ಆನ್‌ಲೈನ್‌ ಮೂಲಕ ವಾಹನದ ಮಾಲೀಕರ ಮಾಹಿತಿ ತಿಳಿಯಲು ಹೀಗೆ ಮಾಡಿ!

|

ವಾಹನವನ್ನು ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ, ಅಪಘಾತಗಳು ನಡೆದಾಗ ಅಥವಾ ಕೆಲವೊಂದು ಅಗತ್ಯ ಸಂದರ್ಭಗಳಲ್ಲಿ ಸಂಬಂಧಪಟ್ಟ ವಾಹನದ ಮಾಲೀಕರ ಬಗ್ಗೆ ತಿಳಿಯಬೇಕಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಆನ್‌ಲೈನ್‌ ಮೂಲಕ ಆ ವಾಹನದ ಮಾಲೀಕರ ಮಾಹಿತಿ ತಿಳಿಯಬಹುದಾಗಿದೆ.

ಮಾಲೀಕರ

ಹೌದು, ಯಾವುದೇ ವಾಹನ ಇರಲಿ ಆ ವಾಹನದ ಮಾಲೀಕರ ವಿವರಗಳನ್ನು ಪಡೆಯಲು ಅವಕಾಶ ಇದೆ. ವಾಹನ ಮಾಲೀಕರ ಮಾಹಿತಿ ತಿಳಿಯಲು ಆ ವಾಹನದ ನಂಬರ್‌ ಅಗತ್ಯವಾಗಿರುತ್ತದೆ. ಕಾರ್‌ಗಳು, ಬೈಕ್‌ಗಳು, ಆಟೋ ರಿಕ್ಷಾಗಳು, ಕ್ಯಾಬ್‌ಗಳು, ಬಸ್‌ಗಳು ಸೇರಿದಂತೆ ಸಾರಿಗೆ ಇಲಾಖೆಯಲ್ಲಿ ನೋಂದಾಯಿತ ವಾಹನಗಳ ಮಾಲೀಕರ ಬಗ್ಗೆ ಅಧಿಕೃತ VAHAN ವೆಬ್‌ಸೈಟ್ ನಲ್ಲಿ ಕೇವಲ ನಂಬರ್ ಪ್ಲೇಟ್ ವಿವರಗಳನ್ನು ಬಳಸಿಕೊಂಡು ಮಾಹಿತಿ ತಿಳಿಯಬಹುದು. ಹಾಗಾದರೆ ಆನ್‌ಲೈನ್‌ ಮೂಲಕ ವಾಹನ ಮಾಲೀಕರ ಮಾಹಿತಿ ತಿಳಿಯುವುದು ಹೇಗೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

VAHAN ವೆಬ್‌ಸೈಟ್ ಬಳಸಿ ವಾಹನ ಮಾಲೀಕರ ವಿವರ ಚೆಕ್ ಮಾಡಲು ಹೀಗೆ ಮಾಡಿ:

VAHAN ವೆಬ್‌ಸೈಟ್ ಬಳಸಿ ವಾಹನ ಮಾಲೀಕರ ವಿವರ ಚೆಕ್ ಮಾಡಲು ಹೀಗೆ ಮಾಡಿ:

* ವಾಹನ್ ಪರಿವಾಹನ್ ವೆಬ್‌ಸೈಟ್‌ಗೆ ಭೇಟಿ ನೀಡಿ
* ನೀವು ಈಗಾಗಲೇ ಖಾತೆಯನ್ನು ರಚಿಸಿದ್ದರೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಅಥವಾ ಖಾತೆಯನ್ನು ರಚಿಸಿ ಕ್ಲಿಕ್ ಮಾಡಿ
* ಖಾತೆಯನ್ನು ರಚಿಸಲು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನಮೂದಿಸಿ
* OTP ನಮೂದಿಸಿ ಮತ್ತು ಪಾಸ್‌ವರ್ಡ್‌ ರಚಿಸಿ
* ಈಗ, ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗ್ ಇನ್ ಮಾಡಿ
* ಮುಂದಿನ ಪೇಜ್‌ನಲ್ಲಿ, ವಾಹನದ ಪ್ಲೇಟ್ ನಲ್ಲಿರುವ ಸಂಖ್ಯೆಯನ್ನು ನಮೂದಿಸಿ
* ಕ್ಯಾಪ್ಚಾ ಕೋಡ್ ನಮೂದಿಸಿ
* Vahan search ಬಟನ್ ಮೇಲೆ ಕ್ಲಿಕ್ ಮಾಡಿ
* ಬಳಿಕ ವಾಹನದ ವಿವರಗಳನ್ನು ನೋಡಬಹುದಾಗಿದೆ.

ಗಮನಿಸಿಸಬೇಕಾದ ಸಂಗತಿ

ಗಮನಿಸಿಸಬೇಕಾದ ಸಂಗತಿ

ಅಧಿಕೃತ ಪೋರ್ಟಲ್‌ಗಳಿಂದ ಪಡೆದ ವಾಹನದ ಮಾಲೀಕರ ಮಾಹಿತಿಯನ್ನು ಯಾವುದೇ ರೀತಿಯ ದುರುಪಯೋಗಕ್ಕೆ ಬಳಸಬಾರದು. ಒಂದು ವೇಳೆ ದುರುದ್ಧೇಶಕ್ಕಾಗಿ ಬಳಕೆ ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಡ್ರೈವಿಂಗ್ ಲೈಸೆನ್ಸ್ ಕಳೆದುಹೋಗಿದೆಯಾ?..ಹೀಗೆ ಮಾಡಿ!

ಡ್ರೈವಿಂಗ್ ಲೈಸೆನ್ಸ್ ಕಳೆದುಹೋಗಿದೆಯಾ?..ಹೀಗೆ ಮಾಡಿ!

ಎಫ್‌ಐಆರ್ ಅಗತ್ಯ
ಡ್ರೈವಿಂಗ್ ಲೈಸೆನ್ಸ್ ಕಳೆದು ಹೋದರೆ, ಆ ಬಗ್ಗೆ ಪೊಲೀಸ್ ಠಾಣೆಯಲ್ಲಿ FIR ಮಾಡಬೇಕಾಗುತ್ತದೆ. ನಕಲಿ ಡಿಎಲ್‌ಗಾಗಿ ಅರ್ಜಿ ಸಲ್ಲಿಸಿದಾಗ, ನಿಮಗೆ ಈ ಎಫ್‌ಐಆರ್‌ನ ನಕಲು ಅಗತ್ಯ ಇರುತ್ತದೆ. ಆದರೆ ಒಂದು ವೇಳೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಹರಿದು ಹೋಗಿದ್ದರೇ ಅಥವಾ ಹಾಳಾಗಿದ್ದರೇ, ಇಂತಹ ಸಂದರ್ಭದಲ್ಲಿ ನಕಲಿ ಡಿಎಲ್‌ ಪಡೆಯಲು, ಅರ್ಜಿ ಜೊತೆಗೆ ಓರಿಜಿನಲ್ ಡಿಎಲ್ ಅನ್ನು ಸಲ್ಲಿಸಬೇಕಾಗುತ್ತದೆ.

ಆನ್‌ಲೈನ್ ಮೂಲಕ ನಕಲಿ DL ಪಡೆಯಲು ಅರ್ಜಿ ಸಲ್ಲಿಸಲು ಈ ಕ್ರಮ ಫಾಲೋ ಮಾಡಿರಿ

ಆನ್‌ಲೈನ್ ಮೂಲಕ ನಕಲಿ DL ಪಡೆಯಲು ಅರ್ಜಿ ಸಲ್ಲಿಸಲು ಈ ಕ್ರಮ ಫಾಲೋ ಮಾಡಿರಿ

* ಮೊದಲು ರಸ್ತೆ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
* ವೆಬ್‌ಸೈಟ್‌ನಲ್ಲಿ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, LLD ಫಾರ್ಮ್ ಅನ್ನು ಭರ್ತಿ ಮಾಡಿ
* ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ನಿಮ್ಮ ಪ್ರಿಂಟ್ ಔಟ್ ತೆಗೆದುಕೊಂಡು ಅದನ್ನು ಇರಿಸಿ
* ಇದರೊಂದಿಗೆ, ನಿಮ್ಮ ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಿ.
* ಬಳಿಕ ಈ ಫಾರ್ಮ್ ಅನ್ನು RTO ಕಚೇರಿಗೆ ಹೋಗಿ ಸಲ್ಲಿಸಬೇಕು
* ನೀವು ಈ ಕೆಲಸವನ್ನು ಆನ್‌ಲೈನ್‌ನಲ್ಲಿಯೂ ಮಾಡಬಹುದು.
* ಆನ್‌ಲೈನ್ ಪ್ರಕ್ರಿಯೆ ಮುಗಿದ 30 ದಿನಗಳ ನಂತರ ನೀವು ನಕಲು DL ಅನ್ನು ಪಡೆಯುತ್ತೀರಿ.

ಆಫ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಇದೆ

ಆಫ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಇದೆ

ನಕಲಿ ಡಿಎಲ್‌ ಪಡೆಯಲು ಆಫ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ ಇದೆ. ಇದಕ್ಕಾಗಿ, ಮೊದಲು RTO ಆಫೀಸ್‌ಗೆ ಭೇಟಿ ನೀಡಿ. ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು. ನೀವು RTO ಕಚೇರಿಗೆ ಹೋಗಿ ಶುಲ್ಕವನ್ನು ಪಾವತಿಸುವ ಮೂಲಕ ಎಲ್‌ಎಲ್‌ಡಿ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ.

ನಂತರ

ಈ ಪ್ರಕ್ರಿಯೆಯಲ್ಲಿ ನೀವು 30 ದಿನಗಳ ನಂತರ ನಿಮ್ಮ ನಕಲಿ ಚಾಲನಾ ಪರವಾನಗಿಯನ್ನು ಪಡೆಯುತ್ತೀರಿ. ಈ ವೇಳೆ, ನೀವು ರಶೀದಿಯನ್ನು ಸಹ ಪಡೆಯುತ್ತೀರಿ, ಅದನ್ನು ಕಾಯ್ದಿಟ್ಟುಕೊಳ್ಳುವುದು ಅಗತ್ಯ. ನಕಲು DL ಅನ್ನು ಸ್ವೀಕರಿಸಿದಾಗ, ಈ ರಶೀದಿಯ ಅಗತ್ಯವಿರುತ್ತದೆ. ಈ ರಸೀದಿಯ ಮೂಲಕ ನಿಮ್ಮ ನಕಲಿ DL ಅನ್ನು ಸಹ ನೀವು ಟ್ರ್ಯಾಕ್ ಮಾಡಬಹುದು.

Most Read Articles
Best Mobiles in India

English summary
How to Check Vehicle Owner Details by Vehicle Number: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X