೀಟ್ ಸೌಲಭ್ಯದಲ್ಲಿ 18 ತಿಂಗಳು ಅಥವಾ 3 ತಿಂಗಳ ನಂತರ ಡೇಟಾಗಳು ಆಟೋ ಡಿಲೀಟ್ ಮಾಡುವ ಆಯ್ಕೆಗಳಿವೆ. ಬಳಕೆದಾರರು ಸೂಕ್ತ ಆಯ್ಕೆಯನ್ನು ಮಾಡಿಕೊಳ್ಳಬಹುದು. ಈ ಮುಂದಿನ ಹಂತಗಳನ್ನು ಅನುಸರಿಸಿ.

Data & Personalization

ಹಂತ 1- ನಿಮ್ಮ Google ಖಾತೆಗೆ ಲಾಗ್ ಇನ್ ಮಾಡಿ ಮತ್ತು 'Data & Personalization' ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ.

ಹಂತ 2- ಆ ನಂತರ ಕೆಳಗೆ ಸ್ಕ್ರಾಲ್ ಮಾಡಿ Activity Controls ವಿಭಾಗವನ್ನು ಕಾಣುತ್ತಿರಿ. ಇದು ಮೆನುವು ವೆಬ್ ಮತ್ತು ಅಪ್ಲಿಕೇಶನ್ ಆಕ್ಟಿವೀಟಿ, ಲೊಕೇಶನ ಹಿಸ್ಟರಿ ಮತ್ತು ಯೂಟ್ಯೂಬ್ ಹಿಸ್ಟರಿ ಎಂಬ ಮೂರು ವಿಭಾಗಗಳನ್ನು ಹೊಂದಿದೆ.

ಅಪ್ಲಿಕೇಶನ್ ಆಕ್ಟಿವೀಟಿ

ಹಂತ 3- ತದ ನಂತರ ಅಲ್ಲಿ ಕಾಣುವ ವೆಬ್ ಮತ್ತು ಅಪ್ಲಿಕೇಶನ್ ಆಕ್ಟಿವೀಟಿ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ.

ಹಂತ 4: ನಂತರ 'ವೆಬ್ ಮತ್ತು ಅಪ್ಲಿಕೇಶನ್ ಆಕ್ಟಿವೀಟಿ' ವಿಭಾಗದ ಮೇಲೆ ಕ್ಲಿಕ್ ಮಾಡಿ, ಕೆಳಗೆ ಸ್ಕ್ರಾಲ್ ಮಾಡಿ ಮತ್ತು Auto-Delete ಆಯ್ಕೆಯನ್ನು ಕ್ಲಿಕ್ ಮಾಡಿ.

3 ತಿಂಗಳ ಅಥವಾ 18 ತಿಂಗಳ

ಹಂತ 5: ಆಗ ನಿಮಗೆ ಡೇಟಾವನ್ನು ಯಾವಾಗ ಸ್ವಯಂ ಡಿಲೀಟ್ ಮಾಡಬೇಕು ಎಂಬು ಆಯ್ಕೆ ಪಟ್ಟಿ ಕಾಣಿಸುತ್ತದೆ. 3 ತಿಂಗಳ ಅಥವಾ 18 ತಿಂಗಳ ಆಯ್ಕೆ ಕಾಣಿಸುತ್ತವೆ. ನಿಮಗೆ ಬೇಕಾದ ಒಂದು ಆಯ್ಕೆ ಸೆಲೆಕ್ಟ್ ಮಾಡಿ Next ಬಟನ್ ಒತ್ತಿರಿ.

ಹಂತ 6: ನಂತರ ಇದೇ ರೀತಿ ನೀವು ಲೊಕೇಶನ್ ಹಿಸ್ಟರಿ ಮತ್ತು ಯೂಟ್ಯೂಬ್ ಹಿಸ್ಟರಿಗಳನ್ನು ಆಟೋ ಡಿಲೀಟ್ ಮಾಡಲು ಸೆಟ್ಟಿಂಗ್‌ನಲ್ಲಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Google auto-delete your data after 18 months or 3 months, you’ll have to enable the settings in the Google Account.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X