ಗೂಗಲ್‌ ಮೀಟ್‌ನಲ್ಲಿ ನಿಮ್ಮ ಡಿಸ್‌ಪ್ಲೇ ಹೆಸರನ್ನು ಚೇಂಜ್‌ ಮಾಡಲು ಹೀಗೆ ಮಾಡಿ!

|

ಜನಪ್ರಿಯ ವಿಡಿಯೋ ಕಾನ್ಫರೇನ್ಸ್‌ ಆಪ್‌ಗಳ ಪೈಕಿ ಗೂಗಲ್ ಮೀಟ್ (Google Meet) ಸಹ ಒಂದಾಗಿದೆ. ಗೂಗಲ್ ಮೀಟ್ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಒಳಗೊಂಡಿದೆ. ಮೀಟಿಂಗ್ ನಡೆಯುವ ವೇಳೆ ವರ್ಚುವಲ್ ಹಿನ್ನೆಲೆಯನ್ನು ಬದಲಾಯಿಸುವುದು ಸೇರಿದಂತೆ ಇತರೆ ಕೆಲವು ಆಯ್ಕೆಗಳು ಅತ್ಯುತ್ತಮ ಎನಿಸಿವೆ. ಗೂಗಲ್‌ ಮೀಟ್‌ನಲ್ಲಿ ಡಿಸ್‌ಪ್ಲೇ ಹೆಸರನ್ನು ಬದಲಾಯಿಸುವುದಕ್ಕೆ ಆಪ್‌ನ ಸೆಟ್ಟಿಂಗ್‌ ನಲ್ಲಿ ನೇರ ಆಯ್ಕೆ ಹೆಸರನ್ನು ಇಲ್ಲ. ಆದಾಗ್ಯೂ, ಬಳಕೆದಾರರು ಡಿಸ್‌ಪ್ಲೇ ಹೆಸರನ್ನು ಬದಲಾಯಿಸಬಹುದು.

ಆಪ್‌ನಲ್ಲಿ

ಹೌದು, ಗೂಗಲ್‌ ಮೀಟ್ ಆಪ್‌ನಲ್ಲಿ ಡಿಸ್‌ಪ್ಲೇ ಹೆಸರನ್ನು ಬದಲಾಯಿಸಲು ಗೂಗಲ್‌ ಮೀಟ್ ಮೀಸಲಾದ ಸೆಟ್ಟಿಂಗ್ ಅನ್ನು ಹೊಂದಿಲ್ಲ. ಆದರೆ ಬಳಕೆದಾರರು ಗೂಗಲ್‌ ಮೀಟ್ ಹೆಸರನ್ನು ಬದಲಾಯಿಸಲು ಅವಕಾಶ ಇದೆ. ಅದಕ್ಕಾಗಿ ಬಳಕೆದಾರರು ಕೆಲವು ಕ್ರಮಗಳನ್ನು ಅನುಸರಿಸಬೇಕಿದೆ. ಹಾಗಾದರೆ ಗೂಗಲ್‌ ಮೀಟ್‌ನಲ್ಲಿ ಡಿಸ್‌ಪ್ಲೇ ಹೆಸರನ್ನು ಬದಲಾಯಿಸುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಪಿಸಿಯಲ್ಲಿ ಗೂಗಲ್‌ ಮೀಟ್ನಲ್ಲಿನ ಹೆಸರನ್ನು ಬದಲಾಯಿಸಲು ಹೀಗೆ ಮಾಡಿ:

ಪಿಸಿಯಲ್ಲಿ ಗೂಗಲ್‌ ಮೀಟ್ನಲ್ಲಿನ ಹೆಸರನ್ನು ಬದಲಾಯಿಸಲು ಹೀಗೆ ಮಾಡಿ:

ಹಂತ 1. ನಿಮ್ಮ ಕಂಪ್ಯೂಟರ್‌ನಲ್ಲಿ ವೆಬ್ ಬ್ರೌಸರ್ ತೆರೆಯಿರಿ.
ಹಂತ 2. ನಿಮ್ಮ ಗೂಗಲ್‌ ಖಾತೆಯನ್ನು ತೆರೆಯಿರಿ ಅಥವಾ https://myaccount.google.com ಗೆ ಹೋಗಿ.
ಹಂತ 3. ಎಡಭಾಗದಲ್ಲಿರುವ ವೈಯಕ್ತಿಕ ಮಾಹಿತಿ ಟ್ಯಾಬ್ ಅನ್ನು ಆಯ್ಕೆಮಾಡಿ.
ಹಂತ 4. ಬೇಸಿಕ್ ಇನ್ಫೋ ಅಡಿಯಲ್ಲಿ ಹೆಸರು ಕ್ಷೇತ್ರದ ಮೇಲೆ ಕ್ಲಿಕ್ ಮಾಡಿ.
ಹಂತ 5. ನೀವು ಗೂಗಲ್‌ ಮೀಟ್ ನಲ್ಲಿ ಪ್ರದರ್ಶಿಸಲು ಬಯಸುವ ಹೆಸರಿಗೆ ಅದನ್ನು ಬದಲಾಯಿಸಿ.
ಹಂತ 6. ಸೇವ್ ಆಯ್ಕೆ ಕ್ಲಿಕ್ ಮಾಡಿ.

ಗೂಗಲ್‌ ಮೀಟ್‌ನಲ್ಲಿ Nickname ಸೇರಿಸಲು ಹೀಗೆ ಮಾಡಿರಿ:

ಗೂಗಲ್‌ ಮೀಟ್‌ನಲ್ಲಿ Nickname ಸೇರಿಸಲು ಹೀಗೆ ಮಾಡಿರಿ:

ಹಂತ 1. ನಿಮ್ಮ ಕಂಪ್ಯೂಟರ್‌ನಲ್ಲಿ ವೆಬ್ ಬ್ರೌಸರ್ ತೆರೆಯಿರಿ.
ಹಂತ 2. ನಿಮ್ಮ ಗೂಗಲ್‌ ನ ಮೈ ಪೇಜ್‌ ಆಯ್ಕೆಗೆ ಹೋಗಿ.
ಹಂತ 3. ಹೆಸರು ಕ್ಷೇತ್ರದ ಮೇಲೆ ಕ್ಲಿಕ್ ಮಾಡಿ.
ಹಂತ 4. Nicknameನ ಪಕ್ಕದಲ್ಲಿರುವ ಸಂಪಾದನೆ ಐಕಾನ್ ಮೇಲೆ ಕ್ಲಿಕ್ ಮಾಡಿ.
ಹಂತ 5. ನಿಮ್ಮ Nickname ಅನ್ನು ಸೇರಿಸಿ ಮತ್ತು ಸೇವ್ ಕ್ಲಿಕ್ ಮಾಡಿ.
ಹಂತ 6. 'ಡಿಸ್‌ಪ್ಲೇ ನೇಮ್ ಆಸ್' ಫೀಲ್ಡ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ Nickname ಹೇಗೆ ಕಾಣಿಸಿಕೊಳ್ಳಬೇಕೆಂದು ನೀವು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ.
ಹಂತ 7. ಸೇವ್ ಆಯ್ಕೆ ಕ್ಲಿಕ್ ಮಾಡಿ.

ಆಂಡ್ರಾಯ್ಡ್‌ ಮೂಲಕ ಗೂಗಲ್‌ ಮೀಟ್‌ನಲ್ಲಿನ ಹೆಸರನ್ನು ಬದಲಿಸಲು ಹೀಗೆ ಮಾಡಿ:

ಆಂಡ್ರಾಯ್ಡ್‌ ಮೂಲಕ ಗೂಗಲ್‌ ಮೀಟ್‌ನಲ್ಲಿನ ಹೆಸರನ್ನು ಬದಲಿಸಲು ಹೀಗೆ ಮಾಡಿ:

ಹಂತ 1. ನಿಮ್ಮ ಆಂಡ್ರಾಯ್ಡ್‌ ಸೆಟ್ಟಿಂಗ್‌ಗಳಿಗೆ ಹೋಗಿ.
ಹಂತ 2. ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಗೂಗಲ್‌ ನಲ್ಲಿ ಟ್ಯಾಪ್ ಮಾಡಿ.
ಹಂತ 3. ನಿಮ್ಮ ಪ್ರೊಫೈಲ್ ಐಕಾನ್ ಅಡಿಯಲ್ಲಿ ನಿಮ್ಮ ಖಾತೆ ಸೆಟ್ಟಿಂಗ್‌ಗಳನ್ನು ನಿರ್ವಹಿಸಿ ಮೇಲೆ ಟ್ಯಾಪ್ ಮಾಡಿ.
ಹಂತ 4. ವೈಯಕ್ತಿಕ ಮಾಹಿತಿ ಟ್ಯಾಬ್ ಅನ್ನು ಆಯ್ಕೆ ಮಾಡಿ ಮತ್ತು ಹೆಸರು ಕ್ಷೇತ್ರದಲ್ಲಿ ಟ್ಯಾಪ್ ಮಾಡಿ.
ಹಂತ 5. ನಿಮ್ಮ ಹೆಸರನ್ನು ಎಡಿಟ್‌ ಮತ್ತು ಸೇವ್‌ ಕ್ಲಿಕ್ ಮಾಡಿ.

iOS ಮೂಲಕ ಗೂಗಲ್‌ ಮೀಟ್‌ನ ನಿಮ್ಮ ಹೆಸರನ್ನು ಬದಲಿಸಲು ಹೀಗೆ ಮಾಡಿ:

iOS ಮೂಲಕ ಗೂಗಲ್‌ ಮೀಟ್‌ನ ನಿಮ್ಮ ಹೆಸರನ್ನು ಬದಲಿಸಲು ಹೀಗೆ ಮಾಡಿ:

ಹಂತ 1. ನಿಮ್ಮ ಐಫೋನ್‌/ಐಪ್ಯಾಡ್‌ನಲ್ಲಿ ಜಿ-ಮೇಲ್‌ ಅಪ್ಲಿಕೇಶನ್ ತೆರೆಯಿರಿ.
ಹಂತ 2. ಮೇಲಿನ ಎಡ ಮೂಲೆಯಲ್ಲಿರುವ ಮೆನು ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ 3. ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಸೆಟ್ಟಿಂಗ್‌ಗಳ ಆಯ್ಕೆಯನ್ನು ಆರಿಸಿ.
ಹಂತ 4. ನಿಮ್ಮ ಗೂಗಲ್‌ ಖಾತೆಯ ಮೇಲೆ ಟ್ಯಾಪ್ ಮಾಡಿ ಮತ್ತು ನಂತರ ನಿಮ್ಮ ಗೂಗಲ್‌ ಖಾತೆಯನ್ನು ನಿರ್ವಹಿಸಿ ಮೇಲೆ ಟ್ಯಾಪ್ ಮಾಡಿ.
ಹಂತ 5. ವೈಯಕ್ತಿಕ ಮಾಹಿತಿ ಟ್ಯಾಬ್ ಅನ್ನು ಆಯ್ಕೆ ಮಾಡಿ ಮತ್ತು ಹೆಸರು ಕ್ಷೇತ್ರದಲ್ಲಿ ಟ್ಯಾಪ್ ಮಾಡಿ.
ಹಂತ 6. ನಿಮ್ಮ ಹೆಸರನ್ನು ಬದಲಾಯಿಸಿ ಮತ್ತು ಸೇವ್ ಒತ್ತಿರಿ.

Best Mobiles in India

English summary
How to Change Your Name in Google Meet on PC, Android Mobile.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X