ನಿಮ್ಮ ಪ್ರದೇಶದ ಗಾಳಿಯ ಗುಣಮಟ್ಟ ಚೆಕ್‌ ಮಾಡಬೇಕೆ?..ಇಲ್ಲಿದೆ ಸುಲಭ ದಾರಿ!

|

ಹಲವಾರು ಕಾರಣಗಳಿಂದಾಗಿ ನಮ್ಮ ಸುತ್ತಲಿನ ಗಾಳಿಯ ಗುಣಮಟ್ಟವು ದೋಷಪೂರಿತವಾಗುತ್ತದೆ. ಹವಾಮಾನ ಬದಲಾವಣೆ, ಹಬ್ಬದ ಸಂದರ್ಭಗಳಲ್ಲಿ ಸಿಡಿಸುವ ಪಟಾಕಿಗಳಿಂದ ಮತ್ತು ವಾಹನಗಳಿಂದ ಬರುವ ಹೊಗೆಯಿಂದಾಗಿ ಗಾಳಿಯು ಮಾಲಿನ್ಯವಾಗುತ್ತದೆ. ಗಾಳಿಯ ಶುದ್ಧತೆಯ ಗುಣಮಟ್ಟವನ್ನು ಹದಗೆಡಿಸುತ್ತದೆ. ಇನ್ನು ಮಾಲಿನ್ಯ ಪೂರಿತ ಗಾಳಿಯ ಸೇವಿಸುವುದರಿಂದ ಹೃದಯ ಮತ್ತು ಉಸಿರಾಟದ ಕಾಯಿಲೆಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ. ಈ ನಿಟ್ಟಿನಲ್ಲಿ ಕೆಲವು ಸಂದರ್ಭಗಳಲ್ಲಿ ನಮ್ಮ ಪ್ರದೇಶದ ಗಾಳಿಯ ಗುಣಮಟ್ಟ ತಿಳಿಯುವುದು ಸೂಕ್ತ. ಅದು ಹೇಗೆ ಅಂತೀರಾ?

ಗುಣಮಟ್ಟವನ್ನು

ನಾವು ವಾಸಿಸುವ ಪ್ರದೇಶದಲ್ಲಿನ ಗಾಳಿಯ ಗುಣಮಟ್ಟ ತಿಳಿಯುವುದು ಮುಖ್ಯ. ಸರ್ಚ್ ಇಂಜಿನ್‌ ದೈತ್ಯ ಗೂಗಲ್‌ ಸಂಸ್ಥೆಯ ಗೂಗಲ್‌ ಮ್ಯಾಪ್‌ (Goolge Map) ಮೂಲಕ ಸುಲಭವಾಗಿ ಗಾಳಿಯ ಗುಣಮಟ್ಟವನ್ನು ತಿಳಿದುಕೊಳ್ಳಬಹುದಾಗಿದೆ. ಗೂಗಲ್‌ ಗಾಳಿಯ ಗುಣಮಟ್ಟದ ಟ್ರ್ಯಾಕರ್ ಆಯ್ಕೆಯನ್ನು ಹೊಂದಿದ್ದು, ಅದು ಪ್ರಸ್ತುತ ಲೊಕೇಶನ್ ಆಧಾರಿತವಾಗಿ ವಾಯು ಗುಣಮಟ್ಟ ಸೂಚ್ಯಂಕವನ್ನು (ರಾಷ್ಟ್ರೀಯ Air Quality Index - AQI) ನಿಮಗೆ ತಿಳಿಸುತ್ತದೆ.

ಬಳಕೆದಾರರು

ಗೂಗಲ್‌ನ ಈ ಆಯ್ಕೆಯ ಮೂಲಕ ಬಳಕೆದಾರರು ಭೇಟಿ ನೀಡಲು ಬಯಸುವ ಯಾವುದೇ ಸ್ಥಳದ ಅಥವಾ ಸದ್ಯ ವಾಸ ಮಾಡುವ ಪ್ರದೇಶದ ಗಾಳಿಯ ಗುಣಮಟ್ಟವನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು. ಹಾಗಾದರೆ ಗೂಗಲ್‌ ಮ್ಯಾಪ್‌ ಮೂಲಕ ನಿಮ್ಮ ಪ್ರದೇಶದ ಗಾಳಿಯ ಗುಣಮಟ್ಟ ತಿಳಿಯುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿರಿ.

ಡಿವೈಸ್‌ಗಳಲ್ಲಿ

ಆಂಡ್ರಾಯ್ಡ್‌ ಮತ್ತು ಐಓಎಸ್‌ (iOS) ಡಿವೈಸ್‌ಗಳಲ್ಲಿ ಗಾಳಿಯ ಗುಣಮಟ್ಟದ ಪರಿಸ್ಥಿತಿಗಳನ್ನು ಪರಿಶೀಲಿಸಲು ಗೂಗಲ್‌ ನ ಗಾಳಿಯ ಗುಣಮಟ್ಟದ ಟೂಲ್‌ ನಿಮಗೆ ಸಹಾಯ ಮಾಡುತ್ತದೆ. ಹೀಗಾಗಿ, ನಿಮ್ಮ ಪ್ರದೇಶದಲ್ಲಿ ಹೊರಾಂಗಣಕ್ಕೆ ಹೋಗುವುದು ಸುರಕ್ಷಿತವೇ? ಗಾಳಿಯ ಕ್ವಾಲಿಟಿ ಹೇಗಿದೆ ಎಂಬ ಬಗ್ಗೆ ಹೆಚ್ಚು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ಮಾಡಲು ನಿಮಗೆ ಸಹಾಯ ಮಾಡುತ್ತದೆ.

ಗೂಗಲ್‌ ಮ್ಯಾಪ್‌ ಮೂಲಕ ಗಾಳಿಯ ಗುಣಮಟ್ಟವನ್ನು ಹೀಗೆ ಚೆಕ್ ಮಾಡಿರಿ:

ಗೂಗಲ್‌ ಮ್ಯಾಪ್‌ ಮೂಲಕ ಗಾಳಿಯ ಗುಣಮಟ್ಟವನ್ನು ಹೀಗೆ ಚೆಕ್ ಮಾಡಿರಿ:

* ನಿಮ್ಮ ಆಂಡ್ರಾಯ್ಡ್‌ ಅಥವಾ iOS ಫೋನಿನಲ್ಲಿ ಗೂಗಲ್‌ ಮ್ಯಾಪ್‌ ತೆರೆಯಿರಿ.
* ಈಗ ಸ್ಥಳವನ್ನು ಸರ್ಚ್ ಮಾಡಿ ಅಥವಾ ನಿಮ್ಮ ಪ್ರಸ್ತುತ ಸ್ಥಳವನ್ನು ಗುರುತಿಸಲು ಟಾರ್ಗೆಟ್‌ ಬಟನ್ ಮೇಲೆ ಟ್ಯಾಪ್ ಮಾಡಿ.
* ಸ್ಥಳವನ್ನು ಹೊಂದಿಸಿದ ನಂತರ, ನಿಮ್ಮ ಪರದೆಯ ಮೇಲಿನ ಬಲ ಮೂಲೆಯಲ್ಲಿ ಲಭ್ಯವಿರುವ ಲೇಯರ್‌ಗಳ ಬಟನ್ ಅನ್ನು ಟ್ಯಾಪ್ ಮಾಡಿ.
* ಮ್ಯಾಪ್‌ ಪ್ರಕಾರಗಳು ಮತ್ತು ಮ್ಯಾಪ್‌ ವಿವರಗಳಿಗಾಗಿ ನೀವು ಆಯ್ಕೆಗಳನ್ನು ಕಾಣಬಹುದು. ಮ್ಯಾಪ್‌ ವಿವರಗಳ ಅಡಿಯಲ್ಲಿ ಲಭ್ಯವಿರುವ 'Air Quality' ಮೇಲೆ ಟ್ಯಾಪ್ ಮಾಡಿ.
* ರಾಷ್ಟ್ರೀಯ AQI ನಿಂದ ಲಭ್ಯವಿರುವ ಗಾಳಿಯ ಗುಣಮಟ್ಟವನ್ನು ಗೂಗಲ್‌ ನಿಮಗೆ ತೋರಿಸುತ್ತದೆ.

ಆಂಡ್ರಾಯ್ಡ್‌ ಬಳಕೆದಾರರು ಗೂಗಲ್‌ ಮ್ಯಾಪ್‌ನಲ್ಲಿ ಸ್ಟ್ರೀಟ್ ವೀಕ್ಷಣೆ ಮಾಡುವುದು ಹೇಗೆ?

ಆಂಡ್ರಾಯ್ಡ್‌ ಬಳಕೆದಾರರು ಗೂಗಲ್‌ ಮ್ಯಾಪ್‌ನಲ್ಲಿ ಸ್ಟ್ರೀಟ್ ವೀಕ್ಷಣೆ ಮಾಡುವುದು ಹೇಗೆ?

ಹಂತ 1: ನಿಮ್ಮ ಆಂಡ್ರಾಯ್ಡ್‌ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ, ಗೂಗಲ್‌ ಮ್ಯಾಪ್‌ ಅಪ್ಲಿಕೇಶನ್ ತೆರೆಯಿರಿ.
ಹಂತ 2: ಸ್ಥಳಕ್ಕಾಗಿ ಸರ್ಚ್‌ ಮಾಡಿ ಅಥವಾ ಮ್ಯಾಪ್‌ನಲ್ಲಿ ಪಿನ್ ಅನ್ನು ಬಿಡಿ.
ಹಂತ 3: ಪಿನ್ ಅನ್ನು ಬಿಡಲು, ಮ್ಯಾಪ್‌ನಲ್ಲಿ ಒಂದು ಸ್ಥಳವನ್ನು ಟಚ್ ಮಾಡಿ ಮತ್ತು ಹಿಡಿದುಕೊಳ್ಳಿ.
ಹಂತ 4: ಕೆಳಭಾಗದಲ್ಲಿ, ಸ್ಥಳದ ಹೆಸರು ಅಥವಾ ವಿಳಾಸವನ್ನು ಟ್ಯಾಪ್ ಮಾಡಿ.
ಹಂತ 5: 'ಸ್ಟ್ರೀಟ್ ವ್ಯೂ' ಎಂದು ಲೇಬಲ್ ಮಾಡಲಾದ ಫೋಟೋವನ್ನು ಸ್ಕ್ರಾಲ್ ಮಾಡಿ ಮತ್ತು ಆಯ್ಕೆಮಾಡಿ ಅಥವಾ ಸ್ಟ್ರೀಟ್ ವ್ಯೂ ಐಕಾನ್ 360 ಫೋಟೋದೊಂದಿಗೆ ಥಂಬ್‌ನೇಲ್ ಅನ್ನು ಆಯ್ಕೆಮಾಡಿ.

Best Mobiles in India

Read more about:
English summary
How To Check Air Quality Index In Your Area Using Google Map: Here's Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X