Subscribe to Gizbot

ಲ್ಯಾಪ್‌ಟಾಪ್‌ ಬ್ರೌಸರ್‌ನಲ್ಲಿನ ಕೈಚೀ ಫೈಲ್ಸ್‌ ಕ್ಲಿಯರ್‌ ಮಾಡುವುದು ಹೇಗೆ?

Posted By: Vijeth
<ul id="pagination-digg"><li class="next"><a href="/how-to/how-to-clear-cache-in-your-browsers-take-a-look-2.html">Next »</a></li></ul>
ಲ್ಯಾಪ್‌ಟಾಪ್‌ ಬ್ರೌಸರ್‌ನಲ್ಲಿನ ಕೈಚೀ ಫೈಲ್ಸ್‌ ಕ್ಲಿಯರ್‌ ಮಾಡುವುದು ಹೇಗೆ?

ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ನೀವು ಇಂಟರ್‌ನೆಟ್‌ ಬಳಕೆ ಮಾಡುತ್ತಿದ್ದಲ್ಲಿ ಅದರ ಸಂಪೂರ್ಣ ಮಾಹಿತಿ ನಿಮ್ಮ ಕಂಪ್ಯೂಟರ್‌ನಲ್ಲಿ ಸೇವ್‌ ಆಗಿರುತ್ತದೆ. ಇದರಿಂದಾಗಿ ನೀವೂ ಮತ್ತೆಂದಾದರು ಈ ಹಿಂದೆ ಬಳಸಿದ್ದ ವೆಬ್‌ಸೈಟ್‌ ನಿಮ್ಮ ಬ್ರೌಸರ್‌ನಲ್ಲಿ ಟೈಪ್‌ ಮಾಡುತ್ತಿದ್ದಹಾಗೆಯೇ ಆ ಸೈಟ್‌ನ ಯುಆರ್‌ಎಲ್‌ ತಂತಾನೆಯೆ ನಿಮ್ಮ ಬ್ರೌಸರ್‌ನಲ್ಲಿ ಬಂದುಬಿಡುತ್ತದೆ.

ಉದಾಹರಣೆಗೆ ನೀವು ನಿಮ್ಮ ಬ್ರೌಸರ್‌ನಲ್ಲಿ ಫೇಸ್‌ಬುಕ್‌ ಈ ಮೊದಲು ಓಪನ್‌ ಮಾಡಿದ್ದೂ ಇದೀಗ ಮತ್ತೊಮ್ಮೆ ಲಾಗ್‌ಇನ್‌ ಆಗಲು ಮುಂದಾಗುತ್ತೀರಾ ಎಂದುಕೊಳ್ಳಿ, ಯುಆರ್‌ಎಲ್‌ ಬಾರ್‌ನಲ್ಲಿ ನೀವು ಕೇವಲ ಎಫ್‌ ಲೆಟರ್‌ ಪ್ರೆಸ್‌ ಮಾಡುತ್ತಿದ್ದಂತೆಯೇ ಫೇಸ್‌ಬುಕ್‌ನ ಯುಆರ್‌ಎಲ್‌ ಲಿಂಕ್‌ ನಿಮ್ಮೆದುರು ಬಂದುಬಿಡುತ್ತದೆ. ಇದು ಒಳ್ಳೆಯ ಸಂಗತಿ ಆದರೂ ಕೂಡಾ ಕೆಲವೊಂಮ್ಮೆ ನಿಮ್ಮ ಕಂಪ್ಯೂಟರ್‌ನ ಕೈಚೀ ಹಿಸ್ಟರಿ ತುಂಬಿ ಹೋಗಿ ಯಾವ ಯುಆರ್‌ಎಲ್‌ ಎಂಬುದು ಗೊಂದಲ ಸೃಷ್ಟಿಸಿ ಬಿಡುತ್ತದೆ. ಆದ್ದರಿಂದಲೇ ಆಗಾಗ ನಿಮ್ಮ ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ನ ಕೈಚೀ ಹಿಸ್ಟರಿ ಕ್ಲಿಯರ್‌ ಮಾಡುವುದು ಉತ್ತಮ.

ಅಂದಹಾಗೆ ನೀವು ಮತ್ತೊಬ್ಬರ ಕಂಪ್ಯೂಟರ್‌ ಅಥವಾ ಲ್ಯಾಪ್‌ ಟಾಪ್‌ ಬಳಸುತ್ತಿದ್ದು ನಂತರ ನೀವು ಬಳಸಿರುವ ಅಂತರ್ಜಾಲದ ಮಾಹಿತಿ ಅವರಿಗೆ ತಿಳಿಯದಂತೆ ಮಾಡಬೇಕೆಂದಿದ್ದಲ್ಲಿ ಕೈಚೀ ಫೈಲ್ಸ್ ಡಿಲೀಟ್‌ ಮಾಡಿಬಿಡಿ.

<ul id="pagination-digg"><li class="next"><a href="/how-to/how-to-clear-cache-in-your-browsers-take-a-look-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot