ವಾಟ್ಸಾಪ್‌ನಲ್ಲಿ ಮುಖ್ಯವಾದ ಮೆಸೆಜ್‌ ಅನ್ನು ಮಾರ್ಕ್ ಮಾಡುವುದು ಹೇಗೆ?

|

ವಾಟ್ಸಾಪ್ ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಅನೇಕರು ಈ ಆಪ್‌ ಅನ್ನು ಸಹೋದ್ಯೋಗಿಗಳು ಮತ್ತು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಾತನಾಡಲು ಬಳಸುತ್ತಾರೆ. ಅನೇಕ ವೇಳೆ ವಾಟ್ಸಾಪ್‌ನಲ್ಲಿ ಅನೇಕ ಪ್ರಮುಖ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತದೆ ಅದು ಫೋಟೋಗಳು, ಸ್ಕ್ರೀನ್‌ಶಾಟ್‌ಗಳು, ವೀಡಿಯೊಗಳು ಸೇರಿರುತ್ತವೆ. ವಾಟ್ಸಾಪ್ ಚಾಟ್‌ನಲ್ಲಿ ಕೆಲವು ಮೆಸೆಜ್‌ಗಳು ಮುಖ್ಯ ಎನಿಸಿರುತ್ತವೆ. ಆದರೆ ಅವುಗಳನ್ನು ಅಗತ್ಯ ಸಂದರ್ಭಗಳಲ್ಲಿ ನೆನಪಿಸಿಕೊಳ್ಳುವುದು ಕಷ್ಟದ ವಿಷಯವೇ ಸರಿ.

ಫೋಟೊ

ಹೌದು, ವಾಟ್ಸಾಪ್‌ನಲ್ಲಿ ಟೆಕ್ಸ್ಟ್‌, ಫೋಟೊ, ವಿಡಿಯೋ ಸೇರಿದಂತೆ ಸ್ಕ್ರೀನ್‌ಶಾಟ್‌ ಶೇರ್‌ ಮಾಡುತ್ತೆವೆ ಹಾಗೂ ಸ್ನೇಹಿತರಿಂದ ಪಡೆಯುತ್ತವೆ. ಕೆಲವೊಂದು ಫೋಟೊ ಅಥವಾ ಟೆಕ್ಸ್ಟ್‌ ಮುಖ್ಯವಾಗಿರುತ್ತವೆ. ಅಂತಹ ಮೆಸೆಜ್‌ಗಳನ್ನು ಮಾರ್ಕ್ ಮಾಡಿಟ್ಟುಕೊಂಡರೇ ಅಗತ್ಯ ಸಂದರ್ಭಗಳಲ್ಲಿ ಬೇಗನೆ ಲಭ್ಯವಾಗುತ್ತವೆ. ಬಳಕೆದಾರರಿಗೆ ಅನುಕೂಲವಾಗಲೆಂದು ಮುಖ್ಯ ಮೆಸೆಜ್‌ಗಳನ್ನು ಮಾರ್ಕ್ ಮಾಡಲು ವಾಟ್ಸಾಪ್ ಅವಕಾಶ ನೀಡಿದೆ. ಅದುವೇ ಸ್ಟಾರ್ ಮಾರ್ಕ್. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಸ್ಟಾರ್

ವಾಟ್ಸಾಪ್‌ನಲ್ಲಿ ನೀಡಲಾಗದ ಸ್ಟಾರ್ ಮಾರ್ಕ್ ಆಯ್ಕೆ ಬಳಕೆದಾರರಿಗೆ ಬಹು ಉಪಯುಕ್ತವಾಗಿದೆ. ಅಗತ್ಯ ಮೆಸೆಜ್‌ಗಳಿಗೆ ಸ್ಟಾರ್‌ ಮಾರ್ಕ್ ಮಾಡುವ ಮೂಲಕ ಅವುಗಳನ್ನು ಬೇಗನೆ ದೊರೆಯುವಂತೆ ಮಾಡಬಹುದಾಗಿದೆ. ಇಲ್ಲದಿದ್ದರೇ ಚಾಟ್‌ನಲ್ಲಿ ಹುಡುಕಲು ಸ್ಕ್ರಾಲ್‌ ಮಾಡಬೇಕಿದೆ.

ವಾಟ್ಸಾಪ್‌ನಲ್ಲಿ ಬಹು ಮುಖ್ಯವಾದ ಮೆಸೆಜ್‌ಗೆ ಸ್ಟಾರ್‌ ಮಾರ್ಕ್ ಮಾಡಲು ಈ ಕ್ರಮ ಅನುಸರಿಸಿ:

ವಾಟ್ಸಾಪ್‌ನಲ್ಲಿ ಬಹು ಮುಖ್ಯವಾದ ಮೆಸೆಜ್‌ಗೆ ಸ್ಟಾರ್‌ ಮಾರ್ಕ್ ಮಾಡಲು ಈ ಕ್ರಮ ಅನುಸರಿಸಿ:

- ವಾಟ್ಸಾಪ್‌ನಲ್ಲಿ, ನೀವು ಸಂದೇಶಗಳನ್ನು ಅಥವಾ ಸಂದೇಶಗಳನ್ನು ಹೊಂದಿರುವ ಸಂಭಾಷಣೆಯನ್ನು ತೆರೆಯಿರಿ.

- ಅದರ ಮೇಲೆ ದೀರ್ಘವಾಗಿ ಒತ್ತುವ ಮೂಲಕ ನಿಮಗೆ ಬೇಕಾದ ಸಂದೇಶವನ್ನು ಆಯ್ಕೆ ಮಾಡಿ. ನೀವು ಈ ರೀತಿ ಅನೇಕ ಸಂದೇಶಗಳನ್ನು ಆಯ್ಕೆ ಮಾಡಬಹುದು.

- ಒಮ್ಮೆ ನೀವು ಸಂದೇಶ ಅಥವಾ ಸಂದೇಶಗಳನ್ನು ಆಯ್ಕೆ ಮಾಡಿದರೆ, ಚಾಟ್ ವಿಂಡೋದ ಮೇಲಿನ ಟ್ಯಾಬ್‌ನಲ್ಲಿ ನೀವು ಸ್ಟಾರ್ ಐಕಾನ್ ಅನ್ನು ಗುರುತಿಸುತ್ತೀರಿ.

- ಈ ಸಂದೇಶವನ್ನು ಬುಕ್‌ಮಾರ್ಕ್ ಮಾಡಲು ಸ್ಟಾರ್ ಐಕಾನ್ ಮೇಲೆ ಟ್ಯಾಪ್ ಮಾಡಿ.

ವಾಟ್ಸಾಪ್‌ನಲ್ಲಿ ಸ್ಟಾರ್‌ ಮಾರ್ಕ್‌ ಮಾಡಿದ ಮೆಸೆಜ್‌ ವೀಕ್ಷಿಸುವುದು ಹೇಗೆ?

ವಾಟ್ಸಾಪ್‌ನಲ್ಲಿ ಸ್ಟಾರ್‌ ಮಾರ್ಕ್‌ ಮಾಡಿದ ಮೆಸೆಜ್‌ ವೀಕ್ಷಿಸುವುದು ಹೇಗೆ?

- ವಾಟ್ಸಾಪ್ ತೆರೆಯಿರಿ ಮತ್ತು ಪರದೆಯ ಮೇಲಿನ ಬಲ ಭಾಗ ದಲ್ಲಿರುವ ಮೂರು-ಡಾಟ್ ಮೆನುವನ್ನು ಟ್ಯಾಪ್ ಮಾಡಿ.

- ಡ್ರಾಪ್-ಡೌನ್ ಮೆನುವಿನಲ್ಲಿ ನೀವು "ಸ್ಟಾರ್ ಹಾಕಿದ ಸಂದೇಶಗಳು" ಆಯ್ಕೆಯನ್ನು ನೋಡುತ್ತೀರಿ.

ತೆರೆಯುವ

- ಇದನ್ನು ಟ್ಯಾಪ್ ಮಾಡುವುದರಿಂದ ಸಂಪರ್ಕಗಳು ಮತ್ತು ಸಂಭಾಷಣೆಗಳಲ್ಲಿ ನಿಮ್ಮ ಸ್ಟಾರ್ ಹಾಕಿದ ಎಲ್ಲಾ ಸಂದೇಶಗಳನ್ನು ತೋರಿಸುತ್ತದೆ.

- ಸಂಭಾಷಣೆಯನ್ನು ತೆರೆಯುವ ಮೂಲಕ, ಸಂಪರ್ಕದ ಪ್ರೊಫೈಲ್ ಫೋಟೋ ಮೇಲೆ ಕ್ಲಿಕ್ ಮಾಡುವ ಮೂಲಕ ಮತ್ತು ನಂತರ ಅವರ ಪ್ರೊಫೈಲ್ ಅಡಿಯಲ್ಲಿರುವ "ಸ್ಟಾರ್ ಹಾಕಿದ ಮೆಸೆಜ್" ಆಯ್ಕೆಗೆ ಸ್ಕ್ರೋಲ್ ಮಾಡುವ ಮೂಲಕ ನಿರ್ದಿಷ್ಟ ಚಾಟ್‌ನಿಂದ ನೀವು ನಕ್ಷತ್ರ ಹಾಕಿದ ಸಂದೇಶಗಳನ್ನು ಸಹ ನೋಡಬಹುದು.

Best Mobiles in India

English summary
How To Bookmark Those Important Messages On WhatsApp.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X