ಪ್ರಯಾಣಿಕರೆ ಗಮನಿಸಿ!..ಲೈವ್‌ ಟ್ರೈನ್‌ ಸ್ಟೇಟಸ್ ತಿಳಿಯಲು ಹೀಗೆ ಮಾಡಿ!

|

ಟೆಕ್ ದೈತ್ಯ ಗೂಗಲ್ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಆ ಪೈಕಿ ಟ್ರೈನ್‌ ಲೈವ್ ಲೊಕೇಶನ್ ಮಾಹಿತಿ ತಿಳಿಯಲು ನೆರವಾಗಿದೆ. ಇದೇ ರೀತಿ ಟ್ರೈನ್ ಮಾಹಿತಿ ಒದಗಿಸುವ ಹಲವು ಥರ್ಡ್‌ ಪಾರ್ಟಿ ಆಪ್‌ಗಳು ಇದ್ದರೂ, ಅದಾಗ್ಯೂ ಗೂಗಲ್ ಆಕರ್ಷಕ ಎನಿಸಿದೆ. ಇದು ಗ್ರಾಹಕರಿಗೆ ರೈಲುಗಳ ವೇಳಾಪಟ್ಟಿ, ರೈಲು ಆಗಮನದ ಸಮಯ, ವಿಳಂಬ ಸ್ಟೇಟಸ್‌ ನಂತಹ ಮಾಹಿತಿ ನೀಡುತ್ತದೆ.

ಪ್ರಯಾಣಿಕರೆ ಗಮನಿಸಿ!..ಲೈವ್‌ ಟ್ರೈನ್‌ ಸ್ಟೇಟಸ್ ತಿಳಿಯಲು ಹೀಗೆ ಮಾಡಿ!

ಕಡಿಮೆ ಫೋನ್ ಸ್ಟೋರೇಜ್ ಸ್ಮಾರ್ಟ್‌ಫೋನ್ ಬಳಸುವ ಆಂಡ್ರಾಯ್ಡ್‌ ಬಳಕೆದಾರರಿಗೆ ಗೂಗಲ್‌ ಮ್ಯಾಪ್‌ನಲ್ಲಿನ ಈ ಫೀಚರ್ ಉಪಯುಕ್ತವಾಗಿದೆ. ಈ ವೈಶಿಷ್ಟ್ಯವನ್ನು ಪ್ರಾರಂಭಿಸುವ ಒಂದು ವರ್ಷದ ಮೊದಲು ಗೂಗಲ್ ಸ್ವಾಧೀನಪಡಿಸಿಕೊಂಡಿರುವ 'ವೇರ್ ಈಸ್ ಮೈ ಟ್ರೈನ್' ಅಪ್ಲಿಕೇಶನ್‌ನೊಂದಿಗೆ ಸಹಭಾಗಿತ್ವದಲ್ಲಿ ಫೀಚರ್‌ ಅನ್ನು ಅಳವಡಿಸಲಾಗಿದೆ. ಇನ್ನು ಈ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು, ನೀವು ಸಕ್ರಿಯ ಗೂಗಲ್‌ ಖಾತೆಯನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ. ಈ ವೈಶಿಷ್ಟ್ಯವನ್ನು ಹೇಗೆ ಬಳಸುವುದು ಮತ್ತು ಗೂಗಲ್ ನಕ್ಷೆಗಳನ್ನು ಬಳಸಿಕೊಂಡು ಲೈವ್ ಟ್ರೈನ್ ಸ್ಟೇಟಸ್‌ ಮಾಹಿತಿ ಪರಿಶೀಲಿಸಲು ಈ ಕ್ರಮ ಅನುಸರಿಸಿ.

ಪ್ರಯಾಣಿಕರೆ ಗಮನಿಸಿ!..ಲೈವ್‌ ಟ್ರೈನ್‌ ಸ್ಟೇಟಸ್ ತಿಳಿಯಲು ಹೀಗೆ ಮಾಡಿ!

ಗೂಗಲ್ ಮ್ಯಾಪ್‌ ಮೂಲಕ ಟ್ರೈನ್‌ ಲೈವ್ ರೈಲಿನ ಸ್ಟೇಟಸ್‌ ಪರಿಶೀಲಿಸಲು ಹೀಗೆ ಮಾಡಿ:

- ಮೊದಲು, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಮ್ಯಾಪ್‌ ಅನ್ನು ತೆರೆಯಿರಿ.

- ನಂತರ ಸರ್ಚ್ ಲಿಸ್ಟ್‌ನಲ್ಲಿ ತಲುಪುವ ಸ್ಥಳ/ ನಿಲ್ದಾಣವನ್ನು ನಮೂದಿಸಿ.

- ಮುಂದೆ, ರೈಲು ಐಕಾನ್ ಮೇಲೆ ಟ್ಯಾಪ್ ಮಾಡಿ.

- ನಂತರ ತಲುಪುವ ಸ್ಥಳ/ ನಿಲ್ದಾಣ ಡೈಲಾಗ್ ಬಾಕ್ಸ್‌ನ ಕೆಳಗೆ 'ದ್ವಿಚಕ್ರ ವಾಹನ' ಮತ್ತು 'ವಾಕ್' ಐಕಾನ್ ನಡುವೆ ಇರಿಸಲಾಗಿರುವ 'ಟ್ರೈನ್' ಐಕಾನ್ ಮೇಲೆ ಟ್ಯಾಪ್ ಮಾಡಿ.

- ರೈಲು ಐಕಾನ್ ಇರುವ ಮಾರ್ಗ ಆಯ್ಕೆಯ ಮೇಲೆ ಟ್ಯಾಪ್ ಮಾಡಿ.

- ನಂತರ, ಲೈವ್ ರೈಲು ಸ್ಟೇಟಸ್ ಅನ್ನು ಪರಿಶೀಲಿಸಲು ರೈಲಿನ ಹೆಸರಿನ ಮೇಲೆ ಟ್ಯಾಪ್ ಮಾಡಿ.

ಪ್ರಯಾಣಿಕರೆ ಗಮನಿಸಿ!..ಲೈವ್‌ ಟ್ರೈನ್‌ ಸ್ಟೇಟಸ್ ತಿಳಿಯಲು ಹೀಗೆ ಮಾಡಿ!

ಟ್ರೈನ್‌ ಟಿಕೆಟ್ ಬುಕ್ ಮಾಡಲು ಅತ್ಯುತ್ತಮ ಆಪ್ಸ್:

ಕನ್ಫರ್ಮ್ ಟಿಕೆಟ್
ಕನ್ಫರ್ಮ್ ಟಿಕೆಟ್ ರೈಲ್ವೆಯ ಇಲಾಖೆಯ ಅಧಿಕೃತ IRCTCಯ ಪಾಲುದಾರ ರೈಲು ಅಪ್ಲಿಕೇಶನ್ ಆಗಿದೆ. ಈ ಆಪ್‌ ಸಹ ಎಲ್ಲಾ ಅಗತ್ಯ ಫೀಚರ್ಸ್‌/ಸೇವೆಗಳ ಆಯ್ಕೆ ಹೊಂದಿದೆ. ಈ ಆಪ್‌ನಲ್ಲಿ ಸುಲಭವಾಗಿ IRCTC ಟಿಕೆಟ್‌ ಹಾಗೂ ತತ್ಕಾಲ್ ಟಿಕೆಟ್‌ಗಳ ಸರ್ಚ್ ಮಾಡಬಹುದು. ರನ್ನಿಂಗ್ ಟ್ರೈನಿನ ಲೈವ್ ಸ್ಟೇಟಸ್‌ ಚೆಕ್ ಮಾಡಬಹುದಾಗಿದೆ. ಹಾಗೆಯೇ ರೈಲು ವೇಳಾಪಟ್ಟಿಯನ್ನು ತೋರಿಸುವ ಆಯ್ಕೆಯನ್ನು ಇದು ಒಳಗೊಂಡಿದೆ.

ಮೇಕ್ ಮೈ ಟ್ರಿಪ್
ಒಂದೇ ಆಪ್‌ನಲ್ಲಿ ರೈಲು, ಹೋಟೆಲ್, ಫ್ಲೈಟ್, ಬಸ್, ಕ್ಯಾಬ್ ಮತ್ತು ಇನ್ನೂ ಹೆಚ್ಚಿನ ಸೇವೆಗಳನ್ನು ಕಾಯ್ದಿರಿಸುವುದಕ್ಕೆ ಮೇಕ್‌ ಮೈ ಟ್ರಿಪ್ ಆಪ್‌ ಒಂದು ಉತ್ತಮ ನಿಲುಗಡೆ. ಈ ಆಪ್‌ನಲ್ಲಿ ರೈಲು ಟಿಕೆಟ್ ಬುಕ್ ಮಾಡಲು ಆಯ್ಕೆ ಜೊತೆಗೆ ಟ್ರೈನ್ ವೇಳಾಪಟ್ಟಿಗಳನ್ನು ಸಹ ಪರಿಶೀಲಿಸಬಹುದು. ಹಾಗೆಯೇ ಟ್ರೈನ್‌ ಲೈವ್ ರನ್ನಿಂಗ್ ಸ್ಟೇಟಸ್‌ ಅನ್ನು ತಿಳಿಯಬಹುದಾಗಿದೆ. PNR ಸ್ಟೇಟಸ್‌ ಸಹ ಚೆಕ್ ಮಾಡಬಹುದಾಗಿದೆ.

ರೈಲು ಯಾತ್ರಾ
ರೈಲು ಯಾತ್ರಾ ಆಪ್‌ ರೈಲು ಟಿಕೆಟ್ ಕಾಯ್ದಿರಿಸಲು ಭಾರತೀಯ ರೈಲ್ವೆಯ ಮತ್ತೊಂದು ಅತ್ಯುತ್ತಮ ಅಪ್ಲಿಕೇಶನ್ ಆಗಿದೆ. ಈ ರೈಲು ಯಾತ್ರಾ ಆಪ್‌ ಅಪ್ಲಿಕೇಶನ್ ಐಫೋನ್, ಆಂಡ್ರಾಯ್ಡ್ ಮತ್ತು ವಿಂಡೋಸ್‌ನಲ್ಲಿ ಲಭ್ಯವಿದೆ. ಸೀಟ್ ಲಭ್ಯತೆ, ಟಿಕೆಟ್ ಶುಲ್ಕ ಮತ್ತು ಟ್ರೈನ್ ಲೈವ್ ಸ್ಟೇಟಸ್‌ ಜೊತೆಗೆ ಟ್ರೈನ್ ಆಗಮನ / ನಿರ್ಗಮನವನ್ನು ಪರಿಶೀಲಿಸಲು ಈ ಅಪ್ಲಿಕೇಶನ್ ಅನ್ನು ಬಳಸಬಹುದು. ಇನ್ನು ಈ ಆಪ್‌ನಲ್ಲಿ ಸ್ಟೇಷನ್ ಹತ್ತಿರದ ಆಸ್ಪತ್ರೆಯ ಬಗ್ಗೆ ಮಾಹಿತಿ ಪಡೆಯಲು, ಮೆಡಿಕಲ್ ಎಮರ್ಜೆನ್ಸಿ ಎಂಬ ವಿಶೇಷ ಆಯ್ಕೆ ಇದೆ.

Best Mobiles in India

English summary
How to Check Live Train Status Via Google Maps: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X