ವಾಟ್ಸಪ್‌ನಿಂದಾಗಿ ಫೋನ್‌ ಸ್ಟೋರೇಜ್‌ ಫುಲ್‌ ಆಗುತ್ತಿದೆಯೇ?..ಹಾಗಿದ್ರೆ ಹೀಗೆ ಮಾಡಿ!

|

ಫೇಸ್‌ಬುಕ್ ಮಾಲೀಕತ್ವದ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್ ಆಪ್ ವಾಟ್ಸಪ್‌ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದ್ದು, ಟ್ರೆಂಡಿಂಗ್‌ನಲ್ಲಿದೆ. ವಾಟ್ಸಪ್‌ ಟೆಕ್ಸ್ಟ್ ಮೆಸೆಜ್ ಜೊತೆಗೆ ಫೋಟೊ, ವಿಡಿಯೊ ಶೇರ್‌ಗೆ ಅತ್ಯುತ್ತಮ ತಾಣವಾಗಿದೆ. ವಾಟ್ಸಪ್‌ಗೆ ಬರುವ ಮೀಡಿಯಾ ಫೈಲ್‌ಗಳ ಮೆಸೆಜ್‌ ಆಟೋಮ್ಯಾಟಿಕ್ ಆಗಿ ಡೌನ್‌ಲೋಡ್‌ ಆಗುವುದನ್ನು ತಡೆಯಲು ಆಯ್ಕೆ ಇದ್ದು, ಆದರೆ ಬಹುತೇಕರು ಈ ಆಯ್ಕೆ ಬಳಸುವುದೇ ಇಲ್ಲ.

ಆಟೋಮ್ಯಾಟಿಕ್

ಹೌದು, ವಾಟ್ಸಪ್‌ನಲ್ಲಿ ಸ್ನೇಹಿತರಿಂದ ಬರುವ ಫೋಟೊ, ವಿಡಿಯೊ ಮೆಸೆಜ್‌ಗಳು ಆಟೋಮ್ಯಾಟಿಕ್ ಆಗಿ ಡೌನ್‌ಲೋಡ್‌ ಆಗುವುದನ್ನು ನಿಲ್ಲಿಸಬಹುದಾಗಿದೆ. ಅದಕ್ಕಾಗಿ ವಾಟ್ಸಪ್‌ನ ಸೆಟ್ಟಿಂಗ್‌ನಲ್ಲಿ ಆಯ್ಕೆಗಳನ್ನು ನೀಡಿದೆ. ಎಲ್ಲ ಫೋಟೊ ವಿಡಿಯೊಗಳ ಅನಗತ್ಯವಾಗಿರುತ್ತವೆ. ಹಾಗೂ ಇನ್ನೂ ಕೆಲವೊಮ್ಮೆ ಒಂದೇ ಫೋಟೊ, ವಿಡಿಯೊ ಬೇರೆ ಬೇರೆ ಗ್ರೂಪ್‌ಗಳಲ್ಲಿ ಬಂದಿರುತ್ತದೆ. ಇವುಗಳು ಆಟೋ ಡೌನ್‌ಲೋಡ್ ಆಗುವುದರಿಂದ ಸುಮ್ಮನೆ ಫೋನ್ ಸ್ಟೋರೇಜ್ ಫುಲ್‌ ಆಗುತ್ತದೆ. ಹೀಗಾಗಿ ಬಳಕೆದಾರರು ಆಟೋಮ್ಯಾಟಿಕ್ ಡೌನ್‌ಲೋಡ್‌ ಆಯ್ಕೆ ಆಫ್‌ ಮಾಡಬಹುದಾಗಿದೆ. ಮುಂದೆ ಓದಿರಿ.

ಆಟೋ ಡೌನ್‌ಲೋಡ್ ಆಫ್

ಆಟೋ ಡೌನ್‌ಲೋಡ್ ಆಫ್

ವಾಟ್ಸಪ್‌ ಆಪ್‌ನಲ್ಲಿ ಬರುವ ಫೋಟೊ ಮತ್ತು ವಿಡಿಯೊಗಳಿಂದ ಫೋನ್‌ ಮೆಮೊರಿ ಫುಲ್‌ ಆಗುವ ಸಾಧ್ಯತೆಗಳಿರುತ್ತವೆ. ಆದರೆ ಆಟೋ ಡೌನ್‌ಲೋಡ್ ಆಫ್ ಮಾಡುವ ಮೂಲಕ ಅನಗತ್ಯ ಪೋಟೊ, ವಿಡಿಯೊಗಳಿಂದ ಸ್ಮಾರ್ಟ್‌ಫೋನ್‌ ಸ್ಥಳ ತುಂಬುವುದನ್ನು ನಿಯಂತ್ರಿಸಬಹುದಾಗಿದೆ. ಬಳಕೆದಾರರು ಅಗತ್ಯ ಇದ್ದಾಗ ಮಾತ್ರ ಫೋಟೊ, ವಿಡಿಯೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಆಂಡ್ರಾಯ್ಡ್‌ನಲ್ಲಿ ಆಟೋ ಆಫ್‌ ಮಾಡಲು ಈ ಹಂತಗಳನ್ನು ಅನುಸರಿಸಿ.

ಆಂಡ್ರಾಯ್ಡ್‌ನಲ್ಲಿ ಆಟೋ ಆಫ್‌ ಮಾಡಲು ಈ ಹಂತಗಳನ್ನು ಅನುಸರಿಸಿ.

* ಸ್ಮಾರ್ಟ್‌ಫೋನಿನಲ್ಲಿ ವಾಟ್ಸಪ್ ಆಪ್‌ ತೆರೆಯಿರಿ

* ಬಲ ಭಾಗದಲ್ಲಿರುವ ಮೆನು ಐಕಾನ್ ಒತ್ತಿರಿ

* ನಂತರ ಸೆಟ್ಟಿಂಗ್ ಆಯ್ಕೆ ಕ್ಲಿಕ್ ಮಾಡಿರಿ

* ಆನಂತರ ಚಾಟ್ಸ್‌ ಆಯ್ಕೆಯನ್ನು ಒತ್ತಿರಿ.

* ಅಲ್ಲಿ ಮೀಡಿಯಾ ವಿಸಿಬಲಿಟಿ ಆಯ್ಕೆ ಕಾಣಿಸುತ್ತದೆ

* ಕಾಣಿಸುವ ವಿಸಿಬಲಿಟಿ ಆಯ್ಕೆಯನ್ನು ಆಫ್‌ ಮಾಡಿರಿ.

ಐಫೋನ್‌ನಲ್ಲಿ ಈ ಹಂತಗಳನ್ನು ಅನುಸರಿಸಿ.

ಐಫೋನ್‌ನಲ್ಲಿ ಈ ಹಂತಗಳನ್ನು ಅನುಸರಿಸಿ.

* ವಾಟ್ಸಪ್ ಆಪ್‌ ತೆರೆಯಿರಿ

* ಬಲ ಭಾಗದಲ್ಲಿರುವ ಮೆನು ಐಕಾನ್ ಒತ್ತಿರಿ

* ಸೆಟ್ಟಿಂಗ್ ಆಯ್ಕೆ ಕ್ಲಿಕ್ ಮಾಡಿರಿ

* ಚಾಟ್ಸ್‌ ಆಯ್ಕೆಯನ್ನು ಒತ್ತಿರಿ.

* ಲುಕ್‌ ಫಾರ್ ಸೇವ್ ಟು ಕ್ಯಾಮೆರಾ ರೋಲ್

* ಅದನ್ನು ಆಫ್‌ ಮಾಡಿರಿ.

ಆಯ್ದ ನಂಬರ್‌ಗಳ ಡೌನ್‌ಲೊಡ್ ತಡೆಯಲು

ಆಯ್ದ ನಂಬರ್‌ಗಳ ಡೌನ್‌ಲೊಡ್ ತಡೆಯಲು

* ವಾಟ್ಸಪ್ ಆಪ್‌ ತೆರೆಯಿರಿ

* ಬಲ ಭಾಗದಲ್ಲಿರುವ ಮೆನು ಐಕಾನ್ ಒತ್ತಿರಿ

* ಸೆಟ್ಟಿಂಗ್ ಆಯ್ಕೆ ಕ್ಲಿಕ್ ಮಾಡಿರಿ

* ಚಾಟ್ಸ್‌ ಆಯ್ಕೆಯನ್ನು ಒತ್ತಿರಿ.

* ಅಲ್ಲಿ 'ಶೋ ನ್ಯೂಲಿ ಡೌನ್‌ಲೊಡೆಡ್ ಮೀಡಿಯಾ ಫ್ರಾಮ್‌ ದಿಸ್ ಚಾಟ್‌ ಇನ್ ಯೂವರ್ ಪೋನ್‌ ಗ್ಯಾಲರಿ' ಕಾಣಿಸುತ್ತದೆ?

* ನಂಬರ್ ಆಯ್ಕೆ ಮಾಡಿ.

Best Mobiles in India

English summary
Media files on WhatsApp occupy much of our phone's memory space.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X