ವಾಟ್ಸಾಪ್‌ನಲ್ಲಿ ನೀವು ಆನ್‌ಲೈನ್‌ ಇದ್ರೂ, ಯಾರಿಗೂ ಕಾಣಿಸಲ್ಲ!..ಹೀಗೆ ಮಾಡಿ!

|

ಜನಪ್ರಿಯ ವಾಟ್ಸಾಪ್‌ (WhatsApp) ಈ ವರ್ಷ ಬಳಕೆದಾರರಿಗೆ ಹತ್ತು ಹಲವು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅವುಗಳಲ್ಲಿ ಕೆಲವು ಉತ್ತಮವಾಗಿವೆ ಮತ್ತೆ ಕೆಲವು ಹೆಚ್ಚು ಉಪಯುಕ್ತ ಎನಿಸದಿರಬಹುದು. ಹಾಗೆಯೇ ವಾಟ್ಸಾಪ್‌ ಪ್ಲಾಟ್‌ಫಾರ್ಮ್ ನಲ್ಲಿ ಆನ್‌ಲೈನ್‌ ಸ್ಟೇಟಸ್‌ (WhatsApp status) ಹೈಡ್‌ / ಮರೆ ಮಾಡುವ ಆಯ್ಕೆ ಸಹ ಹೆಚ್ಚು ಅನುಕೂಲಕರ ಹಾಗೂ ಪ್ರತಿಯೊಬ್ಬರಿಗೂ ಉಪಯುಕ್ತ ಎನಿಸಿದೆ ಎನ್ನಬಹುದು.

ಆನ್‌ಲೈನ್‌

ಹೌದು, ವಾಟ್ಸಾಪ್‌ ನಲ್ಲಿ ಬಳಕೆದಾರರು ತಮ್ಮ ಆನ್‌ಲೈನ್‌ ಸ್ಟೇಟಸ್‌ ಮಾಹಿತಿಯನ್ನು ಇತರರಿಗೆ ಕಾಣಿಸದಂತೆ ಮರೆಮಾಡುವ ಆಯ್ಕೆ ಇದೆ. ಐಒಎಸ್ ಮತ್ತು ಆಂಡ್ರಾಯ್ಡ್ ಈ ಎರಡು ಬಳಕೆದಾರರಿಗೆ ಆನ್‌ಲೈನ್‌ ಸ್ಟೇಟಸ್‌ (WhatsApp status) ಮಾಹಿತಿ ಹೈಡ್ ಮಾಡುವ ಆಯ್ಕೆ ಈಗ ಲಭ್ಯವಿದೆ. ಈ ಫೀಚರ್‌ ಮೂಲಕ ಬಳಕೆದಾರರು ಸುಲಭವಾಗಿ ಆನ್‌ಲೈನ್ ಸ್ಟೇಟಸ್ ಮರೆಮಾಡಲು ಅನುಮತಿಸುತ್ತದೆ.

ಸ್ಟೇಟಸ್‌

ಹಾಗೆಯೇ ಬಳಕೆದಾರರು ತಮಗೆ ಬೇಕಾದಾಗ ಈ ಆಯ್ಕೆಯನ್ನು ನಿಷ್ಕ್ರಿಯಗೊಳಿಸಬಹುದು ಮತ್ತು ಸಕ್ರಿಯಗೊಳಿಸಬಹುದು. ಹಾಗಾದರೆ ವಾಟ್ಸಾಪ್‌ನಲ್ಲಿ ಬಳಕೆದಾರರು ತಮ್ಮ ಆನ್‌ಲೈನ್‌ ಸ್ಟೇಟಸ್‌ ಅನ್ನು ಹೈಡ್‌ (WhatsApp status) ಮಾಡುವುದು ಹೇಗೆ? ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಾಟ್ಸಾಪ್‌ ಸ್ಟೇಟಸ್‌ ಹೈಡ್‌ ಮಾಡಲು ಈ ಕ್ರಮಗಳನ್ನು ಅನುಸರಿಸಿ:

ವಾಟ್ಸಾಪ್‌ ಸ್ಟೇಟಸ್‌ ಹೈಡ್‌ ಮಾಡಲು ಈ ಕ್ರಮಗಳನ್ನು ಅನುಸರಿಸಿ:

ಹಂತ 1: ಬಳಕೆದಾರರು, ಮೊದಲು ತಮ್ಮ ಫೋನಿನಲ್ಲಿ ವಾಟ್ಸಾಪ್‌ ಅಪ್ಲಿಕೇಶನ್ ಅನ್ನು ಅಪ್‌ಡೇಟ್‌ ಮಾಡುವುದು

ಹಂತ 2: ಆ ಬಳಿಕ, ವಾಟ್ಸಾಪ್‌ ಆಪ್ ತೆರೆಯಿರಿ ಮತ್ತು ಸೆಟ್ಟಿಂಗ್ ಟ್ಯಾಬ್‌ಗೆ ಹೋಗಿ

ಹಂತ 3: ನಂತರದಲ್ಲಿ ಗೌಪ್ಯತೆ ಆಯ್ಕೆಗೆ ಹೋಗಿ

ಹಂತ 4: ಆ ನಂತರ, ಲಾಸ್ಟ್ ಸೀನ್ ಮತ್ತು ಆನ್‌ಲೈನ್ ಸ್ಟೇಟಸ್ ಆಯ್ಕೆಯನ್ನು ಕ್ಲಿಕ್ ಮಾಡಿ

ಹಂತ 5: ನಿರ್ದಿಷ್ಟ ವ್ಯಕ್ತಿಯಿಂದ ನಿಮ್ಮ ಆನ್‌ಲೈನ್ ಸ್ಟೇಟಸ್ ಅನ್ನು ಮರೆಮಾಡಲು, ಯಾರೂ ಇಲ್ಲ ಆಯ್ಕೆಯನ್ನು ಕ್ಲಿಕ್ ಮಾಡಿ.

ಕ್ಲಿಕ್

ಆದ್ದರಿಂದ, ನೀವು ಲಾಸ್ಟ್ ಸೀನ್ ಟ್ಯಾಬ್ ಅಡಿಯಲ್ಲಿ ಬರುವ Nobody ಆಯ್ಕೆಯನ್ನು ಕ್ಲಿಕ್ ಮಾಡಬಹುದು ಮತ್ತು ನಂತರ ಅದೇ ಸ್ಕ್ರೀನ್‌ನಲ್ಲಿ ತೋರಿಸಿರುವ 'Same as Last Seen' ಆಯ್ಕೆಯನ್ನು ಕ್ಲಿಕ್ ಮಾಡಿ.

ಬಳಕೆದಾರರಿಗೆ

ವಾಟ್ಸಾಪ್‌ ಸ್ಟೇಟಸ್‌ ಹೈಡ್‌ ಬಳಕೆದಾರರಿಗೆ Everyone, My contacts, Nobody ಮತ್ತು My contacts except ಈ ನಾಲ್ಕು ಆಯ್ಕೆಗಳು ಸಿಗಲಿವೆ. ಈ ನಾಲ್ಕು ಆಯ್ಕೆಗಳ ಮಾಹಿತಿ

ಸ್ಟೇಟಸ್‌

- ಆದ್ದರಿಂದ, ನೀವು "Everyone" ಆಯ್ಕೆಯನ್ನು ಕ್ಲಿಕ್ ಮಾಡಿದರೆ, ನಿಮ್ಮ ಆನ್‌ಲೈನ್ ಸ್ಟೇಟಸ್‌ ಅನ್ನು ಯಾರಿಂದಲೂ ಮರೆಮಾಡಲಾಗುವುದಿಲ್ಲ.

- 'My contacts' ಆಯ್ಕೆಯು ನಿಮ್ಮ ಸಂಪರ್ಕ ಪಟ್ಟಿಯಲ್ಲಿಲ್ಲದ ಪ್ರತಿಯೊಬ್ಬರಿಂದ ನಿಮ್ಮ ಆನ್‌ಲೈನ್ ಸ್ಟೇಟಸ್‌ ಅನ್ನು ಮರೆಮಾಡುತ್ತದೆ.

ಬೇರೆಯವರನ್ನು

- "Nobody" ಆಯ್ಕೆಯು ಮೂಲಭೂತವಾಗಿ ನಿಮ್ಮ ಆನ್‌ಲೈನ್ ಸ್ಟೇಟಸ್‌ ಅನ್ನು ಎಲ್ಲರಿಂದ ಮರೆಮಾಡುತ್ತದೆ ಮತ್ತು ನೀವು ಆನ್‌ಲೈನ್‌ಗೆ ಬಂದಾಗ ಅಥವಾ ಬೇರೆಯವರೊಂದಿಗೆ ಚಾಟ್ ಮಾಡುವಾಗ ಮತ್ತು ಬೇರೆಯವರನ್ನು ನಿರ್ಲಕ್ಷಿಸಿದಾಗ ಯಾರಿಗೂ ನೋಡಲು ಸಾಧ್ಯವಾಗುವುದಿಲ್ಲ.

- ಕೊನೆಯದಾಗಿ, 'My contacts except' ಆಯ್ಕೆಯು ಬಳಕೆದಾರರು ತಮ್ಮ ಆನ್‌ಲೈನ್ ಸ್ಟೇಟಸ್‌ ಅನ್ನು ನಿರ್ದಿಷ್ಟ ಜನರಿಂದ ಮರೆಮಾಡಲು ಅನುಮತಿಸುತ್ತದೆ ಮತ್ತು ಇತರರು ಆನ್‌ಲೈನ್‌ಗೆ ಬಂದಾಗ ನೋಡಲು ಸಾಧ್ಯವಾಗುತ್ತದೆ.

ಸ್ಟೇಟಸ್

ಹೈಡ್ ಆನ್‌ಲೈನ್ ಸ್ಟೇಟಸ್ ಫೀಚರ್‌ನೊಂದಿಗೆ, ಬಳಕೆದಾರರು ಇತರೆ ಯಾರಿಗೂ ತಿಳಿಯದಂತೆ ಸುಲಭವಾಗಿ ಆನ್‌ಲೈನ್‌ನಲ್ಲಿ ಉಳಿಯಲು ಸಾಧ್ಯವಾಗುತ್ತದೆ. ವಾಟ್ಸಾಪ್‌ನಲ್ಲಿ ಯಾರೊಬ್ಬರ ಮೆಸೆಜ್‌ ಅನ್ನು ನಿರ್ಲಕ್ಷಿಸಲು ಪ್ರಯತ್ನಿಸುತ್ತಿರುವಾಗ ಈ ಫೀಚರ್‌ ಮುಖ್ಯವಾಗಿ ಪರಿಸ್ಥಿತಿಯಲ್ಲಿ ಸಹಾಯ ಎನಿಸುತ್ತದೆ.

Best Mobiles in India

English summary
How to be online on WhatsApp without anyone knowing.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X