ಐಫೋನ್‌ನಲ್ಲಿ ಫೋಟೊಗಳ ಬ್ಯಾಕ್‌ಗ್ರೌಂಡ್‌ ಬ್ಲರ್ ಮಾಡಲು ಹೀಗೆ ಮಾಡಿರಿ!

|

ಪ್ರಸ್ತುತ ಮಾರುಕಟ್ಟೆಯಲ್ಲಿ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳು ಲಭ್ಯ ಇದ್ದು, ಡಿಎಸ್‌ಎಲ್‌ಆರ್‌ ಮಾದರಿಯ ಫೋಟೊಗಳನ್ನು ಫೋನ್‌ಗಳಲ್ಲಿಯೇ ಸೆರೆ ಹಿಡಿಯಬಹುದಾಗಿದೆ. ಪ್ರಮುಖ ಬ್ರ್ಯಾಂಡ್‌ಗಳು ಹೈ ಎಂಡ್ ಕ್ಯಾಮೆರಾ ಸೆನ್ಸಾರ್ ಇರುವ ಫೋನ್‌ಗಳು ಗ್ರಾಹಕರನ್ನು ಸೆಳೆದಿವೆ. ಹಾಗೆಯೇ ಆಪಲ್‌ ಐಫೋನ್‌ಗಳು ಅತ್ಯುತ್ತಮ ಕ್ಯಾಮೆರಾ ಆಯ್ಕೆ ಹೊಂದಿದ್ದು, ಐಫೋನ್‌ನಲ್ಲಿ ಫೋಟೊಗಳು ಉತ್ತಮವಾಗಿ ಮೂಡಿಬರುತ್ತವೆ. ಬ್ಯಾಕ್‌ಗ್ರೌಂಡ್‌ ಬ್ಲರ್ ಮಾಡಿದಾಗ ಫೋಟೊಗಳು ಮತ್ತಷ್ಟು ಆಕರ್ಷಕ ಎನಿಸುತ್ತವೆ.

ಬಳಕೆದಾರರಿಗೆ

ಆಪಲ್‌ನ ಇತ್ತೀಚಿನ ಐಫೋನ್‌ಗಳು ಅತ್ಯುತ್ತಮ ಕ್ಯಾಮೆರಾ ಆಯ್ಕೆಗಳನ್ನು ಒಳಗೊಂಡಿವೆ. ಐಫೋನ್‌ 13 ಡಿವೈಸ್‌ನಲ್ಲಿ ಕ್ಯಾಮರಾ ಆಪ್‌ನಲ್ಲಿ ನಿಮ್ಮ ಫೋಟೊಗಳನ್ನು ಕಸ್ಟಮೈಸ್ ಮಾಡಲು ಅವಕಾಶ ಇದೆ. ಹೆಚ್ಚಿನ ಕಾಂಟ್ರಾಸ್ಟ್, ಸೇರಿದಂತೆ ಇತರೆ ಕೆಲವು ಆಯ್ಕೆಗಳು ಬಳಕೆದಾರರಿಗೆ ದೊರೆಯುತ್ತವೆ. ಮ್ಯಾಕ್ರೋ ಛಾಯಾಗ್ರಹಣವು ಐಫೋನ್‌ 13 ಪ್ರೊ ಮತ್ತು ಐಫೋನ್‌ 13 ಪ್ರೊ ಮ್ಯಾಕ್ಸ್ ನಲ್ಲಿ ಲಭ್ಯವಿದೆ. ಇದು 2 ಮಿಲಿಮೀಟರ್‌ಗಳಷ್ಟು ತೀಕ್ಷ್ಣವಾದ ಫೋಕಸ್‌ನೊಂದಿಗೆ ಅದ್ಭುತವಾದ ಕ್ಲೋಸ್-ಅಪ್‌ಗಳನ್ನು ಅನುಮತಿಸುತ್ತದೆ. ಸ್ಲೋ-ಮೋಷನ್ ಮತ್ತು ಟೈಮ್ ಲ್ಯಾಪ್ಸ್ ಸೇರಿದಂತೆ ಮ್ಯಾಕ್ರೋ ಮೂವಿಸ್‌, ಐಫೋನ್‌ 13 ಪ್ರೊ ಮತ್ತು ಐಫೋನ್‌ 13 ಐಫೋನ್‌ ಮ್ಯಾಕ್ಸ್‌ ನೊಂದಿಗೆ ಸಹ ಸಾಧ್ಯವಿದೆ.

ಬ್ಯಾಕ್‌ಗ್ರೌಂಡ್‌

ಸಾಮಾನ್ಯವಾಗಿ ಇನ್‌ಸ್ಟಾಗ್ರಾಮ್‌ ಮತ್ತು ವಾಟ್ಸಾಪ್‌ ಪ್ರೊಫೈಲ್‌ಗಳಲ್ಲಿ ಬ್ಯಾಕ್‌ಗ್ರೌಂಡ್‌ ಬ್ಲರ್ ಇರುವ ಫೋಟೊಗಳನ್ನು ಹೆಚ್ಚಾಗಿ ಕಾಣುತ್ತೇವೆ. ಇದೇ ರೀತಿ ನೀವು ನಿಮ್ಮ ಫೋಟೊಗಳ ಬ್ಯಾಕ್‌ಗ್ರೌಂಡ್‌ ಬ್ಲರ್ ಮಾಡಲು ಪ್ರಯತ್ನಿಸಿದ್ದೀರಾ? ಇನ್ನು ಫೋಟೊಗಳ ಬ್ಯಾಕ್‌ಗ್ರೌಂಡ್‌ ಬ್ಲರ್ ಮಾಡಲು ನಿಮಗೆ ಯಾವುದೇ ಥರ್ಡ್‌ ಪಾರ್ಟಿ ಆಪ್‌ಗಳ ಅಗತ್ಯವಾಗಲಿ. ಇಲ್ಲವೇ ದುಬಾರಿ ಬೆಲೆಯ DSLR ಅಗತ್ಯವಾಗಲಿ ಇರದು. ಹಾಗಾದರೆ ಆಪಲ್‌ ಐಫೋನ್‌ಗಳಲ್ಲಿ ಫೋಟೊಗಳ ಬ್ಯಾಕ್‌ಗ್ರೌಂಡ್‌ ಬ್ಲರ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಐಫೋನ್‌ನಲ್ಲಿ ಫೋಟೋ ಬ್ಯಾಕ್‌ಗ್ರೌಂಡ್‌ ಬ್ಲರ್ ಮಾಡಲು ಈ ಹಂತಗಳನ್ನು ಅನುಸರಿಸಿ:

ಐಫೋನ್‌ನಲ್ಲಿ ಫೋಟೋ ಬ್ಯಾಕ್‌ಗ್ರೌಂಡ್‌ ಬ್ಲರ್ ಮಾಡಲು ಈ ಹಂತಗಳನ್ನು ಅನುಸರಿಸಿ:

* ನಿಮ್ಮ ಐಫೋನ್‌ ನಲ್ಲಿ ಕ್ಯಾಮರಾ ಅಪ್ಲಿಕೇಶನ್ ತೆರೆಯಿರಿ.
* ಶಟರ್ ಬಟನ್ ಮೇಲಿನ ಆಯ್ಕೆಗಳ ಪಟ್ಟಿಯಿಂದ ಪೋರ್ಟ್ರೇಟ್ ಅನ್ನು ಆಯ್ಕೆ ಮಾಡಿ.
* ನೀವು ಪೋರ್ಟ್ರೇಟ್ ಬಟನ್ ಅನ್ನು ಟ್ಯಾಪ್ ಮಾಡಿದಾಗ, ಸ್ಟುಡಿಯೋ ಲೈಟ್, ನ್ಯಾಚುರಲ್ ಲೈಟ್, ಬಾಹ್ಯರೇಖೆ ಬೆಳಕು ಮತ್ತು ಇತರ ಪರ್ಯಾಯಗಳನ್ನು ಒಳಗೊಂಡಂತೆ ಹೊಸ ಆಯ್ಕೆಗಳ ಸೆಟ್ ಹೊರಹೊಮ್ಮುತ್ತದೆ.
* ನಿಮ್ಮ ಐಫೋನ್‌ ನ ಕ್ಯಾಮರಾವನ್ನು ವಿಷಯದ ಹತ್ತಿರ ತನ್ನಿ ಮತ್ತು ಆನ್-ಸ್ಕ್ರೀನ್ ನಿರ್ದೇಶನಗಳನ್ನು ಅನುಸರಿಸಿ.
* ಪೋರ್ಟ್ರೇಟ್ ಮೋಡ್ ನಿಮ್ಮ ವಿಷಯ ಸೂಕ್ತವಾಗಿದೆ ಮತ್ತು ಎಲ್ಲಾ ಚೆಕ್‌ಬಾಕ್ಸ್‌ಗಳನ್ನು ಸಮರ್ಥಿಸಿದ ನಂತರ ಬ್ಯಾನರ್ ಹಳದಿ ಬಣ್ಣಕ್ಕೆ ತಿರುಗುತ್ತದೆ.
* ಈಗ ಶಟರ್ ಬಟನ್ ಒತ್ತಿರಿ.

DSRLನಲ್ಲಿ ಮೋಷನ್‌ ಬ್ಲರ್‌ ಫೋಟೊ ಸೆರೆಹಿಡಿಯಲು ಈ ಹೀಗೆ ಮಾಡಿ:

DSRLನಲ್ಲಿ ಮೋಷನ್‌ ಬ್ಲರ್‌ ಫೋಟೊ ಸೆರೆಹಿಡಿಯಲು ಈ ಹೀಗೆ ಮಾಡಿ:

ICM ಟೆಕ್ನಿಕ್
ಕ್ಯಾಮೆರಾದಲ್ಲಿ ICM (Intentional Camera Movement) ಸೆಟ್ಟಿಂಗ್‌ ಮಾಡುವ ಮೂಲಕ ಕ್ಯಾಮರಾ ಚಲನೆಯಲ್ಲಿ ಮೋಷನ್‌ ಬ್ಲರ್‌ ಫೋಟೊಗಳನ್ನು ಸೆರೆಹಿಡಿಯಬಹುದಾಗಿದೆ. ಈ ವಿಧಾನಗಳನ್ನು ಬಳಸಿದರೇ ಖಾತರಿ ಫಲಿತಾಂಶಗಳನ್ನು ಸೀಗಲಿದೆ. ಈ ತಂತ್ರವನ್ನು ಬಳಸಿಕೊಂಡು ನೀವು ವಿಶ್ವಾಸ ಮತ್ತು ಅನುಭವವನ್ನು ಪಡೆದುಕೊಳ್ಳುವುದರಿಂದ, ನಿಧಾನವಾಗಿ ಶಟರ್ ಸ್ಪೀಡ್‌ ಅನ್ನು ನಿಧಾನವಾಗಿ ಪ್ರಯೋಗಿಸುವ ಪ್ರಯತ್ನಗಳನ್ನು ಮಾಡಿ ಈ ಕೌಶಲ್ಯವನ್ನು ರೂಡಿಸಿಕೊಳ್ಳಬಹುದು.

ಇನ್‌ ಕ್ಯಾಮೆರಾ ಮೂವ್‌ಮೆಂಟ್

ಇನ್‌ ಕ್ಯಾಮೆರಾ ಮೂವ್‌ಮೆಂಟ್

ಈ ವಿಧಾನದಲ್ಲಿ ಕ್ಯಾಮೆರಾ ಮತ್ತು ಲೆನ್ಸ್‌ಗಳ ಸ್ಥಿರತೆ ಹಾಗೂ ಚಲನೆಗಳು ಮುಖ್ಯವಾಗಿದ್ದು, ಉತ್ತಮ ಹಿಡಿತವಿರಲಿ. ವಸ್ತುವುನ ಮೇಲೆ ಆಟೊ ಫೋಕಸ್‌ ಮಾಡಿ ಶಟರ್‌ ಬಟನ್ ಹಾಫ್‌ ಹೋಲ್ಡ್‌ ಮಾಡಿಕೊಂಡು, ಝೂಮ್‌ ರಿಂಗ್‌ ಬಳಸಿ ಮೂವಮೆಂಟ್‌ ಮಾಡಬೇಕು. ಹೀಗೆ ಮಾಡುತ್ತಾ ಶಟರ್‌ಅನ್ನು ರಿಲೀಸ್‌ ಮಾಡಿದರೇ ಬ್ಲರ್‌ ಫೋಟೊ ಮೂಡಿಬರಲಿದೆ. ಆದರೆ ಇದಕ್ಕೆ ಪ್ರಾಕ್ಟಿಸ್‌ ಬೇಕು.

ಟ್ರಾಯ್‌ಪಾಡ್‌ ಬಳಕೆ ಸೂಕ್ತ

ಟ್ರಾಯ್‌ಪಾಡ್‌ ಬಳಕೆ ಸೂಕ್ತ

ಈ ವಿಧಾನದಲ್ಲಿ ಕ್ಯಾಮೆರಾವನ್ನು ಟ್ರಾಯಪಾಡ್‌ಗೆ ಜೋಡಿಸಿಕೊಂಡು, ಮೋಷನ್‌ ಬ್ಲರ್‌ ಚಿತ್ರ ಸೆರೆಹಿಡಿಯುವುದಾಗಿದೆ. ವರ್ಟಿಕಲ್‌ ಆಗಿ ಬ್ಲರ್‌ ಫೋಟೊ ಸೆರೆಹಿಡಿಯುತ್ತಿದ್ದರೆ ಆಗ ಹಾರಿಜಂಟಲ್‌ ಆಂಗಲ್‌ನಲ್ಲಿ ಕ್ಯಾಮೆರಾ ಚಲನೆ ಮಾಡಬೇಡಿ. ಶಟರ್ ಕ್ಲಿಕ್ಕ್ ಮಾಡುವ ಮೂಲಕ ಮೊಷನ್ ಬ್ಲರ್‌ ಫೋಟೊ ಸೆರೆಹಿಡಿಯಬಹುದು, ಹೆಚ್ಚಿನ ಬ್ಲರ್‌ ಆದರೆ ಪೋಟೊ ಉತ್ತಮವಾಗಿ ಬರುವುದಿಲ್ಲ.

Best Mobiles in India

English summary
How to Blur a photo Background on iPhone: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X