ಆಂಡ್ರಾಯ್ಡ್‌ ಫೋನಿನಲ್ಲಿ ಜಾಹಿರಾತುಗಳನ್ನು ಬ್ಲಾಕ್ ಮಾಡುವುದು ಹೇಗೆ ಗೊತ್ತಾ?

|

ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಾಗಿರುವುದರಿಂದ ಆನ್‌ಲೈನ್ ಜಾಹಿರಾತು ಮಾರುಕಟ್ಟೆ ಸಹ ವಿಸ್ತಾರವಾಗಿ ಬೆಳೆಯುತ್ತಿದೆ. ಬಳಕೆದಾರರು ಸ್ಮಾರ್ಟ್‌ಫೋನಿನಲ್ಲಿ ಬ್ರೌಸಿಂಗ್ ಮಾಡುವಾಗ, ಅಪ್ಲಿಕೇಶನ್ ಬಳಕೆ ಮಾಡುವಾಗ ನಡು ನಡುವೆ ಜಾಹಿರಾತುಗಳು ಕಾಣಿಸಿಕೊಂಡು ಡಿಸ್ಟರ್ಬ್‌ ಮಾಡುತ್ತವೆ ಎನ್ನುವುದು ಬಹುತೇಕ ಸ್ಮಾರ್ಟ್‌ಫೋನ್ ಬಳಕೆದಾರರ ಮಾತು. ಹೀಗೆ ಅಡ್ಡಲಾಗಿ ಕಾಣಿಸಿಕೊಳ್ಳುವ ಜಾಹಿರಾತುಗಳು ಕಿರಿ ಕಿರಿ ಅನಿಸುತ್ತವೆ ಅಲ್ಲವೇ.?

ಆಂಡ್ರಾಯ್ಡ್‌ ಫೋನಿನಲ್ಲಿ ಜಾಹಿರಾತುಗಳನ್ನು ಬ್ಲಾಕ್ ಮಾಡುವುದು ಹೇಗೆ ಗೊತ್ತಾ?

ಪ್ರಸ್ತುತ ಪ್ರತಿಯೊಬ್ಬರು ಸ್ಮಾರ್ಟ್‌ಫೋನ್‌ ಹೊಂದಿರುತ್ತಾರೆ, ಅಲ್ಲದೇ ಇಂಟರ್ನೆಟ್ ಬಳಕೆ ಸಹ ಮಾಡುತ್ತಿರುತ್ತಾರೆ. ಹೀಗಾಗಿ ಕಂಪನಿಗಳು ತಮ್ಮ ಜಾಹಿರಾತುಗಳನ್ನು ಜನರಿಗೆ ತಲುಪಿಸಲು ಆನ್‌ಲೈನ್ ತಾಣಗಳ ಮೇಲೆಯೇ ಹೆಚ್ಚಾಗಿ ಕಣ್ಣಿಟ್ಟಿವೆ. ಆನ್‌ಲೈನ್‌ ಜಾಹಿರಾತುಗಳು ಚುಟುಕಾಗಿದ್ದರೂ ಗ್ರಾಹಕರನ್ನು ಆಕರ್ಷಿಸುವಂತಿದ್ದು, ನಡು ನಡುವೆ ಗ್ರಾಹಕರನ್ನು ಜಾಹಿರಾತುಗಳು ತ್ವರಿತವಾಗಿ ಕಾಣಿಸಿಕೊಳ್ಳುತ್ತವೆ.

ಆಂಡ್ರಾಯ್ಡ್‌ ಫೋನಿನಲ್ಲಿ ಜಾಹಿರಾತುಗಳನ್ನು ಬ್ಲಾಕ್ ಮಾಡುವುದು ಹೇಗೆ ಗೊತ್ತಾ?

ಸ್ಮಾರ್ಟ್‌ಫೋನ್‌ ಬಳಕೆದಾರರೇ ಸಾಮಾಜಿಕ ತಾಣಗಳ ಬಳಕೆಯಲ್ಲಿ, ಕ್ರೋಮ್‌ ಬ್ರೌಸಿಂಗ್ ವೇಳೆ ಮತ್ತು ಇತರೆ ಇಂಟರ್ನೆಟ್‌ ಆಪ್ಸ್‌ಗಳ ಬಳಕೆಯ ವೇಳೆ ಡಿಸ್‌ಪ್ಲೇ ಆಗುವ ಜಾಹಿರಾತುಗಳನ್ನು ಬ್ಲಾಕ್‌ ಮಾಡಬಹುದಾಗಿದೆ. ಆ ಮೂಲಕ ಜಾಹಿರಾತುಗಳ ಕಿರಿ ಕಿರಿಯಿಂದ ಮುಕ್ತವಾಗಬಹುದು. ಹಾಗಾದರೇ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನಿನಲ್ಲಿ ಬ್ರೌಸಿಂಗ್ ವೇಳೆ ಕಾಣಿಸಿಕೊಳ್ಳುವ ಜಾಹಿರಾತುಗಳನ್ನು ಬ್ಲಾಕ್‌ ಮಾಡುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಫೋನಿನಲ್ಲಿ ನೆಟ್‌ಫ್ಲೆಕ್ಸ್ ವೀಕ್ಷಿಸಲು ಬೆಸ್ಟ್‌ ಪ್ರೀಪೇಡ್‌ ಪ್ಲ್ಯಾನ್ಸ್‌!ಓದಿರಿ : ಫೋನಿನಲ್ಲಿ ನೆಟ್‌ಫ್ಲೆಕ್ಸ್ ವೀಕ್ಷಿಸಲು ಬೆಸ್ಟ್‌ ಪ್ರೀಪೇಡ್‌ ಪ್ಲ್ಯಾನ್ಸ್‌!

ಗೂಗಲ್‌ ಸೆಟ್ಟಿಂಗ್ ಆಯ್ಕೆ

ಗೂಗಲ್‌ ಸೆಟ್ಟಿಂಗ್ ಆಯ್ಕೆ

ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಕ್ರೋಮ್‌ ಆಪ್‌ ಮೂಲಕ ಇಂಟರ್ನೆಟ್‌ ಬ್ರೌಸ್‌ ಮಾಡುವಾಗ, ಆರ್ಟಿಕಲ್ ಅಥವಾ ಟೆಕ್ಟ್ಸ್ ಕಂಟೆಂಟ್ ಓದುವಾಗ ಅನೇಕ ಬಾರಿ ನಡು ನಡುವೆ ಜಾಹಿರಾತುಗಳು ಕಾಣಿಸಿಕೊಳ್ಳುತ್ತವೆ. ಅಸಲಿಗೆ ಈ ಜಾಹಿರಾತುಗಳನ್ನು ಗೂಗಲ್ ಕ್ರೋಮ್‌ ಡಿಸ್‌ಪ್ಲೇ ಮಾಡಿರುವುದಿಲ್ಲ. ಆದರೆ ಆ ಜಾಹಿರಾತುಗಳನ್ನು ಬ್ಲಾಕ್ ಮಾಡಲು ಅವಕಾಶವಿದೆ. ಈ ಮುಂದಿನ ಹಂತಗಳನ್ನು ನೋಡಿರಿ.

* ಗೂಗಲ್‌ ಕ್ರೋಮ್‌ ಬ್ರೌಸರ್‌ ಸೆಟ್ಟಿಂಗ್ ತೆರೆಯಿರಿ.
* ನಂತರ ಸೈಟ್‌ ಸೆಟ್ಟಿಂಗ್ ಆಯ್ಕೆಯನ್ನು ಟ್ಯಾಪ್‌ ಮಾಡಿರಿ.
* ಆನಂತರ ಪಾಪ್‌ಅಪ್ಸ್‌ ಮತ್ತು toggle ಸ್ವಿಚ್ ಮಾಡಿರಿ.

ಆಡ್ ಬ್ಲಾಕರ್ ಆಪ್‌ಗಳ ಬಳಕೆ

ಆಡ್ ಬ್ಲಾಕರ್ ಆಪ್‌ಗಳ ಬಳಕೆ

ಇಂಟರ್ನೆಟ್‌ ಬಳಕೆಯ ವೇಳೆ ಜಾಹಿರಾತು ಕಿರಿ ಕಿರಿ ತಡೆಯಲು ಸ್ಮಾರ್ಟ್‌ಫೋನ್‌ನಲ್ಲಿ ಆಡ್ ಬ್ಲಾಕರ್ ಆಪ್ ಬಳಕೆ ಮಾಡಬಹುದಾಗಿದೆ. ಇದು ಸ್ಮಾರ್ಟ್‌ಫೋನ್‌ ಜಾಹಿರಾತುಗಳನ್ನು, ಇಂಟರ್ನೆಟ್ ಬಳಕೆಯ ವೇಳೆಯ ಜಾಹಿರಾತುಗಳನ್ನು ಮತ್ತು ಸರ್ಚ್ ಇಂಜಿನ್ ಆಪ್‌ಗಳಲ್ಲಿ ಬ್ರೌಸ್ ಮಾಡುವಾಗ ಕಾಣಿಸುವ ಜಾಹಿರಾತುಗಳನ್ನು ತಡೆಯಲಿದೆ. ಆಂಡ್ರಾಯ್ಡ್ ಫೋನಿನಲ್ಲಿ ad-blocker APK ಪ್ಲಸ್‌ ಆಪ್‌ ಅನ್ನು ಇನ್‌ಸ್ಟಾಲ್‌ ಮಾಡಬಹುದಾಗಿದೆ.

ಓದಿರಿ : ಭಾರತದಲ್ಲಿ ಪ್ಯಾನಸೋನಿಕ್ 'ಲುಮಿಕ್ಸ್‌ G95' ಕ್ಯಾಮೆರಾ ಲಾಂಚ್!.ಸೂಪರ್ ಫೀಚರ್ಸ್!ಓದಿರಿ : ಭಾರತದಲ್ಲಿ ಪ್ಯಾನಸೋನಿಕ್ 'ಲುಮಿಕ್ಸ್‌ G95' ಕ್ಯಾಮೆರಾ ಲಾಂಚ್!.ಸೂಪರ್ ಫೀಚರ್ಸ್!

ಆಡ್‌ಬ್ಲಾಕರ್ (AdBlock Plus) ಪ್ಲಸ್‌ ಆಪ್ ಇನ್‌ಸ್ಟಾಲ್

ಆಡ್‌ಬ್ಲಾಕರ್ (AdBlock Plus) ಪ್ಲಸ್‌ ಆಪ್ ಇನ್‌ಸ್ಟಾಲ್

* ಆಡ್‌ಬ್ಲಾಕರ್ ಪ್ಲಸ್‌ ಆಪ್‌ ಅನ್ನು ಬ್ರೌಸರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬೇಕು.
* ಫೈಲ್ ಮ್ಯಾನೇಜರ್ ಆಪ್‌ ತೆರೆದು ಆಡ್‌ಬ್ಲಾಕರ್ ಪ್ಲಸ್‌ ಆಪ್‌ನ APK ಫೈಲ್ ನೋಡಿ.
* ಆಡ್‌ಬ್ಲಾಕರ್ ಪ್ಲಸ್‌ ಆಪ್‌ APK ಫೈಲ್‌ ಇನ್‌ಸ್ಟಾಲ್ ಮಾಡಿರಿ.
* ಆನಂತರ ಆಪ್ ತೆರೆದು ಓಕೆ ಆಯ್ಕೆ ಸೆಲೆಕ್ಟ್ ಮಾಡಿರಿ.

ಇತರೆ ಆಡ್ ಬ್ಲಾಕರ್ ಆಪ್ಸ್

ಇತರೆ ಆಡ್ ಬ್ಲಾಕರ್ ಆಪ್ಸ್

ಸ್ಮಾರ್ಟ್‌ಫೋನ್‌ ಇಂಟರ್ನೆಟ್‌ ಬಳಕೆ ಮಾಡುವಾಗ ನಡು ನಡುವೆ ಕಾಣಿಸುವ ಜಾಹಿರಾತುಗಳ ಕಿರಿ ಕಿರಿಯನ್ನು ದೂರಾಗಿಸಲು ಆಡ್‌ಬ್ಲಾಕರ್ ಪ್ಲಸ್‌ ಆಪ್‌ ಬಳಸಬಹುದಾಗಿದೆ. ಇದರೊಂದಿಗೆ ಆಡ್‌ಗಾರ್ಡ್‌ (AdGuard) , ಆಡ್‌ಲಾಕ್ (AdLock) ಮತ್ತು ಆಡ್‌ಅವೇ (AdAway) ಅಪ್ಲಿಕೇಶನ್‌ಗಳು ಸಹ ನೆಟ್‌ ಬ್ರೌಸ್‌ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಜಾಹಿರಾತು ತಡೆಗೆ ನೆರವಾಗಲಿವೆ. ಸ್ಮಾರ್ಟ್‌ಫೋನ್‌ನಲ್ಲಿ ಈ ಆಪ್‌ಗಳು ಇನ್‌ಸ್ಟಾಲ್‌ ಆಗದೇ ಇದ್ರೆ, ಫೋನಿನಲ್ಲಿ ಡಿವೈಸ್‌ ಸೆಟ್ಟಿಂಗ್ ತೆರೆದು, ಅನ್‌ನೌನ್‌ ಸೋರ್ಸ್‌ ಆಯ್ಕೆಯಲ್ಲಿ ಬದಲಾವಣೆ ಮಾಡಿರಿ.

ಓದಿರಿ : ಬಿಎಸ್‌ಎನ್‌ಎಲ್‌ನಿಂದ ಮತ್ತೆ ಬಿಗ್ ವ್ಯಾಲಿಡಿಟಿ ಪ್ಲ್ಯಾನ್!..ಸ್ಪೆಷಲ್ ಏನು? ಓದಿರಿ : ಬಿಎಸ್‌ಎನ್‌ಎಲ್‌ನಿಂದ ಮತ್ತೆ ಬಿಗ್ ವ್ಯಾಲಿಡಿಟಿ ಪ್ಲ್ಯಾನ್!..ಸ್ಪೆಷಲ್ ಏನು?

Best Mobiles in India

English summary
From Chrome settings to ad blocking apps, here is how you can block ads on your Android smartphone. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X