ಯೂಟ್ಯೂಬ್ ವಿಡಿಯೋವನ್ನು MP3 ಗೆ ಕನ್ವರ್ಟ್‌ ಮಾಡುವುದು ಹೇಗೆ?

|

ಜನಪ್ರಿಯ ಸೊಶೀಯಲ್‌ ಮಿಡೀಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಯುಟ್ಯೂಬ್‌ ಕೂಡ ಒಂದಾಗಿದೆ. ಅಲ್ಲದೆ ವಿಡಿಯೋ ಸ್ಟ್ರೀಮಿಂಗ್‌ ಸೇವೆ ನೀಡುವ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಯೂಟ್ಯೂಬ್ ನಲ್ಲಿ ವೀಡಿಯೊಗಳನ್ನು ಸ್ಟ್ರೀಮ್ ಮಾಡಬಹುದಾಗಿದ್ದು, ವಿಡಿಯೋ ಡೌನ್‌ಲೋಡ್‌ ಮಾಡಬೇಕಾದರೆ ಥರ್ಡ್‌ ಪಾರ್ಟಿ ಆಪ್‌ಗಳನ್ನ ಬಳಸಬೇಕಾಗಿದೆ. ಇದಲ್ಲದೆ ಯುಟ್ಯೂಬ್‌ನಲ್ಲಿ ಬಳಕೆದಾರರಿಗೆ ಸಾಕಷ್ಟು ಅನುಕೂಲಕರವಾದ ಫೀಚರ್ಸ್‌ಗಳನ್ನ ಸಹ ನೀಡಲಾಗಿದೆ.

ಯುಟ್ಯೂಬ್

ಹೌದು, ಯುಟ್ಯೂಬ್ ಆನ್‌ಲೈನ್ ವೀಡಿಯೊಗಳಿಗಾಗಿ ಅತ್ಯಂತ ಹಳೆಯ ಮತ್ತು ಜನಪ್ರಿಯ ವೇದಿಕೆಯಾಗಿದೆ. ಯೂಟ್ಯೂಬ್ ನಲ್ಲಿ ವೀಡಿಯೊಗಳನ್ನು ಸ್ಟ್ರೀಮ್ ಮಾಡಲು ಮಾತ್ರ ನಿಮಗೆ ಆಯ್ಕೆ ಸಿಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದೆ ಇದೆ. ಅಲ್ಲದೆ ಯುಟ್ಯೂಬ್‌ ವಿಡಿಯೋಗಳನ್ನ ಥರ್ಡ್‌ ಪಾರ್ಟಿಯ ಅಪ್ಲಿಕೇಶನ್‌ಗಳ ಮೂಲಕ ಡೌನ್‌ಲೋಡ್ ಮಾಡಬಹುದು. ಇನ್ನು ಯುಟ್ಯೂಬ್‌ ವಿಡಿಯೋಗಳನ್ನ ನೀವು MP3 ರೂಪದಲ್ಲಿ ಕೇಳಲು ಬಯಸುವದಾದರೆ ಅದಕ್ಕೂ ಸಹ ಅವಕಾಸವಿದೆ. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಯಿರಿ.

ಆಂಡ್ರಾಯ್ಡ್

ಇನ್ನು ನೀವು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಯುಟ್ಯೂಬ್‌ ವಿಡಿಯೋವನ್ನು MP3 ಗೆ ಕನ್ವರ್ಟ್‌ ಮಾಡಲು ಯಾವುದೇ ನೇರ ಮಾರ್ಗಗಳಿಲ್ಲ. ಇದಕ್ಕಾಗಿ ನಿಮಗೆ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳು ಅಗತ್ಯವಿದೆ. ಇನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿ ವಿಡಿಯೋಗಳನ್ನ MP3ಗೆ ಕನ್ವರ್ಟ್‌ ಮಾಡಲು ಅನೇಕ ಅಪ್ಲಿಕೇಶನ್‌ಗಳನ್ನು ಹೊಂದಿದ್ದು, ಇದರೊಂದಿಗೆ ನೀವು ಯೂಟ್ಯೂಬ್ ಆಡಿಯೊವನ್ನು ಪರಿವರ್ತಿಸಬಹುದಾಗಿದೆ. ಇನ್ನು ನೀವು ಯಾವುದೇ ಥರ್ಡ್‌ ಪಾರ್ಟಿ ಅಪ್ಲಿಕೇಶನ್ ಅನ್ನು ಬಳಸದೆ, ಆನ್‌ಲೈನ್ ಆಡಿಯೊ Converter ಮಾಡಲು ಹಲವು ಆಯ್ಕೆಗಳಿವೆ.

ಯೂಟ್ಯೂಬ್ ವಿಡಿಯೋವನ್ನು MP3 ಗೆ ಕನ್ವರ್ಟ್‌ ಮಾಡುವುದು ಹೇಗೆ?

ಯೂಟ್ಯೂಬ್ ವಿಡಿಯೋವನ್ನು MP3 ಗೆ ಕನ್ವರ್ಟ್‌ ಮಾಡುವುದು ಹೇಗೆ?

ಹಂತ 1: ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಮತ್ತು ಯೂಟ್ಯೂಬ್ ಡೌನ್‌ಲೋಡರ್‌ಗಾಗಿ ಹುಡುಕಿ. ಇದರಲ್ಲಿ ನಿಮಗೆ ಹಲವಾರು ಆಯ್ಕೆಗಳನ್ನು ಲಭ್ಯವಾಗಲಿದೆ. ಇದರಲ್ಲಿ ನೀವು ಟ್ಯೂಬ್‌ಮೇಟ್ ಅನ್ನು ಡೌನ್‌ಲೋಡ್‌ ಮಾಡಿ. ಆದರೆ ನೀವು ಇತರ ಅಪ್ಲಿಕೇಶನ್‌ಗಳನ್ನು ಸಹ ಡೌನ್‌ಲೋಡ್ ಮಾಡಬಹುದು.

ಹಂತ 2: ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್‌ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಹಂತ 3: ನೀವು ವೀಡಿಯೊ ಪ್ಲೇ ಮಾಡಿದ ನಂತರ ಡೌನ್‌ಲೋಡ್ ಬಟನ್ ಅನ್ನು ಹುಡುಕಿ. ಇದು ಪರದೆಯ ಕೆಳಭಾಗದಲ್ಲಿರುತ್ತದೆ (ಹಸಿರು ಕೆಳಕ್ಕೆ ಬಾಣ).

ಹಂತ 4: ವೀಡಿಯೊದ ರೆಸಲ್ಯೂಶನ್ ಆಯ್ಕೆಮಾಡಿ ಮತ್ತು ಫೈಲ್ ಅನ್ನು ಡೌನ್‌ಲೋಡ್ ಮಾಡಿ.

ಹಂತ 5: ವೀಡಿಯೊವನ್ನು ಡೌನ್‌ಲೋಡ್ ಮಾಡಿದ ನಂತರ ಹೋಮ್‌ಸ್ಕ್ರೀನ್‌ಗೆ ಹಿಂತಿರುಗಿ ಮತ್ತು 'ಆಯ್ಕೆಗಳು' ಟ್ಯಾಬ್ ಕ್ಲಿಕ್ ಮಾಡಿ.

ಹಂತ 6: 'ಕನ್ವರ್ಟ್ ಟು MP3' ಮತ್ತು 'ಸೇವ್ MP3' ಸೇರಿದಂತೆ ಇನ್ನೂ ಎರಡು ಆಯ್ಕೆಗಳನ್ನು ಕಾಣಬಹುದಾಗಿದೆ.

ಹಂತ 7: ಇದೀ ನಿಮ್ಮ ಸ್ಮಾರ್ಟ್‌ಫೋನ್‌ನ ಆಂತರಿಕ ಸಂಗ್ರಹಣೆಯಲ್ಲಿ ಆಡಿಯೊ ಫೈಲ್ ಅನ್ನು ಉಳಿಸಲು ನೀವು ಬಯಸಿದರೆ ಎರಡನೆಯದನ್ನು ಆಯ್ಕೆ ಮಾಡಿ.

ಹಂತ 8: ಮೇಲೆ ತಿಳಿಸಿದ ಹಂತಗಳು ಪೂರ್ಣಗೊಂಡ ನಂತರ ನಿಮ್ಮ ಯುಟ್ಯೂಬ್‌ ವಿಡಿಯೋ ಇದೀಗ ನಿಮಗೆ MP3 ರೂಪದಲ್ಲಿ ಲಭ್ಯವಾಗಲಿದೆ.

Most Read Articles
Best Mobiles in India

English summary
YouTube has been the oldest and most popular platform for online videos.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X