ಸ್ಮಾರ್ಟ್‌ಫೋನ್‌ನಿಂದ ಪ್ರೊಜೆಕ್ಟರ್‌ ತಯಾರಿಸುವುದು ಹೇಗೆ?

By Suneel
|

ತಂತ್ರಜ್ಞಾನ ಅಭಿವೃದ್ದಿ ಎಂಬುದು ಎಲ್ಲರನ್ನು ಸಾಮಾಜಿಕವಾಗಿ, ಚಿಂತನಾತ್ಮಕವಾಗಿ ಬದಲಾಯಿಸುತ್ತೇ. ಮನರಂಜನೆ ಕ್ಷೇತ್ರದಲ್ಲಂತೂ ಅತ್ಯಧಿಕವಾಗಿ ಬದಲಾವಣೆಯನ್ನು ತಂತ್ರಜ್ಞಾನದಿಂದ ಹೊಂದಲಾಗುತ್ತಿದೆ. ಈ ಹೇಳಿಕೆಯನ್ನು ಎಲ್ಲರೂ ಸಹ ಸರಿ ಎನ್ನಲೇಬೇಕು. ಸಿನಿಮಾ ಥಿಯೇಟರ್‌ಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಸಾಮಾನ್ಯವಾಗಿ ಬಹುಸಂಖ್ಯಾತರು ಪ್ರೊಜೆಕ್ಟರ್‌ಗಳನ್ನು ನೋಡಿರುತ್ತೀರಿ. ಮೊಬೈಲ್‌ನಲ್ಲೋ ಅಥವಾ ಟಿವಿಯಲ್ಲೋ ಸಿನಿಮಾಗಳನ್ನು ನೋಡುವ ನಿಮಗೆ ನಮ್ಮ ಮನೆಯಲ್ಲೂ ಪ್ರೊಜೆಕ್ಟರ್‌ ಇದ್ದಿದ್ರೆ ಥಿಯೇಟರ್‌ ರೀತಿಯಲ್ಲೇ ಸಿನಿಮಾಗಳನ್ನ, ವೀಡಿಯೋಗಳನ್ನ ಗೋಡೆ ಮೇಲೆ ಬಿಟ್ಟು ನೋಡಬಹುದಾಗಿತ್ತು ಅಂತ ಅನಿಸಿರುತ್ತೆ. ಇಂತಹ ನಿರೀಕ್ಷೆಗಳನ್ನು ಪ್ರಯೋಗ ಮಾಡುವ ಕಾಲ ಈಗ ಬಂದಿದೆ. ಹೌದು ಮನೆಯಲ್ಲೇ ಸ್ಮಾರ್ಟ್‌ಫೋನ್‌ ಸಹಾಯದಿಂದ ಪ್ರೊಜೆಕ್ಟರ್ ತಯಾರಿಸಬಹುದಾಗಿದೆ. ಸರಳ ರೀತಿಯಲ್ಲಿ ಪ್ರೊಜೆಕ್ಟರ್‌ ತಯಾರಿಸಿ ಮನೆಯಲ್ಲೇ ಸಿನಿಮಾ ಅನುಭವ ಪಡೆಯಬಹುದಾಗಿದೆ.

ಅಗತ್ಯ ವಸ್ತುಗಳು

ಅಗತ್ಯ ವಸ್ತುಗಳು

ಯಾವುದಾದರೂ ಒಂದು ಹಳೆಯ ಶೂಬಾಕ್ಸ್‌, ಕಪ್ಪು ಬಣ್ಣ, ಸೂಕ್ತ ಲೆನ್ಸ್‌, ಗಾಜು ಅಥವಾ ಲೋಹಗಳನ್ನು ಅಂಟಿಸುವ ಗಮ್‌, ಸ್ಮಾರ್ಟ್‌ಫೋನ್‌. ಬೈಕಾನ್ವೆಕ್ಸ್‌ ಲೆನ್ಸ್‌ಗಳನ್ನು ಫೋಟೋಗ್ರಾಫಿ ಶಾಪ್‌ಗಳಲ್ಲಿ ಖರೀದಿಸಬಹುದಾಗಿದೆ.

ಸೂಕ್ತ ಲೆನ್ಸ್‌ಗಳು

ಸೂಕ್ತ ಲೆನ್ಸ್‌ಗಳು

ಹಳೆಯ ಯಾವುದಾದರೂ ಸ್ಲೈಡ್‌ ಪ್ರೊಜೆಕ್ಟರ್‌ನಲ್ಲಿನ ಲೆನ್ಸ್‌ಗಳನ್ನು ಬಳಸಬಹುದಾಗಿದೆ. ಕಾರಣ ಹೊಸದನ್ನು ಖರೀದಿಸಲು ವೆಚ್ಚ ಹೆಚ್ಚಾಗುತ್ತದೆ ಎಂದರೆ ಹೀಗೆ ಮಾಡಬಹುದು. ಸ್ಮಾರ್ಟ್‌ಫೋನ್‌ ಪ್ರೊಜೆಕ್ಟರ್‌ ಮಾಡಲು, ಶೂ ಬಾಕ್ಸ್‌ನಲ್ಲಿ ವೃತ್ತಾಕಾರದಲ್ಲಿ ಕೊರೆದು ನಿಮ್ಮ ರೂಮಿನ ಕತ್ತಲೆಗೆ ಅನುಕೂಲವಾಗುವಂತೆ ಬ್ರೈಟ್‌ನೆಸ್‌ ಕಾಪಾಡಿಕೊಳ್ಳಲು ಲೆನ್ಸ್‌ಹಿಂದಿನಿಂದ 6 ಇಂಚು ದೂರದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ ಇರಿಸಬೇಕು.

ಲೆನ್ಸ್‌ ಇನ್‌ಸ್ಟಾಲ್‌

ಲೆನ್ಸ್‌ ಇನ್‌ಸ್ಟಾಲ್‌

ಶೂ ಬಾಕ್ಸ್‌ನ ಯಾವುದಾದರೂ ಒಂದು ಕೊನೆಯಲ್ಲಿ ಲೆನ್ಸ್ ಅನ್ನು ಅಟ್ಯಾಚ್‌ ಮಾಡಿ. ಅದನ್ನು ಗಟ್ಟಿಯಾಗಿ ಅಲುಗಾಡದಂತೆ ಅಂಟಿಸಿ.

ಸ್ಮಾರ್ಟ್‌ಫೋನ್‌

ಸ್ಮಾರ್ಟ್‌ಫೋನ್‌

ಬ್ರೈಟ್‌ನೆಸ್‌ ಸಂಪೂರ್ಣ ಹೆಚ್ಚು ಮಾಡಿ, ಲಾಕ್‌ ಸ್ಕ್ರೀನ್‌ ಡಿಸೇಬಲ್‌ ಮಾಡಿ ಲೆನ್ಸ್‌ ಅಳವಡಿಸಿದ ಬಾಕ್ಸ್‌ನಲ್ಲಿ ಸ್ಮಾರ್ಟ್‌ಫೋನ್‌ ಅನ್ನು ಲೆನ್ಸ್‌ ಹಿಂಭಾಗದಲ್ಲಿ ಅದಕ್ಕೆ ಮುಖಮಾಡಿ ಇಡಿ. ವೀಡಿಯೋ ಶುದ್ಧತೆ ಕಡಿಮೆಯಾದರೆ ಬಾಕ್ಸ್‌ ಅನ್ನು ಹಿಂದಕ್ಕೆ ಮುಂದಕ್ಕೆ ಇಟ್ಟು ಸರಿಪಡಿಸಿಕೊಳ್ಳಿ.

ಕಪ್ಪು ಬಣ್ಣ ಹಚ್ಚುವುದು

ಕಪ್ಪು ಬಣ್ಣ ಹಚ್ಚುವುದು

ಶೂ ಬಾಕ್ಸ್‌ ಒಳಗೆ ಸಂಪೂರ್ಣವಾಗಿ ಎಲ್ಲಾ ಕಡೆ ಕಪ್ಪು ಬಣ್ಣದಲ್ಲಿ ಬಣ್ಣ ಬಳಿಯಬೇಕು. ಆದರೆ ಬಣ್ಣ ಬಳಿಯ ಬೇಕಾದರೆ ಲೆನ್ಸ್‌ ಮತ್ತು ಸ್ಮಾರ್ಟ್‌ಫೋನ್‌ ಅನ್ನು ಹೊರತೆಗೆಯಿರಿ. ಬಣ್ಣ ಸಂಪೂರ್ಣವಾಗಿ ಒಣಗುವ ವರೆಗೂ ಲೆನ್ಸ್‌ ಮತ್ತು ಫೋನ್‌ ಇರಿಸಬೇಡಿ. ಅಲ್ಲದೇ ಬಾಕ್ಸ್‌ನ ಮುಚ್ಚಳಕ್ಕೂ ಸಹ ಬಣ್ಣ ಬಳೆಯಿರಿ.

ವ್ಯವಸ್ಥೆಗೊಳಿಸುವುದು

ವ್ಯವಸ್ಥೆಗೊಳಿಸುವುದು

ಬಣ್ಣ ಒಣಗಿದ ನಂತರ ಲೆನ್ಸ್‌ ಮತ್ತು ಸ್ಮಾರ್ಟ್‌ಫೋನ್‌ ಅನ್ನು ಶೂ ಬಾಕ್ಸ್‌ ಒಳಗಡೆ ವ್ಯವಸ್ಥೆಗೊಳಿಸಿ.

ಸಿನಿಮಾ ನೋಡುವುದು ಹೇಗೆ?

ಸಿನಿಮಾ ನೋಡುವುದು ಹೇಗೆ?

ಮೊಬೈಲ್‌ನಲ್ಲಿ ವೀಡಿಯೋಗಳನ್ನು ಪ್ಲೇ ಮಾಡಿ ನಿಮ್ಮ ಮನೆಯ ಅಥವಾ ರೂಮಿನಲ್ಲಿ ಬಿಳಿ ಬಣ್ಣದ ಗೋಡೆಯ ಮೇಲೆ ಸ್ಮಾರ್ಟ್‌ಫೋನ್‌ ಪ್ರೊಜೆಕ್ಟರ್‌ ಅನ್ನು ಬಿಡಿ. ಈಗ ನೀವು ಸುಲಭವಾಗಿ ಥಿಯೇಟರ್ ಅನುಭವ ಪಡೆಯಬಹುದು. ಸ್ಮಾರ್ಟ್‌ಫೋನ್‌ ಪ್ರೊಜೆಕ್ಟರ್‌ ಮಾಡುವುದು ಹೇಗೆ ಎಂದು ವೀಡಿಯೋ ನೋಡಿ ತಿಳಿಯಲು ಮುಂದಿನ ಸ್ಲೈಡರ್‌ ನೋಡಿ.

ವೀಡಿಯೋ

ಪ್ರೊಜೆಕ್ಟರ್‌ ತಯಾರು ಮಾಡುವುದು ಹೇಗೆ ಎಂದು ವೀಡಿಯೋ ನೋಡಿ ಸಹ ತಿಳಿಯಿರಿ.

ವೀಡಿಯೋ ಕೃಪೆ:TechBuilder

ಗಿಜ್‌ಬಾಟ್‌

ಗಿಜ್‌ಬಾಟ್‌

ಫ್ಯಾನ್‌ ಬಳಸಿ ಮನೆಯಲ್ಲೇ AC ತಯಾರಿ ಹೇಗೆ?ಫ್ಯಾನ್‌ ಬಳಸಿ ಮನೆಯಲ್ಲೇ AC ತಯಾರಿ ಹೇಗೆ?

<strong>14ರ ಹುಡುಗ ನಿರ್ಮಿಸಿದ ಮಿನಿಯೇಚರ್ ವಿಮಾನ‌</strong>14ರ ಹುಡುಗ ನಿರ್ಮಿಸಿದ ಮಿನಿಯೇಚರ್ ವಿಮಾನ‌

ಪ್ರತಿಯೊಬ್ಬರಿಗೂ ಗೊಂದಲ ಉಂಟುಮಾಡುವ ಅಚ್ಚರಿ ಫೋಟೋಗಳುಪ್ರತಿಯೊಬ್ಬರಿಗೂ ಗೊಂದಲ ಉಂಟುಮಾಡುವ ಅಚ್ಚರಿ ಫೋಟೋಗಳು

ವಿಶ್ವದ ಅತ್ಯುತ್ತಮ ಟೆಕ್ನಾಲಜಿ ವೆಪನ್ ಮಿಲಿಟರಿ ಪಡೆ ಯಾವುದು ಗೊತ್ತಾ?ವಿಶ್ವದ ಅತ್ಯುತ್ತಮ ಟೆಕ್ನಾಲಜಿ ವೆಪನ್ ಮಿಲಿಟರಿ ಪಡೆ ಯಾವುದು ಗೊತ್ತಾ?

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
How To Build a Projector with Smartphone at Home. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X