'ಗೂಗಲ್ ಪೇ' ಮೂಲಕ ರೈಲು ಟಿಕೆಟ್ ಬುಕ್ ಮಾಡುವುದು ಹೇಗೆ?..ಫುಲ್ ಡೀಟೇಲ್ಸ್!!

|

ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಶನ್ (ಐಆರ್ಸಿಟಿಸಿ) ಜೊತೆ ಕೈಜೋಡಿಸಿರುವ ಗೂಗಲ್ ಸಂಸ್ಥೆ, ತನ್ನ ಗೂಗಲ್ ಪೇ ಆಪ್‌ನಲ್ಲಿ ರೈಲು ಟಿಕೆಟ್ ಬುಕಿಂಗ್ ಆಯ್ಕೆಯನ್ನು ಸೇರಿಸಿರುವುದು ನಿಮಗೆಲ್ಲಾ ಈಗಾಗಲೇ ತಿಳಿದಿದೆ ಎನ್ನಬಹುದು. ಗೂಗಲ್ ಪೇ ಆಪ್ ಮೂಲಕ ಒಂದೇ ಒಂದು ಟ್ಯಾಪ್ ಟ್ಯಾಪ್ ಮಾಡುವ ಮೂಲಕ ಇನ್ಮುಂದೆ ರೈಲು ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದ್ದು, ಭಾರತದ ಜನಪ್ರಿಯ ಯುಪಿಐ ಆಧಾರಿತ ಪಾವತಿ ಅಪ್ಲಿಕೇಶನ್ 'ಗೂಗಲ್ ಪೇ' ಈಗ ಮತ್ತಷ್ಟು ಅಪ್‌ಡೇಟ್ ಆಗಿದೆ.

ಗೂಗಲ್ ಪೇ ಆಪ್‌ನಲ್ಲಿ ರೈಲು ಟಿಕೆಟ್ಗಳನ್ನು ಬುಕ್ ಮಾಡುವುದು ಸೇರಿದಂತೆ ರೈಲುಗಳನ್ನು ಹುಡುಕಲು, ಬುಕ್ ಮಾಡಲು ಮತ್ತು ರದ್ದುಗೊಳಿಸಲು ಆಪ್ ಅನುಮತಿಸುತ್ತದೆ ಎಂದು ಗೂಗಲ್ ತಿಳಿಸಿದೆ. ಗೂಗಲ್ ಪೇ ಆಪ್ ಬಳಕೆದಾರರು ಆ್ಯಪ್‌ ಮೂಲಕವೇ ಟಿಕೆಟ್ ಬುಕಿಂಗ್ ವೈಶಿಷ್ಟ್ಯವನ್ನು ಪ್ರವೇಶಿಸಬಹುದಾಗಿದ್ದು, ಟ್ರೈನ್‌ಗಳನ್ನು ಶೋಧಿಸಬಹುದು. ಲಭ್ಯ ಇರುವ ಟ್ರೈನ್‌ಗೆ ಟಿಕೆಟ್‌ ಬುಕ್‌ ಮಾಡಬಹುದು, ಇಲ್ಲವ ಕನ್ಫರ್ಮ್‌ ಆಗಿರುವ ಟಿಕೆಟ್‌ಗಳನ್ನು ರದ್ದು ಮಾಡಬಹುದು. ಆದರೆ ಇದಕ್ಕೆ ಬಳಕೆದಾರರಿಗೆ ಐಆರ್ಟಿಟಿಸಿ ಖಾತೆಯ ಅಗತ್ಯವಿದೆ.

'ಗೂಗಲ್ ಪೇ' ಮೂಲಕ ರೈಲು ಟಿಕೆಟ್ ಬುಕ್ ಮಾಡುವುದು ಹೇಗೆ?..ಫುಲ್ ಡೀಟೇಲ್ಸ್!!

ಗೂಗಲ್ ಪೇ ಆಪ್ ಮೂಲಕ ಟಿಕೆಟ್ ಬುಕಿಂಗ್ ವೈಶಿಷ್ಟ್ಯವು ದೇಶದಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಿದ್ದು, ನಮ್ಮ ಬಳಕೆದಾರರ ಜೀವನವನ್ನು ಸುಲಭ ಮತ್ತು ಹೆಚ್ಚು ಅನುಕೂಲಕರವಾಗಿ ಗೂಗಲ್ ಪೇ ಮಾಡುತ್ತಿರುವ ಮತ್ತೊಂದು ಹೆಜ್ಜೆಯಾಗಿದೆ ಎಂದು ಅಂಬರೀಶ್ ಕೆಂಘೇ ಅವರು ಹೇಳಿದ್ದಾರೆ. ಹಾಗಾದರೆ, ಗೂಗಲ್ ಪೇ ಆಪ್ ಮೂಲಕ ರೈಲ್ವೆ ಟಿಕೆಟ್ ಬುಕ್ ಮಾಡುವುದು ಹೇಗೆ?, ಇದಕ್ಕೆ ಯಾವುದೇ ಹೆಚ್ಚು ವೆಚ್ಚವಾಗುತ್ತದೆಯೇ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಗೂಗಲ್ ಪೇನಲ್ಲಿ ರೈಲ್ವೆ ಟಿಕೆಟ್ ವೈಶಿಷ್ಟ್ಯ!

ಗೂಗಲ್ ಪೇನಲ್ಲಿ ರೈಲ್ವೆ ಟಿಕೆಟ್ ವೈಶಿಷ್ಟ್ಯ!

ಗೂಗಲ್ ಪೇ ಅಪ್ಲಿಕೇಶನ್ ಭಾರತದಲ್ಲಿ ರೈಲು ಟಿಕೆಟ್ ಬುಕಿಂಗ್ ಆಯ್ಕೆಯನ್ನು ಈಗಾಗಲೇ ಸೇರಿಸಿದ್ದು, ಭಾರತೀಯ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಶನ್ (ಐಆರ್ಸಿಟಿಸಿ) ಅಕೌಂಟ್ ಮೂಲಕ ಆಪ್‌ನಲ್ಲಿ ರೈಲು ಟಿಕೆಟ್ ಬುಕಿಂಗ್ ಮಾಡಬಹುದು. ಈ ಗೂಗಲ್ ಪೇ ಮೂಲಕ ಟಿಕೆಟ್ಗಳನ್ನು ಕಾಯ್ದಿರಿಸಲು ಹೆಚ್ಚಿನ ವೆಚ್ಚವನ್ನು ಗ್ರಾಹಕರಿಗೆ ವಿಧಿಸಲಾಗುವುದಿಲ್ಲ.

ಗೂಗಲ್ ಪೇನಲ್ಲಿ ಏನೆಲ್ಲಾ ರೈಲ್ವೆ ಸೌಲಭ್ಯ?

ಗೂಗಲ್ ಪೇನಲ್ಲಿ ಏನೆಲ್ಲಾ ರೈಲ್ವೆ ಸೌಲಭ್ಯ?

ಐಆರ್ಸಿಟಿಸಿ ಟಿಕೆಟ್ ಬುಕಿಂಗ್ ಬೆಂಬಲದಿಂದ ಗೂಗಲ್ ಪೇನಲ್ಲಿ ಬಳಕೆದಾರರಿಗೆ ರೈಲು ಸೀಟು ಲಭ್ಯತೆ, ಪ್ರಯಾಣದ ಅವಧಿ ಮತ್ತು ಪ್ರಯಾಣದ ಸಮಯಗಳನ್ನು ಸಹ ಪರಿಶೀಲಿಸಲು ಸಾಧ್ಯವಾಗುತ್ತದೆ. ಟಿಕೆಟ್ ಬುಕಿಂಗ್ ವೈಶಿಷ್ಟ್ಯ ಪ್ರವೇಶಿಸಲು, ಬಳಕೆದಾರರಿಗೆ ಐಆರ್ಟಿಟಿಸಿ ಖಾತೆಯ ಅಗತ್ಯವಿದೆ, ಒಮ್ಮೆ ಖಾತೆ ತೆರೆದವರು ಸುಲಭವಾಗಿ ಟಿಕೆಟ್ ಬುಕ್ ಮಾಡಬಹುದು.

ಗೂಗಲ್ ಪೇನಲ್ಲಿ ಟಿಕೆಟ್ ಬುಕ್ಕಿಂಗ್ ಹೇಗೆ?

ಗೂಗಲ್ ಪೇನಲ್ಲಿ ಟಿಕೆಟ್ ಬುಕ್ಕಿಂಗ್ ಹೇಗೆ?

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ತೆರೆಯಿರಿ ಮತ್ತು ಅದರಲ್ಲಿನ ವ್ಯಾಪಾರಗಳು ವಿಭಾಗದಲ್ಲಿ ಚಾಟ್ ಮಾಡುವ ರೈಲುಗಳ ಮೇಲೆ ಟ್ಯಾಪ್ ಮಾಡಿ. ನಂತರ ಹೊಸ ಟಿಕೆಟ್ ಅನ್ನು ಟ್ಯಾಪ್ ಮಾಡಿದಾಗ ನೀವು ಪ್ರಯಾಣಿಸುತ್ತಿರುವ ಮೂಲ, ತಲುಪುವ ಮತ್ತು ದಿನಾಂಕದ ಮೂಲಕ ರೈಲುಗಳಿಗಾಗಿ ಹುಡುಕಿ ಮತ್ತು ಅದು ರೈಲುಗಳ ಪಟ್ಟಿಯನ್ನು ತೋರಿಸುತ್ತದೆ.

ನಂತರ ಟಿಕೆಟ್ ಲಭ್ಯತೆಗೆ ಟ್ಯಾಪ್ ಮಾಡಿ

ನಂತರ ಟಿಕೆಟ್ ಲಭ್ಯತೆಗೆ ಟ್ಯಾಪ್ ಮಾಡಿ

ರೈಲುಗಳ ಪಟ್ಟಿಯನ್ನು ತೋರಿಸಿದ ನಂತರ ನೀವು ಟಿಕೇಟ್ ಅನ್ನು ಕಾಯ್ದಿರಿಸಲು ಬಯಸುವ ರೈಲು ಹುಡುಕಿ ಟಿಕೆಟ್ ಲಭ್ಯತೆಗೆ ಟ್ಯಾಪ್ ಮಾಡಿ. ಪ್ರಯಾಣ ಕೇಂದ್ರಗಳು ಸರಿಯಾಗಿವೆ ಎಂದು ದೃಢೀಕರಿಸಿ. ನಂತರ IRCTC ಖಾತೆಯ ವಿವರಗಳನ್ನು ನಮೂದಿಸಲುಕೇಳಲಾಗುತ್ತದೆ, ನೀವು ಈಗಾಗಲೇ ಖಾತೆಯನ್ನು ಹೊಂದಿಲ್ಲದಿದ್ದರೆ, ನಿಮ್ಮನ್ನು ಒಂದನ್ನು ರಚಿಸಲು ಕೇಳಲಾಗುತ್ತದೆ.

ಆಪ್‌ನಲ್ಲೇ IRCTC ಖಾತೆ ತೆರೆಯಿರಿ.

ಆಪ್‌ನಲ್ಲೇ IRCTC ಖಾತೆ ತೆರೆಯಿರಿ.

ನೀವು ಈಗಾಗಲೇ IRCTC ಖಾತೆಯನ್ನು ಹೊಂದಿಲ್ಲದಿದ್ದರೆ, ಆ ಕೂಡಲೇ IRCTC ಖಾತೆ ತೆರೆಯಿರಿ. ನಂತರ ಪ್ರಯಾಣಿಕರ ಮಾಹಿತಿಯನ್ನು ನಮೂದಿಸಿ ಮತ್ತು ಮುಂದುವರಿಸಿ ಟ್ಯಾಪ್ ಮಾಡಿ. ಬುಕಿಂಗ್ ಮಾಹಿತಿಯನ್ನು ದೃಢೀಕರಿಸಿ, ನಂತರ ಮುಂದುವರಿಸಿ ಟ್ಯಾಪ್ ಮಾಡಿ ಪಾವತಿ ವಿಧಾನವನ್ನು ಆಯ್ಕೆ ಮಾಡಿ. ಇದಾದ ನಂತರ IRCTC ವೆಬ್‌ಸೈಟ್ ತೆರೆದುಕೊಳ್ಳುತ್ತದೆ.

ಹಣ ಪಾವತಿಸಿದರೆ ಟಿಕೆಟ್ ಬುಕ್!

ಹಣ ಪಾವತಿಸಿದರೆ ಟಿಕೆಟ್ ಬುಕ್!

IRCTC ವೆಬ್‌ಸೈಟ್ ತೆರೆದ ನಂತರ ಹಣ ಪಾವತಿ ಮುಂದುವರೆಯಲು ಇರುವ ಆಯ್ಕೆಯನ್ನು ಟ್ಯಾಪ್ ಮಾಡಿ. ನಂತರ ನಿಮ್ಮ ಯುಪಿಐ ಪಿನ್ ಅನ್ನು ನಮೂದಿಸಿ, ನಿಮ್ಮ IRCTC ಪಾಸ್ವರ್ಡ್ ಮತ್ತು ಕ್ಯಾಪ್ಚಾವನ್ನು ನಮೂದಿಸಿ ಟ್ಯಾಪ್ ಮಾಡಿ. ನಿಮ್ಮ ಟಿಕೆಟ್ ಅನ್ನು ಬುಕ್ ಮಾಡಲಾಗುತ್ತದೆ. ಇದೀಗ ನೀವು ರೈಲು ಟಿಕೆಟ್ ಬುಕ್ ಮಾಡಿದ ದೃಢೀಕರಣ ಪರದೆಯನ್ನು ನೋಡುತ್ತೀರಿ.

Best Mobiles in India

English summary
How to book train tickets in India straight from the Google Pay app. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X