ನಿಮ್ಮ ಇನ್‌ಸ್ಟಾಗ್ರಾಮ್‌ ಖಾತೆ ಸುರಕ್ಷತೆಗಾಗಿ ತಪ್ಪದೇ ಹೀಗೆ ಮಾಡಿರಿ!

|

ಪ್ರಸ್ತುತ ಸೋಶಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದು, ಅವುಗಳ ಪೈಕಿ ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ಒಂದಾಗಿದೆ. ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಮ್ ತಾಣವು ಕೆಲವು ಆಕರ್ಷಕ ಫೀಚರ್ಸ್‌ಗಳ ಮೂಲಕ ಬಳಕೆದಾರರಿಗೆ ಹತ್ತಿರವಾಗಿದೆ. ಇನ್‌ಸ್ಟಾಗ್ರಾಮ್‌ನ ಪೋಸ್ಟ್‌, ರೀಲ್ಸ್‌ ಸೇರಿದಂತೆ ಕೆಲವು ಉತ್ತಮ ಫೀಚರ್ಸ್‌ಗಳನ್ನು ಬಳಕೆದಾರರು ಮೆಚ್ಚಿಕೊಂಡಿದ್ದಾರೆ. ಕೆಲವೊಂದು ಸಂದರ್ಭಗಳಲ್ಲಿ ಬಳಕೆದಾರರು ಕೆಲವೊಮ್ಮೆ ಪಾಸ್‌ವರ್ಡ್‌ ಮರೆತುಬಿಟ್ಟಿರುತ್ತಾರೆ. ಆದ್ರೆ ಸುಲಭವಾಗಿ ಮತ್ತೆ ಪಾಸ್‌ವರ್ಡ್‌ ಸೆಟ್ ಮಾಡಬಹುದು.

ಬಳಕೆದಾರರು

ಹೌದು, ಇನ್‌ಸ್ಟಾಗ್ರಾಮ್‌ ತಾಣದಲ್ಲಿ ಬಳಕೆದಾರರು ಪಾಸ್‌ವರ್ಡ್‌ ಮರೆತುಹೋದರೆ, ಮತ್ತೆ ಹೊಸ ಪಾಸ್‌ವರ್ಡ್‌ ರಚಿಸಲು ಅವಕಾಶ ಇದೆ. ಹಾಗೆಯೇ ಖಾತೆಯ ಸುರಕ್ಷತೆಗಾಗಿ ಬಳಕೆದಾರರು ತಮ್ಮ ಅಕೌಂಟ್‌ನ ಪಾಸ್‌ವರ್ಡ್‌ ಅನ್ನು ಅವಾಗವಾಗ ಬದಲಾಯಿಸುವುದು ಸುರಕ್ಷತೆಯಿಂದ ಮುಖ್ಯ ಎನಿಸಿದೆ. ಬಳಕೆದಾರರು ಆಪ್‌ ಮೂಲಕ ಹಾಗೂ ವೆಬ್‌ ಬ್ರೌಸರ್‌ ಮೂಲಕ ಸಹ ಪಾಸ್‌ವರ್ಡ್‌ ಬದಲಾಯಿಸಬಹುದು. ಹಾಗಾದರೆ ಇನ್‌ಸ್ಟಾಗ್ರಾಮ್‌ ಪಾಸ್‌ವರ್ಡ್‌ ಬದಲಿಸುವುದು ಹೇಗೆ ಅಥವಾ ಪಾಸ್‌ವರ್ಡ್‌ ಮರೆತರೆ ಹೊಸದಾಗಿ ರಚಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಫೋನ್‌ ಮೂಲಕ ಪಾಸ್‌ವರ್ಡ್‌ ಬದಲಿಸಲು ಹೀಗೆ ಮಾಡಿ:

ಫೋನ್‌ ಮೂಲಕ ಪಾಸ್‌ವರ್ಡ್‌ ಬದಲಿಸಲು ಹೀಗೆ ಮಾಡಿ:

* ಇನ್‌ಸ್ಟಾಗ್ರಾಮ್‌ ಆಪ್‌ ತೆರೆಯಿರಿ
* ಕೆಳಗಿನ ಬಲಭಾಗದಲ್ಲಿರುವ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಪ್ರೊಫೈಲ್‌ಗೆ ಭೇಟಿ ನೀಡಿ.
* ನಂತರ ಮೇಲಿನ ಬಲಭಾಗದಲ್ಲಿರುವ ಹ್ಯಾಂಬರ್ಗರ್ ಐಕಾನ್ (3 ಅಡ್ಡ ಸಾಲುಗಳು) ಮೇಲೆ ಟ್ಯಾಪ್ ಮಾಡಿ
* ಆ ನಂತರ ಗೇರ್ ಅನ್ನು ಹೋಲುವ ಸೆಟ್ಟಿಂಗ್‌ಗಳ ಐಕಾನ್ ಮೇಲೆ ಕ್ಲಿಕ್ ಮಾಡಿ
* ಭದ್ರತೆ ಮತ್ತು ನಂತರ (Security and then) ಪಾಸ್‌ವರ್ಡ್ ಮೇಲೆ ಟ್ಯಾಪ್ ಮಾಡಿ
* ನಿಮ್ಮ ಹಿಂದಿನ ಪಾಸ್‌ವರ್ಡ್ ಅನ್ನು ನಮೂದಿಸಿ ಮತ್ತು ನಂತರ ಹೊಸದನ್ನು ನಮೂದಿಸಿ
* ಅನಂತರ ಸೇವ್‌ ಆಯ್ಕೆ ಕ್ಲಿಕ್ ಮಾಡಿ ಅಥವಾ ಮೇಲಿನ ಬಲಭಾಗದಲ್ಲಿರುವ ಚೆಕ್ ಮಾರ್ಕ್ ಐಕಾನ್ ಅನ್ನು ಟ್ಯಾಪ್ ಮಾಡಿ.

ಪಿಸಿ ಅಥವಾ ಲ್ಯಾಪ್‌ಟಾಪ್‌ನಲ್ಲಿ ಪಾಸ್‌ವರ್ಡ್‌ ಬದಲಿಸಲು ಹೀಗೆ ಮಾಡಿ

ಪಿಸಿ ಅಥವಾ ಲ್ಯಾಪ್‌ಟಾಪ್‌ನಲ್ಲಿ ಪಾಸ್‌ವರ್ಡ್‌ ಬದಲಿಸಲು ಹೀಗೆ ಮಾಡಿ

* ಮೊದಲಿಗೆ Mac ಅಥವಾ PC ನಿಂದ instagram.com ಗೆ ಲಾಗಿನ್ ಮಾಡಿ
* ನಿಮ್ಮ ಪ್ರೊಫೈಲ್‌ಗೆ ಭೇಟಿ ನೀಡಿ
* ನಂತರ ಪ್ರೊಫೈಲ್ ಅನ್ನು ಎಡಿಟ್ ಮಾಡಲು ಮುಂದೆ, ಗೇರ್ ಐಕಾನ್ ಮೇಲೆ ಕ್ಲಿಕ್ ಮಾಡಿ
* ಪಾಸ್‌ವರ್ಡ್‌ ಬದಲಾಯಿಸಿ ಆಯ್ಕೆ ಮೇಲೆ ಟ್ಯಾಪ್ ಮಾಡಿ
* ನಿಮ್ಮ ಹಳೆಯ ಪಾಸ್‌ವರ್ಡ್ ಅನ್ನು ನಮೂದಿಸಿದ ನಂತರ, ಹೊಸದನ್ನು ನಮೂದಿಸಿ

ಇನ್‌ಸ್ಟಾಗ್ರಾಮ್‌ ಪಾಸ್‌ವರ್ಡ್‌ ರೀಸೆಟ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ ಪಾಸ್‌ವರ್ಡ್‌ ರೀಸೆಟ್‌ ಮಾಡುವುದು ಹೇಗೆ?

* ಮೊದಲಿಗೆ Instagram ಅನ್ನು ಕ್ಲಿಕ್ ಮಾಡಿ.
* ಆ ಬಳಿಕ ಪ್ರೊಫೈಲ್‌ಗೆ ಹೋಗಿ, ಹ್ಯಾಂಬರ್ಗರ್ ಐಕಾನ್ ಕ್ಲಿಕ್ ಮಾಡಿ.
* ನಂತರ ಸೆಟ್ಟಿಂಗ್‌ಗಳಿಗೆ ನ್ಯಾವಿಗೇಟ್ ಮಾಡಿ ಮತ್ತು ಲಾಗ್ ಔಟ್ ಮಾಡಿ.
* forgot ಪಾಸ್‌ವರ್ಡ್ ಆಯ್ಕೆ ಅನ್ನು ಕ್ಲಿಕ್ ಮಾಡಿ
* ನಂತರ ಬಳಕೆದಾರ ಹೆಸರು ಅಥವಾ ಫೋನ್ ಸಂಖ್ಯೆಯನ್ನು ಬಳಸಿಕೊಂಡು ಮುಂದುವರಿಯಿರಿ
* ಇನ್‌ಸ್ಟಾಗ್ರಾಮ್‌ನಿಂದ ನಿಮ್ಮ ನೋಂದಾಯಿತ ಇ-ಮೇಲ್ ವಿಳಾಸ ಅಥವಾ ಫೋನ್ ಸಂಖ್ಯೆಗೆ ಮೆಸೆಜ್‌ ಕಳುಹಿಸುತ್ತದೆ
* ಇನ್‌ಸ್ಟಾಗ್ರಾಮ್‌ಗೆ ಲಾಗ್ ಇನ್ ಮಾಡಬಹುದು ಅಥವಾ ಆ ಇ-ಮೇಲ್ ಅನ್ನು ಬಳಸಿಕೊಂಡು ನಿಮ್ಮ ಪಾಸ್‌ವರ್ಡ್ ಅನ್ನು ಬದಲಾಯಿಸಬಹುದು.

ಫೋನ್‌ನಲ್ಲಿ ವೆಬ್‌ ಬ್ರೌಸರ್‌ ಮೂಲಕ ಪಾಸ್‌ವರ್ಡ್‌ ಚೇಂಜ್ ಮಾಡಲು ಹೀಗೆ ಮಾಡಿ:

ಫೋನ್‌ನಲ್ಲಿ ವೆಬ್‌ ಬ್ರೌಸರ್‌ ಮೂಲಕ ಪಾಸ್‌ವರ್ಡ್‌ ಚೇಂಜ್ ಮಾಡಲು ಹೀಗೆ ಮಾಡಿ:

* ವೆಬ್‌ ಬ್ರೌಸರ್‌ ಮೂಲಕ ಇನ್‌ಸ್ಟಾಗ್ರಾಮ್‌ ತೆರೆಯಿರಿ
* ನಂತರ ಕೆಳಗಿನ ಬಲಭಾಗದಲ್ಲಿರುವ ಪ್ರೊಫೈಲ್ ಫೋಟೋವನ್ನು ಟ್ಯಾಪ್ ಮಾಡುವ ಮೂಲಕ, ನಿಮ್ಮ ಪ್ರೊಫೈಲ್‌ಗೆ ಹೋಗಿ
* ಆ ಬಳಿಕ ಮೇಲಿನ ಎಡಭಾಗದಲ್ಲಿ, ಗೇರ್ ಅಥವಾ ಸೆಟ್ಟಿಂಗ್‌ಗಳ ಐಕಾನ್ ಅನ್ನು ಟ್ಯಾಪ್ ಮಾಡಿ
* ಪಾಸ್‌ವರ್ಡ್‌ ಬದಲಾಯಿಸಿ ಆಯ್ಕೆ ಕ್ಲಿಕ್ ಮಾಡಿ
* ಹಿಂದಿನ ಮತ್ತು ಇತ್ತೀಚಿನ ಪಾಸ್‌ವರ್ಡ್ ಅನ್ನು ನಮೂದಿಸಿ
* ಮುಂದುವರೆಯಲು ಪಾಸ್‌ವರ್ಡ್‌ ಬದಲಾಯಿಸಿ ಆಯ್ಕೆ ಕ್ಲಿಕ್ ಮಾಡಿ

Best Mobiles in India

English summary
For Your Instagram Account Safe Purpose Keep Changing Password.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X