ಸುರಕ್ಷಿತ ಪಾಸ್ವರ್ಡ್‌ ಆಯ್ಕೆಗೆ ಕೆಲ ಟಿಪ್ಸ್‌ ಇಲ್ಲಿದೆ ನೋಡಿ

Posted By: Staff
ಸುರಕ್ಷಿತ ಪಾಸ್ವರ್ಡ್‌ ಆಯ್ಕೆಗೆ ಕೆಲ ಟಿಪ್ಸ್‌ ಇಲ್ಲಿದೆ ನೋಡಿ
ನಿಮ್ಮ ಪಾಸ್ವರ್ಡ್‌ಸುರಕ್ಷಿತವಾಗಿಡಲು ಅತ್ಯಂತ ಸುಲಭ್ದ ಮಾರ್ಗವೇನೆಂದರೆ ಆಗಿಂದ್ದಾಗೆ ನಿಮ್ಮ ಪಾಸ್ವರ್ಡ್‌ ಅನ್ನು ಬದಲಾಯಿಸುತ್ತಾ ಇರುವುದು. ಏಕೆಂದರೆ ಹ್ಯಾಕರ್‌ಗಳು ಎಂದು ನಮ್ಮ ಪಾಸ್ವಾರ್ಟ್‌ಗಳನ್ನು ಹ್ಯಾಕ್‌ ಮಾಡುತ್ತಾರೆ ಎಂಬುದು ನಮಗೆ ತಿಳಿದಿರುವುದಿಲ್ಲ. ಅದರಲ್ಲಿಯೂ ಬಹುತೇಕ ಮಂದಿ ತಮ್ಮ ಪಾಸ್ವರ್ಡ್‌ ನೀಡುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವುದಿಲ್ಲ ಈ ಕಾರಣ ಅವರ ಪಾಸ್ವರ್ಡ್‌ ಯಾವಾಗ ಬೇಕಾದರೂ ಹ್ಯಾಕ್‌ ಆಗುವ ಸಾಧ್ಯತೆಗಳು ಹೆಚ್ಚಿರುತ್ತದೆ.

ಅಂದಹಾಗೆ ಇಂದು ಫೇಸ್‌ಬುಕ್‌, ಜಿ ಮೇಲ್‌ ಹಾಗೂ ಟ್ವಿಟ್ಟರ್‌ ನಂತಹ ಪಾಸ್ವರ್ಡ್‌ ಸುರಕ್ಷತೆಗಾಗಿ ಹಲವು ಪ್ರೈವೆಸಿ ಸೆಟ್ಟಿಂಗ್ಸ್‌ ಆಪ್ಷನ್‌ಗಳನ್ನು ನೀಡಿದ್ದು ಈ ಮೂಲಕ ನಿಮ್ಮ ಪಾಸ್ವರ್ಡ್‌ಗಳನ್ನು ಸುರಕ್ಷಿತವಾಗಿ ಇಡಬಹುದಾಗಿದೆ. ಆದರೂ ಕೂಡಾ ಪಾಸ್ವರ್ಡ್‌ ಸೆಟ್‌ ಮಾಡುವ ಸಂದರ್ಭದಲ್ಲಿ ಕೆಲ ಪ್ರಮುಖ ಅಂಶಗಳನ್ನು ಗಮನದಲ್ಲಿರಿಸುವುದು ಅತ್ಯಗತ್ಯವಾಗಿದೆ. ಆದ್ದರಿಂದಲೇ ಗಿಜ್ಬಾಟ್‌ ಇಂದು ಸುರಕ್ಷಿತ ಪಾಸ್ವರ್ಡ್‌ ಆಯ್ಕೆಗಾಗಿ ಕೆಲ ಟಿಪ್ಸ್‌ಗಳನ್ನು ತಂದಿದೆ ಒಮ್ಮೆ ಓದಿ ನೋಡಿ.

ದೊಡ್ಡ ಪಾಸ್ವರ್ಡ್‌ ಆಯ್ಕೆ ಮಾಡಿಕೊಳ್ಳಿ : ನಿಮ್ಮ ಪಾಸ್ವರ್ಡ್‌ ಕಡಿಮೆ ಎಂದರೂ 15 ಅಕ್ಷರಗಳನ್ನು ಹೊಂದಿರುವಂತೆ ನೋಡಿಕೊಳ್ಳಿ, ಏಕೆಂದರೆ 15 ಅಂಕಿಯುಳ್ಲ ಪಾಸ್ವರ್ಡ್‌ಗಳನ್ನು ಹ್ಯಾಕರ್‌ಗಳು ಅಷ್ಟು ಸುಲಭವಾಗಿ ಹ್ಯಾಕ್‌ ಮಾಡಲು ಸಾಧಯವಾಗುವುದಿಲ್ಲ.

ಹೆಸರು ಆಧಾರಿಸಿ ಪಾಸ್ವರ್ಡ್‌ ನೀಡಬೇಡಿ : ಪಾಸ್ವರ್ಡ್‌ ಸೆಟ್‌ ಮಾಡುವ ಸಂದರ್ಭದಲ್ಲಿ ನಿಮ್ ಜನ್ಮ ದಿನಾಂಕ ಅಥವಾ ನಿಮ್ಮ ಹೆಸರನ್ ಉ ಆಧರಿಸಿ ಪಾಸ್ವರ್‌ ನೀಡಬೇಡಿ. ಸಾಮಾನ್ಯವಾಗಿ ಬಹುತೇಕ ಮಂದಿ ಈ ರೀತಿ ತಪ್ಪು ಮಾಡುತ್ತಾರೆ ಇದರಿಂದಾಗಿ ಹ್ಯಾಕರ್‌ಗಳಿಗೆ ನಿಮ್ಮ ಪಾಸ್ವರ್ಡ್‌ ಹ್ಯಾಕ್‌ ಮಾಡುವುದು ತೀರಾ ಸುಲಭವಾಗಿ ಬಿಡುತ್ತದೆ.

ಅಕ್ಷರಗಳ ನಡುವೆ ಸಂಖ್ಯೆಯನ್ನು ಬಳಸಿ : ನಿಮ್ಮ ಪಾಸ್ವರ್ಡ್‌ ಸೆಟ್‌ ಮಾಡುವ ಸಂದರ್ಭದಲ್ಲಿ ಅಕ್ಷರಗಳ ನಡುವೆ ಸಂಖ್ಯೆಗಳನ್ನು ಕೂಡಾ ಬಳಸಿದಲ್ಲಿ ನಿಮ್ಮ ಪಾಸ್ವರ್ಡ್‌ ಹೆಚ್ಚು ಸುರಕ್ಷಿತವಾಗಿರುತ್ತದೆ. ಉದಾಹರಣೆಗೆ g2it4tk7 ರೀತಿಯಲ್ಲಿ ಪಾಸ್ವರ್ಡ್‌ ನೀಡಿದ್ದಲ್ಲಿ ನಿಮ್ಮ ಪಾಸ್ವರ್ಡ್‌ ಸಧೃಢವಾಗಿರುತ್ತದೆ.

ಯಾರೊಂದಿಗೂ ನಿಮ್ಮ ಪಾಸ್ವರ್ಡ್‌ ಶೇರ್‌ ಮಾಡಬೇಡಿ : ಯಾವುದೇ ಸಂದರ್ಭದಲ್ಲಿಯೂ ಕೂಡಾ ನಿಮ್ಮ ವೈಯುಕ್ತಿಕ ಪಾಸ್ವರ್ಡ್‌ಗಳನ್ನು ಎಂದಿಗೂ ಯಾರಬಳಿಯೂ ಶೇರ್ ಮಾಡಬೇಡಿ ಒಂದು ವೇಳೆ ಪಾಸ್ವರ್ಡ್ ಹೇಳಬೇಕಾದ ಸಂದರ್ಭ ಬಂದಲ್ಲಿ ಮತ್ತೆ ಪಾಸ್ವರ್ಡ್‌ ಬದಲಾಯಿಸಿ ಬಿಡಿ.

ನಿಮ್ಮ ಪಾಸ್ವರ್ಡ್ ಯಾವ ರೀತಿ ಇರಬಾರದು?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot