ಜೂಮ್‌ ವಿಡಿಯೊ ಕರೆಯಲ್ಲಿ ಬ್ಯಾಕ್‌ಗ್ರೌಂಡ್‌ ಬದಲಿಸುವುದು ಹೇಗೆ ಗೊತ್ತಾ?

|

ಮಹಾಮಾರಿ ಕೋವಿಡ್ -19 ಸಾಂಕ್ರಾಮಿಕ ವಕ್ಕರಿಸಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಜನರು ಕೊರೊನಾ ನಿಯಂತ್ರಣಕ್ಕಾಗಿ ಮನೆಯಲ್ಲಿಯೇ ಇದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಹುತೇಕ ಸಂಸ್ಥೆಯಗಳ ಉದ್ಯೋಗಿಗಳು ತಮ್ಮ ಸಹೋದ್ಯೋಗಿಗಳೊಂದಿಗೆ ಮೀಟಿಂಗ್ ನಡೆಸಲು ಜೂಮ್ ವಿಡಿಯೊ ಕಾನ್ಫರೆನ್ಸ್ ಕಾಲಿಂಗ್ ಆಪ್‌ ಅನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಈ ವೇಳೆ ಜೂಂ್ ಕಾಲಿಂಗ್‌ನಲ್ಲಿ ಬ್ಯಾಕ್‌ಗ್ರೌಂಡ್‌ ಬದಲಾವಣೆ ಅನೇಕರಿಗೆ ನೆರವಾಗಿದೆ.

ಜೂಮ್ ಆಪ್

ಹೌದು, ಮನೆಯಿಂದಲೇ ಜೂಮ್ ಆಪ್ ಮೂಲಕ ವಿಡಿಯೊ ಕರೆ ನಡೆಸುವಾಗ ಕೆಲವೊಮ್ಮೆ ಮನೆಯಲ್ಲಿ ಅಸ್ತವ್ಯಸ್ತ ಉಂಟಾಗಬಹುದು. ಅಥವಾ ವಿಡಿಯೊ ಕರೆ ಮಾಡಲು ಮನೆಯಲ್ಲಿ ಸೂಕ್ತ ಬ್ಯಾಕ್‌ಗ್ರೌಂಡ್ ಸಿಗದಿದ್ದರೇ ಬಳಕೆದಾರರು ಜೂಮ್ ಆಪ್‌ನಲ್ಲಿಯೇ ಲಭ್ಯವಿರುವ ಬ್ಯಾಕ್‌ಗ್ರೌಂಡ್‌ ವಾಲ್‌ಪೇಪರ್ ಬಳಕೆ ಮಾಡಬಹುದು. ಹಲವು ಆಕರ್ಷಕ ಬ್ಯಾಕ್‌ಗ್ರೌಂಡ್ ವಾಲ್‌ಪೇಪರ್ ಆಯ್ಕೆಗಳು ಜೂಮ್‌ ಆಪ್‌ನಲ್ಲಿ ಸಿಗುತ್ತವೆ. ಹಾಗಾದರೇ ಜೂಮ್ ವಿಡಿಯೊ ಕರೆ ಮಾಡುವಾಗ ಬ್ಯಾಕ್‌ಗ್ರೌಂಡ್ ಬದಲಾಯಿಸುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಜೂಮ್ ಆಪ್‌ನಲ್ಲಿ ಬ್ಯಾಕ್‌ಗ್ರೌಂಡ್‌ ಬದಲಿಸಲು ಹೀಗೆ ಮಾಡಿ

ಜೂಮ್ ಆಪ್‌ನಲ್ಲಿ ಬ್ಯಾಕ್‌ಗ್ರೌಂಡ್‌ ಬದಲಿಸಲು ಹೀಗೆ ಮಾಡಿ

ಹಂತ 1: ಜೂಮ್ ಅಪ್ಲಿಕೇಶನ್ ತೆರೆಯಿರಿ ಮತ್ತು ಅಪ್ಲಿಕೇಶನ್‌ನ ಮೇಲಿನ ಬಲ ಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಅನ್ನು ಕ್ಲಿಕ್ ಮಾಡಿ.

ಹಂತ 2: ನಂತರ ಸೆಟ್ಟಿಂಗ್‌ ಮೆನು ಕ್ಲಿಕ್ ಮಾಡಿ.

ವರ್ಚುವಲ್ ಹಿನ್ನೆಲೆ

ಹಂತ 3: ನಿಮ್ಮ ಎಡಭಾಗದಲ್ಲಿರುವ ಮೆನುವಿನಲ್ಲಿರುವ ವರ್ಚುವಲ್ ಹಿನ್ನೆಲೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 4: ಆನಂತರ ಜೂಮ್ ಒದಗಿಸಿದ ಡೀಫಾಲ್ಟ್ ಹಿನ್ನೆಲೆ ಆಯ್ಕೆಗಳಲ್ಲಿ ಒಂದನ್ನು ಆರಿಸಿ. ಮತ್ತು ಅದರ ಮೇಲೆ ಕ್ಲಿಕ್ ಮಾಡಿ. ಆಟೋಮ್ಯಾಟಿಕ್ ಆಗಿ ಬದಲಾವಣೆಗೊಳ್ಳುತ್ತದೆ.

 ಅಪ್‌ಲೋಡ್

ಹಂತ 5: ಬ್ಯಾಕ್ಗ್ರೌಂಡ್‌ನಲ್ಲಿ ನಿಮ್ಮ ಆಯ್ಕೆಯ ಚಿತ್ರವನ್ನು ಸಹ ನೀವು ಅಪ್‌ಲೋಡ್ ಮಾಡಬಹುದು. ವರ್ಚುವಲ್ ಬ್ಯಾಕ್‌ಗ್ರೌಂಡ್‌ ಆಯ್ಕೆಗೆ ಹೋಗಿ ಮತ್ತು ‘ವರ್ಚುವಲ್ ಬ್ಯಾಕ್‌ಗ್ರೌಂಡ್‌ ಆಯ್ಕೆಮಾಡಿ' ಪ್ಲಸ್ ಐಕಾನ್ ಮೇಲೆ ಕ್ಲಿಕ್ ಮಾಡಿ.

ಹಂತ 6: ಈಗ, ನಿಮ್ಮ ಆಯ್ಕೆಯ ಚಿತ್ರವನ್ನು ನೀವು ಅಪ್‌ಲೋಡ್ ಮಾಡುವಂತಹ ಬಾಕ್ಸ್‌ ಕಾಣಿಸುತ್ತದೆ. ಒಮ್ಮೆ ನೀವು ಚಿತ್ರವನ್ನು ಅಪ್‌ಲೋಡ್ ಮಾಡಿದ ನಂತರ, ಜೂಮ್ ಒದಗಿಸಿದ ಇತರ ವಾಲ್‌ಪೇಪರ್ ಜೊತೆಗೆ ಅದು ಕಾಣಿಸುತ್ತದೆ.

ಜೂಮ್ ವಿಡಿಯೊ ಕರೆ ವೇಳೆಯು ಬ್ಯಾಕ್‌ಗ್ರೌಂಡ್‌ ಚಿತ್ರ ಬದಲಾಯಿಸಲು ಹೀಗೆ ಮಾಡಿ:

ಜೂಮ್ ವಿಡಿಯೊ ಕರೆ ವೇಳೆಯು ಬ್ಯಾಕ್‌ಗ್ರೌಂಡ್‌ ಚಿತ್ರ ಬದಲಾಯಿಸಲು ಹೀಗೆ ಮಾಡಿ:

ಹಂತ 1: ಜೂಮ್ ಅಪ್ಲಿಕೇಶನ್ ತೆರೆಯಿರಿ ಮತ್ತು ಸಭೆಗೆ/ಮೀಟಿಂಗ್ ಸೇರಿಕೊಳ್ಳಿ.

ಹಂತ 2: ನಂತರ ಮೆನು ಆಯ್ಕೆಗಾಗಿ, ಅಪ್ಲಿಕೇಶನ್‌ನ ಕೆಳಗಿನ ಬಲ ಭಾಗದಲ್ಲಿ ಕಂಡುಬರುವ ಮೂರು ಡಾಟ್‌ಗಳ ಮೇಲೆ ಟ್ಯಾಪ್ ಮಾಡಿ.

ವರ್ಚುವಲ್

ಹಂತ 3: ಆಗ ವರ್ಚುವಲ್ ಬ್ಯಾಕ್‌ಗ್ರೌಂಡ್‌ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 4: ನಂತರ ಜೂಮ್‌ನ ಡೀಫಾಲ್ಟ್ ಚಿತ್ರಗಳಲ್ಲಿ ಒಂದನ್ನು ಆಯ್ಕೆ ಮಾಡಿ ಅಥವಾ ನಿಮ್ಮದೇ ಆದಅ ಫೋಟೊವನ್ನು ಅಪ್‌ಲೋಡ್ ಮಾಡಿ.

Best Mobiles in India

Read more about:
English summary
Zoom users can use a background of their choice, like an image of a beach from Maldives or the snow-capped Swizz Alps, to replace the background in their surroundings.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X