ವಾಟ್ಸಾಪ್‌ನಲ್ಲಿ ಕಾಲ್‌ ಲಿಂಕ್‌ ಕ್ರಿಯೆಟ್‌ ಮಾಡುವುದು ಹೇಗೆ? ಇದರ ಕಾರ್ಯವೈಖರಿ ಹೇಗಿದೆ?

|

ಮೆಟಾ ಒಡೆತನದ ವಾಟ್ಸಾಪ್‌ ಬಳಕೆದಾರರ ಅನುಕೂಲಕ್ಕಾಗಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅಲ್ಲದೆ ಕಾಲಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಅಪ್ಡೇಟ್‌ ಮಾಡುತ್ತಾ ಬಂದಿದೆ. ಇದರಲ್ಲಿ ವಾಟ್ಸಾಪ್‌ ಕಾಲ್‌ ಲಿಂಕ್‌ ಫೀಚರ್ಸ್‌ ಕೂಡ ಒಂದಾಗಿದೆ. ವಾಟ್ಸಾಪ್‌ ಕಾಲ್‌ ಲಿಂಕ್‌ ಫೀಚರ್ಸ್‌ ಮೂಲಕ ನೀವು ಸಿಂಗಲ್‌ ಟ್ಯಾಪ್‌ನಲ್ಲಿ ವಾಟ್ಸಾಪ್‌ ಕಾಲ್‌ ಲಿಂಕ್ ಅನ್ನು ಶೇರ್‌ ಮಾಡಲು ಸಾದ್ಯವಾಗಲಿದೆ. ಸದ್ಯ ಈ ಫೀಚರ್ಸ್‌ ಆಂಡ್ರಾಯ್ಡ್‌ ಮತ್ತು ಐಒಎಸ್‌ ಅಪ್ಲಿಕೇಶನ್‌ಗಳಲ್ಲಿ ಲಭ್ಯವಾಗಲಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಇತ್ತೀಚಿಗೆ ಪರಿಚಯಿಸಿರುವ ಜನಪ್ರಿಯ ಫೀಚರ್ಸ್‌ಗಳಲ್ಲಿ ವಾಟ್ಸಾಪ್‌ ಕಾಲ್‌ ಲಿಂಕ್‌ ಪ್ರಮುಖವಾಗಿದೆ. ವಾಟ್ಸಾಪ್‌ ಕಾಲ್‌ನಲ್ಲಿ ನಿಮ್ಮ ಸ್ನೇಹಿತರನ್ನು ಕೂಡ ಸೇರಿಸುವುದಕ್ಕೆ ಈ ಕಾಲ್‌ ಲಿಂಕ್‌ ಫೀಚರ್ಸ್‌ ಸಹಾಯ ಮಾಡಲಿದೆ. ಇದನ್ನು ಬಳಸಿಕೊಂಡು ನೀವು ವಾಟ್ಸಾಪ್‌ ವಾಯ್ಸ್‌ ಮತ್ತು ವೀಡಿಯೊ ಕಾಲ್‌ಗಳಿಗೆ ಲಿಂಕ್‌ ಅನ್ನು ಶೇರ್‌ ಮಾಡಬಹುದಾಗಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಕಾಲ್‌ ಲಿಂಕ್‌ ಕ್ರಿಯೆಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌ ಕಾಲ್‌ ಲಿಂಕ್‌ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸಲಿದೆ?

ವಾಟ್ಸಾಪ್‌ ಕಾಲ್‌ ಲಿಂಕ್‌ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸಲಿದೆ?

ವಾಟ್ಸಾಪ್‌ ಕಾಲ್‌ ಲಿಂಕ್‌ ಫೀಚರ್ಸ್‌ ವಾಟ್ಸಾಪ್‌ನಲ್ಲಿ ವಾಯ್ಸ್‌ ಮತ್ತು ವೀಡಿಯೊ ಕಾಲ್‌ಗೆ ಇನ್ವೈಟ್‌ ಮಾಡಲು ಲಿಂಕ್‌ ಕ್ರಿಯೆಟ್‌ ಮಾಡಬಹುದು. ಈ ಲಿಂಕ್‌ ಬಳಸಿಕೊಂಡು ವಾಟ್ಸಾಪ್‌ ಕಾಲ್‌ನಲ್ಲಿ ನಿಮ್ಮ ಸ್ನೇಹಿತರು ಸೇರುವುದಕ್ಕೆ ಸಾಧ್ಯವಾಗಲಿದೆ. ಇನ್ನು ವಾಟ್ಸಾಪ್‌ ಲಿಂಕ್‌ ಫೀಚರ್ಸ್‌ ಗೂಗಲ್‌ ಮೀಟ್‌, ಮೈಕ್ರೋಸಾಫ್ಟ್‌ ಟೀಂ, ಜೂಮ್‌ ವೀಡಿಯೋ ಕಾನ್ಫರೆನ್ಸಿಂಗ್‌ ಪ್ಲಾಟ್‌ಫಾರ್ಮ್‌ನಲ್ಲಿರುವ ಲಿಂಕ್‌ಗಳ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ವಾಟ್ಸಾಪ್‌ ಕಾಲ್‌ ಲಿಂಕ್‌ ಬಳಸಿ ಯಾವುದೇ ಸಮಯದಲ್ಲಿ ಕೂಡ ವಾಯ್ಸ್‌ ಅಥವಾ ವೀಡಿಯೊ ಕಾಲ್‌ಗೆ ಜಾಯಿನ್‌ ಆಗುವುದಕ್ಕೆ ಸಾದ್ಯವಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ತನ್ನ ಕಾಲ್‌ ಲಿಂಕ್‌ ಫೀಚರ್ಸ್‌ ಬಗ್ಗೆ ವಾಟ್ಸಾಪ್‌ ವೆಬ್‌ಸೈಟ್‌ನಲ್ಲಿನ FAQ ವಿಭಾಗದಲ್ಲಿ ವಿವರ ನೀಡಿದೆ. ಅದರಂತೆ ಬಳಕೆದಾರರು ಕಾಲ್‌ ಲಿಂಕ್‌ ಫೀಚರ್ಸ್‌ ಅನ್ನು ವಾಟ್ಸಾಪ್‌ ನಲ್ಲಿ ವ್ಯಕ್ತಿ ಅಥವಾ ಗುಂಪಿಗೆ ಕಳುಹಿಸಬಹುದು ಎಂದು ಹೇಳಲಾಗಿದೆ. ಇದರಿಂದ ನೀವು ಯಾರನ್ನು ವಾಟ್ಸಾಪ್‌ ಕಾಲ್‌ಗೆ ಸೇರಲು ಬಯಸುತ್ತೀರೋ ಅವರನ್ನು ಸೇರಿಸಿಕೊಳ್ಳಲು ಸಾಧ್ಯವಾಗಲಿದೆ. ಇದಲ್ಲದೆ ಕಾಲ್‌ ಲಿಂಕ್‌ಗಳನ್ನು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಮಾಡಲಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ಇದರೊಂದಿಗೆ ವಾಟ್ಸಾಪ್‌ ಕಾಲ್‌ ಲಿಂಕ್‌ಗಳನ್ನು ಪದೇ ಪದೇ ಬಳಸಬಹುದಾದರೂ, 90 ದಿನಗಳವರೆಗೆ ಬಳಸದೇ ಇದ್ದರೆ ಅವುಗಳ ಅವಧಿ ಮುಗಿಯುತ್ತದೆ ಎಂದು ಸ್ಪಷ್ಟಪಡಿಸಿದೆ.

ವಾಟ್ಸಾಪ್‌ ಕಾಲ್‌ ಲಿಂಕ್‌ ಬಳಸುವ ಉದ್ದೇಶ ಏನು?

ವಾಟ್ಸಾಪ್‌ ಕಾಲ್‌ ಲಿಂಕ್‌ ಬಳಸುವ ಉದ್ದೇಶ ಏನು?

ವಾಟ್ಸಾಪ್‌ ಇದೀಗ ಗ್ರೂಪ್‌ ವೀಡಿಯೋ ಕಾಲ್‌ ಸದಸ್ಯರ ಸಂಖ್ಯೆಯನ್ನು 32ಕ್ಕೆ ವಿಸ್ತರಿಸಿದೆ. ಇದರಿಂದ ನೀವು ಗ್ರೂಪ್‌ ವೀಡಿಯೊ ಕಾಲ್‌ ಮಾಡಿದರೆ ಎಲ್ಲರೂ ಸದಸ್ಯರು ಕೂಡ ಕಾಲ್‌ ಪಡೆಯುತ್ತಾರೆ. ಇದರ ಬದಲು ನೀವು ಆಯ್ದ ವ್ಯಕ್ತಿಗಳ ಜೊತೆ ಮಾತ್ರ ವಾಟ್ಸಾಪ್‌ ಕಾಲ್‌ನಲ್ಲಿ ಮಾತನಾಡಲು ಬಯಸಿದರೆ ಅವರುಗಳನ್ನು ಕಾಲ್‌ಗೆ ಇನ್ವೈಟ್‌ ಮಾಡಲು ಈ ಲಿಂಕ್‌ಗಳು ಸಹಾಯ ಮಾಡಲಿವೆ. ನೀವು ಕರೆಯಲ್ಲಿ ಇರುವಾಗಲೂ ಕೂಡ ಬೇರೆಯವರು ಲಿಂಕ್‌ ಮೂಲಕ ಕಾಲ್‌ಗೆ ಜಾಯಿನ್‌ ಆಗಲು ಸಾದ್ಯವಾಗಲಿದೆ.

ವಾಟ್ಸಾಪ್‌ನಲ್ಲಿ ಕಾಲ್‌ ಲಿಂಕ್‌ ಕ್ರಿಯೆಟ್‌ ಮಾಡುವುದು ಮತ್ತು ಶೇರ್‌ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ಕಾಲ್‌ ಲಿಂಕ್‌ ಕ್ರಿಯೆಟ್‌ ಮಾಡುವುದು ಮತ್ತು ಶೇರ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಆಂಡ್ರಾಯ್ಡ್‌ ಅಥವಾ ಐಫೋನ್‌ನಲ್ಲಿ ವಾಟ್ಸಾಪ್‌ ತೆರೆಯಿರಿ.
ಹಂತ:2 ಇದರಲ್ಲಿ ಕಾಲ್‌ ಟ್ಯಾಬ್ ಅನ್ನು ಟ್ಯಾಪ್ ಮಾಡಿ.
ಹಂತ:3 ಇದೀಗ ಮೇಲ್ಭಾಗದಲ್ಲಿ ಕಾಲ್‌ ಲಿಂಕ್ ಕ್ರಿಯೆಟ್‌ ಬಟನ್ ಅನ್ನು ಟ್ಯಾಪ್ ಮಾಡಿ.
ಹಂತ:4 ಇದರಲ್ಲಿ ವಾಟ್ಸಾಪ್‌ ಅಥವಾ ವೀಡಿಯೋ ಕಾಲ್‌ ಯಾವುದು ಎಂದು ಆಯ್ಕೆ ಮಾಡಿ.
ಹಂತ:5 ಇದೀಗ ಶೇರ್‌ ಲಿಂಕ್ ಅನ್ನು ಟ್ಯಾಪ್ ಮಾಡಿ
ಹಂತ:6 ನಂತರ ವಾಟ್ಸಾಪ್‌ ಮೂಲಕ ಕಾಲ್‌ ಲಿಂಕ್‌ ಶೇರ್‌ ಮಾಡಿ.

Best Mobiles in India

English summary
WhatsApp’s call link feature has started arriving in its Android and iOS apps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X