ನೀವು PF ಖಾತೆಯನ್ನು ಹೊಂದಿದ್ದರೆ ಶೀಘ್ರವೇ ಈ ಕೆಲಸ ಮಾಡಿ!

|

ಪಿಎಫ್ ಚಂದಾದಾರರು ಮನೆಯಲ್ಲಿ ಕುಳಿತುಕೊಂಡು ಪ್ರಾವಿಡೆಂಟ್ ಫಂಡ್ (ಇಪಿಎಫ್) ವಿತ್ ಡ್ರಾ ಮಾಡಬಹುದು ಎಂಬುದು ನಿಮಗೀಗಾಗಲೇ ತಿಳಿದಿರಬಹುದು. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ಆನ್ಲೈನ್ ಮೂಲಕ ಪಿಎಫ್ ವಿತ್ ಡ್ರಾ ಮಾಡುವ ಸೌಲಭ್ಯವನ್ನು ಕಲ್ಪಿಸಿದೆ. ಇಪಿಎಫ್ಓ ಆನ್ಲೈನ್ ಸೌಲಭ್ಯವನ್ನು ಬಳಸಿಕೊಂಡು ಸದಸ್ಯರು ಪಿಎಫ್ ಪಡೆಯಬಹುದು.ಆದರೆ, EPFO ಷೇರುದಾರರಲ್ಲಿ 50 ಕ್ಕಿಂತಲೂ ಹೆಚ್ಚಿನವರು ಕೆವೈಸಿ (KYC ) ತಮ್ಮ ಯುನಿವರ್ಸಲ್ ಅಕೌಂಟ್ ನಂಬರ್ (UAN)ಗೆ ಸಂಪರ್ಕ ಹೊಂದಿರುವುದಿಲ್ಲ.

ನೀವು PF ಖಾತೆಯನ್ನು ಹೊಂದಿದ್ದರೆ ಶೀಘ್ರವೇ ಈ ಕೆಲಸ ಮಾಡಿ!

ಹೀಗೆ ಮಾಡದಿದ್ದರೆ ಪಿಂಚಣಿ ವಿತ್ ಡ್ರಾವಲ್ ಲಾಭ ಮತ್ತು ಪಿಎಫ್ ವಿತ್ ಡ್ರಾವಲ್ ಮಾಡಲು ಸಾಧ್ಯವಿಲ್ಲ.ಹಾಗಾಗಿ, ಈ ಸೌಕರ್ಯವನ್ನು ಪಡೆಯಲು ಇಪಿಎಫ್ಓ ಚಂದಾದಾರರು ಕೆಲವು ಅವಶ್ಯಕತೆಗಳನ್ನು ಪೂರೈಸಬೇಕು ಮತ್ತು UAN ಮತ್ತು ಕೆವೈಸಿಗಳ ಹೊಂದಾಣಿಕೆಯ 100% ಪೂರ್ಣಗೊಳಿಸಲೇಬೇಕಿದೆ. ಹಾಗಾದರೆ, ಆನ್‌ಲೈನಿನಲ್ಲೇ ಇಪಿಎಫ್ಓ ಸೌಲಭ್ಯವನ್ನು ಬಳಸಿಕೊಳ್ಳಲು ನೀವು ಮಾಡಲೇಬೇಕಾದ ಕೆಲಸ ಇಲ್ಲಿದೆ.

ಕೆವೈಸಿ ಹೊಂದಾಣಿಕೆಗೆ ಸರ್ಕಾರ ನಿರ್ದೇಶಿಸಿದೆ.

ಕೆವೈಸಿ ಹೊಂದಾಣಿಕೆಗೆ ಸರ್ಕಾರ ನಿರ್ದೇಶಿಸಿದೆ.

UAN ಮತ್ತು ಕೆವೈಸಿಗಳ ಹೊಂದಾಣಿಕೆಯ 100% ಪೂರ್ಣಗೊಳಿಸಲು EPFO ವ್ಯಾಪ್ತಿಯಡಿಯಲ್ಲಿ ಬರುವ ಕಂಪನಿಗಳು ಮತ್ತು ಸಂಸ್ಥೆಗಳಿಂದ PF ಷೇರುದಾರರಿಗೆ ಈಗಾಗಲೇ ಸರ್ಕಾರ ನಿರ್ದೇಶಿಸಿದೆ. ಆದರೆ, ಕಳೆದ ನಾಲ್ಕು ವರ್ಷಗಳಿಂದ ಈ ವ್ಯಾಯಾಮವು KYC ಗಾಗಿ ನಡೆಯುತ್ತಿದೆ, ಆದರೆ ಅದು ಇನ್ನೂ ಬಾಕಿ ಉಳಿದಿದೆ. ನಿಮಗೆ ತಿಳಿದಿರಲಿ ನಿಮ್ಮ UAN ಮತ್ತು ಕೆವೈಸಿ ಮಾಹಿತಿಯನ್ನು ಸಂಪರ್ಕಿಸಲು ಇದು ಕಡ್ಡಾಯವಾಗಿದೆ.

ಕೆವೈಸಿ ಹೊಂದಾಣಿಕೆ ಮಾಡಲೇಬೇಕು ಏಕೆ?

ಕೆವೈಸಿ ಹೊಂದಾಣಿಕೆ ಮಾಡಲೇಬೇಕು ಏಕೆ?

ನಿಮ್ಮ EPFO UAN ಪೋರ್ಟಲ್ ಅನ್ನು ಭೇಟಿ ಮಾಡಿ ಲಾಗ್ ಇನ್ ಮಾಡಿದ ನಂತರ ನಿಮ್ಮ KYC ಅನ್ನು ನೀವು ನವೀಕರಿಸಬಹುದು. ಹೀಗೆ ಮಾಡಿದರೆ KYC ಡಾಕ್ಯುಮೆಂಟ್ನಲ್ಲಿ ಪೂರ್ಣಗೊಂಡ ಖಾತೆಗಳು ಹಣ ವರ್ಗಾವಣೆ ಅಥವಾ ಹಿಂಪಡೆಯುವಲ್ಲಿ ಯಾವುದೇ ಸಮಸ್ಯೆ ಎದುರಿಸಬೇಕಾಗಿಲ್ಲ. ನಿಮ್ಮ PF ಖಾತೆಯಲ್ಲಿ ಬ್ಯಾಂಕ್ ಖಾತೆ ಮಾಹಿತಿಯನ್ನು ಅಪ್‌ಡೇಟ್ ಮಾಡದಿದ್ದಲ್ಲಿ ಕ್ಲೈಮ್ ವಿನಂತಿ ಸಹ ತಿರಸ್ಕರಿಸಬಹುದು. ನೀವು KYC ದಾಖಲೆಗಳನ್ನು ಪೂರ್ಣಗೊಳಿಸದಿದ್ದರೆ EPF ಸದಸ್ಯರಾದರು ಯಾವುದೇ SMSಗಳನ್ನು ಪಡೆಯುವುದಿಲ್ಲ.

ಯುಎಎನ್(UAN) ಸಕ್ರಿಯಗೊಳಿಸಿ

ಯುಎಎನ್(UAN) ಸಕ್ರಿಯಗೊಳಿಸಿ

ಯುಎಎನ್(UAN) ಸಕ್ರಿಯಗೊಳಿಸಿ ಚಂದಾದಾರರು ತಮ್ಮ ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಅನ್ನು ಸಕ್ರಿಯಗೊಳಿಸಬೇಕಾಗುತ್ತದೆ. ಜತೆಗೆ ಯುಎಎನ್ ಅನ್ನು ಸಕ್ರಿಯಗೊಳಿಸಲು ಬಳಸುವ ಮೊಬೈಲ್ ಸಂಖ್ಯೆ ಯಾವಾಗಲೂ ಕಾರ್ಯನಿರತವಾಗಿರಬೇಕು ಎಂಬುದನ್ನು ಗಮನದಲ್ಲಿರಸಬೇಕು.ನಿಮ್ಮ KYC ನವೀಕರಣ ಮಾಡಿದ ನಂತರ EPFO ಖಾತೆಯಿಂದ ನಿಮ್ಮ PF ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಕೇವಲ 3 ದಿನಗಳಲ್ಲಿ ನಡೆಯಲಿದೆ. ಒಂದು ವೇಳೆ ಈ ಕೆಲಸ ಮಾಡದಿದ್ದರೆ ನಿಮ್ಮ ಹಣ ತೆಗೆಯುವುದು ಅಸಾಧ್ಯ.

ಆನ್‌ಲೈನಿನಲ್ಲೇ ಕೆವೈಸಿ ಹೊಂದಾಣಿಕೆ

ಆನ್‌ಲೈನಿನಲ್ಲೇ ಕೆವೈಸಿ ಹೊಂದಾಣಿಕೆ

UAN ನಲ್ಲಿ KYC ಅನ್ನು ಪಡೆಯಲು ಎಲ್ಲಿಯಾದರೂ ನೀವು ಹೋಗಬೇಕಾಗಿಲ್ಲ. ಬದಲಿಗೆ, ಇದನ್ನು ಯುಎನ್ ಪೋರ್ಟಲ್‌ನಲ್ಲಿ ಮಾತ್ರ ಮಾಡಬಹುದಾಗಿದೆ. ಮೊದಲು ನಿಮ್ಮ ಪೋರ್ಟಲ್ಗೆ ಹೋಗಿ ಮತ್ತು KYC ಆಯ್ಕೆಯನ್ನು ಇಲ್ಲಿ ಕ್ಲಿಕ್ ಮಾಡಿ. ಈಗ ನೀವು ಮುಂದೆ ತೆರೆದ ವಿಂಡೋದಲ್ಲಿ ಬಹಳಷ್ಟು ಆಯ್ಕೆಗಳನ್ನು ನೋಡಬಹುದು. ಹೀಗೆ ನೀವು ಕೆವೈಸಿ ಹೊಂದಾಣಿಕೆ ಮಾಡಬಹುದು. ಇದರ ನಂತರ PF ಹಣವನ್ನು ನಿಮ್ಮ ಬ್ಯಾಂಕ್ ಖಾತೆಯಲ್ಲಿ ನೇರವಾಗಿ ಸಂಗ್ರಹಿಸಲಾಗುತ್ತದೆ.

ಪ್ಯಾನ್, ಆಧಾರ್ ಮತ್ತು ಖಾತೆ ವಿವರ

ಪ್ಯಾನ್, ಆಧಾರ್ ಮತ್ತು ಖಾತೆ ವಿವರ

ಸದಸ್ಯರ ಆಧಾರ್ ವಿವರಗಳನ್ನು ಇಪಿಎಫ್ಒ ದತ್ತಾಂಶದಲ್ಲಿರಬೇಕು. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅವನು/ಅವಳು ಯುಐಡಿಎಐ ಯಿಂದ ಇಕೆವೈಸಿ ಪರಿಶೀಲಿಸುವುದಕ್ಕಾಗಿ ಒಟಿಪಿ ಆಧಾರಿತ ಸೌಲಭ್ಯವನ್ನು ಹೊಂದಿರಬೇಕು.ಜೊತೆಗೆ ಇಪಿಎಫ್ಒ ಡೇಟಾಬೇಸ್ ಅನುಗುಣವಾಗಿ ಸದಸ್ಯರ ಬ್ಯಾಂಕ್ ಖಾತೆ ವಿವರ ಐಎಫ್ಎಸ್ಸಿ (IFSC) ಕೋಡ್ ಒಳಗೊಂಡಂತೆ ಮಾಹಿತಿ ನೀಡಬೇಕು. ಚಂದಾದಾರರ (ಅವರ/ಅವಳ) ಸೇವೆ 5 ವರ್ಷಕ್ಕಿಂತ ಕಡಿಮೆಯಿದ್ದರೆ ಪಿಎಫ್ ಫೈನಲ್ ಸೆಟಲ್ಮೆಂಟ್ ಕ್ಲೈಮು ಮಾಡುವುದಕ್ಕಾಗಿ ಪ್ಯಾನ್(PAN) ನಂಬರ್ ನೀಡಬೇಕು.

ಆನ್‌ಲೈನಿನಲ್ಲಿ ಆಯ್ಕೆ ವಿಧಾನ ಹೀಗಿರಲಿದೆ

ಆನ್‌ಲೈನಿನಲ್ಲಿ ಆಯ್ಕೆ ವಿಧಾನ ಹೀಗಿರಲಿದೆ

ಆನ್‌ಲೈನಿನಲ್ಲಿ ಐ ವಾಂಟ್ ಟು ಅಪ್ಲೈ ಫಾರ್ (i want to apply for) ಟ್ಯಾಬ್ ಅಡಿಯಲ್ಲಿ ಪಿಎಫ್ ವಿತ್ ಡ್ರಾವಲ್, ಪಿಎಫ್ ಮುಂಗಡ ಅಥವಾ ಪಿಂಚಣಿ ವಿತ್ ಡ್ರಾವಲ್ ಹೀಗೆ ಅನೇಕ ವಿಧಗಳು ತೆರೆದುಕೊಳ್ಳುತ್ತವೆ. ಇದರಲ್ಲಿ ಯಾವುದನ್ನು ಕ್ಲೈಮ್ ಮಾಡಲು ಬಯಸುವಿರಿ ಅದನ್ನು ಆಯ್ಕೆ ಮಾಡಿ. ಪಿಎಫ್ ವಿತ್ ಡ್ರಾವಲ್ ಅಥವಾ ಪಿಂಚಣಿ ವಿತ್ ಡ್ರಾವಲ್ ಮುಂತಾದ ಸೇವೆಗಳಿಗೆ ನೀವು ಅರ್ಹತೆ ಹೊಂದಿಲ್ಲದಿದ್ದರೆ, ಆ ಆಯ್ಕೆಯನ್ನು ಡ್ರಾಪ್-ಡೌನ್ ಮೆನುವಿನಲ್ಲಿ ತೋರಿಸಲಾಗುವುದಿಲ್ಲ.

ಆನ್‌ಲೈನಿನಲ್ಲಿ ಹಣ ಕ್ಲೈಮ್ ಮಾಡುವುದು!

ಆನ್‌ಲೈನಿನಲ್ಲಿ ಹಣ ಕ್ಲೈಮ್ ಮಾಡುವುದು!

ಪಿಎಫ್ ವಿತ್ ಡ್ರಾವಲ್ ಅಥವಾ ಪಿಂಚಣಿ ವಿತ್ ಡ್ರಾವಲ್ ಮುಂತಾದ ಸೇವೆಗಳಿಗೆ ನೀವು ಅರ್ಹತೆ ಹೊಂದಿಲ್ಲದಿದ್ದರೆ ಆ ಆಯ್ಕೆಯನ್ನು ಡ್ರಾಪ್-ಡೌನ್ ಮೆನುವಿನಲ್ಲಿ ತೋರಿಸಲಾಗುವುದಿಲ್ಲ. ಒಂದು ವೇಳೆ ನೀವು ಇದಕ್ಕೆ ಅರ್ಹರಾಗಿದ್ದರೆ, ಆನ್‌ಲೈನಿನಲ್ಲಿ ಹಣ ಕ್ಲೈಮ್ ಮಾಡಲುಚ್ಛಿಸುವ ವಿಧಾನವನ್ನು ಆಯ್ಕೆ ಮಾಡಿದ ನಂತರ ಸಂಪೂರ್ಣ ಮಾಹಿತಿಯುಳ್ಳ ಫಾರ್ಮ್ ತೆರೆದುಕೊಳ್ಳುತ್ತದೆ. ವಿವರ ತುಂಬಿದ ನಂತರ ದೃಢೀಕರಣಕ್ಕಾಗಿ ಆಧಾರ್ ಓಟಿಪಿ ಮುಖಾಂತರ ಫಾರ್ಮ್ ಭರ್ತಿ ಮಾಡಿ ಪ್ರಕ್ರಿಯೆ ಮುಗಿಸಿ.ನಂತರ, ಟ್ರ್ಯಾಕ್ ಕ್ಲೈಮ್ ಸ್ಟೇಟಸ್ ಟ್ಯಾಬ್ ಆಯ್ಕೆ ಮಾಡುವ ಮೂಲಕ ಅರ್ಜಿಯ ವಿವರ ಪರಿಶೀಲಿಸಬಹುದು.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಖಾಸಾಗಿ ವಲಯದಲ್ಲಿ ಉದ್ಯೋಗ ಮಾಡುತ್ತಿರುವವರು ಇದೀಗ ಒಂದೇ ಕ್ಲಿಕ್‌ನಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್) ಬ್ಯಾಲೆನ್ಸ್ ಅನ್ನು ಚೆಕ್ ಮಾಡಬಹುದಾದ ಆಯ್ಕೆ ಲಭ್ಯವಿದೆ.! ಹಾಗಾಗಿ, ಈಗ ಸುಲಭವಾಗಿ 'ಯುಎಎನ್' ನಂಬರ್ ಮೂಲಕ ಎಸ್ಎಂಎಸ್ ಮುಖಾಂತಹ ಇಪಿಎಫ್ ಹಣವನ್ನು ಚೆಕ್ ಮಾಡಬಹುದು.!!

ಹೌದು, ಎಸ್‌ಎಮ್‌ಎಸ್ ಮೂಲಕ ಇಪಿಎಫ್ ಬ್ಯಾಲೆನ್ಸ್ ತಿಳಿಯಲು ನಿಮ್ಮ ಸ್ಯಾಲರಿ ಸ್ಲಿಪ್‌ನಲ್ಲಿರುವ ಯೂನಿವರ್ಸಲ್ ಅಕೌಂಟ್ ನಂಬರ್ (UAN) ಹೊಂದಿರಬೇಕು. ಈ 'ಯುಎಎನ್' ನಂಬರ್ ಮೂಲಕ ಪಿಎಫ್‌ನ ಬಹು ಖಾತೆಗಳನ್ನು ವಿಲೀನ ಮಾಡಬಹುದಲ್ಲದೇ, ಭವಿಷ್ಯ ನಿಧಿ ಮೊತ್ತವವನ್ನು ತಿಳಿಯುವ ಅವಕಾಶವಿದೆ.!!

ಹಾಗಾದರೆ, ಮೊಬೈಲ್ ಮೂಲಕ ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್) ಬ್ಯಾಲೆನ್ಸ್ ಅನ್ನು ಚೆಕ್ ಮಾಡುವುದು ಹೇಗೆ? ಯುಎಎನ್ (UAN) ಸಂಖ್ಯೆಯೊಂದಿಗೆ ಪಿಎಫ್ ಬಹು ಖಾತೆಗಳನ್ನು ವಿಲೀನ ಮಾಡುವುದು ಹೇಗೆ? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಅಫಿಷಿಯಲ್ ವೆಬ್‌ಸೈಟ್ ತೆರೆಯಿರಿ.

ಅಫಿಷಿಯಲ್ ವೆಬ್‌ಸೈಟ್ ತೆರೆಯಿರಿ.

http://uanmembers.epfoservices.in/ ವೆಬ್‌ಸೈಟ್ ತೆರೆದು ವೆಬ್ ಪುಟದ ಬಲ ಬದಿಯಲ್ಲಿರುವ ಲಾಗ್ ಇನ್ ಕ್ಲಿಕ್ ಮಾಡಿ. ನಂತರ ನಿಮ್ಮ ಯುನಿವರ್ಸಲ್ ಅಕೌಂಟ್ ನಂಬರ್(ಯುಎಎನ್) ನೀಡಿ ಮೊಬೈಲ್ ಸಂಖ್ಯೆ ದಾಖಲಿಸಿ.!

ಪಿಎಫ್ ಕಚೇರಿ ಸೂಚಿಸಿ

ಪಿಎಫ್ ಕಚೇರಿ ಸೂಚಿಸಿ

ನಿಮ್ಮ ಯುನಿವರ್ಸಲ್ ಅಕೌಂಟ್ ನಂಬರ್(ಯುಎಎನ್) ನೀಡಿ ಮೊಬೈಲ್ ಸಂಖ್ಯೆ ದಾಖಲಿಸಿದ ನಂತರ ಪಿಎಫ್ ಅಕೌಂಟ್ ಹೊಂದಿರುವ ರಾಜ್ಯ ಮತ್ತು ನಿಮ್ಮ ಕಚೇರಿ ಪ್ರದೇಶವನ್ನು ಸೂಚಿಸಿ.!

ಒಟಿಪಿ ದಾಖಲಿಸಿ ಮಾಹಿತಿ ಪಡೆಯಿರಿ

ಒಟಿಪಿ ದಾಖಲಿಸಿ ಮಾಹಿತಿ ಪಡೆಯಿರಿ

ರಾಜ್ಯ ಮತ್ತು ನಿಮ್ಮ ಕಚೇರಿ ಪ್ರದೇಶವನ್ನು ನೀಡಿದ ನಂತರ ಅಲ್ಲಿರುವ captcha ಕೋಡ್ ನಮೂದಿಸಿದ ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಫೋನಿಗೆ ಪಿನ್ ನಂಬರ್ ಬರಲಿದೆ. ಒಟಿಪಿ ದಾಖಲಿಸಿ ಪೂರ್ಣ ವಿವರ ಪಡೆಯಬಹುದು.

ಎಸ್‌ಎಮ್‌ಎಸ್ ಮೂಲಕ ಚೆಕ್ ಮಾಡುವುದು

ಎಸ್‌ಎಮ್‌ಎಸ್ ಮೂಲಕ ಚೆಕ್ ಮಾಡುವುದು

ಯುಎಎನ್ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ಇದ್ದರೆ ನೋಂದಾಯಿತ ಮೊಬೈಲ್ ಫೋನಿನಿಂದ EPFOHO UAN ENG ಈ ಸಂದೇಶವನ್ನು 7738299899 ಸಂಖ್ಯೆಗೆ ಎಸ್ಎಂಎಸ್ ಕಳಿಸಿ ಸುಲಭವಾಗಿ ಎಸ್‌ಎಮ್‌ಎಸ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು.!!

ಪಿಎಫ್ ಖಾತೆ ವಿಲೀನ ಹೇಗೆ

ಪಿಎಫ್ ಖಾತೆ ವಿಲೀನ ಹೇಗೆ

UAN ಸಂಖ್ಯೆ ಜತೆ EPFO ಚಂದಾದಾರರು ಒಟ್ಟು 10 ಖಾತೆಗಳನ್ನು ವಿಲೀನ ಮಾಡಲು ಅವಕಾಶ ನೀಡಲಾಗಿದೆ. ಇದಕ್ಕಾಗಿ 120ಕ್ಕೂ ಹೆಚ್ಚು EPFO ಕಚೇರಿಗಳಿಗೆ ಅತಿ ಶೀಘ್ರದಲ್ಲಿ ಈ ಸೌಲಭ್ಯ ಅಳವಡಿಸುವಂತೆ ನಿರ್ದೇಶನ ನೀಡಲಾಗಿದ್ದು, ಆನ್‌ಲೈನಿನಲ್ಲಿಯೂ ಶೀಘ್ರವೇ ಈ ಸೇವೆ ಬರಲಿದೆ.!!

ಡಿಜಿಟಲ್ ರೀತಿ ಅನುಮೋದನೆಯಾಗಿರಬೇಕು

ಡಿಜಿಟಲ್ ರೀತಿ ಅನುಮೋದನೆಯಾಗಿರಬೇಕು

ನಿಮ್ಮ ಉದ್ಯೋಗ ಸಂಸ್ಥೆಯಿಂದ ಆಧಾರ್, ಪ್ಯಾನ್ ಅಥವಾ ಬ್ಯಾಂಕ್ ಅಕೌಂಟ್ ಮಾಹಿತಿ ಡಿಜಿಟಲ್ ರೀತಿಯಲ್ಲಿ ಅನುಮೋದನೆಯಾಗಿದ್ದರೆ ಮಾತ್ರ ಈ ಮಾಹಿತಿ ನಿಮಗೆ ಸಿಗಲಿದೆ. ಇಪಿಎಫ್ ಖಾತೆಗಳ ಬಗ್ಗೆ ಕನ್ನಡದಲ್ಲೂ ಮಾಹಿತಿ ಸಿಗಲಿದ್ದು, ಹೆಚ್ಚಿನ ಮಾಹಿತಿಗೆ 1800118005 ಸಹಾಯವಾಣಿಯನ್ನು ಸಂಪರ್ಕಿಸಿ.!!

Most Read Articles
Best Mobiles in India

Read more about:
English summary
PF / EPF withdrawal can be done either by submission of a physical application ... You can online check Employee Provident Fund Withdrawal, Claim ... Latest Update!. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more