ಜಿಯೋ ಮೀಟ್‌ನಲ್ಲಿ ವಿಡಿಯೊ ಬ್ಯಾಕ್‌ಗ್ರೌಂಡ್‌ ಬದಲಿಸುವುದು ಹೇಗೆ ಗೊತ್ತಾ?

|

ಮಹಾಮಾರಿ ಕೊರೊನಾದಿಂದಾಗಿ ಬಹುತೇಕ ಸಂಸ್ಥೆಯಗಳ ತಮ್ಮ ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಮ್ ನೀಡಿವೆ. ಈ ಸಂದರ್ಭದಲ್ಲಿ ಉದ್ಯೋಗಿಗಳಯ ತಮ್ಮ ಸಹೋದ್ಯೋಗಿಗಳೊಂದಿಗೆ ಮೀಟಿಂಗ್ ನಡೆಸಲು, ಸಂವಹನ ನಡೆಸಲು ವಿಡಿಯೊ ಕಾನ್ಫರೆನ್ಸ್ ಆಪ್‌ಗಳು ಹೆಚ್ಚು ಅನುಕೂಲವಾಗಿವೆ. ಆ ಪೈಕಿ ಜೂಮ್ ಆಪ್‌ ಹೆಚ್ಚು ಸದ್ದು ಮಾಡಿದ್ದು, ಹೆಚ್ಚು ಜನಪ್ರಿಯವಾಗಿದೆ. ಆದರೆ ಜೂಮ್‌ಗೆ ಸೆಡ್ಡು ಹೊಡೆಯಲು ಜಿಯೋ ಕಂಪನಿಯು ಜಿಯೋಮೀಟ್‌ ವಿಡಿಯೊ ಕಾಲಿಂಗ್ ಆಪ್ ಪರಿಚಯಿಸಿದೆ.

ವಿಡಿಯೊ ಕರೆ

ಉದ್ಯೋಗಿಗಳು/ವಿದ್ಯಾರ್ಥಿಗಳು ಮನೆಯಿಂದ ವಿಡಿಯೊ ಕರೆ ನಡೆಸುವಾಗ ಕೆಲವೊಮ್ಮೆ ಮನೆಯಲ್ಲಿ ಪ್ರತಿಕೂಲ ವಾತಾವರಣ ಇರದೆ ಇರಬಹುದು. ವಿಡಿಯೊ ಕರೆ ಮಾಡಲು ಮನೆಯಲ್ಲಿ ಬ್ಯಾಕ್‌ಗ್ರೌಂಡ್ ನೀಟಾಗಿ ಇರದೆ ಇರಬಹುದು. ಈ ಅಸ್ತವ್ಯಸ್ತತೆಯನ್ನು ಸರಿಪಡಿಸಿಲು ಜೂಮ್ ಬ್ಯಾಕ್‌ಗ್ರೌಂಡ್‌ ಬದಲಿಸುವ ಆಯ್ಕೆ ಒಳಗೊಂಡಿದೆ. ಹಾಗೆಯೇ ಜಿಯೋಮೀಟ್ ಸಹ ಬ್ಯಾಕ್‌ಗ್ರೌಂಡ್‌ ಚೇಂಜ್ ಮಾಡುವ ಆಯ್ಕೆ ನೀಡಿದೆ.

ಜೂಮ್‌ ಆಪ್‌

ಜೂಮ್‌ ಆಪ್‌ನಲ್ಲಿ ನಿಮ್ಮ ಕಂಪ್ಯೂಟರ್‌ನಲ್ಲಿರುವ ಯಾವುದೇ ಫೋಟೊವನ್ನು/ಚಿತ್ರವನ್ನು ಬ್ಯಾಕ್‌ಗ್ರೌಂಡ್ ಆಗಿ ಬಳಕೆಮಾಡಬಹುದಾಗಿದೆ. ಇನ್ನು ಜಿಯೋ ಮೀಟ್‌ ಆಪ್‌ನಲ್ಲಿ ಕ್ಯಾಮೆರಾ ಸೋರ್ಸ್‌ ಬಳಕೆ ಮೂಲಕ ಸೆಟ್ಟಿಂಗ್‌ನಲ್ಲಿ ಬ್ಯಾಕ್‌ಗ್ರೌಂಡ್‌ ಬದಲಿಸುವ ಅವಕಾಶ ಇದೆ. ಹಾಗಾದರೇ ವಿಡಿಯೊ ಕರೆ ಮಾಡುವಾಗ ಬ್ಯಾಕ್‌ಗ್ರೌಂಡ್ ಬದಲಾಯಿಸುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಜಿಯೋ ಮೀಟ್‌ ಆಪ್‌ನಲ್ಲಿ ಬ್ಯಾಕ್‌ಗ್ರೌಂಡ್‌ ಬದಲಿಸುವುದು ಹೇಗೆ

ಜಿಯೋ ಮೀಟ್‌ ಆಪ್‌ನಲ್ಲಿ ಬ್ಯಾಕ್‌ಗ್ರೌಂಡ್‌ ಬದಲಿಸುವುದು ಹೇಗೆ

* ನಿಮ್ಮ ವಿಂಡೋ 10 ಅಥವಾ snapcamera.snapchat.com ನಿಂದ ಮ್ಯಾಕೋಸ್ ನಲ್ಲಿ ಸ್ನ್ಯಾಪ್ ಕ್ಯಾಮೆರಾ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.

* ಸ್ನ್ಯಾಪ್ ಕ್ಯಾಮೆರಾವನ್ನು ಸ್ಥಾಪಿಸಿದ ನಂತರ, ಅಪ್ಲಿಕೇಶನ್ ತೆರೆಯಿರಿ.

* ಮಸೂರಗಳ ಅಡಿಯಲ್ಲಿ ಹುಡುಕುವ ಮೂಲಕ ಸರ್ಚ್‌ ಬಾಕ್ಸ್‌ನಲ್ಲಿ ಬಯಸಿದ ಹಿನ್ನೆಲೆ ಆಯ್ಕೆಮಾಡಿ.

* ಸ್ನ್ಯಾಪ್ ಕ್ಯಾಮೆರಾವನ್ನು ಹಿನ್ನೆಲೆಯಲ್ಲಿ ಚಾಲನೆಯಲ್ಲಿರಿಸಿಕೊಳ್ಳಿ.

ಜಿಯೋಮೀಟ್

* ಜಿಯೋಮೀಟ್ ತೆರೆಯಿರಿ ಮತ್ತು ಸಭೆಯನ್ನು ಪ್ರಾರಂಭಿಸಿ.

* ಪಿಸಿ ಅಥವಾ ಮ್ಯಾಕ್‌ನಲ್ಲಿನ ಜಿಯೋಮೀಟ್ ಅಪ್ಲಿಕೇಶನ್‌ನಲ್ಲಿನ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ವೀಡಿಯೊ ಅಡಿಯಲ್ಲಿ ಸ್ನ್ಯಾಪ್ ಕ್ಯಾಮೆರಾ ಬದಲಿಗೆ ಡೀಫಾಲ್ಟ್ ವೆಬ್ ಕ್ಯಾಮೆರಾ ಆಯ್ಕೆಮಾಡಿ

* ವೀಡಿಯೊ ಮೂಲವನ್ನು ಬದಲಾಯಿಸುವುದರಿಂದ ಈಗ ಹಿನ್ನೆಲೆ ಒಳಗೊಂಡಿರುವ ಸ್ನ್ಯಾಪ್ ಕ್ಯಾಮೆರಾ output ಪುಟ್‌ ಅನ್ನು ಬ್ರಾಡ್‌ಕಾಸ್ಟ್‌ ಮಾಡಲು ನಿಮಗೆ ಅನುಮತಿಸುತ್ತದೆ

ಜೂಮ್ ಆಪ್‌ನಲ್ಲಿ ಬ್ಯಾಕ್‌ಗ್ರೌಂಡ್‌ ಬದಲಿಸಲು ಹೀಗೆ ಮಾಡಿ

ಜೂಮ್ ಆಪ್‌ನಲ್ಲಿ ಬ್ಯಾಕ್‌ಗ್ರೌಂಡ್‌ ಬದಲಿಸಲು ಹೀಗೆ ಮಾಡಿ

ಹಂತ 1: ಜೂಮ್ ಅಪ್ಲಿಕೇಶನ್ ತೆರೆಯಿರಿ ಮತ್ತು ಅಪ್ಲಿಕೇಶನ್‌ನ ಮೇಲಿನ ಬಲ ಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಅನ್ನು ಕ್ಲಿಕ್ ಮಾಡಿ.

ಹಂತ 2: ನಂತರ ಸೆಟ್ಟಿಂಗ್‌ ಮೆನು ಕ್ಲಿಕ್ ಮಾಡಿ.

ಹಂತ 3: ನಿಮ್ಮ ಎಡಭಾಗದಲ್ಲಿರುವ ಮೆನುವಿನಲ್ಲಿರುವ ವರ್ಚುವಲ್ ಹಿನ್ನೆಲೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 4: ಆನಂತರ ಜೂಮ್ ಒದಗಿಸಿದ ಡೀಫಾಲ್ಟ್ ಹಿನ್ನೆಲೆ ಆಯ್ಕೆಗಳಲ್ಲಿ ಒಂದನ್ನು ಆರಿಸಿ. ಮತ್ತು ಅದರ ಮೇಲೆ ಕ್ಲಿಕ್ ಮಾಡಿ. ಆಟೋಮ್ಯಾಟಿಕ್ ಆಗಿ ಬದಲಾವಣೆಗೊಳ್ಳುತ್ತದೆ.

ಹಂತ 5: ಬ್ಯಾಕ್ಗ್ರೌಂಡ್‌ನಲ್ಲಿ ನಿಮ್ಮ ಆಯ್ಕೆಯ ಚಿತ್ರವನ್ನು ಸಹ ನೀವು ಅಪ್‌ಲೋಡ್ ಮಾಡಬಹುದು. ವರ್ಚುವಲ್ ಬ್ಯಾಕ್‌ಗ್ರೌಂಡ್‌ ಆಯ್ಕೆಗೆ ಹೋಗಿ ಮತ್ತು ‘ವರ್ಚುವಲ್ ಬ್ಯಾಕ್‌ಗ್ರೌಂಡ್‌ ಆಯ್ಕೆಮಾಡಿ' ಪ್ಲಸ್ ಐಕಾನ್ ಮೇಲೆ ಕ್ಲಿಕ್ ಮಾಡಿ.

ಹಂತ 6: ಈಗ, ನಿಮ್ಮ ಆಯ್ಕೆಯ ಚಿತ್ರವನ್ನು ನೀವು ಅಪ್‌ಲೋಡ್ ಮಾಡುವಂತಹ ಬಾಕ್ಸ್‌ ಕಾಣಿಸುತ್ತದೆ. ಒಮ್ಮೆ ನೀವು ಚಿತ್ರವನ್ನು ಅಪ್‌ಲೋಡ್ ಮಾಡಿದ ನಂತರ, ಜೂಮ್ ಒದಗಿಸಿದ ಇತರ ವಾಲ್‌ಪೇಪರ್ ಜೊತೆಗೆ ಅದು ಕಾಣಿಸುತ್ತದೆ.

ಜೂಮ್ ವಿಡಿಯೊ ಕರೆ ವೇಳೆಯು ಬ್ಯಾಕ್‌ಗ್ರೌಂಡ್‌ ಚಿತ್ರ ಬದಲಾಯಿಸಲು ಹೀಗೆ ಮಾಡಿ:

ಜೂಮ್ ವಿಡಿಯೊ ಕರೆ ವೇಳೆಯು ಬ್ಯಾಕ್‌ಗ್ರೌಂಡ್‌ ಚಿತ್ರ ಬದಲಾಯಿಸಲು ಹೀಗೆ ಮಾಡಿ:

ಹಂತ 1: ಜೂಮ್ ಅಪ್ಲಿಕೇಶನ್ ತೆರೆಯಿರಿ ಮತ್ತು ಸಭೆಗೆ/ಮೀಟಿಂಗ್ ಸೇರಿಕೊಳ್ಳಿ.

ಹಂತ 2: ನಂತರ ಮೆನು ಆಯ್ಕೆಗಾಗಿ, ಅಪ್ಲಿಕೇಶನ್‌ನ ಕೆಳಗಿನ ಬಲ ಭಾಗದಲ್ಲಿ ಕಂಡುಬರುವ ಮೂರು ಡಾಟ್‌ಗಳ ಮೇಲೆ ಟ್ಯಾಪ್ ಮಾಡಿ.

ಹಂತ 3: ಆಗ ವರ್ಚುವಲ್ ಬ್ಯಾಕ್‌ಗ್ರೌಂಡ್‌ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 4: ನಂತರ ಜೂಮ್‌ನ ಡೀಫಾಲ್ಟ್ ಚಿತ್ರಗಳಲ್ಲಿ ಒಂದನ್ನು ಆಯ್ಕೆ ಮಾಡಿ ಅಥವಾ ನಿಮ್ಮದೇ ಆದಅ ಫೋಟೊವನ್ನು ಅಪ್‌ಲೋಡ್ ಮಾಡಿ.

Most Read Articles
Best Mobiles in India

English summary
JioMeet allows 100 members to be on a group video call for 24 hours with no restrictions.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X